2025ರ ದೀಪಾವಳಿಗೆ ಚಿನ್ನದ ದರ 1 ಲಕ್ಷ ರೂಪಾಯಿ ಗಡಿದಾಟುವ ನಿರೀಕ್ಷೆ; 'ಷೇರು-ಚಿನ್ನ' ಈಗ ಯಾವ ಹೂಡಿಕೆ ಚೆನ್ನ?
ಕನ್ನಡ ಸುದ್ದಿ  /  ಕರ್ನಾಟಕ  /  2025ರ ದೀಪಾವಳಿಗೆ ಚಿನ್ನದ ದರ 1 ಲಕ್ಷ ರೂಪಾಯಿ ಗಡಿದಾಟುವ ನಿರೀಕ್ಷೆ; 'ಷೇರು-ಚಿನ್ನ' ಈಗ ಯಾವ ಹೂಡಿಕೆ ಚೆನ್ನ?

2025ರ ದೀಪಾವಳಿಗೆ ಚಿನ್ನದ ದರ 1 ಲಕ್ಷ ರೂಪಾಯಿ ಗಡಿದಾಟುವ ನಿರೀಕ್ಷೆ; 'ಷೇರು-ಚಿನ್ನ' ಈಗ ಯಾವ ಹೂಡಿಕೆ ಚೆನ್ನ?

Dhanteras 2024: 10 ಗ್ರಾಂ ಚಿನ್ನದ ದರ 60,282 ರೂಪಾಯಿಯಿಂದ 78,577 ರೂಪಾಯಿ ಸಮೀಪಕ್ಕೆ ಬಂದಿದೆ. ದೀಪಾವಳಿ 2023ಕ್ಕೆ ಹೋಲಿಸಿದರೆ ಚಿನ್ನದ ದರ ಶೇಕಡ 30ರಷ್ಟು ಏರಿಕೆ ಕಂಡಿದೆ. 2025ರ ದೀಪಾವಳಿ ವೇಳೆಗೆ ಚಿನ್ನದ ದರ 1 ಲಕ್ಷ ರೂಪಾಯಿ ಗಡಿದಾಟುವ ಸೂಚನೆಯಿದೆ. ಚಿನ್ನದ ಹೂಡಿಕೆದಾರರು ಅಲರ್ಟ್‌ ಆಗುವ ಸಮಯವಿದು.

2025ರ ದೀಪಾವಳಿಗೆ ಚಿನ್ನದ ದರ 1 ಲಕ್ಷ ರೂಪಾಯಿ ಗಡಿದಾಟುವ ನಿರೀಕ್ಷೆ
2025ರ ದೀಪಾವಳಿಗೆ ಚಿನ್ನದ ದರ 1 ಲಕ್ಷ ರೂಪಾಯಿ ಗಡಿದಾಟುವ ನಿರೀಕ್ಷೆ (Agency)

Dhanteras 2024: ದೀಪಾವಳಿ ಹಬ್ಬದ ವೇಳೆಯಲ್ಲಿ ಸಾಕಷ್ಟು ಜನರು ಚಿನ್ನಾಭರಣ ಖರೀದಿಸಲು ಆಸಕ್ತರಾಗಿರಬಹುದು. ಹಬ್ಬದ ಸಮಯದಲ್ಲಿ ಚಿನ್ನಾಭರಣ ಖರೀದಿಸುವುದು ಉತ್ತಮ ಎನ್ನುವ ನಂಬಿಕೆ ಇದೆ. ಸಂಪತ್ತು, ಆಸ್ತಿ, ಐಶ್ವರ್ಯ ಹೆಚ್ಚಲು ಧನ ತ್ರಯೋದಶಿ ಸಮಯದಲ್ಲಿ ಚಿನ್ನಾಭರಣ ಖರೀದಿಸಬೇಕು ಎನ್ನುವ ನಂಬಿಕೆ ಭಾರತೀಯರಲ್ಲಿದೆ. ಹೂಡಿಕೆ ದೃಷ್ಟಿಯಿಂದಲೂ ಚಿನ್ನಾಭರಣ ಖರೀದಿಸುವುದು ಉತ್ತಮ. ಆದರೆ, ಚಿನ್ನದ ದರ ದುಬಾರಿಯಾಗಿರುವ ಈ ಸಮಯದಲ್ಲಿ ಚಿನ್ನ ಖರೀದಿಸಬೇಕೇ ಬೇಡವೇ ಎಂಬ ಗೊಂದಲವು ಸಾಕಷ್ಟು ಜನರಲ್ಲಿ ಇರಬಹುದು.

ಚಿನ್ನದ ದರ ನಾಗಾಲೋಟ

ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(ಐಬಿಜೆಎ) ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ದೀಪಾವಳಿ ಸಮಯದಿಂದ ಈ ದೀಪಾವಳಿವರೆಗೆ ಚಿನ್ನದ ದರ ಗಮನಾರ್ಹ ಏರಿಕೆ ಕಂಡಿದೆ. 10 ಗ್ರಾಂಗೆ 60,282 ರೂ. ಇತ್ತು. ಅದು 78,577 ರೂಪಾಯಿಗೆ ತಲುಪಿದೆ. 2023ರ ದೀಪಾವಳಿಯಿಂದ 2024ರ ದೀಪಾವಳಿ ವೇಳೆಗೆ ಶೇಕಡ 30ರಷ್ಟು ಏರಿಕೆ ಕಂಡಿದೆ. ನಿಫ್ಟಿ 50 ಇಂಡೆಕ್ಸ್‌ನಲ್ಲಿ ಷೇರು ದರಗಳು ಶೇಕಡ 28ರಷ್ಟು ಏರಿಕೆ ಕಂಡಿದೆ. ಚಿನ್ನದ ಮೇಲಿನ ಹೂಡಿಕೆ ಉತ್ತಮವೇ? ಷೇರು ಹೂಡಿಕೆ ಉತ್ತಮವೇ ಎಂದೂ ಹೋಲಿಕೆ ಮಾಡಬೇಕಾದ ಸಮಯವಿದು.

2024ರಲ್ಲಿ ದೇಶೀಯ ಚಿನ್ನದ ದರ ಶೇಕಡ 23ಕ್ಕಿಂತ ಹೆಚ್ಚಿವೆ. ಇದು ಈಕ್ವಿಟಿಗಳ ಕಾರ್ಯಕ್ಷಮತೆಯನ್ನು ಮೀರಿಸಿದೆ. ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಈ ವರ್ಷ ಸರಿಸುಮಾರು ಶೇಕಡ 11ರಷ್ಟು ಲಾಭವನ್ನು ದಾಖಲಿಸಿದೆ, ಕಳೆದ ಆರು ತಿಂಗಳಲ್ಲಿ ಶೇಕಡ 8ಕ್ಕಿಂತ ಹೆಚ್ಚು ಏರಿಕೆಯಾಗಿದೆ.

ಚಿನ್ನದ ದರ ದಾಖಲೆ ಮಟ್ಟಕ್ಕೆ ನೆಗೆಯುತ್ತಿದೆ. ಇದೇ ಹಬ್ಬದ ಸಮಯದಲ್ಲಿ ಚಿನ್ನದ ದರ ಸದೃಢವಾಗಿದೆ. ದೀಪಾವಳಿಗೆ ಮುನ್ನವೇ 10 ಗ್ರಾಂ ಚಿನ್ನದ ದರ 80 ಸಾವಿರ ರೂಪಾಯಿ ಏರಿಕೆ ಕಾಣುವ ಸಾಧ್ಯತೆ ಇದೆ. ಈಗಿನ ಜಾಗತಿಕ ಭೌಗೋಳಿಕ ರಾಜಕೀಯ ಸಿತ್ಯಂತರ ಮತ್ತು ಆರ್ಥಿಕ ಅನಿಶ್ಚಿತತೆ ನಡುವೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವೆಂದು ಎಲ್ಲರೂ ಭಾವಿಸುತ್ತಿದ್ದಾರೆ. ಇದೇ ಸಮಯದಲ್ಲಿ ಚಿನ್ನದ ಮೇಲಿನ ಹೂಡಿಕೆಯೂ ಹೆಚ್ಚಾಗುತ್ತಿದೆ. ಹಣದುಬ್ಬರ, ಉದ್ಯೋಗ ಕಡಿತ, ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ಜನರು ಷೇರು ಪೇಟೆಯಲ್ಲಿ ಹೂಡಿಕೆ ಮಾಡುವುದೇ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡುವುದೇ ಎಂದು ಗಂಭೀರವಾಗಿ ಯೋಚಿಸುತ್ತಿದ್ದಾರೆ.

ಚಿನ್ನದ ಮೇಲೆ ಹೂಡಿಕೆ ಮಾಡಬಹುದೇ?

ಚಿನ್ನದ ಮೇಲೆ ಹೂಡಿಕೆ ಮಾಡುವುದೇ? ಷೇರುಪೇಟೆ ಮೇಲೆ ಹೂಡಿಕೆ ಮಾಡುವುದೇ ಎಂಬ ಗೊಂದಲ ನಿಮ್ಮಲ್ಲಿ ಇರಬಹುದು. ಷೇರು ಮಾರುಕಟ್ಟೆಯ ಅಸ್ಥಿರತೆ, ಜಾಗತಿಕ ಅನಿಶ್ಚಿತತೆ ನಡುವೆ ಎಲ್ಲಿ ಹೂಡಿಕೆ ಮಾಡುವುದು ಎಂದು ಯಾರಾದರೂ ಯೋಚಿಸಬಹುದು. ತಜ್ಞರ ಪ್ರಕಾರ ಎಲ್ಲವನ್ನೂ ಒಂದೇ ಕಡೆ ಹಾಕಬೇಡಿ. ಹೂಡಿಕೆ ಪೋರ್ಟ್‌ಫೋಲಿಯೋ ವೈವಿದ್ಯಮಯವಾಗಿರಲಿ ಎಂದು ಸಲಹೆ ನೀಡಿದ್ದಾರೆ. ಒಂದಿಷ್ಟು ಹಣವನ್ನು ಚಿನ್ನದ ಮೇಲೆ, ಇನ್ನೊಂದಿಷ್ಟು ಹಣ ಷೇರುಪೇಟೆ, ಮ್ಯೂಚುಯಲ್‌ ಫಂಡ್‌ ಮುಂತಾದ ಕಡೆ ಹೂಡಿಕೆ ಮಾಡಬಹುದು.

Whats_app_banner