ಕ್ಲೋಸಿಂಗ್‌ ಬೆಲ್‌: 5 ದಿನಗಳ ಕುಸಿತದ ಬಳಿಕ ಪುಟಿದೆದ್ದ ಭಾರತೀಯ ಷೇರುಪೇಟೆ, ಎಲ್ಲಾ ವಲಯ ಹಸಿರು, ನಿಟ್ಟುಸಿರುಬಿಟ್ಟ ಹೂಡಿಕೆದಾರರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕ್ಲೋಸಿಂಗ್‌ ಬೆಲ್‌: 5 ದಿನಗಳ ಕುಸಿತದ ಬಳಿಕ ಪುಟಿದೆದ್ದ ಭಾರತೀಯ ಷೇರುಪೇಟೆ, ಎಲ್ಲಾ ವಲಯ ಹಸಿರು, ನಿಟ್ಟುಸಿರುಬಿಟ್ಟ ಹೂಡಿಕೆದಾರರು

ಕ್ಲೋಸಿಂಗ್‌ ಬೆಲ್‌: 5 ದಿನಗಳ ಕುಸಿತದ ಬಳಿಕ ಪುಟಿದೆದ್ದ ಭಾರತೀಯ ಷೇರುಪೇಟೆ, ಎಲ್ಲಾ ವಲಯ ಹಸಿರು, ನಿಟ್ಟುಸಿರುಬಿಟ್ಟ ಹೂಡಿಕೆದಾರರು

ಕ್ಲೋಸಿಂಗ್‌ ಬೆಲ್‌ ಅಕ್ಟೋಬರ್‌ 25: ಭಾರತದ ಷೇರುಪೇಟೆ ಐದು ದಿನಗಳ ಕುಸಿತದ ಬಳಿಕ ಪುಟಿದೆದ್ದಿದೆ. ಸೋಮವಾರ ಅಕ್ಟೋಬರ್‌ 28ರಂದು ಸೆನ್ಸೆಕ್ಸ್‌ ಸೂಚ್ಯಂಕ 602.75 ಅಂಕ ಅಥವಾ ಶೇಕಡ 0.76ರಷ್ಟು ಏರಿಕೆ ಕಂಡು 80,005.04ಕ್ಕೆ ತಲುಪಿದೆ. ನಿಫ್ಟಿ 50 ಇಂಡೆಕ್ಸ್‌ 158.35 ಅಥವಾ ಶೇಕಡ 0.65ರಷ್ಟು ಏರಿಕೆ ಕಂಡು 24,339.15 ಅಂಕಕ್ಕೆ ತಲುಪಿದೆ.

ಕ್ಲೋಸಿಂಗ್‌ ಬೆಲ್‌: 5 ದಿನಗಳ ಕುಸಿತದ ಬಳಿಕ ಪುಟಿದೆದ್ದ ಭಾರತೀಯ ಷೇರುಪೇಟೆ. (PTI Photo)(PTI10_03_2024_000163A)
ಕ್ಲೋಸಿಂಗ್‌ ಬೆಲ್‌: 5 ದಿನಗಳ ಕುಸಿತದ ಬಳಿಕ ಪುಟಿದೆದ್ದ ಭಾರತೀಯ ಷೇರುಪೇಟೆ. (PTI Photo)(PTI10_03_2024_000163A) (PTI)

ಕ್ಲೋಸಿಂಗ್‌ ಬೆಲ್‌ ಅಕ್ಟೋಬರ್‌ 25: ಭಾರತದ ಷೇರುಪೇಟೆ ಸೋಮವಾರ ಚೇತರಿಕೆಯತ್ತ ಮುಖ ಮಾಡಿದೆ. ದೀಪಾವಳಿ ಸಮೀಪವಿರುವಾಗ ಷೇರುಪೇಟೆಯಲ್ಲಿ ಸಕಾರಾತ್ಮಕ ವ್ಯವಹಾರ ಕಾಣಿಸಿಕೊಂಡಿದೆ. ಬ್ಲೂ-ಚಿಪ್ ಐಸಿಐಸಿಐ ಬ್ಯಾಂಕ್‌ನ ಷೇರುಗಳಲ್ಲಿ ಖರೀದಿ, ಏಷ್ಯಾದ ಷೇರುಗಳ ದೃಢತೆ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರ ನಿರಂತರ ಖರೀದಿಯು ಷೇರುಪೇಟೆಗೆ ಚೇತೋಹರಿಯಾದವು.

ಬಿಎಸ್‌ಇ ಸೆನ್ಸೆಕ್ಸ್ 602.75 ಅಂಕಗಳು ಅಥವಾ ಶೇಕಡ 0.76ರಷ್ಟು ಹೆಚ್ಚಾಗಿ 80,005.04ಕ್ಕೆ ತಲುಪಿದೆ. ಈ ಮೂಲಕ ಐದು ದಿನಗಳ ನಷ್ಟದ ಸರಣಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ ಸೂಚ್ಯಂಕವು ಇಂಟ್ರಾಡೇ ಗರಿಷ್ಠ 80,539.8 ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 158.35 ಪಾಯಿಂಟ್‌ಗಳು ಅಥವಾ ಶೇಕಡಾ 0.65 ರಷ್ಟು ಏರಿಕೆಯಾಗಿ 24,339.15ಕ್ಕೆ ಸ್ಥಿರವಾಯಿತು.

ವಲಯವಾರು ನೋಡಿದರೂ ಎಲ್ಲಾ ಕಡೆ ಹಸಿರು ಕಾಣಿಸಿದೆ. 12 ಬ್ಯಾಂಕಿಂಗ್ ಸ್ಟಾಕ್‌ಗಳನ್ನು ಒಳಗೊಂಡಿರುವ ಬ್ಯಾಂಕಿಂಗ್ ವಲಯವನ್ನು ಟ್ರ್ಯಾಕ್ ಮಾಡುವ ನಿಫ್ಟಿ ಬ್ಯಾಂಕ್ ಸೂಚ್ಯಂಕವು ಏರಿಕೆ ಕಂಡಿದೆ. ಈ ವಲಯ 471.85 ಪಾಯಿಂಟ್‌ಗಳು ಅಥವಾ ಶೇಕಡಾ 0.93 ರಷ್ಟು ಏರಿಕೆ ಕಂಡು 51,259.30ಕ್ಕೆ ಕೊನೆಗೊಂಡಿತು. ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ಸ್ಮಾಲ್‌ಕ್ಯಾಪ್ 100 ಅನುಕ್ರಮವಾಗಿ ಶೇಕಡಾ 0.83 ಮತ್ತು 1.20 ರಷ್ಟು ಏರಿಕೆ ಕಂಡಿದೆ.

30 ಸೆನ್ಸೆಕ್ಸ್ ಪ್ಯಾಕ್‌ ವಲಯದಲ್ಲಿ ಖಾಸಗಿ ವಲಯದ ಬ್ಯಾಕಿಂಗ್‌ ವಲಯವು ಸಕಾರಾತ್ಮಕ ಪ್ರಗತಿ ಕಂಡಿದೆ. ಐಸಿಐಸಿಐ ಬ್ಯಾಂಕ್‌ ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ 11,746 ಕೋಟಿ ರೂ.ಗೆ ಸ್ಟ್ಯಾಂಡ್‌ಲೋನ್ ಲಾಭದಲ್ಲಿ 14.5 ಶೇಕಡಾ ಬೆಳವಣಿಗೆಯನ್ನು ದಾಖಲಿಸಿತ್ತು. ಇದರಿಂದ ಇಂದಿನ ಷೇರುಪೇಟೆಯ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್‌ ಶೇಕಡ 3ರಷ್ಟು ಏರಿಕೆ ಕಂಡಿದೆ.

ಅದಾನಿ ಪೋರ್ಟ್ಸ್, ಜೆಎಸ್‌ಡಬ್ಲ್ಯು ಸ್ಟೀಲ್‌, ಎಂಆಂಡ್‌ಎಂ, ಟಾಟಾ ಸ್ಟೀಲ್, ಸನ್ ಫಾರ್ಮಾ, ಎಚ್‌ಯುಎಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಮೋಟಾರ್ಸ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಲಾಭ ಗಳಿಸಿದವು. ಮತ್ತೊಂದೆಡೆ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಟೆಕ್ ಮಹೀಂದ್ರಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಇಳಿಕೆ ಕಂಡಿವೆ.

ಕಳೆದ ವಾರ ಕೊನೆಯ ವಹಿವಾಟು ದಿನವಾದ ಶುಕ್ರವಾರ ಸೆನ್ಸೆಕ್ಸ್ 662.87 ಪಾಯಿಂಟ್ ಅಥವಾ 0.83 ಶೇಕಡಾ ಕುಸಿದು 79,402.29ಕ್ಕೆ ಸ್ಥಿರವಾಯಿತು. ನಿಫ್ಟಿ 50 218.60 ಅಂಶಕ ಅಥವಾ 0.90 ಶೇಕಡಾ ಕುಸಿದು 24,180.80 ಕ್ಕೆ ಮುಕ್ತಾಯವಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 3,036.75 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐಗಳು) 4,159.29 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.