ಕನ್ನಡ ಸುದ್ದಿ  /  Entertainment  /  Upcoming Movies April 5 Avatara Purusha 2 Matinee Godzilla X Kong The Family Star Kannada Telugu Hindi Movies Pcp

ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ; ಅವತಾರ ಪುರುಷ 2, ಮ್ಯಾಟ್ನಿ, ಗಾಡ್ಜಿಲ್ಲಾ, ದಿ ಫ್ಯಾಮಿಲಿ ಸ್ಟಾರ್‌ ಸೇರಿದಂತೆ 23 ಸಿನಿಮಾ ರಿಲೀಸ್‌

Upcoming Movies April 5: ಈ ಶುಕ್ರವಾರ ಏಪ್ರಿಲ್‌ 5ರಂದು ಭಾರತದಲ್ಲಿ ಒಟ್ಟು 23 ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಕನ್ನಡದಲ್ಲಿ ಅವತಾರ ಪುರುಷ 2, ಮ್ಯಾಟ್ನಿ, ಮಾರಿಗೋಲ್ಡ್‌, ಭರ್ಜರಿ ಗೋಲ್ಡ್‌ ಮತ್ತು ಭರ್ಜರಿ ಗಂಡು ಸಿನಿಮಾ ರಿಲೀಸ್‌ ಆಗಲಿದೆ. ತೆಲುಗಿನ ದಿ ಫ್ಯಾಮಿಲಿ ಸ್ಟಾರ್‌ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ.

ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು
ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು

ಬೆಂಗಳೂರು: ಏಪ್ರಿಲ್‌ 5 ಅಂದರೆ ನಾಳೆ ದೇಶದಲ್ಲಿ ಬರೋಬ್ಬರಿ 23 ಸಿನಿಮಾಗಳು ಬಿಡುಗಡೆಯಾಗಲಿವೆ. ಶರಣು ಅಭಿನಯದ ಅವತಾರ ಪುರುಷ 2, ರಚಿತಾ ರಾಮ್‌ ನೀನಾಸಂ ಸತೀಶ್‌ ಅಭಿನಯದ ಮ್ಯಾಟ್ನಿ ಸಿನಿಮಾ ರಿಲೀಸ್‌ ಆಗಲಿದೆ. ಮಾರಿಗೋಲ್ಡ್‌ ಮತ್ತು ಭರ್ಜರಿ ಗಂಡು ಎಂಬ ಸಿನಿಮಾಗಳು ಇದೇ ವಾರ ಬಿಡುಗಡೆಯಾಗಲಿದೆ. ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌: ದಿ ನ್ಯೂ ಎಂಪೈರ್‌, ದಿ ಫ್ಯಾಮಿಲಿ ಸ್ಟಾರ್‌, ಭರತ ನಾಟ್ಯಂ, ಮಂಜುಮ್ಮೇಲ್‌ ಬಾಯ್ಸ್‌ (ತೆಲುಗು) ಸಿನಿಮಾಗಳು ಇದೇ ವಾರ ಬಿಡುಗಡೆಯಾಗುತ್ತಿವೆ. ಬಾಲಿವುಡ್‌ನಲ್ಲಿ ಮೇರಿ ಮಾ ಕರ್ಮಾ ಮೇರಾ ನಾಮ್‌ ಉಲ್ಲಾಸ್‌ ಹಾಯ್‌ ಪಾರ್ಟ್‌ 2 (ಬ್ಯಾಚುಲರ್‌), ಏಕ್‌ ಓರಿ ಪ್ರೇಮ್‌ ಕಥಾ, ಗುಡ್‌ಲುಕ್‌, 3ರ್ಡ್‌ ಅಕ್ಟೋಬರ್‌, ಐರಾ- ದಿ ಇಮ್‌ಮೊರ್ಟಾಲಿಟಿ ಆಪ್‌ ಮುಂತಾದ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಏಪ್ರಿಲ್‌ 5ರಂದು ಬಿಡುಗಡೆಯಾಗುವ ಕನ್ನಡ ಸಿನಿಮಾಗಳು

ಅವತಾರ ಪುರುಷ 2

2022ರಲ್ಲಿ ತೆರೆಗೆ ಬಂದಿದ್ದ ಅವತಾರ ಪುರುಷ ಸಿನಿಮಾದ ಮುಂದುವರೆದ ಆವೃತ್ತಿಯಿದು. ಈ ಶುಕ್ರವಾರ ಶರಣ್‌ ಮತ್ತು ಆಶಿಕಾ ರಂಗನಾಥ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ ಅವತಾರ ಪುರುಷ 2 ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿರುವ ಅವತಾರ ಪುರುಷ 2 ಸಿನಿಮಾವನ್ನು ಸಿಂಪಲ್‌ ಸುನಿ ನಿರ್ದೇಶನ ಮಾಡಿದ್ದಾರೆ.

ಮ್ಯಾಟ್ನಿ

ನೀನಾಸಂ ಸತೀಶ್ ಹಾಗೂ ರಚಿತಾರಾಮ್ "ಅಯೋಗ್ಯ" ಚಿತ್ರದ ನಂತರ ನಟಿಸಿರುವ ಬಹು ನಿರೀಕ್ಷಿತ "ಮ್ಯಾಟ್ನಿ" ಚಿತ್ರ ಈ ವಾರ(ಏಪ್ರಿಲ್ 5) ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಚಿತ್ರ ಜನರ ಮನ ಗೆದ್ದಿದೆ. F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಾರ್ವತಿ ಎಸ್ ಗೌಡ ನಿರ್ಮಿಸಿರುವ ಹಾಗೂ ಮನೋಹರ್ ಕಾಂಪಲ್ಲಿ ನಿರ್ದೇಶನದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸುಧಾಕರ್ ಎಸ್ ರಾಜ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ನೀನಾಸಂ ಸತೀಶ್, ರಚಿತಾ ರಾಮ್, ಅದಿತಿ ಪ್ರಭುದೇವ, ನಾಗಭೂಷಣ, ಶಿವರಾಜ ಕೆ.ಆರ್ ಪೇಟೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಭರ್ಜರಿ ಗಂಡು

ಕಿರುತೆರೆ ಲೋಕದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ "ಭರ್ಜರಿ ಗಂಡು" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ‌. ಪ್ರಸಿದ್ದ್ ಸಿನಿಮಾಸ್, ಮದನ್ ಗೌಡ ಹಾಗೂ ಅನಿಲ್ ಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದಾರೆ. ಗುಮ್ಮಿನೇನಿ‌ ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನವಿರುವ ಈ‌ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ಇದ್ದಾರೆ. ರಮೇಶ್ ಭಟ್ , ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್, ಜಯಶ್ರೀ, ನಾಗೇಶ್ ರೋಹಿತ್, ಸೌರಭ್ ಕುಲಕರ್ಣಿ, ಮಡೆನೂರು ಮನು, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮಾರಿಗೋಲ್ಡ್‌

ದಿಗಂತ್‌ ಮತ್ತು ಬಿಗ್ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ ನಟಿಸಿರುವ ಮಾರಿಗೋಲ್ಡ್‌ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ದಿಗಂತ್‌, ಸಂಗೀತಾ, ಯಶ್ ಶೆಟ್ಟಿ, ಕಾಕ್ರೋಚ್ ಸುಧೀ ಹೀಗೆ 4 ಪಾತ್ರಗಳ ಸುತ್ತ ಈ ಸಿನಿಮಾದ ಕಥೆ ಸುತ್ತುತ್ತದೆ. ಸಂಪತ್ ಮೈತ್ರೇಯಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದಿ ಡಾರ್ಕ್‌ ವೆಬ್‌

ಚೇತನ್‌ ಕುಮಾರ್‌ ಕೆಎಚ್‌, ಮೇಘನಾ ಸಿ, ನಾಗರಾಜ್‌ ದೊಡ್ಡಮನಿ, ಗೌತಮ್‌ ಚಂದ್ರ, ರಾಕೇಶ್‌ ಎಸ್ವಿ ಮುಂತಾದವರು ನಟಿಸಿರುವ ದಿ ಡಾರ್ಕ್‌ ವೆಬ್‌ ಎಂಬ ಕನ್ನಡ ಸಿನಿಮಾ ಈ ವಾರ ತೆರೆ ಕಾಣುತ್ತಿದೆ.

ಈ ಶುಕ್ರವಾರ ಬಿಡುಗಡೆಯಾಗುವ ತೆಲುಗು ಸಿನಿಮಾಗಳು

- ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌: ದಿ ನ್ಯೂ ಎಂಪೈರ್‌ (ತೆಲುಗು)

- ದಿ ಫ್ಯಾಮಿಲಿ ಸ್ಟಾರ್‌

- ಭರತ ನಾಟ್ಯಂ

- ಮಂಜುಮ್ಮೇಲ್‌ ಬಾಯ್ಸ್‌ (ತೆಲುಗು)

ತಮಿಳು ಸಿನಿಮಾಗಳು

ವಲ್ಲವನ್ ವಗುತಧಾದ

ವೈಟ್‌ ರೋಸ್‌

ಆಲಕಲಂ

ಒರು ತವರು ಸೀಧಲ್‌

ಇರ್ವಿನ್‌ ಕಂಗಲ್‌

ಹಿಂದಿ ಸಿನಿಮಾಗಳು

ಮೇರಿ ಮಾ ಕರ್ಮಾ

ಮೇರಾ ನಾಮ್‌ ಉಲ್ಲಾಸ್‌ ಹಾಯ್‌ ಪಾರ್ಟ್‌ 2 (ಬ್ಯಾಚುಲರ್‌)

ಏಕ್‌ ಓರಿ ಪ್ರೇಮ್‌ ಕಥಾ

ಗುಡ್‌ಲುಕ್‌

3ರ್ಡ್‌ ಅಕ್ಟೋಬರ್‌

ಐರಾ- ದಿ ಇಮ್‌ಮೊರ್ಟಾಲಿಟಿ ಆಪ್‌

ಮಲಯಾಳಂ ಸಿನಿಮಾಗಳು

ಚಪ್ಪುಕುಟ್ಟು

ಎಲ್‌

ಬಾದಲ್‌ ದಿ ಮೆನಿಫೆಸ್ಟೊ