Kodagu Power Cut: ಕೊಡಗು ಜಿಲ್ಲೆಯ ಮಡಿಕೇರಿ,ವೀರಾಜಪೇಟೆ ಸಹಿತ ನಾನಾ ಭಾಗಗಳಲ್ಲಿ ಇಂದು, ನಾಳೆ ವಿದ್ಯುತ್‌ ಇರೋಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Kodagu Power Cut: ಕೊಡಗು ಜಿಲ್ಲೆಯ ಮಡಿಕೇರಿ,ವೀರಾಜಪೇಟೆ ಸಹಿತ ನಾನಾ ಭಾಗಗಳಲ್ಲಿ ಇಂದು, ನಾಳೆ ವಿದ್ಯುತ್‌ ಇರೋಲ್ಲ

Kodagu Power Cut: ಕೊಡಗು ಜಿಲ್ಲೆಯ ಮಡಿಕೇರಿ,ವೀರಾಜಪೇಟೆ ಸಹಿತ ನಾನಾ ಭಾಗಗಳಲ್ಲಿ ಇಂದು, ನಾಳೆ ವಿದ್ಯುತ್‌ ಇರೋಲ್ಲ

ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲ್ಲೂಕಿನ ಹಲವು ಭಾಗಗಳಲ್ಲಿ 2024ರ ನವೆಂಬರ್‌ 20 ಹಾಗೂ 21ರ ಎರಡು ದಿನ ವಿದ್ಯುತ್‌ ಕಡಿತವಾಗಲಿದೆ.

ಕೊಡಗಿನ ನಾನಾ ಭಾಗಗಳಲ್ಲಿ 2024ರ ನವೆಂಬರ್‌ 20 ಹಾಗೂ 21 ರಂದು ವಿದ್ಯುತ್‌ ನಿಲುಗಡೆಯಾಗಲಿದೆ.
ಕೊಡಗಿನ ನಾನಾ ಭಾಗಗಳಲ್ಲಿ 2024ರ ನವೆಂಬರ್‌ 20 ಹಾಗೂ 21 ರಂದು ವಿದ್ಯುತ್‌ ನಿಲುಗಡೆಯಾಗಲಿದೆ.

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ಸಹಿತ ಹಲವು ಭಾಗಗಳಲ್ಲಿ 2024ರ ನವೆಂಬರ್‌ 20 ಹಾಗೂ 21 ರಂದು ವಿದ್ಯುತ್‌ ನಿಲುಗಡೆಯಾಗಲಿದೆ. ವಿವಿಧೆಡೆ ವಿದ್ಯುತ್‌ ನಿರ್ವಹಣಾ ಕಾರ್ಯ ಇರುವುದರಿಂದ ಎರಡೂ ದಿನವೂ ಹಲವು ಭಾಗಗಳಲ್ಲಿ ವಿದ್ಯುತ್‌ ಕಡಿತವಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿ( ಚೆಸ್ಕಾಂ) ಎಂಜಿನಿಯರ್‌ಗಳು ಮಾಹಿತಿ ನೀಡಿದ್ಧಾರೆ. ಹಲವಾರು ಬಡಾವಣೆಗಳಲ್ಲಿ ನಿಯಮಿತವಾಗಿ ವಿದ್ಯುತ್‌ ನಿರ್ವಹಣಾ ಕಾರ್ಯ ಇರಲಿದೆ. ಇದಕ್ಕಾಗಿ ಕನಿಷ್ಠ ಆರೇಳು ಗಂಟೆಯಾದರೂ ಬೇಕಾಗಿರುವುದರಿಂದ ವಿದ್ಯುತ್‌ ಕಡಿತ ಅನಿವಾರ್ಯವಾಗಲಿದೆ. ಈ ವೇಳೆಯಲ್ಲಿ ಗ್ರಾಹಕರು ಸಹಕಾರ ನೀಡಬೇಕು ಎಂದು ಚೆಸ್ಕಾಂ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ನ.21 ರಂದು ಎಲ್ಲಿಲ್ಲಿ ಕರೆಂಟ್ ಇರಲ್ಲ?

ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-2 ಬಿ.ಶೆಟ್ಟಿಗೇರಿ ಫೀಡರ್‍ನ ಎಚ್‍ಟಿ/ ಎಲ್‍ಟಿ ಮಾರ್ಗದ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನವೆಂಬರ್, 21 ರಂದು ರಂದು ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಬಿ.ಶೆಟ್ಟಿಗೇರಿ, ವಿ.ಬಾಡಗ, ಬಿಟ್ಟಂಗಾಲ ಕುಟ್ಟಂದಿ, ನಾಂಗಾಲ, ರುದ್ರಗುಪ್ಪೆ, ಬಾಳುಗೋಡು, ಕೊಂಗಾಣ ಹಾಗೂ ವಿರಾಜಪೇಟೆ ಪಟ್ಟಣದ ವಿದ್ಯಾನಗರ, ಸಿಲ್ವನಗರ, ಸುಭಾಶ್‍ನಗರ, ವಿಜಯನಗರ, ನಿಸರ್ಗ ಬಡಾವಣೆ, ಕಿರುಮಕ್ಕಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

-ಮಡಿಕೇರಿ 66/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್3 ಗದ್ದಿಗೆ ಫೀಡರ್‍ನಲ್ಲಿ ನವೆಂಬರ್, 21 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವ ಹಿನ್ನೆಲೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಸಂಪಿಗೆಕಟ್ಟೆ, ಕನ್ನಂಡಬಾಣೆ, ಎ.ವಿ.ಶಾಲೆ, ಗದ್ದಿಗೆ, ಉಕ್ಕುಡ, ಆಜಾದ್‍ನಗರ, ತ್ಯಾಗರಾಜಕಾಲೋನಿ, ಅಬ್ಬಿಫಾಲ್ಸ್‍ರಸ್ತೆ, ಭಗವತಿನಗರ, ಮಲ್ಲಿಕಾರ್ಜನನಗರ, ರಾಣಿಪೇಟೆ, ಮಾರ್ಕೆಟ್ ಮಹದೇವಪೇಟೆ, ಕಾನ್ವೆಂಟ್ ಜಂಕ್ಷನ್, ಕೂರ್ಗ್‍ಇಂಟರ್ ನ್ಯಾಷನಲ್, ಐಟಿಐ ಹಿಂಭಾಗ, ಕಾವೇರಿ ಬಡಾವಣೆ, ಟೀ ಜಾನ್ ಲೇಔಟ್, ಅಬ್ದುಲ್ ಕಲಾಂ ಬಡಾವಣೆ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

ಇಂದು ಎಲ್ಲೆಲ್ಲಿ ಕರೆಂಟ್ ಇರಲ್ಲ

ಸೋಮವಾರಪೇಟೆ ಉಪವಿಭಾಗದ ಶಾಂತಳ್ಳಿ 11ಕೆ.ವಿ ಫೀಡರ್‍ನಲ್ಲಿ ನವೆಂಬರ್, 20 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಮಾರ್ಗಗಳ ಹಾಗೂ ಪರಿವರ್ತಕಗಳ ನಿರ್ವಹಣೆ ಹಮ್ಮಿಕೊಂಡಿದ್ದು, ಶಾಂತಳ್ಳಿ 11 ಕೆ.ವಿ ಫೀಡರ್ ಹಾದುಹೋಗುವ ಸ್ಥಳಗಳಾದ ಶಾಂತಳ್ಳಿ, ಯಡೂರು, ತೋಳೂರು, ಶೆಟ್ಟಳ್ಳಿ, ಕೂತಿ, ತಾಕೇರಿ, ಕಿರಗಂದೂರು, ಬೆಟ್ಟದಹಳ್ಳಿ, ಕುಮಾರಳ್ಳಿ, ಕುಂಬಾರಗಡಿಗೆ, ಕಿಕ್ಕರಳ್ಳಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Whats_app_banner