Bengaluru Rains: ಯುವತಿಯನ್ನು ಬಲಿ ತೆಗೆದುಕೊಂಡ ಬೆಂಗಳೂರು ಮಳೆ, ವಿದ್ಯುತ್ ಕಂಬ ಸ್ಪರ್ಶಿಸಿ ಸಾವು
ಉದ್ಯಾನನಗರಿ ಬೆಂಗಳೂರಿನಲ್ಲಿ ಮಳೆಯ ಆವಾಂತರಗಳು ಇನ್ನೊಂದು ಮಟ್ಟಕ್ಕೆ ತಲುಪಿದೆ. ನಿನ್ನೆ ರಾತ್ರಿ 23 ವರ್ಷದ ಅಖಿಲಾ ಎಂಬ ಯುವತಿಯೊಬ್ಬಳು ಮಳೆಗೆ ಜಲಾವೃತಗೊಂಡಿರುವ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾಳೆ. ಈ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ಧಾಪುರದಲ್ಲಿ ನಡೆದಿದೆ.
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಮಳೆಯ ಆವಾಂತರಗಳು ಇನ್ನೊಂದು ಮಟ್ಟಕ್ಕೆ ತಲುಪಿದೆ. ನಿನ್ನೆ ರಾತ್ರಿ 23 ವರ್ಷದ ಅಖಿಲಾ ಎಂಬ ಯುವತಿಯೊಬ್ಬಳು ಮಳೆಗೆ ಜಲಾವೃತಗೊಂಡಿರುವ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾಳೆ. ಈ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ಧಾಪುರದಲ್ಲಿ ನಡೆದಿದೆ.
ವರದಿಗಳ ಪ್ರಕಾರ ಮಾರತ್‌ಹಳ್ಳಿಯಿಂದ ವರ್ತೂರು ಕೋಡಿ ರಸ್ತೆ ಮಧ್ಯೆ ನಿನ್ನೆ ರಾತ್ರಿ ಸುಮಾರು ಒಂಬತ್ತೂವರೆ ಗಂಟೆಗೆ ಈ ದುರ್ಘಟನೆ ಸಂಬೌಇಸಿದೆ. ಸೋಮವಾರ ರಾತ್ರಿ ಉದ್ಯೋಗ ಮುಗಿಸಿ ಇವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಸುಮಾರು 9.30 ಗಂಟೆಗೆ ಇವರು ಸಿದ್ದಾಪುರದ ಮಯೂರ್ ಬೇಕರಿ ಸಮೀಪ ಬಂದಿದ್ದಾರೆ.
ಈ ಸಮುದಲ್ಲಿ ರಸ್ತೆಯಲ್ಲಿ ಮಂಡಿಯುದ್ದ ನೀರು ತುಂಬಿತ್ತು. ಎಲ್ಲರಂತೆ ಇವರೂ ನೀರಿನಲ್ಲಿಯೇ ಸ್ಕೂಟರ್ ಚಲಾಯಿಸಿದ್ದಾರೆ ಎನ್ನಲಾಗಿದೆ. ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಸ್ಕೂಟರ್ ಆಫ್ ಆಗಿ ಸ್ಕೂಟರ್ ಬೀಳುವಂತೆ ಆಗಿತ್ತು. ಈ ಸಂದರ್ಭದಲ್ಲಿ ಹತ್ತಿರದಲ್ಲಿದ್ದ ವಿದ್ಯುತ್ ಕಂಬವನ್ನು ಆಸರೆಯಾಗಿ ಈ ಯುವತಿ ಹಿಡಿದಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಒದ್ದೆಯಾಗಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಾಹಿಸಿ ಇವರು ಕೆಳಗೆ ಬಿದ್ದು ಮೃತರಾಗಿದ್ದಾರೆ ಎಂದು ವರದಿಗಳು ಹೇಳಿವೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಈಕೆಯನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ ಬದುಕಲಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ- ಕಾಂಗ್ರೆಸ್ ಟೀಕೆ
ಮುಳುಗುವುದರಲ್ಲಿ ಹಲವು ವಿಧಗಳಿವೆ! ರಾಜ್ಯದ ಜನ ಮಳೆಯಲ್ಲಿ ಮುಳುಗಿದ್ದಾರೆ, ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ! ಪ್ರವಾಹ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ @RAshokaBJP ಅವರ ಭರ್ಜರಿ ನಿದ್ದೆ. 'ಹಲಾಲ್ ಕಟ್' ಎಂದರೆ ಥಟ್‌ನೆ ಎಚ್ಚರಾಗುತ್ತಾರೆ! 'ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ' ಎಂಬ ಮಾತು ಸಚಿವರಿಗೇ ಹೇಳಿದ್ದೇನೋ! ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಟೀಕೆ ಮಾಡಿದೆ.
ಬಿಜೆಪಿ ಪ್ರಣಾಳಿಕೆಯ ಭರವಸೆಗಳು ಆಕರ್ಷಕ, ಮನಮೋಹಕ. ಆಡಳಿತ ಮಾತ್ರ ಜನತೆಗೆ ಯಾತನಾದಾಯಕ, ಭ್ರಷ್ಟಾಚಾರವೇ ಕಾಯಕ! ಬೆಂಗಳೂರನ್ನು ವಿಶ್ವದರ್ಜೆಯ ನಗರ ಮಾಡುವೆವು ಎಂದ ಬಿಜೆಪಿ ಈಗ ರಸ್ತೆಗುಂಡಿಗಳ ನಗರ, ಮುಳುಗುವ ನಗರವನ್ನಾಗಿ ಮಾಡಿದೆ. ಐಟಿ ಕಂಪೆನಿಗಳು ಗುಳೆ ಹೊರಟರೂ ಕೊಟ್ಟ ಭರವಸೆ ನೆನಪಾಗಲಿಲ್ಲವೇ @BJP4Karnataka?
ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಬೆಲೆ ಗೊತ್ತಿಲ್ಲ. ಬಿಜೆಪಿಯವರು ಬ್ರ್ಯಾಂಡ್ ಬೆಂಗಳೂರನ್ನು ಹಾಳು ಮಾಡಿದ್ದಾರೆ. ಮಳೆಯಿಂದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರೂ ಏನಾದರೂ ಕ್ರಮ ಕೈಗೊಂಡಿದ್ದಾರಾ? ಬಿಜೆಪಿ ಬೆಂಗಳೂರಿನ ಗೌರವ ಉಳಿಸುವ ಕೆಲಸ ಮಾಡಬೇಕಿತ್ತು. ಈ ಅವಾಂತರಕ್ಕೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರವೇ ಹೊಣೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.