BBMP Khata: ಬಿಬಿಎಂಪಿಯಿಂದ ಖಾತಾ ಆಂದೋಲನ, ಅರ್ಜಿ ಸಲ್ಲಿಕೆ ಹೇಗೆ? ಶುಲ್ಕ ಎಷ್ಟು? ಇಲ್ಲಿದೆ ಕಂಪ್ಲಿಟ್‌ ಡಿಟೈಲ್ಸ್‌
ಕನ್ನಡ ಸುದ್ದಿ  /  ಕರ್ನಾಟಕ  /  Bbmp Khata: ಬಿಬಿಎಂಪಿಯಿಂದ ಖಾತಾ ಆಂದೋಲನ, ಅರ್ಜಿ ಸಲ್ಲಿಕೆ ಹೇಗೆ? ಶುಲ್ಕ ಎಷ್ಟು? ಇಲ್ಲಿದೆ ಕಂಪ್ಲಿಟ್‌ ಡಿಟೈಲ್ಸ್‌

BBMP Khata: ಬಿಬಿಎಂಪಿಯಿಂದ ಖಾತಾ ಆಂದೋಲನ, ಅರ್ಜಿ ಸಲ್ಲಿಕೆ ಹೇಗೆ? ಶುಲ್ಕ ಎಷ್ಟು? ಇಲ್ಲಿದೆ ಕಂಪ್ಲಿಟ್‌ ಡಿಟೈಲ್ಸ್‌

ಬಿಬಿಎಂಪಿಯು ಇದೇ ಫೆಬ್ರವರಿ 27ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾತಾ ಆಂದೋಲನ ಹಮ್ಮಿಕೊಂಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ)ರಾದ ಡಾ. ಆರ್.ಎಲ್ ದೀಪಕ್
ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ)ರಾದ ಡಾ. ಆರ್.ಎಲ್ ದೀಪಕ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಇಲಾಖೆ ವತಿಯಿಂದ "ಖಾತಾ ಆಂದೋಲನ" ಹಮ್ಮಿಕೊಳ್ಳಲಾಗಿದ್ದು, ಇನ್ನೂ ಪ್ರಾಪರ್ಟಿಗಳಿಗೆ ಖಾತೆ ಮಾಡಿಸಿಕೊಳ್ಳದವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ)ರಾದ ಡಾ. ಆರ್.ಎಲ್ ದೀಪಕ್ ರವರು ಹೆಚ್ಚಿನ ವಿವರ ನೀಡಿದ್ದಾರೆ.

ಫೆಬ್ರವರಿ 27ರಿಂದ ಬಿಬಿಎಂಪಿ ಖಾತಾ ಆಂದೋಲನ

"ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ವತ್ತುಗಳನ್ನು ನಗರ ಪಾಲಿಕೆ ವಹಿಗಳಲ್ಲಿ ದಾಖಲಿಸಿಕೊಂಡು ಆಸ್ತಿತೆರಿಗೆ ವ್ಯಾಪ್ತಿಗೆ ಒಳಪಡಿಸಲು ಹಾಗೂ ಈ ಸಂಬಂಧ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ದಿನಾಂಕ:27-02-2023 ರಿಂದ “ಖಾತಾ ಆಂದೋಲನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆʼʼ ಎಂದು ಅವರು ಹೇಳಿದ್ದಾರೆ.

"ಪಾಲಿಕೆಯ ಎಲ್ಲಾ ವಲಯಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿಗಳ(ARO) ಕಛೇರಿಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗುತ್ತಿದ್ದು, ಸದರಿ ಹೆಲ್ಪ್ ಡೆಸ್ಕ್ ಗಳು ಬೆಳಗ್ಗೆ 11:00 ರಿಂದ ಸಂಜೆ 4:00 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಸ್ವತ್ತಿನ ಮಾಲೀಕರಿಗೆ ಹೊಸದಾಗಿ ಖಾತೆ ನೊಂದಾಯಿಸಿಕೊಳ್ಳುವ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು. ಖಾತಾ ಆಂದೋಲನ ಕಾರ್ಯಕ್ರಮದ ಮೂಲಕ ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತಿನ ಮಾಲೀಕರು ಸಂಬಂಧಪಟ್ಟ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳನ್ನು ಸಂಪರ್ಕಿಸಿ ಸ್ವತ್ತಿನ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು" ಎಂದು ಅವರು ಹೇಳಿದ್ದಾರೆ.

"ಖಾತೆ ನೊಂದಾವಣೆ ಕುರಿತ ಅರ್ಜಿಗಳನ್ನು ಪರಿಶೀಲಿಸಿ ಸ್ವತ್ತುಗಳ ವಿವರಗಳನ್ನು ನಿಯಮಾನುಸಾರ ಕಾಲಮಿತಿಯಲ್ಲಿ ನೊಂದಾಯಿಸಿಕೊಂಡು ಆಸ್ತಿತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಹಾಗೂ ಕಛೇರಿ ವಿಳಾಸ ಪಡೆಯಲು ಪಾಲಿಕೆಯ ಜಾಲತಾಣ http://bbmp.gov.in/ ಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು" ಎಂದು ಅವರು ಮಾಹಿತಿ ನೀಡಿದ್ದಾರೆ.

ಖಾತಾ ಆಂದೋಲನದ ಮೂಲಕ ಸ್ವತ್ತು ನೋಂದಾಯಿಸಲು ಬಯಸುವವರಿಗೆ ಒಂದಿಷ್ಟು ಮಾಹಿತಿಯನ್ನು ಈ ಮುಂದೆ ನೀಡಲಾಗಿದೆ.

1. ಖಾತಾ ಎಂದರೇನು?

ಖಾತಾ ಎಂದರೆ ನಿಮ್ಮ ಸ್ವತ್ತಿನ ಕಂದಾಯ ನಿರ್ಧಾರಣೆಗಾಗಿ ನೀಡಲಾಗುವ ಒಂದು ದಾಖಲೆ. ಇದರಲ್ಲಿ ಸ್ವಸ್ತಿನ ಸ್ಥಳ, ಆಳತೆ, ಚೆಕ್ಕುಬಂದಿ, ಕಟ್ಟಡ ಹಾಗೂ ಇತರೆ ವಿವರಗಳನ್ನು ದಾಖಲಿಸಿ, ಸ್ಮತ್ತಿನ ಕಂದಾಯ ಪಾವತಿಗೆ ಜವಾಬ್ದಾರರಾಗಿರುವ ವ್ಯಕ್ತಿಯನ್ನು ಗುರುತಿಸಲಾಗುತ್ತದೆ. ಖಾತೆಯು ಸ್ವತ್ತಿನ ಮಾಲೀಕತ್ವವನ್ನು ನಿರೂಪಿಸುವುದಿಲ್ಲ.

2. ಖಾತೆಗೆ ಯಾರು ಅರ್ಜಿ ಸಲ್ಲಿಸಬಹುದು?

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ವಿವರಗಳನ್ನು ನಗರ ಪಾಲಿಕೆಯಲ್ಲಿ. ದಾಖಲಿಸಿಕೊಳ್ಳದೇ ಇರುವ ಸ್ವತ್ತಿನ ಮಾಲೀಕರು / ಅನುಭವದಾರರು ಖಾತೆಯನ್ನು ಪಡೆಯಲು ಸಂಬಂಧಪಟ್ಟ, ಸಹಾಯಕ ಕಂದಾಯ ಅಧಿಕಾರಿಯ ಕಚೇರಿಯನ್ನು ಸಂಪರ್ಕಿಸಬಹುದು.

3. ಖಾತೆಯನ್ನು ಪಡೆಯಲು ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು?

ಸಹಾಯಕ ಕಂದಾಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಕಛೇರಿ ವಿಳಾಸ ಮತ್ತು ಸದರಿ ಉಪವಿಭಾಗ ವ್ಯಾಪ್ತಿಗೆ ಒಳಪಡುವ ವಾರ್ಡ್ ಗಳ ವಿವರಗಳುಳ್ಳ ಮಾಹಿತಿಯನ್ನುಇಲ್ಲಿ ನೀಡಲಾಗಿದೆ.

ಖಾತೆ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಪ್ರತಿಯೊಂದು ಸಹಾಯಕ ಕಂದಾಯ ಅಧಿಕಾರಿಯ ಕಛೇರಿಯಲ್ಲಿ ರಚಿಸಲಾಗಿರುವ ಹಲ್ಲೆ ಡೆಸ್ಕ್‌ನ್ನು ಸಂಪರ್ಕಿಸಬಹುದಾಗಿದೆ (ಕೆಲಸದ ದಿನಗಳಂದು ಬೆಳಗ್ಗೆ 11.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ)

4. ಖಾತೆ ಪಡೆಯಲು ಅನ್ವಯವಾಗುವ ಶುಲ್ಕಗಳು ಯಾವುವು?

ನಮೂನೆ ಎ ವಹಿಯಲ್ಲಿ ಖಾತಾವನ್ನು ನೋಂದಾಯಿಸಲು

• ಪ್ರತಿ ನೋಂದಾಯಿತ ಪತ್ರದ ನೋಂದಣಿ ಶುಲ್ಕದ ಶೇ. 2% ರಷ್ಟು ಅಥವಾ ಕನಿಷ್ಠ ರೂ. 500/- (ಎರಡರಲ್ಲಿ ಹೆಚ್ಚಾಗಿರುವ ಮೊತ್ತ).

• ನಮೂನೆ ಬಿ ಯಲ್ಲಿ ಸ್ವತ್ತಿನ ವಿವರಗಳನ್ನು ನಮೂದಿಸಲು ಯಾವುದೇ ಶುಲ್ಕಗಳಿಲ್ಲ.

bbmp
bbmp

ಬಿಬಿಎಂಪಿ ಸಹಾಯವಾಣಿ

ಸಾರ್ವಜನಿಕರು ದೂರವಾಣಿ ಸಂಖ್ಯೆ 1533 ಅಥವಾ 080-2222 1188 ಗೆ ಕರೆ ಮಾಡಿ ಸಂಬಂಧಪಟ್ಟ ಉಪವಿಭಾಗ ಕಛೇರಿ ಮತ್ತು ಅಧಿಕಾರಿಯ ವಿವರಗಳನ್ನು ಪಡೆಯಬಹುದು.

ಬಿಬಿಎಂಪಿ ಸಹಾಯವಾಣಿ
ಬಿಬಿಎಂಪಿ ಸಹಾಯವಾಣಿ
Whats_app_banner