ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ 93 ವರ್ಷದ ಅಜ್ಜಿ, ಮಮ್ಮಲ ಮರುಗಿದರು ಉಪ ಲೋಕಾಯುಕ್ತ, ಏನಿದು ಪ್ರಕರಣ
ಕನ್ನಡ ಸುದ್ದಿ  /  ಕರ್ನಾಟಕ  /  ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ 93 ವರ್ಷದ ಅಜ್ಜಿ, ಮಮ್ಮಲ ಮರುಗಿದರು ಉಪ ಲೋಕಾಯುಕ್ತ, ಏನಿದು ಪ್ರಕರಣ

ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ 93 ವರ್ಷದ ಅಜ್ಜಿ, ಮಮ್ಮಲ ಮರುಗಿದರು ಉಪ ಲೋಕಾಯುಕ್ತ, ಏನಿದು ಪ್ರಕರಣ

ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ 93 ವರ್ಷದ ಅಜ್ಜಿ. ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಶನಿವಾರ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಮಮ್ಮಲ ಮರುಗಿದರು. ಏನಿದು ಪ್ರಕರಣ- ಇಲ್ಲಿದೆ ವಿವರ.

ಕಲಬುರಗಿ: 93 ವರ್ಷದ ಅಜ್ಜಿ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ, ಅವರ ಸ್ಥಿತಿಯನ್ನು ಗಮನಿಸಿದ ಉಪ ಲೋಕಾಯುಕ್ತ ಮಮ್ಮಲ ಮರುಗಿದರು. (ಎಐ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)
ಕಲಬುರಗಿ: 93 ವರ್ಷದ ಅಜ್ಜಿ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ, ಅವರ ಸ್ಥಿತಿಯನ್ನು ಗಮನಿಸಿದ ಉಪ ಲೋಕಾಯುಕ್ತ ಮಮ್ಮಲ ಮರುಗಿದರು. (ಎಐ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ) (Meta AI)

ಕಲಬುರಗಿ: ಮನುಷ್ಯರ ಬದುಕೇ ಹಾಗೆ. ಒಬ್ಬೊಬ್ಬರದ್ದು ಒಂದೊಂದು ಕಥೆ-ವ್ಯಥೆ. ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ 93 ವರ್ಷದ ಅಜ್ಜಿ ಎರಡು ದಶಕ್ಕೂ ಹೆಚ್ಚು ಕಾಲದಿಂದ ಸೆರೆವಾಸದಲ್ಲಿದ್ದಾರೆ ಎಂಬ ಅಂಶ ಈಗ ಗಮನಸೆಳೆದಿದೆ. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಲಬುರಗಿ ಪ್ರವಾಸದಲ್ಲಿದ್ದಾಗ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು. ಅಜ್ಜಿಯೊಬ್ಬರು ಅಲ್ಲಿ ಸೆರೆವಾಸದಲ್ಲಿರುವ 93 ವರ್ಷದ ಅಜ್ಜಿಯ ಬದುಕಿನ ಚಿತ್ರಣ ಅವರ ಗಮನಸೆಳೆದಿದ್ದು, ಅವರು ಮಮ್ಮಲ ಮರುಗಿದರು ಎಂದು ಸಂಯುಕ್ತ ಕರ್ನಾಟಕ ವರದಿ ಮಾಡಿದೆ. ಆ ಕೂಡಲೇ ಅವರು, ಸೆರೆವಾಸ ಅನುಭವಿಸುತ್ತಿರುವ ಈ ಅಜ್ಜಿಯ ಬಿಡುಗಡೆಗಾಗಿ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲಹೆ ನೀಡಿದರು.

ಕಲಬುರಗಿ ಜೈಲಲ್ಲಿ 93 ವರ್ಷದ ಅಜ್ಜಿ ಇರೋದು ಬೆಳಕಿಗೆ ಬಂದದ್ದು ಹೀಗೆ

ಕಲಬುರಗಿ ಪ್ರವಾಸದಲ್ಲಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶನಿವಾರ (ನವೆಂಬರ್ 16) ಬೆಳಗ್ಗೆ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜೇವರ್ಗಿ ತಾಲೂಕಿನ ನಾಗಮ್ಮ ಎಂಬ ವಯೋವೃದ್ಧ 1995ರಲ್ಲಿ ವರದಕ್ಷಿಣೆ ಕಿರುಕುಳ (498ಎ) ಪ್ರಕರಣಕ್ಕೆ ಸಂಬಂಧಿಸಿ ಸೆರೆವಾಸ ಅನುಭವಿಸುತ್ತಿದ್ದಾರೆ. ಅವರು ವಯೋವೃದ್ಧರಾಗಿರುವ ಕಾರಣ ಈಗ ಅವರು ಹಾಸಿಗೆಯಲ್ಲೇ ಇರುವಂತಾಗಿದೆ. ನಿತ್ಯ ಕರ್ಮಗಳಿಗಾಗಿ ಬೇರೆಯವರ ನೆರವು ಪಡೆಯಬೇಕಾಗುತ್ತದೆ. ಜೈಲು ಸಿಬ್ಬಂದಿಯೇ ನಿತ್ಯ ಆರೈಕೆ ಮಾಡಬೇಕಾಗಿದೆ ಎಂದು ಮಮ್ಮಲ ಮರುಗಿದರು.

ಮಾನವೀಯ ನೆಲೆಯಲ್ಲಿ ಬಿಡುಗಡೆಗೆ ಅರ್ಹವಾದ ಪ್ರಕರಣ

ತೀರಾ ವಯಸ್ಸಾಗಿರುವವರು ಈ ರೀತಿ ಶಿಕ್ಷೆ ಅನುಭವಿಸುತ್ತಿರುವುದನ್ನು ಇದೇ ಮೊದಲ ಸಲ ಹೀಗೆ ನೋಡಿದ್ದೇನೆ. ಮಾನವೀಯ ನೆಲೆಯಲ್ಲಿ ಇವರನ್ನು ಬಿಡುಗಡೆ ಮಾಡಬೇಕಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲಹೆ ನೀಡಿರುವುದಾಗಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹೇಳಿದರು.

ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಯೋವೃದ್ಧ ಮಹಿಳೆಯ ಸದ್ಯದ ಸ್ಥಿತಿ, ಅವರ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಗಳನ್ನು ಉಲ್ಲೇಖಿಸಿ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ. ಈ ಬಗ್ಗೆ ಗಮನಹರಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಕಲಬುರಗಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಅವರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸೂಚಿಸಿದರು. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರೊಂದಿಗೆ ಶಶಿಧರ ಶೆಟ್ಟಿ ಅವರೊಂದಿಗೂ ದೂರವಾಣಿ ಕರೆ ಮಾಡಿ ಮಾತನಾಡಿ, ಈ ಪ್ರಕರಣ ಕುರಿತ ವಾಸ್ತಾವಾಂಶದ ಮಾಹಿತಿ ನೀಡಿದ್ದಾಗಿ ವರದಿ ವಿವರಿಸಿದೆ.

Whats_app_banner