ಆಂಧ್ರ ಪ್ರದೇಶ, ತೆಲಂಗಾಣ ಪ್ರವಾಹ ಪೀಡಿತರಿಗೆ ಹಣ ಸಹಾಯ ಮಾಡಿದ ಜ್ಯೂ. ಎನ್‌ಟಿಆರ್‌; ತೆಲುಗು ಸ್ಟಾರ್‌ ನಟ ಕೊಟ್ಟಿದ್ದೆಷ್ಟು?
ಕನ್ನಡ ಸುದ್ದಿ  /  ಮನರಂಜನೆ  /  ಆಂಧ್ರ ಪ್ರದೇಶ, ತೆಲಂಗಾಣ ಪ್ರವಾಹ ಪೀಡಿತರಿಗೆ ಹಣ ಸಹಾಯ ಮಾಡಿದ ಜ್ಯೂ. ಎನ್‌ಟಿಆರ್‌; ತೆಲುಗು ಸ್ಟಾರ್‌ ನಟ ಕೊಟ್ಟಿದ್ದೆಷ್ಟು?

ಆಂಧ್ರ ಪ್ರದೇಶ, ತೆಲಂಗಾಣ ಪ್ರವಾಹ ಪೀಡಿತರಿಗೆ ಹಣ ಸಹಾಯ ಮಾಡಿದ ಜ್ಯೂ. ಎನ್‌ಟಿಆರ್‌; ತೆಲುಗು ಸ್ಟಾರ್‌ ನಟ ಕೊಟ್ಟಿದ್ದೆಷ್ಟು?

ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜನರು ಪ್ರವಾಹದಿಂದ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಜೊತೆ ಕೈ ಜೋಡಿಸಿರುವ ತೆಲುಗು ಸ್ಟಾರ್‌ ನಟ ಜ್ಯೂನಿಯರ್‌ ಎನ್‌ಟಿಆರ್‌, ಆಂಧ್ರ, ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ್ದಾರೆ.

ಆಂಧ್ರ ಪ್ರದೇಶ, ತೆಲಂಗಾಣ ಪ್ರವಾಹ ಪೀಡಿತರಿಗೆ ಹಣದ ಸಹಾಯ ಮಾಡಿದ ಜ್ಯೂ. ಎನ್‌ಟಿಆರ್‌; ತೆಲುಗು ಸ್ಟಾರ್‌ ನಟ ಕೊಟ್ಟಿದ್ದೆಷ್ಟು?
ಆಂಧ್ರ ಪ್ರದೇಶ, ತೆಲಂಗಾಣ ಪ್ರವಾಹ ಪೀಡಿತರಿಗೆ ಹಣದ ಸಹಾಯ ಮಾಡಿದ ಜ್ಯೂ. ಎನ್‌ಟಿಆರ್‌; ತೆಲುಗು ಸ್ಟಾರ್‌ ನಟ ಕೊಟ್ಟಿದ್ದೆಷ್ಟು?

ಕಳೆದ 3-4 ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಜ್ಯೂನಿಯರ್‌ ಎನ್‌ಟಿಆರ್‌ ಈಗ ಮತ್ತೆ ಹೈದರಾಬಾದ್‌ಗೆ ವಾಪಸಾಗಿದ್ದಾರೆ. ಬೆಂಗಳೂರಿಗೆ ಬರುತ್ತಿದ್ದಂತೆ ಕಾಂತಾರ ಸ್ಟಾರ್‌ ರಿಷಬ್‌ ಶೆಟ್ಟಿ ಅವರನ್ನು ಭೇಟಿ ಮಾಡಿದ್ದ ಜ್ಯೂ. ಎನ್‌ಟಿಆರ್‌, ಅಮ್ಮನೊಂದಿಗೆ ಕುಂದಾಪುರಕ್ಕೆ ತೆರಳಿದ್ದರು. ತಾಯಿಯನ್ನು ಹುಟ್ಟೂರಿಗೆ ಕರೆದೊಯ್ಯುವ ಮೂಲಕ ಆಕೆಯ ಕೋರಿಕೆ ತೀರಿಸಿದ್ದರು.

ಇತ್ತೀಚೆಗೆ ಕುಂದಾಪುರಕ್ಕೆ ಭೇಟಿ ನೀಡಿದ್ದ ಜ್ಯೂ. ಎನ್‌ಟಿಆರ್‌

ರಿಷಬ್‌ ಶೆಟ್ಟಿ ಕೂಡಾ ಕುಂದಾಪುರದವರಾಗಿದ್ದು ಜ್ಯೂ ಎನ್‌ಟಿಆರ್‌ನನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಎನ್‌ಟಿಆರ್‌ ತಾಯಿ ಕೂಡಾ ಕುಂದಾಪುರದವರು ಅನ್ನೋದು ವಿಶೇಷ. ಏರ್‌ಪೋರ್ಟ್‌ನಲ್ಲಿ ರಿಷಬ್‌ ಅವರನ್ನು ನೋಡುತ್ತಿದ್ದಂತೆ ಹೇಗಿದ್ದೀರಿ ಸರ್‌ ಎಂದು ಕನ್ನಡದಲ್ಲೇ ಮಾತನಾಡುತ್ತಾ ಬಹಳ ಆತ್ಮೀಯವಾಗಿ ಮಾತನಾಡಿಸಿದ್ದರು. ಮಂಗಳೂರು ಪ್ರಸಿದ್ದ ದೇವಾಲಯಕ್ಕೆ ಭೇಟಿ ನೀಡಿದ್ದ ತೆಲುಗು ಸ್ಟಾರ್‌ ನಟ ಅಲ್ಲಿನ ಪುಟ್ಟ ಹೋಟೆಲ್‌ವೊಂದರಲ್ಲಿ ಬಾಳೆ ಎಲೆ ಊಟ ಸವಿದಿದ್ದರು. ಪ್ರಶಾಂತ್‌ ನೀಲ್‌ ಜೊತೆ ಬೀಚ್‌ಗೆ ತೆರಳಿ ಎಂಜಾಯ್‌ ಮಾಡಿದ್ದರು. ಸರಳ ವ್ಯಕ್ತಿತ್ವದ ಮೂಲಕವೇ ಹೆಸರಾಗಿರುವ ಜ್ಯೂನಿಯರ್‌ ಎನ್‌ಟಿಆರ್‌ ಇದೀಗ ಪ್ರವಾಹಪೀಡಿತ ಜನರಿಗಾಗಿ ಹಣದ ಸಹಾಯ ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.

ಆಂಧ್ರ ಹಾಗೂ ತೆಲಂಗಾಣದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಪ್ರವಾಹ ಹೆಚ್ಚಾಗಿದೆ. ಜನರು ಆಸ್ತಿ ಪಾಸ್ತಿ ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ. ನೀರಿನ ನಡುವೆಯೇ ಜೀವನ ಮಾಡುತ್ತಿದ್ದಾರೆ. ಜನರ ಕಷ್ಟವನ್ನು ಮಾಧ್ಯಮಗಳ ಮೂಲಕ ತಿಳಿದ ಜ್ಯೂನಿಯರ್‌ ಎನ್‌ಟಿಆರ್‌, ಜನರಿಗೆ ಧನ ಸಹಾಯ ಮಾಡಲು ಮುಂದಾಗಿದ್ದಾರೆ. ಈ ವಿಚಾರವನ್ನು ಆತನೇ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ ಕೊಡುಗೆ

ಎರಡೂ ತೆಲುಗು ರಾಜ್ಯಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಎಷ್ಟೋ ಜನರ ಜೀವನವನ್ನು ಅತಂತ್ರಕ್ಕೆ ಸಿಲುಕಿಸಿದೆ. ಆದಷ್ಟು ಬೇಗ ತೆಲುಗು ಜನತೆ ಈ ಸಮಸ್ಯೆಯಿಂದ ಪಾರಾಗುವಂತೆ ನಾನು ಆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಜನರನ್ನು ಸಮಸ್ಯೆಯಿಂದ ಹೊರ ತರಲು ಎರಡೂ ರಾಜ್ಯಗಳು ಸತತ ಪ್ರಯತ್ನ ಮಾಡುತ್ತಿವೆ. ಆಂಧ್ರಪ್ರದೇಶ, ತೆಲಂಗಾಣ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಾನು 50 ಲಕ್ಷ ರೂಪಾಯಿ ನೀಡುತ್ತಿದ್ದೇನೆ ಎಂದು ಜ್ಯೂನಿಯರ್‌ ಎನ್‌ಟಿಆರ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಎನ್‌ಟಿಆರ್‌ ನಡೆಗೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಜನರ ಕಷ್ಟಕ್ಕೆ ಮರುಗುವ ಸ್ಟಾರ್‌ ನಟರಲ್ಲಿ ನೀವೂ ಒಬ್ಬರು, ನಿಮ್ಮ ಸಮಾಜಸೇವೆ ಹೀಗೆ ಮುಂದುವರೆಯಲಿ, ನಿಮ್ಮ ಈ ಕಾರ್ಯವೇ ನಿಮಗೆ ಒಳ್ಳೆಯದು ಮಾಡುತ್ತಿದೆ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ ಎಂದು ಜನರು ಎನ್‌ಟಿಆರ್‌ನನ್ನು ಹಾರೈಸುತ್ತಿದ್ದಾರೆ.

ಜ್ಯೂ ಎನ್‌ಟಿಆರ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ 4-5 ಪ್ರಾಜೆಕ್ಟ್‌ಗಳಲ್ಲಿ ಅವರು ಬ್ಯುಸಿ ಇದ್ದಾರೆ. ಸದ್ಯಕ್ಕೆ ದೇವರ ಸಿನಿಮಾ ಶೂಟಿಂಗ್‌ ಮುಕ್ತಾಯವಾಗಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು ಜಾನ್ವಿ ಕಪೂರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ 2 ಭಾಗಗಳಲ್ಲಿ ಮೂಡಿ ಬರಲಿದೆ. ಹಿಂದಿಯ ವಾರ್‌ 2, ಡ್ರಾಗನ್‌ ಸೇರಿ ಹೆಸರಿಡದ ಮತ್ತೊಂದು ಸಿನಿಮಾದಲ್ಲಿ ಜ್ಯೂ. ಎನ್‌ಟಿಆರ್‌ ಬ್ಯುಸಿಯಾಗಿದ್ದಾರೆ.

Whats_app_banner