‘ರಮ್ಮಿ ವಿಚಾರಕ್ಕೆ ಪಿಎಂ ಮೋದಿ, ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ಮಾಡಿ’ ಕಿಚ್ಚ ಸುದೀಪ್‌ ಸಿಡಿಮಿಡಿ-television news rummy sponsorship in bigg boss kannada season 11 actor and host kichcha sudeep reacts mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ರಮ್ಮಿ ವಿಚಾರಕ್ಕೆ ಪಿಎಂ ಮೋದಿ, ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ಮಾಡಿ’ ಕಿಚ್ಚ ಸುದೀಪ್‌ ಸಿಡಿಮಿಡಿ

‘ರಮ್ಮಿ ವಿಚಾರಕ್ಕೆ ಪಿಎಂ ಮೋದಿ, ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ಮಾಡಿ’ ಕಿಚ್ಚ ಸುದೀಪ್‌ ಸಿಡಿಮಿಡಿ

Bigg Boss Kannada Season 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸುದ್ದಿಗೋಷ್ಠಿಯಲ್ಲಿ ರಮ್ಮಿ ಪ್ರಾಯೋಜಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಎದುರಾದ ಪ್ರಶ್ನೆಗೆ ಕಿಚ್ಚ ಸುದೀಪ್‌ ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜದಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ, ಆಯ್ಕೆ ನಮ್ಮದಲ್ಲವೇ? ಎಂದಿದ್ದಾರೆ.

ರಮ್ಮಿ ಪ್ರಾಯೋಜಕತ್ವದ ಬಗ್ಗೆ ನಟ ಕಿಚ್ಚ ಸುದೀಪ್‌ ಪ್ರತಿಕ್ರಿಯೆ.
ರಮ್ಮಿ ಪ್ರಾಯೋಜಕತ್ವದ ಬಗ್ಗೆ ನಟ ಕಿಚ್ಚ ಸುದೀಪ್‌ ಪ್ರತಿಕ್ರಿಯೆ.

Bigg Boss Kannada season 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಸೆ. 29ರ ಭಾನುವಾರ ಸಂಜೆ 6 ಗಂಟೆಗೆ ಕನ್ನಡದ ದೊಡ್ಡ ರಿಯಾಲಿಟಿ ಶೋ ಶುರುವಾಗಲಿದೆ. ಅದಕ್ಕೂ ಮೊದಲು ಈ ಸಲದ ಶೋ ವಿಶೇಷತೆಗಳ ಬಗ್ಗೆ ಮಾತನಾಡುವ ಉದ್ದೇಶಕ್ಕೆ, ಮಾಧ್ಯಮದ ಮುಂದೆ ಬಂದಿತ್ತು ಸುದೀಪ್‌ ಸಹಿತ ಬಿಗ್‌ ಬಾಸ್‌ ತಂಡ. ಸಾಕಷ್ಟು ಪ್ರಶ್ನೆಗಳು ಸುದೀಪ್‌ ಅವರಿಗೆ ಎದುರಾದವು. ಆ ಪೈಕಿ ರಮ್ಮಿ ಜಾಹೀರಾತಿನ ಪ್ರಾಯೋಜಕತ್ವದ ಬಗ್ಗೆಯೂ ಚರ್ಚೆಯಾಯಿತು. ಈ ಹಿಂದೆ ಕಿಚ್ಚ ಸುದೀಪ್‌ ಇದೇ ರಮ್ಮಿ ಜಾಹೀರಾತು ಮಾಡಿ, ಟೀಕೆಗೊಳಗಾಗಿದ್ದರು. ಈಗ ಅದೇ ರಮ್ಮಿ ಬಗ್ಗೆ ಮಾತನಾಡಿದ್ದಾರೆ.

ಸ್ಪೇಷಲ್‌ ಪಾರ್ಟನರ್‌ ಅಲ್ಲಿ A23 ರಮ್ಮಿ ಅಂತ ಜಾಹೀರಾತು ಇದೆ. ಇಲ್ಲಿ ಆಡದವರನ್ನೂ ನೀವು ಆಡಿಸ್ತೀರಾ. ಆಮೇಲೆ ಅವರು ಮನೆ ಮಠ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ತಾರೆ. ಸುದೀಪ್‌ ಸರ್‌ ಅವರ ಪ್ರೋಗ್ರಾಂಗೆ ಇಂತ ಒಂದು ಜಾಹೀರಾತು ಬೇಕಾ? ವಾಹಿನಿಗೆ ಸಾಮಾಜಿಕ ಜವಾಬ್ದಾರಿಯೂ ಬೇಕಲ್ಲವೇ? ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರ ನೀಡಿದ ಸುದೀಪ್ ತಮ್ಮದೇ ಶೈಲಿಯಲ್ಲಿ ಮಾತನಾಡಿದ್ದಾರೆ.

ಸಮಾಜದಲ್ಲಿ ಎಲ್ಲವೂ ಇದೆ..

"ನಮ್ಮದು ತಿಳಿವಳಿಕೆ ಇರುವಂಥ ಸಮಾಜ. ಇಲ್ಲಿ ಸಿಗರೇಟ್‌ ಇದೆ. ಕುಡಿತ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ ತಾಯಿಗಳಿದ್ದಾರೆ. ನಮಗೆ ಏನು ಬೇಕೋ ನಾವು ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಕೋವಿಡ್‌ ಸಹ ಇದೆ, ಸಮಾಜದಲ್ಲಿಆರೋಗ್ಯವೂ ಇದೆ. ಎಣ್ಣೆನೂ ಇದೆ. ಸರ್ಕಾರದ ಬಗ್ಗೆನೇ ಒಮ್ಮೊಮ್ಮೆ ಸಿಕ್ಕಾಪಟ್ಟೆ ಟ್ಯಾಕ್ಸ್‌ ವಸೂಲಿ ಮಾಡ್ತಾರೆ ಅಂತ ನಾವೇ ಮಾತನಾಡ್ತೀವಿ. ಒಮ್ಮೊಮ್ಮೆ ಇಡೀ ದೇಶವನ್ನು ಮುನ್ನಡೆಸಬೇಕಾದರೆ, ಸರ್ಕಾರಕ್ಕೆ ಗೊತ್ತಿರುತ್ತದೆ ನಾವೇನು ಮಾಡಬೇಕು ಅಂತ. ಒಮ್ಮೊಮ್ಮೆ ಶೋ ನಡೆಸಬೇಕಾದರೆ, ಅವರಿಗೂ ಗೊತ್ತಿರುತ್ತದೆ ಈ ಶೋನ ಹೇಗೆ ನಡೆಸಬೇಕೆಂದು" ಎಂದಿದ್ದಾರೆ.

ಇದರಿಂದ ಏನೆಲ್ಲ ಆಗ್ತಿದೆ ಅದನ್ನೂ ನೋಡಿ..

"ನೀವು ಅಲ್ಲಿರುವ A23 ರಮ್ಮಿ ಅನ್ನೋದನ್ನಷ್ಟೇ ನೋಡುತ್ತಿದ್ದೀರಿ. ಆದರೆ ನನಗೆ ಅಲ್ಲಿ ತುಂಬ ದೊಡ್ಡದು ಕಾಣಿಸ್ತಿದೆ. ನಾನು ಅದರಿಂದ ಈ ಬಿಗ್‌ಬಾಸ್‌ನಿಂದ ಎಷ್ಟು ಮನೆಗಳು ಉದ್ಧಾರ ಆಗ್ತಾವೆ? ಅನ್ನೋದು ನನಗೆ ಕಾಣುತ್ತೆ. ಎಷ್ಟು ವ್ಯಕ್ತಿತ್ವಗಳ ಉದ್ಧಾರ ಆಯ್ತು? ಎಷ್ಟು ಜನಕ್ಕೆ ಕೆರಿಯರ್‌ ಆಯ್ತು? ಕೆರಿಯರ್‌ ಚೆನ್ನಾಗಾದವರು ಎಲ್ಲರೂ A23 ಸಬ್‌ಸ್ಟ್ರೈಬ್‌ ಆದ್ರಾ? ಅವರ ಜೀವನ ಹೇಗೆ ಕಟ್ಟಿಕೊಂಡ್ರು? ಅದನ್ನ ನೋಡಿ ವೀಕ್ಷಕರು ಏನನ್ನು ಕಲಿತ್ರು? ಅಲ್ವಾ. ಎಲ್ಲವೂ ಇಲ್ಲಿ ಮ್ಯಾಟರ್‌ ಆಗುತ್ತೆ. ನಮ್ಮ ಸಮಾಜದಲ್ಲಿ ನಾವು ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಅರಿವು ಚೆನ್ನಾಗಿ ಗೊತ್ತಿದೆ" ಎಂದಿದ್ದಾರೆ.

ಸಿಎಂ, ಪಿಎಂ ಮನೆ ಮುಂದೆ ಧರಣಿ ಮಾಡಿ...

"ಕೆಲವೊಂದಕ್ಕೆ ಹೋಲಿಕೆ ಮಾಡಿದರೆ, ಇದು ತುಂಬ ಸಣ್ಣದು. ಚಿಕ್ಕ ವಿಷಯ. ಇದರ ಮೇಲೂ ನಿಮ್ಮ ಪ್ರಶ್ನೆಗಳಿದ್ದರೆ, ನೀವು ಸಿದ್ದರಾಮಯ್ಯ ಅವರ ಮನೆಗೆ ಅಥವಾ ಮೋದಿ ಅವರ ಮನೆಗೆ ಹೋಗಿ ಪ್ರತಿಭಟನೆ ಮಾಡಬಹುದು. ನಮಗೆ ಇರುವ ಪವರೇ ಇಷ್ಟು. ನಾನು ಮೋದಿಯವರನ್ನ, ಸಿದ್ದರಾಮಯ್ಯ ಅವರನ್ನು ಹ್ಯಾಂಡಲ್‌ ಮಾಡುವ ಹಾಗಿದ್ದಿದ್ದರೆ, ಬೇರೆ ರೀತಿ ಆಗಿರೋದು. ಮುಂದೊಂದು ದಿನ ರಾಜಕಾರಣಿ ಆದ್ರೆ, ಈ ನಿಮ್ಮ ಮಾತನ್ನು ಆದ್ಯತೆ ಮೇರೆಗೆ ಮಾಡ್ತಿನಿ" ಎಂದಿದ್ದಾರೆ ಕಿಚ್ಚ.

mysore-dasara_Entry_Point