SSLC 3 Results: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 3 ಪ್ರಕಟ, ಬಾಲಕಿಯರೇ ಅಧಿಕ, ಫಲಿತಾಂಶ ನೋಡೋದು ಹೇಗೆ
ಕನ್ನಡ ಸುದ್ದಿ  /  ಕರ್ನಾಟಕ  /  Sslc 3 Results: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 3 ಪ್ರಕಟ, ಬಾಲಕಿಯರೇ ಅಧಿಕ, ಫಲಿತಾಂಶ ನೋಡೋದು ಹೇಗೆ

SSLC 3 Results: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 3 ಪ್ರಕಟ, ಬಾಲಕಿಯರೇ ಅಧಿಕ, ಫಲಿತಾಂಶ ನೋಡೋದು ಹೇಗೆ

SSLC Results ಕರ್ನಾಟಕದಲ್ಲಿ ಈ ತಿಂಗಳು ನಡೆದಿದ್ದ ಎಸ್‌ಎಸ್‌ಎಲ್‌ಸಿ 3 ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.

ಕರ್ನಾಟಕದ ಎಸ್‌ಎಸ್‌ಎಲ್‌ಸಿ 3 ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಕರ್ನಾಟಕದ ಎಸ್‌ಎಸ್‌ಎಲ್‌ಸಿ 3 ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು(karnataka school examination and assessment board) 2024ರ ಆಗಸ್ಟ್‌ ತಿಂಗಳಿನಲ್ಲಿ ನಡೆಸಿದ್ದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 3 ಪ್ರಕಟಿಸಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಫಲಿತಾಂಶ ಲಭ್ಯವಿದೆ. ಶಾಲೆಗಳಲ್ಲೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಮೂರನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.25.88 ರಷ್ಟು ಫಲಿತಾಂಶ ಬಂದಿದೆ. ಈ ಬಾರಿಯೂ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಂತರದ ಸ್ಥಾನದಲ್ಲಿ ಬಾಲಕಿಯರು ಇದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಆಯಾ ಶಾಲೆಗಳಲ್ಲಿ ಪ್ರಕಟಿಸಲಾಗುತ್ತಿದ್ದು. ಆನ್‌ಲೈನ್‌ನಲ್ಲಿಯೂ ಪ್ರಕಟಿಸಲಾಗಿದೆ. https:// kseab.karnataka.gov.in ಮೂಲಕ ಫಲಿತಾಂಶ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರಾದ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ3 ಅನ್ನು ನಿಗದಿತ ವೇಳಾಪಟ್ಟಿಯಂತೆಯೇ ಆಗಸ್ಟ್‌ ತಿಂಗಳಿನಲ್ಲಿ ನಡೆಸಲಾಗಿತ್ತು. ಒಟ್ಟು 410 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಆಗಸ್ಟ್‌ 2 ರಿಂದ ಒಂದು ವಾರ ಕಾಲ ವಿವಿಧ ವಿಷಯಗಳ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮೌಲ್ಯಮಾಪನವೂ ಆಗಸ್ಟ್‌ ತಿಂಗಳಿನಲ್ಲಿ 13ರಂದು ಆರಂಭಗೊಂಡು 4 ದಿನ ಕಾಲ ನಡೆದಿತ್ತು. ಒಟ್ಟು 21 ಜಿಲ್ಲೆಗಳ 62 ಮೌಲ್ಯಮಾಪನ ಕೇಂದ್ರಗಳಲ್ಲಿ 13055 ಮೌಲ್ಯಮಾಪರು ಪಾಲ್ಗೊಂಡಿದ್ದರು. ಇದರಲ್ಲಿ ಎಸ್ಎಸ್‌ಎಲ್‌ಸಿ 3 ಪರೀಕ್ಷೆಗೆ 97952 ವಿದ್ಯಾರ್ಥಿಗಳು ಹಾಜರಾಗಿದ್ದು ಇದರಲ್ಲಿ 25347 ವಿದ್ಯಾರ್ಥಿಗಳು ಶೇ. 25.88 ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಬಾಲಕಿಯರೇ ಮುಂದೆ

ಈ ಬಾರಿ ಒಟ್ಟು 67729 ಬಾಲಕರು ಪರೀಕ್ಷೆ ಎದುರಿಸಿ 16764 ಬಾಲಕರು ತೇರ್ಗಡೆಯಾಗಿದ್ದಾರೆ. ಅದೇ ರೀತಿ ಒಟ್ಟು30223 ಬಾಲಕಿಯರು ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣರಾಗಿದ್ದು 8583. ಪರೀಕ್ಷೆಗೆ ಹಾಜರಾದ ಸಂಖ್ಯೆಯಲ್ಲಿ ಬಾಲಕರಿದ್ದರೂ ಬಾಲಕಿಯರೇ ಹೆಚ್ಚು ಫಲಿತಾಂಶ ಪಡೆದುಕೊಂಡಿದ್ದಾರೆ.

ಗ್ರಾಮೀಣ ಪ್ರದೇಶದವರೇ ಮುಂದೆ

ಪರೀಕ್ಷೆಗೆ ಹಾಜರಾಗಿದ್ದ ನಗರ ಪ್ರದೇಶದ 59896 ವಿದ್ಯಾರ್ಥಿಗಳಲ್ಲಿ 14885 ವಿದ್ಯಾರ್ಥಿಗಳು ಶೇ 24.85 ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ.

ಅದೇ ರೀತಿ ಪರೀಕ್ಷೆ ಎದುರಿಸಿದ ಗ್ರಾಮೀಣ ಪ್ರದೇಶದ 38056 ವಿದ್ಯಾರ್ಥಿಗಳಲ್ಲಿ 10462 ವಿದ್ಯಾರ್ಥಿಗಳು ಶೇ 27.49 ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದು ಗ್ರಾಮೀಣ ಪ್ರದೇಶದವರೇ ಮುಂದಿದ್ದಾರೆ.

ಯಾವ ವಿಷಯದಲ್ಲಿ ಎಷ್ಟು?

ಮೊದಲ ಭಾಷೆಯಲ್ಲಿ 65045 ವಿದ್ಯಾರ್ಥಿಗಳು ಹಾಜರಾಗಿದ್ದು, 14737 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ. 22.66

ಎರಡನೇ ಭಾಷೆಯಲ್ಲಿ73097 ವಿದ್ಯಾರ್ಥಿಗಳು ಹಾಜರಾಗಿದ್ದು, 18452ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ 47.72

ಮೂರನೇ ಭಾಷೆಯಲ್ಲಿ69254 ವಿದ್ಯಾರ್ಥಿಗಳು ಹಾಜರಾಗಿದ್ದು, 18788 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ24.24

ಮೊದಲನೇ ವಿಷಯದಲ್ಲಿ 80634 ವಿದ್ಯಾರ್ಥಿಗಳು ಹಾಜರಾಗಿದ್ದು, 20186 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ 25.03

ಎರಡನೇ ವಿಷಯದಲ್ಲಿ 88938 ವಿದ್ಯಾರ್ಥಿಗಳು ಹಾಜರಾಗಿದ್ದು, 22350 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ25.13

ಮೂರನೇ ವಿಷಯದಲ್ಲಿ69751 ವಿದ್ಯಾರ್ಥಿಗಳು ಹಾಜರಾಗಿದ್ದು, 22350ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ 25.13

ಶಾಲಾವಾರು ತೇರ್ಗಡೆ

ಇನ್ನು ಕರ್ನಾಟಕದ 4516 ಸರ್ಕಾರಿ ಶಾಲೆಗಳ 48276 ಮಕ್ಕಳು ಪರೀಕ್ಷೆ ಎದುರಿಸಿ ಅದರಲ್ಲಿ 11729 ಮಕ್ಕಳು ಶೇ. 24.3 ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಕರ್ನಾಟಕದ 3097 ಅನುದಾನಿತ ಶಾಲೆಗಳ 29493 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 7430 ವಿದ್ಯಾರ್ಥಿಗಳು ಶೇ. 25.19ದೊಂದಿಗೆ ಪಾಸಾಗಿದ್ದಾರೆ.

ಅದೇ ರೀತಿ ಕರ್ನಾಟಕದ 3956 ಅನುದಾನ ರಹಿತ ಶಾಲೆಗಳ ಒಟ್ಟು 20183 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅದರಲ್ಲಿ 6188 ಮಕ್ಕಳು ಶೇ. 30.66 ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.

ಮಾಧ್ಯಮವಾರು ಎಷ್ಟು

ಕನ್ನಡ ಮಾಧ್ಯಮದಲ್ಲಿಯೇ 72279 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 17116 ವಿದ್ಯಾರ್ಥಿಗಳು ಶೇ. 23.68ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿಯೇ 21369 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 6755 ವಿದ್ಯಾರ್ಥಿಗಳು ಶೇ. 31.61ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಉರ್ದು ಮಾಧ್ಯಮದಲ್ಲಿಯೇ 2847 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 1115 ವಿದ್ಯಾರ್ಥಿಗಳು ಶೇ.39.16 ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಮರಾಠಿ ಮಾಧ್ಯಮದಲ್ಲಿಯೇ 1415 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 349 ವಿದ್ಯಾರ್ಥಿಗಳು ಶೇ.24.66 ದೊಂದಿಗೆ ಉತ್ತೀರ್ಣರಾಗಿದ್ದಾರೆ.

ತೆಲುಗು ಮಾಧ್ಯಮದಲ್ಲಿಯೇ 15 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 5 ವಿದ್ಯಾರ್ಥಿಗಳು ಶೇ.33.33ದೊಂದಿಗೆ ಉತ್ತೀರ್ಣರಾಗಿದ್ದಾರೆ.

ತಮಿಳು ಮಾಧ್ಯಮದಲ್ಲಿಯೇ 7 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 3 ವಿದ್ಯಾರ್ಥಿಗಳು ಶೇ.42.86ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಹಿಂದಿ ಮಾಧ್ಯಮದಲ್ಲಿಯೇ 20 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 4 ವಿದ್ಯಾರ್ಥಿಗಳು ಶೇ.20ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಎಂಟು ಮಾಧ್ಯಮದಲ್ಲಿಯೇ 97952 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 25347 ವಿದ್ಯಾರ್ಥಿಗಳು ಶೇ. 25.88ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಫಲಿತಾಂಶ ನೋಡುವುದು ಹೇಗೆ?

kseab.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

https://www.karresults.nic.in ಅನ್ನು ಕ್ಲಿಕ್‌ ಮಾಡಿ.

ಹೋಮ್‌ ಪೇಜ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಫಲಿತಾಂಶದ ಲಿಂಕ್‌ ಕ್ಲಿಕ್‌ ಮಾಡಿ

ಸ್ಕ್ರೀನ್‌ನಲ್ಲಿ ಹೊಸ ಪುಟ ಕಾಣಿಸುತ್ತದೆ

ನಿಮ್ಮ ರೋಲ್‌ ನಂಬರ್‌, ಜನ್ಮ ದಿನಾಂಕ ಸೇರಿದಂತೆ ಅಲ್ಲಿ ಕೇಳಲಾಗುವ ಮಾಹಿತಿಯನ್ನು ನಮೂದಿಸಿ

ಸ್ಕ್ರೀನ್‌ ಮೇಲೆ ನಿಮ್ಮ ಫಲಿತಾಂಶ ಕಾಣುತ್ತದೆ

ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿ ಅಥವಾ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ

Whats_app_banner