ದಗ್ಗುಬಾಟಿ, ಅಕ್ಕಿನೇನಿ ಕುಟುಂಬದ ನಡುವೆ ಹೆಚ್ಚಿದ ಅಂತರ; ನಾಗಚೈತನ್ಯ 2ನೇ ಮದುವೆ ಆಗ್ತಿರೋದು ಅಮ್ಮ ಲಕ್ಷ್ಮೀ ದಗ್ಗುಬಾಟಿಗೂ ಇಷ್ಟವಿಲ್ವಾ?-tollywood news naga chaitanya mother lakshmi daggubati not happy with son 2nd marriage with shobhita dhulipala rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದಗ್ಗುಬಾಟಿ, ಅಕ್ಕಿನೇನಿ ಕುಟುಂಬದ ನಡುವೆ ಹೆಚ್ಚಿದ ಅಂತರ; ನಾಗಚೈತನ್ಯ 2ನೇ ಮದುವೆ ಆಗ್ತಿರೋದು ಅಮ್ಮ ಲಕ್ಷ್ಮೀ ದಗ್ಗುಬಾಟಿಗೂ ಇಷ್ಟವಿಲ್ವಾ?

ದಗ್ಗುಬಾಟಿ, ಅಕ್ಕಿನೇನಿ ಕುಟುಂಬದ ನಡುವೆ ಹೆಚ್ಚಿದ ಅಂತರ; ನಾಗಚೈತನ್ಯ 2ನೇ ಮದುವೆ ಆಗ್ತಿರೋದು ಅಮ್ಮ ಲಕ್ಷ್ಮೀ ದಗ್ಗುಬಾಟಿಗೂ ಇಷ್ಟವಿಲ್ವಾ?

ನಟ ನಾಗ ಚೈತನ್ಯ ಎರಡನೇ ಮದುವೆ ವಿಚಾರ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಮಂತಾಗೆ ಡಿವೋರ್ಸ್‌ ನೀಡಿ, ಮಗ ಶೋಭಿತಾ ಜೊತೆ 2ನೇ ಮದುವೆ ಆಗುತ್ತಿರುವುದು ಸ್ವತ: ನಾಗ ಚೈತನ್ಯ ಅಮ್ಮ ಲಕ್ಷ್ಮೀ ದಗ್ಗುಬಾಟಿಗೆ ಇಷ್ಟವಿಲ್ಲ ಎಂಬ ಮಾತು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

ದಗ್ಗುಬಾಟಿ, ಅಕ್ಕಿನೇನಿ ಕುಟುಂಬದ ನಡುವೆ ಹೆಚ್ಚಿದ ಅಂತರ; ನಾಗಚೈತನ್ಯ 2ನೇ ಮದುವೆ ಆಗ್ತಿರೋದು ಅಮ್ಮ ಲಕ್ಷ್ಮೀ ದಗ್ಗುಬಾಟಿಗೂ ಇಷ್ಟವಿಲ್ವಾ?
ದಗ್ಗುಬಾಟಿ, ಅಕ್ಕಿನೇನಿ ಕುಟುಂಬದ ನಡುವೆ ಹೆಚ್ಚಿದ ಅಂತರ; ನಾಗಚೈತನ್ಯ 2ನೇ ಮದುವೆ ಆಗ್ತಿರೋದು ಅಮ್ಮ ಲಕ್ಷ್ಮೀ ದಗ್ಗುಬಾಟಿಗೂ ಇಷ್ಟವಿಲ್ವಾ? (PC: @WorldRanaFans, @sobhitaD)

ಇತ್ತೀಚೆಗಷ್ಟೇ ನಾಗ ಚೈತನ್ಯ ಹಾಗೂ ಶೋಬಿತಾ ಧುಲಿಪಾಲ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಸಮಂತಾ ಜೊತೆಗೆ ಡಿವೋರ್ಸ್‌ ಆದಾಗಲೇ ನಾಗ ಚೈತನ್ಯ ಹೆಸರು ಶೋಭಿತಾ ಜೊತೆ ಕೇಳಿಬಂದಿತ್ತು. ಆದರೆ ಇದನ್ನು ಯಾರೂ ಗಂಭಿರವಾಗಿ ಪರಿಗಣಿಸಿರಲಿಲ್ಲ. ಅದರೆ ಎಂಗೇಜ್‌ಮೆಂಟ್‌ ಅನೌನ್ಸ್‌ ಆಗುತ್ತಿದ್ದಂತೆ ಕೆಲವರಿಗೆ ಬಹಳ ಬೇಸರ ಆಗಿತ್ತು.

ನಾಗಚೈತನ್ಯ 2ನೇ ಮದುವೆ ಬಗ್ಗೆ ತಾಯಿಗೆ ಬೇಸರ?

ಸಮಂತಾ ಹಾಗೂ ನಾಗಚೈತನ್ಯ 7 ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಈ ಜೋಡಿ ಮದುವೆ ಆದ 4 ವರ್ಷಗಳಲ್ಲಿ ವಿಚ್ಛೇದನ ಪಡೆದಿತ್ತು. ಆಗ ಬಹುತೇಕ ಎಲ್ಲರೂ ಸಮಂತಾ ಕಡೆ ಬೆರಳು ತೋರಿಸಿದ್ದರು. ಆದರೆ ಡಿವೋರ್ಸ್‌ ಆಗಿ ಕೆಲವೇ ದಿನಗಳಲ್ಲಿ ನಾಗ ಚೈತನ್ಯ ಶೋಭಿತಾ ಜೊತೆ ಕಾಣಿಸಿಕೊಂಡಿದ್ದರು. ಇವರಿಬ್ಬರ ನಡುವೆ ಏನೋ ಇದೆ ಎಂಬ ಗುಸು ಗುಸು ಕೇಳಿ ಬಂದಿತ್ತಾದರೂ, ಅದೆಲ್ಲವೂ ಗಾಸಿಪ್‌ ಇರಬಹುದು ಎಂದು ಅಭಿಮಾನಿಗಳು ಸುಮ್ಮನಾಗಿದ್ದರು.

ಆದರೆ ಈಗ ಅದು ಗಾಸಿಪ್‌ ಅಲ್ಲ ಸತ್ಯ ಅಂತ ಎಲ್ಲರಿಗೂ ಗೊತ್ತಾಗಿದೆ. ಈಗ ಎಲ್ಲರೂ ಸಮಂತಾ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಿದ್ದಾರೆ. ಸಮಂತಾ ಬಗ್ಗೆ ಇನ್ನೂ ಪ್ರೀತಿ ಇರುವಂತೆ ನಾಗ ಚೈತನ್ಯ ನಟಿಸುತ್ತಿದ್ದರು. ಆಕೆಯ ಯಾವುದೇ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಿಂದ ಡಿಲೀಟ್‌ ಮಾಡಿರಲಿಲ್ಲ. ಆದರೆ ಶೋಭಿತಾ ಜೊತೆ ಎಂಗೇಜ್‌ಮೆಂಟ್‌ ಫಿಕ್ಸ್‌ ಆಗುತ್ತಿದ್ದಂತೆ ಸಮಂತಾ ಜೊತೆಗಿನ ಎಲ್ಲಾ ಫೋಟೋಗಳನ್ನು ಡಿಲೀಟ್‌ ಮಾಡಿದ್ದಾರೆ ಎಂದು ಸಮಂತಾ ಅಭಿಮಾನಿಗಳು ನಾಗ ಚೈತನ್ಯ ಬಗ್ಗೆ ಗರಂ ಆಗಿದ್ದಾರೆ.

ನಟ ವೆಂಕಟೇಶ್‌ ದಗ್ಗುಬಾಟಿ ಸಹೋದರಿಯೇ ನಾಗಾರ್ಜುನ ಮೊದಲ ಪತ್ನಿ ಲಕ್ಷ್ಮೀ

ಹೀಗೆ ನಾಗ ಚೈತನ್ಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವುದು ಸಿನಿಮಾಭಿಮಾನಿಗಳು ಮಾತ್ರವಲ್ಲ. ಸ್ವತ: ನಾಗ ಚೈತನ್ಯ ಅಮ್ಮನಿಗೆ ಮಗ ಎರಡನೇ ಮದುವೆ ಆಗುತ್ತಿರುವುದು ಇಷ್ಟವಿಲ್ಲವಂತೆ. ಹೀಗೊಂದು ಗಾಸಿಪ್‌ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಹೀಗಾಗಿ ದಗ್ಗುಬಾಟಿ ಕುಟುಂಬಕ್ಕೂ , ಅಕ್ಕಿನೇನಿ ಕುಟುಂಬದ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.

ನಟ ವೆಂಕಟೇಶ್‌ ದಗ್ಗುಬಾಟಿ ಸಹೋದರಿ ಲಕ್ಷ್ಮೀಯನ್ನು ಅಕ್ಕಿನೇನಿ ನಾಗಾರ್ಜುನ ಪ್ರೀತಿಸಿ ಮದುವೆ ಆಗಿದ್ದರು. ಆದರೆ ನಾಗ ಚೈತನ್ಯ ಜನಿಸಿದ ನಂತರ ಅಕ್ಕಿನೇನಿ ನಾಗಾರ್ಜುನ, ಲಕ್ಷ್ಮೀಗೆ ಡಿವೋರ್ಸ್‌ ನೀಡಿದರು. ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಲು ಅಮಲಾ ಕಾರಣ ಅನ್ನೋದು ಹಲವರ ಅಭಿಪ್ರಾಯ. ಲಕ್ಷ್ಮೀ ಜೊತೆ ಡಿವೋರ್ಸ್‌ ಆಗುತ್ತಲೇ ನಾಗಾರ್ಜುನ ಅಮಲಾ ಕೈ ಹಿಡಿದಿದ್ದರು. ಇದೀಗ ಮಗನ ಜೀವನದಲ್ಲಿ ಇದೇ ಘಟನೆ ನಡೆಯುತ್ತಿದೆ.

ನಾಗ ಚೈತನ್ಯ, ಸಮಂತಾಗೆ ವಿಚ್ಛೇದನ ನೀಡುತ್ತಿರುವುದು ಲಕ್ಷ್ಮೀಗೆ ಸ್ವಲ್ಪವೂ ಇಷ್ಟ ಇರಲಿಲ್ಲ. ಇದೇ ಕಾರಣಕ್ಕೆ ಅಮೆರಿಕದಲ್ಲಿ ನೆಲೆಸಿರುವ ಲಕ್ಷ್ಮೀ, ಶೋಭಿತಾ ಜೊತೆಗಿನ ನಿಶ್ಚಿತಾರ್ಥಕ್ಕೆ ಬಂದಿರಲಿಲ್ಲ, ಮದುವೆಗೆ ಬರುವುದು ಕೂಡಾ ಅನುಮಾನ ಎನ್ನಲಾಗುತ್ತಿದೆ. ಸಮಂತಾ ಎಂದರೆ ಲಕ್ಷ್ಮೀಗೆ ಬಹಳ ಇಷ್ಟ. ಆಕೆಗೆ ಡಿವೋರ್ಸ್‌ ಕೊಡದಿರುವಂತೆ ಲಕ್ಷ್ಮೀ ಸಾಕಷ್ಟು ಬಾರಿ ಮಗನ ಮನವೊಲಿಸಲು ಪ್ರಯತ್ನಿಸಿದ್ದರು. ಸಮಂತಾ ಆರೋಗ್ಯ ಕೆಟ್ಟಿದ್ದಾಗ ಕೂಡಾ ಲಕ್ಷ್ಮೀ ದಗ್ಗುಬಾಟಿ ಆಗ್ಗಾಗ್ಗೆ ಆಕೆಯನ್ನು ಭೇಟಿ ಮಾಡುವುದು, ಕರೆ ಮಾಡಿ ಆರೋಗ್ಯ ವಿಚಾರಿಸುವುದು ಮಾಡುತ್ತಿದ್ದರಂತೆ. ಈಗಲೂ ಲಕ್ಷ್ಮೀ ಹಾಗೂ ಸಮಂತಾ ಸಂಪರ್ಕದಲ್ಲಿದ್ದಾರಂತೆ. ಒಟ್ಟಿನಲ್ಲಿ ನಾಗ ಚೈತನ್ಯ ಶೋಭಿತಾ ಹತ್ತಿರವಾದಂತೆ ದಗ್ಗುಬಾಟಿ, ಅಕ್ಕಿನೇನಿ ಎರಡೂ ಕುಟುಂಬ ಇನ್ನಷ್ಟು ದೂರವಾಗುತ್ತಿದೆ ಅಂತ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.