Bengaluru Traffic: ಇದೇನಿದು ಹೊಸ ಸಂಚಾರ ಸಂಕೇತ? ಟ್ರಾಫಿಕ್‌ ಪೊಲೀಸ್‌ ವಿವರಣೆ ಹೀಗಿದೆ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Traffic: ಇದೇನಿದು ಹೊಸ ಸಂಚಾರ ಸಂಕೇತ? ಟ್ರಾಫಿಕ್‌ ಪೊಲೀಸ್‌ ವಿವರಣೆ ಹೀಗಿದೆ ನೋಡಿ

Bengaluru Traffic: ಇದೇನಿದು ಹೊಸ ಸಂಚಾರ ಸಂಕೇತ? ಟ್ರಾಫಿಕ್‌ ಪೊಲೀಸ್‌ ವಿವರಣೆ ಹೀಗಿದೆ ನೋಡಿ

Bengaluru Traffic: ಬೆಂಗಳೂರು ಅಂದರೆ ಟ್ರಾಫಿಕ್‌. ಇಲ್ಲಿ ಸಂಚರಿಸುವವರು ಟ್ರಾಫಿಕ್‌ ಸಂಕೇತಗಳ ಕಡೆಗೂ ಗಮನಹರಿಸುವುದು ಅನಿವಾರ್ಯ. ಬೆಂಗಳೂರಿನಲ್ಲಿ ಕೆಲವೆಡೆ ಹೊಸ ಸಂಚಾರ ಸಂಕೇತ (Traffic Sign) ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದೇನಿದು ಎಂದು ಟ್ವಿಟರ್‌ನಲ್ಲಿ ಬೆಂಗಳೂರು ಸಂಚಾರ ಪೊಲೀಸ(BTP)ರನ್ನು ಕೇಳಿದ್ದಾರೆ. ಅದಕ್ಕೆ ಅವರು ನೀಡಿದ ವಿವರಣೆ ಹೀಗಿದೆ ನೋಡಿ.

<p>ಈ ವಿಶೇಷ ಟ್ರಾಫಿಕ್‌ ಸೈನ್‌ ಅನ್ನು ಗಮನಿಸಿದ್ದೀರಾ? ಇದೇನನ್ನು ಸೂಚಿಸುವುದೆಂದು ಹೇಳಬಲ್ಲಿರಾ?&nbsp;</p>
ಈ ವಿಶೇಷ ಟ್ರಾಫಿಕ್‌ ಸೈನ್‌ ಅನ್ನು ಗಮನಿಸಿದ್ದೀರಾ? ಇದೇನನ್ನು ಸೂಚಿಸುವುದೆಂದು ಹೇಳಬಲ್ಲಿರಾ?&nbsp; (TWITTER )

ಬೆಂಗಳೂರು: ಸಾಮಾನ್ಯವಾಗಿ ರಸ್ತೆ ಸಂಚಾರದ ನಡುವೆ ಗಮನ ಸೆಳೆಯುವ ವಿಚಾರಗಳು ಹಲವು. ಅವುಗಳ ಪೈಕಿ ದೊಡ್ಡ ದೊಡ್ಡ ಬಿಲ್‌ಬೋರ್ಡ್‌ಗಳಿಂದ ಹಿಡಿದು ಸಂಚಾರ ಸಂಕೇತ (Traffic Sign) ಗಳೂ ಇವೆ. ಬೆಂಗಳೂರಿಗರ ಗಮನ (Bengaluru Traffic) ಈಗ ಹೊಸ ರಸ್ತೆ ಫಲಕ ಅಥವಾ ಸಂಚಾರ ಸಂಕೇತದ ಫಲದ ಮೇಲೆ ನೆಟ್ಟಿದೆ. ಇದರ ಫೋಟೋ ಹೊಡೆದ ಒಬ್ಬ ಸವಾರ, ಟ್ವಿಟರ್‌ನಲ್ಲಿ ಬೆಂಗಳೂರು ಸಂಚಾರ ಪೊಲೀಸ್‌ ಅನ್ನು ಟ್ಯಾಗ್‌ ಮಾಡಿ ಈ ಸಂಚಾರ ಸಂಕೇತ ಏನು? ಎಂದು ಪ್ರಶ್ನಿಸಿದ್ದಾರೆ.

ಸಾಮಾನ್ಯವಾಗಿ ರಸ್ತೆ ಚಿಹ್ನೆಗಳು ಮತ್ತು ಸುರಕ್ಷತೆಯ ಬಗ್ಗೆ ಅನುಮಾನಗಳು ಮತ್ತು ಸ್ಪಷ್ಟೀಕರಣಗಳಿಗೆ ಬೆಂಗಳೂರು ಸಂಚಾರ ಪೊಲೀಸರು ಪ್ರತಿಕ್ರಿಯಿಸುತ್ತಾರೆ. ಒಬ್ಬ ಟ್ವಿಟರ್ ಬಳಕೆದಾರ ಅಸಾಮಾನ್ಯ ರಸ್ತೆ ಚಿಹ್ನೆಯನ್ನು ಗುರುತಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅನುಮಾನ ನಿವಾರಣೆಗಾಗಿ ಪೊಲೀಸ್ ಟ್ವಿಟರ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದ್ದಾರೆ.

ಅನಿರುದ್ಧ ಮುಖರ್ಜಿ ಅವರೇ ಈ ರೀತಿ ಪ್ರಶ್ನಿಸಿ ಅನುಮಾನ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದವರು. ಬಿಳಿ ಹಿನ್ನೆಲೆಯಲ್ಲಿ ನಾಲ್ಕು ಕಪ್ಪು ಚುಕ್ಕೆಗಳು. ಕುತೂಹಲಗೊಂಡ ಅವರು ಈ ಚಿತ್ರವನ್ನು ಕ್ಲಿಕ್ ಮಾಡಿ ಮತ್ತು ಟ್ವೀಟ್ ಮಾಡಿ, ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ, "ಇದು ಯಾವ ಟ್ರಾಫಿಕ್ ಚಿಹ್ನೆ? ಇದನ್ನು ಹೋಪ್‌ಫಾರ್ಮ್ ಸಿಗ್ನಲ್‌ಗೆ ಸ್ವಲ್ಪ ಮೊದಲು ಹಾಕಲಾಗಿದೆ!" ಎಂದು ಕೇಳಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸರು ರಸ್ತೆ ಚಿಹ್ನೆಯ ಹಿಂದಿನ ಅರ್ಥವನ್ನು ಹಂಚಿಕೊಂಡಿದ್ದು, "ಇದು ಎಚ್ಚರಿಕೆಯ ಫಲಕ. ಅಂಧರು, ದೃಷ್ಟಿ ದೋಷ ಉಳ್ಳವರು ರಸ್ತೆಯಲ್ಲಿರಬಹುದು ಅಥವಾ ದಾಟುತ್ತಿರಬಹುದು. (ಆದ್ದರಿಂದ ನೀವು ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂಬ ಎಚ್ಚರಿಕೆ ನೀಡುತ್ತದೆ) ಹೋಪ್ ಫಾರ್ಮ್‌ನಲ್ಲಿ ದೃಷ್ಟಿ ದೋಷ ಉಳ್ಳವರ/ ಅಂಧರ ಶಾಲೆ ಇದೆ. ಆದ್ದರಿಂದಲೇ ಈ ಜಂಕ್ಷನ್‌ನಲ್ಲಿ ಆ ಬೋರ್ಡ್ ಇರಿಸಲಾಗಿದೆ" ಎಂಬ ಉತ್ತರ ನೀಡಿದ್ದಾರೆ.

ಅನೇಕರು ಆ ಟ್ರಾಫಿಕ್ ಚಿಹ್ನೆಯ ಹಿಂದಿನ ಅರ್ಥವನ್ನು ತಿಳಿದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅದನ್ನು ವಿವರಿಸಿದ್ದಕ್ಕಾಗಿ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

Whats_app_banner