ಕನ್ನಡ ಸುದ್ದಿ  /  ಮನರಂಜನೆ  /  Youtube Songs: ಈ ವರ್ಷ ಯೂಟ್ಯೂಬ್‌ನಲ್ಲಿ ಅತ್ಯಧಿಕ ಜನರು ನೋಡಿದ 15 ಮ್ಯೂಸಿಕ್‌ ವಿಡಿಯೋಗಳಿವು; ನಿಮ್ಮೆ ನೆಚ್ಚಿನ ಸಿನಿಮಾ ಹಾಡು ಇದೆಯಾ ನೋಡಿ

Youtube Songs: ಈ ವರ್ಷ ಯೂಟ್ಯೂಬ್‌ನಲ್ಲಿ ಅತ್ಯಧಿಕ ಜನರು ನೋಡಿದ 15 ಮ್ಯೂಸಿಕ್‌ ವಿಡಿಯೋಗಳಿವು; ನಿಮ್ಮೆ ನೆಚ್ಚಿನ ಸಿನಿಮಾ ಹಾಡು ಇದೆಯಾ ನೋಡಿ

YouTube Top Music Songs: ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಮಾಲಿಕತ್ವದ ಯೂಟ್ಯೂಬ್‌ನಲ್ಲಿ ಈ ವರ್ಷ ಅತ್ಯಧಿಕ ಜನರು ನೋಡಿರುವ ಅಗ್ರ 15 ಮ್ಯೂಸಿಕ್‌ ವಿಡಿಯೋಗಳ ವಿವರ ಲಭ್ಯವಾಗಿದೆ. ಈ ಲಿಸ್ಟ್‌ನಲ್ಲಿ ಭೋಜ್‌ಪುರಿ, ತಮಿಳು ಹಿಟ್‌ ಸಾಂಗ್‌ಗಳು ಸ್ಥಾನ ಪಡೆದಿವೆ.

Youtube Songs: ಈ ವರ್ಷ ಯೂಟ್ಯೂಬ್‌ನಲ್ಲಿ ಅತ್ಯಧಿಕ ಜನರು ನೋಡಿದ 15 ಹಾಡುಗಳು
Youtube Songs: ಈ ವರ್ಷ ಯೂಟ್ಯೂಬ್‌ನಲ್ಲಿ ಅತ್ಯಧಿಕ ಜನರು ನೋಡಿದ 15 ಹಾಡುಗಳು

ಯೂಟ್ಯೂಬ್‌ನಲ್ಲಿ 2023ರಲ್ಲಿ ಅತ್ಯಧಿಕ ಜನರು ನೋಡಿರುವ ಹಾಡುಗಳ ಪಟ್ಟಿಯಲ್ಲಿ ಭೋಜ್‌ಪುರಿ ಸಾಂಗ್‌ "ಧೋನಿ ಹೊ ಸಬ್‌ ಧನ್‌ (Dhani Ho Sab Dhan) ಅಗ್ರ ಸ್ಥಾನದಲ್ಲಿದೆ. ಇದನ್ನು ಪವನ್‌ ಸಿಂಗ್‌ ಮತ್ತು ಶಿವಾನಿ ಸಿಂಗ್‌ ಹಾಡಿದ್ದಾರೆ. ಈ ಹಾಡಿಗೆ ಪ್ರಿಯಾಂಶು ಸಿಂಗ್‌ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಶುತೋಶ್‌ ತಿವಾರಿ ಸಾಹಿತ್ಯವಿದೆ.

ಟ್ರೆಂಡಿಂಗ್​ ಸುದ್ದಿ

ಅಗ್ರ ಎರಡನೇ ಸ್ಥಾನವನ್ನು ವಿಕ್ಕಿ ಕೌಶಲ್‌ ಮತ್ತು ಸಾರಾ ಆಲಿ ಖಾನ್‌ ಅವರ ಝರ ಹಕ್ತೆ ಝರಾ ಬಚ್ಕೆ ಸಿನಿಮಾದ "ತೇರೆ ವಾಸ್ತೆ" ಹಾಡು ಪಡೆದುಕೊಂಡಿದೆ. ಇದಕ್ಕೆ ಸಚಿನ್‌ ಮತ್ತು ಜಿಗರ್‌ ಅವರ ಸಂಗೀತವಿದೆ. ಈ ಹಾಡನ್ನು ವರುಣ್‌ ಜೈನ್‌, ಸಚಿನ್‌-ಜಿಗರ್‌, ಶಾದಾಬ್‌ ಫರಿದಿ, ಆಲ್ತಮಸ್‌ ಫಾರಿದಿ ಹಾಡಿದ್ದಾರೆ. ಅಮಿತಾಬ್‌ ಭಟ್ಟಾಚಾರ್ಯ ಸಾಹಿತ್ಯವಿದೆ.

ಅಗ್ರ ಮೂರನೇ ಸ್ಥಾನವನ್ನು ವಿಶಲ್‌ ಮಿಶ್ರಾ ಮತ್ತು ಶ್ರೇಯಾ ಘೋಷಲ್‌ ಹಾಡಿರುವ ಝಿಹಲ್‌ ಇ ಮಿಸ್ಕಿನ್‌ ಹಾಡು ಪಡೆದುಕೊಂಡಿದೆ. ಜಾವೇದ್‌ ಮೊಸಿನ್‌ ಸಂಗೀತ ಸಂಯೋಜನೆ ಇರುವ ಈ ಹಾಡನ್ನು ಕುನಾಲ್‌ ವರ್ಮಾ ರಚಿಸಿದ್ದಾರೆ.

ಬಿ ಪರೇಕ್‌ ಹಾಡಿರುವ ಕ್ಯಾ ಲೊಗ್‌ ತುಮ್‌ ಎಂಬ ಹಾಡು ನಾಲ್ಕನೇ ಸ್ಥಾನ ಪಡೆದಿದೆ. ಇದು ಅಕ್ಷಯ್‌ ಕುಮಾರ್‌ ಸಿನಿಮಾ. ಐದನೇ ಸ್ಥಾನವನ್ನು ಶಿವಾನಿ ಸಿಂಗ್‌ ಮ್ಯೂಸಿಕ್‌ ವಿಡಿಯೋ ಪಡೆದುಕೊಂಡಿದೆ. ಇದು ಹೊಸ ಭೋಜ್‌ಪುರಿ ಹಾಡು.

ಕಾವಲಯ್ಯ ಹಾಡಿಗೆ ಅಗ್ರ 6ನೇ ಸ್ಥಾನ

ಈ ವರ್ಷ ಯೂಟ್ಯೂಬ್‌ನಲ್ಲಿ ಅತ್ಯಧಿಕ ಜನರು ಹುಡುಕಾಟ ನಡೆಸಿದ ಮ್ಯೂಸಿಕ್‌ ವಿಡಿಯೋಗಳಲ್ಲಿ ಅಗ್ರ ಆರನೇ ಸ್ಥಾನವನ್ನು ರಜನಿಕಾಂತ್‌ ನಟನೆಯ ಜೈಲರ್‌ ಸಿನಿಮಾದ ನಾ ಕಾವಲಯ್ಯ ಹಾಡು ಪಡೆದುಕೊಂಡಿದೆ. ಈ ಹಾಡಿನ ಸಂಗೀತ ಸಂಯೋಜನೆ ಮಾಡಿ ಹಾಡಿರುವವರು ಅನಿರುದ್ಧ್‌ ರವಿಚಂದ್ರನ್‌. ಶ್ರೇಯಾ ಘೋಷಾಲ್ ಕೂಡ ಈ ಹಾಡಿಗೆ ಧ್ವನಿಯಾಗಿದ್ದಾರೆ. ಅಗ್ರ ಏಳನೇ ಸ್ಥಾನವನ್ನು ರವಿತೇಜಾ ಅವರ ಧಮಕಾ ಸಿನಿಮಾದ ಪಲ್ಸರ್‌ ಬೈಕ್‌ ಹಾಡು ಪಡೆದುಕೊಂಡಿದೆ.

ಈ ಲಿಸ್ಟ್‌ನಲ್ಲಿ ಅಗ್ರ ಹತ್ತನೇ ಸ್ಥಾನವನ್ನು ಝರ ಹತ್ಕೆ ಝರಾ ಬಚ್ಕೆ ಸಿನಿಮಾದ ಫಿರ್‌ ಔರ್‌ ಕ್ಯಾ ಚಾಹಿಯೇ ಹಾಡು ಪಡೆದುಕೊಂಡಿದೆ. ವಿಜಯ್‌ ನಟನೆಯ ಲಿಯೊ ಸಿನಿಮಾದ ನಾ ರೆಡಿ ಹಾಡಿಗೆ ಅಗ್ರ ಹನ್ನೊಂದನೇ ಸ್ಥಾನ ದೊರಕಿದೆ.

ಜಾಸ್ಲೀನ್‌ ರಾಯಲ್‌ ಮತ್ತು ಅರ್ಜಿತ್‌ ಸಿಂಗ್‌ ಹಾಡಿರುವ ಹಿರಿಯೇ ಹಾಡಿಗೆ ಅಗ್ರ ಹನ್ನೆರಡನೇ ಸ್ಥಾನ ದೊರಕಿದೆ. ಸಲ್ಮಾನ್‌ ಖಾನ್‌ ನಾಯಕ ನಟನಾಗಿ ನಟಿಸಿರುವ ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಸಿನಿಮಾದ ನಹಿಯೊ ಲಗ್ಡಾ ಹಾಡಿಗೆ ಅಗ್ರ 13ನೇ ಸ್ಥಾನ ದೊರಕಿದೆ. ಗದರ್‌ 2 ಸಿನಿಂಆದ ಮೇನ್‌ ನಿಕ್ಲಾ ಗಡ್ಡಿ ಲೆಕೆ ಹಾಡಿಗೆ ಯೂಟ್ಯೂಬ್‌ ಸರ್ಚ್‌ನಲ್ಲಿ ಅಗ್ರ 15ನೇ ಸ್ಥಾನ ದೊರಕಿದೆ.

IPL_Entry_Point