ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಭೇಟಿ ಮಾಡಿದ ಮಹೇಶ್‌ ಬಾಬು; ರಾಜಮೌಳಿ ಸಿನಿಮಾ ಲುಕ್‌ ಇದೇನಾ ಎಂದು ಪ್ರಶ್ನಿಸುತ್ತಿರುವ ಫ್ಯಾನ್ಸ್‌-tollywood news mahesh babu met telangana cm revanth reddy with rajamouli movie look telugu film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಭೇಟಿ ಮಾಡಿದ ಮಹೇಶ್‌ ಬಾಬು; ರಾಜಮೌಳಿ ಸಿನಿಮಾ ಲುಕ್‌ ಇದೇನಾ ಎಂದು ಪ್ರಶ್ನಿಸುತ್ತಿರುವ ಫ್ಯಾನ್ಸ್‌

ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಭೇಟಿ ಮಾಡಿದ ಮಹೇಶ್‌ ಬಾಬು; ರಾಜಮೌಳಿ ಸಿನಿಮಾ ಲುಕ್‌ ಇದೇನಾ ಎಂದು ಪ್ರಶ್ನಿಸುತ್ತಿರುವ ಫ್ಯಾನ್ಸ್‌

ಟಾಲಿವುಡ್‌ ಸ್ಟಾರ್ ಹೀರೋ ಮಹೇಶ್ ಬಾಬು, ಸೋಮವಾರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ, ಪ್ರವಾಹ ಸಂತ್ರಸ್ತರ ಪರಿಹಾರಕ್ಕಾಗಿ ಸಿಎಂಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಸಿಎಂ ಭೇಟಿ ಮಾಡಿರುವ ಫೋಟೋದಲ್ಲಿ ಮಹೇಶ್‌ ಬಾಬು ಉದ್ದನೆಯ ಹೇರ್ ಸ್ಟೈಲ್ ಮತ್ತು ಗಡ್ಡದೊಂದಿಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಭೇಟಿ ಮಾಡಿದ ಮಹೇಶ್‌ ಬಾಬು; ರಾಜಮೌಳಿ ಸಿನಿಮಾ ಲುಕ್‌ ಇದೇನಾ ಎಂದ ಫ್ಯಾನ್ಸ್‌
ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಭೇಟಿ ಮಾಡಿದ ಮಹೇಶ್‌ ಬಾಬು; ರಾಜಮೌಳಿ ಸಿನಿಮಾ ಲುಕ್‌ ಇದೇನಾ ಎಂದ ಫ್ಯಾನ್ಸ್‌

ಟಾಲಿವುಡ್ ಸೂಪರ್‌ ಸ್ಟಾರ್‌ ಮಹೇಶ್ ಬಾಬು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಮಹೇಶ್ ಬಾಬು, ಪ್ರವಾಹ ಸಂತ್ರಸ್ತರ ನೆರವಿಗಾಗಿ 50 ಲಕ್ಷ ರೂ. ಹಣ ನೀಡುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ಅದರಂತೆ ತಮ್ಮ ಪತ್ನಿ ನಮ್ರತಾ ಜೊತೆ ಸೋಮವಾರ, ಹೈದರಾಬಾದ್‌ನ ಜೂಬ್ಲಿ ಹಿಲ್ಸ್‌ನಲ್ಲಿರುವ ಸಿಎಂ ರೇವಂತ್ ರೆಡ್ಡಿ ಅವರ ನಿವಾಸಕ್ಕೆ ತೆರಳಿ, 50 ಲಕ್ಷ ರೂ. ಚೆಕ್‌ ಹಸ್ತಾಂತರಿಸಿದರು.

ಉದ್ದ ಕೂದಲು, ಗಡ್ಡ ಬಿಟ್ಟ ಮಹೇಶ್‌ ಬಾಬು

ಮಹೇಶ್ ಬಾಬು, ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಮಹೇಶ್‌ ಬಾಬು ಲುಕ್‌ ಗಮನ ಸೆಳೆಯುತ್ತಿದೆ. ಉದ್ದ ಕೂದಲು ಮತ್ತು ಗಡ್ಡದೊಂದಿಗೆ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಅವರ ಹೊಸ ಲುಕ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಮಹೇಶ್‌ ಬಾಬು ಸದ್ಯಕ್ಕೆ ಸ್ಟಾರ್‌ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದಲ್ಲಿ ಹೊಸ ನಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಮಹೇಶ್‌ ಬಾಬು ಈ ರೀತಿ ಉದ್ದ ಕೂದಲು ಬಿಟ್ಟು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಮಹೇಶ್‌ ಬಾಬು ಇದುವರೆಗೂ ಯಾವ ಸಿನಿಮಾಗಳಲ್ಲೂ ಈ ರೀತಿ ಕೂದಲು ಬಿಟ್ಟಿಲ್ಲ. ಒಟ್ಟಿನಲ್ಲಿ ಪ್ರಿನ್ಸ್‌ ಲುಕ್‌ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಡ್ವೆಂಚರ್ ಥ್ರಿಲ್ಲರ್ ಆಗಿ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.

ರಾಜಮೌಳಿ ಹಾಗೂ ಮಹೇಶ್‌ ಬಾಬು ಕಾಂಬಿನೇಶನ್‌ನ ಈ ಸಿನಿಮಾ, ಸುಮಾರು 1000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ನಿರ್ದೇಶಕ ರಾಜಮೌಳಿ ಈ ಚಿತ್ರವನ್ನು ಮಹೇಶ್ ಬಾಬು ಅವರ ವೃತ್ತಿ ಜೀವನದಲ್ಲೇ ಒಂದು ದೊಡ್ಡ ಸಿನಿಮಾವನ್ನಾಗಿ ಹೊರ ತರಲು ಪ್ಲ್ಯಾನ್‌ ಮಾಡುತ್ತಿದ್ದಾರೆ. ಅಲ್ಲದೆ ಇದು ತೆಲುಗು ಚಿತ್ರರಂಗದ ಇತಿಹಾಸಲ್ಲಿ ಕೂಡಾ ಎತ್ತರಕ್ಕೆ ನಿಲ್ಲಲಿದೆಯಂತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಮ ಹಿಂದಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ಅನೇಕ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಮಹೇಶ್‌ ಬಾಬು ವೃತ್ತಿ ಜೀವನದ 29ನೇ ಸಿನಿಮಾ

ಇದು, ಮಹೇಶ್ ಬಾಬು ವೃತ್ತಿ ಜೀವನದ 29ನೇ ಸಿನಿಮಾ. ಈ ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಿದ್ದಾರೆ. ಹಾಲಿವುಡ್‌ನ ಬ್ಲಾಕ್‌ಬಸ್ಟರ್ ಫ್ರಾಂಚೈಸಿ ಇಂಡಿಯಾನಾ ಜೋನ್ಸ್‌ನಂತೆ ಈ ಸಿನಿಮಾ ಕೂಡಾ ಮೂಡಿಬರಲಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಪ್ರೀ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು 2026 ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ವರ್ಷ ಸಂಕ್ರಾಂತಿಯಲ್ಲಿ ಮಹೇಶ್‌ ಬಾಬು ಅಭಿನಯದ ಗುಂಟೂರು ಕಾರಂ ಸಿನಿಮಾ ತೆರೆ ಕಂಡಿತ್ತು. ತ್ರಿವಿಕ್ರಮ್ ನಿರ್ದೇಶನದ, ಫ್ಯಾಮಿಲಿ ಆ್ಯಕ್ಷನ್ ಎಂಟರ್‌ಟೈನರ್ ಆಗಿ ತೆರೆಗೆ ಬಂದಿದ್ದ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ದೊರೆತಿತ್ತು. ಗುಂಟೂರು ಕಾರಂ ಚಿತ್ರದಲ್ಲಿ ಶ್ರೀಲೀಲಾ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಿದ್ದರು. ಸಿನಿಮಾ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದರೂ ನಿರ್ಮಾಪಕರಿಗೆ ನಷ್ಟವಾಗಿತ್ತು ಎಂದು ಟಾಲಿವುಡ್‌ ಮೂಲಗಳಿಂದ ತಿಳಿದುಬಂದಿದೆ.

mysore-dasara_Entry_Point