ಮುಫಾಸಾ: ದಿ ಲಯನ್ ಕಿಂಗ್ ಸಿನಿಮಾ ವಿಮರ್ಶೆ; ಒಂದು ಸ್ಪಷ್ಟ ಶೈಲಿ ಇಲ್ಲದ, ಅರ್ಥಹೀನ ಪ್ರಿಕ್ವೆಲ್
ಮುಫಾಸಾ: ದಿ ಲಯನ್ ಕಿಂಗ್ ವಿಮರ್ಶೆ: ಹಾಲಿವುಡ್ ಈ ಸಿನಿಮಾದಲ್ಲಿ ಸಿಂಹದ ಮೂಲವನ್ನು ಅದ್ಭುತ ದೃಶ್ಯಗಳೊಂದಿಗೆ ತೋರಿಸಿದ್ದರೂ ನಿರೂಪಣೆ ತುಂಬಾ ಗೊಂದಲದಿಂದ ಕೂಡಿದೆ. ಇದೆಲ್ಲಾವನ್ನು ನೋಡಿದಾಗ ಡಿಸ್ನಿಯ ಫ್ರ್ಯಾಂಚೈಸ್-ಚಾಲಿತ ವಿಧಾನದಲ್ಲಿ ಎಡವುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ದಿ ಲಯನ್ ಕಿಂಗ್ ಹೊಸ ಅವತಾರದಲ್ಲಿ ಮತ್ತೆ ಬಂದಿದೆ, ಹೊಸ ಅನುಭವಗಳನ್ನು ತಂದಿರುತ್ತೆ ಎಂದು ಖುಷಿಯಿಂದ ಮೂವಿ ನೋಡಲು ಮುಂದಾದ ಸಿನಿ ಪ್ರೇಕ್ಷನಿಗೆ ಮುಫಾಸಾ: ದಿ ಲಯನ್ ಕಿಂಗ್ ಭಾರಿ ನಿರಾಸೆ ಮೂಡಿಸಿದೆ. ಆಧುನಿಕ ಪ್ರೇಕ್ಷಕರಿಗಾಗಿ ತನ್ನ ಅನಿಮೇಷನ್ ಕ್ಲಾಸಿಕ್ ಗಳಿಗೆ ಹೊಸ ಟಚ್ ನೀಡಿರುವ ಡಿಸ್ನಿಯು ತನ್ನ ನಿರಂತರ ಅನ್ವೇಷಣೆಯಲ್ಲಿ ಹಿಂದೆ ಬೀಳುತ್ತಿರುವಂತೆ ಕಾಣುತ್ತಿದೆ.
ಬ್ಯಾರಿ ಜೆಂಕಿನ್ಸ್ ನಿರ್ದೇಶಿಸಿದ 2019 ರ ದಿ ಲಯನ್ ಕಿಂಗ್ ರಿಮೇಕ್ ನ ಈ ಪ್ರಿಕ್ವೆಲ್ ಮುಫಾಸಾ ಎಂಬ ಶ್ರೇಷ್ಠ ಸಿಂಹದ ಮೂಲ ಕಥೆಯನ್ನು ಅನ್ವೇಷಿಸುತ್ತದೆ. ಜೆಂಕಿನ್ಸ್ ಅವರ ಸಿಗ್ನೇಚರ್ ಶೈಲಿಯ ಮಿಂಚುಗಳ ಹೊರತಾಗಿಯೂ, ಈ ಸಿನಿಮಾವು ಗೊಂದಲದಿಂದ ಕೂಡಿದ ನಿರೂಪಣೆಯಿಂದ ಪ್ರೇಕ್ಷಕನಿಗೆ ಬೇಸರ ಮೂಡಿಸಿದೆ.
ಈ ಸಿನಿಮಾದ ಕಥೆ ಸಿಂಬಾ ಆಳ್ವಿಕೆಯ ನಂತರ ಪ್ರಾರಂಭವಾಗುತ್ತದೆ, ನಲಾ (ನೇಹಾ ಗರ್ಗವ ಧ್ವನಿ ನೀಡಿದ್ದಾರೆ) ಹೆರಿಗೆಯ ಅಂಚಿನಲ್ಲಿ ಇರುತ್ತೆ. ಸಿಂಬಾ (ಆರ್ಯನ್ ಖಾನ್) ಆಕೆಯ ಕಡೆಗೆ ಧಾವಿಸುತ್ತಿದ್ದಂತೆ, ಯಾವಾಗಲೂ ಹಾಸ್ಯಮಯ ಟಿಮೋನ್ (ಶ್ರೇಯಸ್ ತಲ್ಪಾಡೆ) ಮತ್ತು ಪುಂಬಾ (ಸಂಜಯ್ ಮಿಶ್ರಾ) ಕಿಯಾರಾ ಅವರನ್ನು ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಾರೆ. ರಫೀಕಿ (ಮಕರಂದ್ ದೇಶಪಾಂಡೆ) ಮುಫಾಸಾಳ ಕಥೆಯನ್ನು ನಿರೂಪಿಸಲು ಒಂದು ಸಾಧನವಾಗಿ ಬಳಸುತ್ತಾನೆ. ಸಿಂಹ ರಾಜನ ಪ್ರಕ್ಷುಬ್ಧ ಭೂತಕಾಲದ ಪ್ರಯಾಣಕ್ಕೆ ವೇದಿಕೆಯನ್ನು ನಿರ್ಮಿಸುತ್ತಾನೆ.
ಸಿನಿಮಾ ಆರಂಭಿಕ ಹಂತಗಳಲ್ಲಿ ಉತ್ತಮವಾಗಿ ಕಾಣುತ್ತದೆ. ಎರಡು ಮರಿಗಳ ನಡುವಿನ ಸ್ನೇಹವನ್ನು ಹೃತ್ಪೂರ್ವಕ ಕ್ಷಣಗಳು ಚೆನ್ನಾಗಿ ತೋರಿಸಲಾಗಿದೆ. ವಿಶೇಷವಾಗಿ ಎಳೆಯ ಸಿಂಹಗಳ ತಮಾಷೆಯ ತುಂಟಾಟದ ಸಮಯದ ಕ್ಲೋಸ್-ಅಪ್ ಹಾಗೂ ತುಂಬಾ ಕೂಲ್ ಆಗಿ ಕಾಣುವಂತೆ ಮಾಡಲಾಗಿದೆ. ಆದರೆ ಕಥೆಯು ಮುಂದುವರೆದಂತೆ ಎಡವಲು ಪ್ರಾರಂಭಿಸುತ್ತದೆ. ಮುಫಾಸಾ ಟಾಕಾದ ತಂದೆ ಒಬಾಸಿ (ಉದಯ್ ಸಬ್ನಿಸ್) ನ ಅನುಮಾನಾಸ್ಪದ ನೋಟದಲ್ಲಿ ಬೆಳೆಯುತ್ತಾಳೆ. ಇಲ್ಲಿಂದ ಮೂವಿ ಬೋರ್ ಹೊಡೆಯಲು ಶುರುವಾಗುತ್ತದೆ.
ಸಿನಿಮಾವು ಪ್ರೈಡ್ ಲ್ಯಾಂಡ್ಸ್ ಗೆ ಸವಾಲೊಡ್ಡುವ 'ಇತರರು ಅಥವಾ 'ಹೊರಗಿನವರು' ಎಂದು ಕರೆಯಲ್ಪಡುವ ಬಿಳಿ ಸಿಂಹಗಳ ಪರಿಚಯದೊಂದಿಗೆ ಕಥೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತದೆ. ಆದರೆ ಈ ಉಪಕಥೆಯು ತುಂಬಾ ಪರಿಚಿತವಾಗಿದೆ, ಅಭಿವೃದ್ಧಿ ಹೊಂದಿಲ್ಲ ಮತ್ತು ಹೆಚ್ಚು ಸಂಕೀರ್ಣವಾಗಿದೆ. ಸರಬಿ (ಕಾಮಾಕ್ಷಿ ರೈ) ಮತ್ತು ಇತರ ಪಾತ್ರಗಳಾದ ಜಾಜು (ರಾಜೇಶ್ ಕವಾ) ಮತ್ತು ಯುವ ರಫಿಕಿ (ಥಾಮ್ಸನ್ ಆಂಡ್ರ್ಯೂಸ್) ಅವರ ಪರಿಚಯವು ಹೆಚ್ಚು ಆಳವನ್ನು ನೀಡದೆ ಗೊಂದಲವನ್ನು ಹೆಚ್ಚಿಸುತ್ತದೆ.
ಈ ಸಿನಿಮಾ ರಿಲೀಸ್ ಗೂ ಮುನ್ನ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕ ಭಾರಿ ಸದ್ದು ಮಾಡಿತ್ತು. ಹಿಂದಿ ಅವತರಣಿಕೆಯಲ್ಲಿ ಶಾರೂಕ್ ಖಾನ್ ಧ್ವನಿ ಹಾಗೂ ತೆಲುಗಿನ ಅವತರಣಿಕೆಯಲ್ಲಿ ಮಹೇಶ್ ಬಾಬು ಧ್ವನಿ ಅವರ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿತ್ತು.