ಬೆಂಗಳೂರಿನಲ್ಲಿ ಆಟೊ ಚಾಲಕರ ಉಪಟಳ ಹೆಚ್ಚಳ; ದೂರು ಸಲ್ಲಿಸಲು ಕಾಲ್ ಸೆಂಟರ್ ಆರಂಭಿಸಿದ ಸಂಚಾರ ಪೊಲೀಸರು-bengaluru news bengaluru traffic police starts call center for receiving complaints against auto drivers check dets uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಆಟೊ ಚಾಲಕರ ಉಪಟಳ ಹೆಚ್ಚಳ; ದೂರು ಸಲ್ಲಿಸಲು ಕಾಲ್ ಸೆಂಟರ್ ಆರಂಭಿಸಿದ ಸಂಚಾರ ಪೊಲೀಸರು

ಬೆಂಗಳೂರಿನಲ್ಲಿ ಆಟೊ ಚಾಲಕರ ಉಪಟಳ ಹೆಚ್ಚಳ; ದೂರು ಸಲ್ಲಿಸಲು ಕಾಲ್ ಸೆಂಟರ್ ಆರಂಭಿಸಿದ ಸಂಚಾರ ಪೊಲೀಸರು

Bengaluru Traffic Police Call Center; ಬೆಂಗಳೂರಿನಲ್ಲಿ ಆಟೊ ಚಾಲಕರ ಉಪಟಳ ಹೆಚ್ಚಳವಾಗಿರುವ ಕಾರಣ ಸಂಚಾರ ಪೊಲೀಸರು ಈ ಸಂಬಂಧ ದೂರು ಸಲ್ಲಿಸಲು ಕಾಲ್ ಸೆಂಟರ್ ಆರಂಭಿಸಿದೆ. ಸಂಚಾರ ಪೊಲೀಸ್ ಸಹಾಯವಾಣಿ ಸಂಖ್ಯೆ ಮತ್ತು ಇತರೆ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಆಟೊ ಚಾಲಕರ ಉಪಟಳ ಹೆಚ್ಚಳ; ದೂರು ಸಲ್ಲಿಸಲು ಕಾಲ್ ಸೆಂಟರ್ ಆರಂಭಿಸಿದ ಸಂಚಾರ ಪೊಲೀಸರು
ಬೆಂಗಳೂರಿನಲ್ಲಿ ಆಟೊ ಚಾಲಕರ ಉಪಟಳ ಹೆಚ್ಚಳ; ದೂರು ಸಲ್ಲಿಸಲು ಕಾಲ್ ಸೆಂಟರ್ ಆರಂಭಿಸಿದ ಸಂಚಾರ ಪೊಲೀಸರು (BTP)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಆಟೋ ಚಾಲಕರ ಉಪಟಳ ಕೃತ್ಯಗಳು ಹೆಚ್ಚಾಗುತ್ತಿರುವಂತೆ ನಗರ ಪೊಲೀಸರು ಇಂತಹ ದೂರುಗಳನ್ನು ಸ್ವೀಕರಿಸುವ ಕಾಲ್‌ಸೆಂಟರ್ ಆರಂಭಿಸಿದ್ದು, ಅದರ ದೂರವಾಣಿ ಸಂಖ್ಯೆಯನ್ನು ಶೇರ್ ಮಾಡಿದ್ದಾರೆ.

ಸವಾರಿ ನಿರಾಕರಣೆ, ದುಬಾರಿ ಹಣ ವಸೂಲಿ ಇತ್ಯಾದಿ ದೂರು ಸಾಮಾನ್ಯವಾಗಿದ್ದು, ಇದರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಆಟೋ ಚಾಲಕನೊಬ್ಬ ಯುವತಿ ಜೊತೆ ಗಲಾಟೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದು ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನ ವಿರುದ್ಧ ಕ್ರಮ ಜರುಗಿಸಿದ್ದಾರೆ.

ಆಟೊ ಚಾಲಕರ ಉಪಟಳ ಹೆಚ್ಚಳ; ದೂರು ಸಲ್ಲಿಸಲು ಕಾಲ್ ಸೆಂಟರ್

ಬೆಂಗಳೂರಲ್ಲಿ ಆಟೋ ಚಾಲಕರ ಉಪಟಳ ಹೆಚ್ಚಾಗಿರುವ ಕಾರಣ ದೂರು ಸಲ್ಲಿಸಲು ಬೆಂಗಳೂರು ನಗರ ಪೊಲೀಸರು ಕಾಲ್‌ಸೆಂಟರ್ ನಂಬರ್ ಶೇರ್ ಮಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ಆಟೋ ಚಾಲಕನೊಬ್ಬ ಯುವತಿಯೊಬ್ಬರ ವಾದಕ್ಕಿಳಿದು ನಿಂದಿಸಿದ್ದ ವಿಡಿಯೋ ಮತ್ತು ಅದಾದ ನಂತರ ಏನಾಯಿತು ಎಂಬುದರ ವಿಡಿಯೋ ಶೇರ್ ಮಾಡಿದ್ದಾರೆ.

ಸವಾರಿ ರದ್ದು ಮಾಡುವುದು ಶಾರೀರಿಕ ಹಲ್ಲೆ ಅಥವಾ ಮಾನಸಿಕವಾಗಿ ಘಾಸಿಗೊಳಿಸುವುದಕ್ಕೆ ಇರುವ ಸನ್ನಿವೇಶ ಅಲ್ಲ. ನಮ್ಮ ರಸ್ತೆ ಮತ್ತು ನಗರವನ್ನು ಸುರಕ್ಷಿತವಾಗಿರಿಸೋಣ ಎಂದು ಶೀರ್ಷಿಕೆ ಕೊಟ್ಟು ಬೆಂಗಳೂರು ನಗರ ಪೊಲೀಸರು ಈ ವಿಡಿಯೋ ಶೇರ್ ಮಾಡಿದ್ದಾರೆ.

ಇದಕ್ಕೆ ಅನೇಕರ ಕಾಮೆಂಟ್‌ಗಳು ವ್ಯಕ್ತವಾಗಿದ್ದು, ಆನಂದ್ ಗುಂಡೂರಾವ್ ಎಂಬುವವರು ಮಾಡಿದ ಕಾಮೆಂಟ್‌ಗೆ ನಗರ ಪೊಲೀಸರು ಮತ್ತೆ ಪ್ರತಿಕ್ರಿಯಿಸಿ ದೂರು ದಾಖಲಿಸುವ ಕಾಲ್‌ ಸೆಂಟರ್ ನಂಬರ್ ಶೇರ್ ಮಾಡಿದ್ದಾರೆ.

ಆನಂದ್ ಗುಂಡೂರಾವ್, “ಆಟೋದವರು ಎಷ್ಟೋ ಬಾರಿ ಬರಲು ನಿರಾಕರಿಸುತ್ತಾರೆ ಅಥವಾ ಹೆಚ್ಚಿನ ಶುಲ್ಕವನ್ನು ಕೇಳುತ್ತಾರೆ. ಆಟೋದವರು ನಿಜವಾಗಿಯೂ ವಿಶ್ವಾಸಾರ್ಹರಾಗಿದ್ದರೆ, ಯಾರೂ ಎರಡನೇ ಆಯ್ಕೆಗೆ ಹೋಗುವುದಿಲ್ಲ. ಹೆಚ್ಚಿನ ಅಪ್ಲಿಕೇಶನ್ ಆಧಾರಿತ ರೈಡ್‌ಗಳೂ ಬರುತ್ತಿರಲಿಲ್ಲ. ನನ್ನಂತಹ ಸ್ಥಳೀಯರಿಗೆ ಸಹ, ಚಾಲಕರು ವಾಡಿಕೆಯಂತೆ ಹೆಚ್ಚಿನ ದರವನ್ನೇ ಕೇಳುತ್ತಾರೆ” ಎಂದುಬರೆದುಕೊಂಡಿದ್ದಾರೆ

ಇದಕ್ಕೆ ಉತ್ತರಿಸಿರುವ ಬೆಂಗಳೂರು ನಗರ ಪೊಲೀಸರು,"ಆಟೋಗಳ ವಿರುದ್ಧ ದೂರನ್ನು ದಾಖಲಿಸಲು ದಯವಿಟ್ಟು ನಮ್ಮ ಆಟೋ ದೂರುಗಳ ದೂರವಾಣಿ ಸಂಖ್ಯೆ- 080-22868550 / 22868444 ಗಳಿಗೆ ಕರೆ ಮಾಡಿ (ಹೆಚ್ಚು ಬೇಡಿಕೆ / ಬಾಡಿಗೆಗೆ ನಿರಾಕರಣೆಗೆ ಸಂಬಂಧಿಸಿದ ದೂರುಗಳು)" ಎಂದು ಟ್ವೀಟ್ ಮಾಡಿದ್ದಾರೆ.

ಚಾಲಕರ ಪರ ವಿರೋಧ, ಉತ್ತರ ಭಾರತೀಯರು ಬೆಂಗಳೂರಿಗರು ಎಂಬಿತ್ಯಾದಿ ವಿಚಾರ ಪ್ರಸ್ತಾಪ

ಬೆಂಗಳೂರು ಪೊಲೀಸರ ಟ್ವೀಟ್ ಗಮನಿಸಿದರೆ ಅದರ ಕೆಳಗೆ ಇರುವ ಕಾಮೆಂಟ್‌ಗಳಲ್ಲಿ ಆಟೋ ಚಾಲಕರ ವಿರೋಧ ಮತ್ತು ಪರ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಹಜವಾಗಿಯೇ ಉತ್ತರ ಭಾರತೀಯರು ಬೆಂಗಳೂರು ಸರಿ ಇಲ್ಲ ಎಂಬ ಧಾಟಿಯಲ್ಲೇ ಕಾಮೆಂಟ್ ಮಾಡಿದ್ದಾರೆ. ಚಾಲಕರು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.

ಈ ಪೈಕಿ ಗಮನಸೆಳೆದ ಟ್ವೀಟ್ - ಟ್ಯಾಕ್ಸಿ ಡ್ರೈವರ್ಸ್ ಆಫ್ ತೆಲಂಗಾಣದ್ದು.

ಬೆಂಗಳೂರಲ್ಲಿ ನಡೆದಿರುವ ಘಟನೆಗೆ ಪ್ರತಿಕ್ರಿಯಿಸಿರುವ ಟ್ಯಾಕ್ಸಿ ಡ್ರೈವರ್ಸ್ ಆಫ್ ತೆಲಂಗಾಣ ಖಾತೆ, ಇದಕ್ಕೆಲ್ಲ ಕಾರಣ ಅಗ್ರಿಗೇಟರ್ ಆಪ್‌ಗಳು ಎಂದು ಆಕ್ರೋಶ ವ್ಯಕ್ತಪಡಿಸಿದೆ. ಓಲಾ, ಉಬರ್, ರಾಪಿಡೋಗಳನ್ನು ಟ್ಯಾಗ್ ಮಾಡಿರುವ ಅದು, ಪ್ರತಿ ಸವಾರಿ ರದ್ದು ಮಾಡುವಾಗ ಪ್ರಯಾಣಿಕರಿಗೆ 50 ರೂಪಾಯಿ ದಂಡ ವಿಧಿಸಿ. ಎಲ್ಲ ನಿಯಮಗಳೂ ಚಾಲಕರಿಗೆ ಮಾತ್ರ ಅನ್ವಯವೇ? ಎಲ್ಲ ರೀತಿಯಲ್ಲೂ ಚಾಲಕರು ಬಲಿಪಶುಗಳು. ಅವರ ಅಳಲು ಕೇಳುವವರು ಇಲ್ಲ. ಗ್ರಾಹಕರಿಗೆ ಇಲ್ಲವೆ? ಈ ಕಂಪನಿಗಳು ಎಷ್ಟು ಗ್ರಾಹಕರ ಐಡಿಗಳನ್ನು ಬ್ಲಾಕ್ ಮಾಡಿದೆ ಎಂದೆಲ್ಲ ಪ್ರಶ್ನಿಸಿದೆ.

mysore-dasara_Entry_Point