Bengaluru Epsilon villa water fall : ಬೆಂಗಳೂರು ಐಷಾರಾಮಿ ವಿಲ್ಲಾ ಜಲಾವೃತ
Bengaluru Rains: ಮಳೆಗೆ ಬೆಂಗಳೂರಿನ ವಿಐಪಿ ಸಂಸ್ಕೃತಿ, ನಿವಾಸಗಳ ಅರಿವು ಇರುವುದೇ? ಖಚಿತವಾಗಿಯೂ ಇರಲ್ಲ. ಬೆಂಗಳೂರು ಮಹಾನಗರದ ಯಮಲೂರಿನ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಕೆಲವು ಪ್ರದೇಶಗಳು ಜಲಾವೃತವಾಗಿವೆ. ಯಮಲೂರಿನ ಐಷಾರಾಮಿ ವಿಲ್ಲಾಗಳ ಪ್ರದೇಶ ಜಲಾವೃತವಾಗಿರುವುದೇ ಈಗ ಸುದ್ದಿ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 5 ದಶಕಗಳಲ್ಲೇ ದಾಖಲೆಯ ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಭಾನುವಾರದಿಂದ ಭಾರೀ ಮಳೆ ಸುರಿದ ಕಾರಣ, ಬೆಂಗಳೂರಿನ ಮನೆಗಳು ಮತ್ತು ಖಾಸಗಿ ವಿಲ್ಲಾಗಳು ಜಲಾವೃತವಾಗಿವೆ. ಗಣ್ಯರು ಮತ್ತು ವಿಐಪಿಗಳು ಸೇರಿ ಕರ್ನಾಟಕ ರಾಜಧಾನಿಯ ಯಮಲೂರು ಐಷಾರಾಮಿ ವಿಲ್ಲಾ ಪ್ರದೇಶದಲ್ಲಿ ಮಂಗಳವಾರ ಮಳೆ ನೀರು ಸಂಕಷ್ಟ ಯಾರನ್ನೂ ಬಿಡಲಿಲ್ಲ.
ನಗರದಾದ್ಯಂತದ ಆಘಾತಕಾರಿ ದೃಶ್ಯಗಳ ಪ್ರವಾಹವೇ ಸಾಮಾಜಿಕ ಮಾಧ್ಯಮಗಳಲ್ಲಿ ಸೃಷ್ಟಿಯಾಗಿದೆ. ವಿಶೇಷವಾಗಿ ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ ಎಡೆಬಿಡದ ಮಳೆಯಿಂದ ಅಪಾರ ಆಸ್ತಿಗೆ ಹಾನಿಯಾಗಿದೆ. ಯಮಲೂರಿನ ಎಪ್ಸಿಲಾನ್‌ನಲ್ಲಿರುವ ಖಾಸಗಿ ವಿಲ್ಲಾದ ಲಿವಿಂಗ್ ರೂಮ್‌ನ ಚಿತ್ರ ಮೇಲಿರುವಂಥದ್ದು. ಐಷಾರಾಮಿ ಪೀಠೋಪಕರಣ, ಅಲಂಕಾರಿಕ ವಸ್ತುಗಳು ಕೆಸರು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ.
ಮಾರತ್ತಹಳ್ಳಿ ಬಳಿ ಇರುವ ಆಸ್ತಿ ಪಾಸ್ತಿಗಳು ಕೂಡ ಜಲಾವೃತವಾಗಿವೆ. ಸೋಷಿಯಲ್ ಮೀಡಿಯಾ ತುಂಬ ಸಹಾನುಭೂತಿ ಮತ್ತು ಸಲಹೆಗಳಿಂದ ತುಂಬಿತ್ತು. ಸಂವಹನ ತಂತ್ರ ಸಲಹೆಗಾರ ಕಾರ್ತಿಕ್, “ಇದು ಕಷ್ಟಪಟ್ಟು ಗಳಿಸಿದ ಹಣ. ಪಟ್ಟಣ/ನಗರವನ್ನು ನಂಬಿ ತಮ್ಮ ಹಣವನ್ನು ಖರ್ಚು ಮಾಡಿದವರಿಗೆ ಇದು ಭಯಾನಕವಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಏತನ್ಮಧ್ಯೆ, ಕೀರ್ತಿ ಎಂಬ ಇನ್ನೊಬ್ಬ ನೆಟಿಜನ್ ಪೋಸ್ಟ್ ಹೀಗಿದೆ - “ಗೋಡೆಗಳು / ಪೀಠೋಪಕರಣಗಳ ಮೇಲಿನ ನೀರಿನ ಕಲೆಗಳನ್ನು ತೊಡೆದುಹಾಕಲು ಸಮಯ ತೆಗೆದುಕೊಳ್ಳುತ್ತದೆ! ನೀರು ಹಾಳಾದ ಎಲೆಕ್ಟ್ರಾನಿಕ್ಸ್ ಅನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ ಅವುಗಳನ್ನು ಬದಲಾಯಿಸಬೇಕಾಗುತ್ತದೆ!"
ಆದಾಗ್ಯೂ ಅನೇಕ ನೆಟಿಜನ್‌ಗಳು ಬೆಂಗಳೂರಿನ ಪರ ಬ್ಯಾಟಿಂಗ್ ಮಾಡಿದರು. ಉಮಂಗ್ ಚೋರ್ಡಿಯಾ ಎಂಬ ಟ್ವಿಟರ್ ಬಳಕೆದಾರರ ಪೋಸ್ಟ್ ಹೀಗಿದೆ -“ಇದು ಎಪ್ಸಿಲಾನ್‌ನಿಂದ ಬಂದಿದೆ. ಬೆಂಗಳೂರಿನ ಬಹುತೇಕ ಮಿಲಿಯನೇರ್‌ಗಳ ತವರು ಈ ಪ್ರದೇಶ . ಸಂಪೂರ್ಣ ಆಸ್ತಿಯನ್ನು ಸರೋವರದ ಹಾಸಿಗೆಯ ಮೇಲೆ ನಿರ್ಮಿಸಲಾಗಿದೆ, ಆದ್ದರಿಂದ ನಿಜವಾಗಿಯೂ ಆಶ್ಚರ್ಯವಾಗಲಿಲ್ಲ. ಡೆವಲಪರ್ ಅನ್ನು ನಂಬಿ/ಪರಿಶೀಲಿಸಿ. ಬೆಂಗಳೂರು ಕೆರೆ ಹಾಸಿನ ಮೇಲೆ ಮನೆ ಕಟ್ಟುವಂತೆ ಕೇಳಲಿಲ್ಲ. ದುರಾಸೆಯ ರಿಯಲ್ ಎಸ್ಟೇಟ್ ಕಂಪನಿಗಳು ಹಾಳು ಮಾಡಿದವು"
"ಜೌಗು ಪ್ರದೇಶಗಳು / ಸರೋವರದ ಹಾಸಿಗೆಗಳು / ಉಕ್ಕಿ ಹರಿಯುವ ಪ್ರದೇಶಗಳಲ್ಲಿ ಆಸ್ತಿಗಳನ್ನು ಖರೀದಿಸುವ / ಅಭಿವೃದ್ಧಿಪಡಿಸುವ ಜನರು ವಿಪತ್ತನ್ನು ಆಹ್ವಾನಿಸುತ್ತಾರೆ - ಇದು ಅನಿವಾರ್ಯ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಇಂಡಿಯಾ ಟುಡೇ ಪ್ರಸಾರ ಮಾಡಿದ ದೃಶ್ಯಗಳಲ್ಲಿ ಕುಮಾರಕೃಪಾ ರಸ್ತೆಯ ಬಳಿಯಿರುವ ವಸಂತನಗರದ ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿ ಸಾರ್ವಜನಿಕ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ನಿವಾಸದಿಂದ 300 ಮೀಟರ್ ದೂರದಲ್ಲಿದೆ. ಅದೇ ರೀತಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಯಿಂದ 200 ಮೀಟರ್ ದೂರದಲ್ಲಿದೆ. ಈ ಪ್ರದೇಶವು ಎಂಟು ಕ್ಯಾಬಿನೆಟ್ ಮಂತ್ರಿಗಳ ಮನೆ/ಕಚೇರಿ ಸಮೀಪವೇ ಇದೆ. ಇದರ ಇನ್ನೊಂದು ಬದಿಯಲ್ಲಿ ಗಣ್ಯರ ಗಾಲ್ಫ್ ಕ್ಲಬ್ ಇದೆ ಎಂಬುದು ಗಮನಿಸಬೇಕಾದ ವಿಚಾರ.
ಕಳೆದ ಎರಡು ದಿನಗಳಿಂದ ಸತತ ಮಳೆಯಿಂದ ಬೆಂಗಳೂರು ನಗರದಲ್ಲಿ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದ್ದು, ಇಂದಿನ ನಾಗರಿಕರ ನಿರಾಸಕ್ತಿ ಬಗ್ಗೆ ಅಧಿಕಾರಿಗಳು ಹಿಂದಿನ ಸರ್ಕಾರದತ್ತ ಬೆರಳು ತೋರುತ್ತಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಸಂಪೂರ್ಣ ಯೋಜಿತವಲ್ಲದ ಆಡಳಿತದಿಂದಾಗಿ ಇದು (ಬೆಂಗಳೂರಿನಲ್ಲಿ ಪ್ರವಾಹ ಮತ್ತು ಇತರ ಸಮಸ್ಯೆಗಳು) ಸಂಭವಿಸಿದೆ. ಅವರು (ಕಾಂಗ್ರೆಸ್) ಕೆರೆಗಳು, ಟ್ಯಾಂಕ್ ಬಂಡ್‌ಗಳು, ಬಫರ್ ಜೋನ್‌ಗಳಲ್ಲಿ ಬಲ, ಎಡ, ಮಧ್ಯದಲ್ಲಿ (ನಿರ್ಮಾಣಕ್ಕೆ) ಅನುಮತಿ ನೀಡಿದ್ದೇ ಇದಕ್ಕೆ ಕಾರಣ' ಎಂದು ಸಿಎಂ ಬೊಮ್ಮಾಯಿ ಮಂಗಳವಾರ ಮಧ್ಯಾಹ್ನ ಹೇಳಿದರು.
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.