Explained: ನಂದಿನಿ vs ಅಮುಲ್‌ - ಕರ್ನಾಟಕ ಚುನಾವಣೆ ಮೇಲೇನು ಪರಿಣಾಮ; ಡೇಟಾ ನೀಡುವ ಚಿತ್ರಣ ಹೀಗಿದೆ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  Explained: ನಂದಿನಿ Vs ಅಮುಲ್‌ - ಕರ್ನಾಟಕ ಚುನಾವಣೆ ಮೇಲೇನು ಪರಿಣಾಮ; ಡೇಟಾ ನೀಡುವ ಚಿತ್ರಣ ಹೀಗಿದೆ ನೋಡಿ

Explained: ನಂದಿನಿ vs ಅಮುಲ್‌ - ಕರ್ನಾಟಕ ಚುನಾವಣೆ ಮೇಲೇನು ಪರಿಣಾಮ; ಡೇಟಾ ನೀಡುವ ಚಿತ್ರಣ ಹೀಗಿದೆ ನೋಡಿ

Explained: ಕರ್ನಾಟಕದ ಚುನಾವಣೆಯಲ್ಲಿ ʻನಂದಿನಿʼ ವರ್ಸಸ್‌ ʻಅಮುಲ್‌ʼ ಗದ್ದಲ ನಿಜಕ್ಕೂ ಪರಿಣಾಮ ಬೀರಬಲ್ಲ ಪ್ರಚಾರ ವಿಷಯವೇ? ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕದ ಅರ್ಥ ವ್ಯವಸ್ಥೆಯಲ್ಲಿ ಸಹಕಾರಿ ಹೈನೋದ್ಯಮದ ಮಹತ್ವವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಇದು. ದತ್ತಾಂಶ ಸಹಿತವಾದ ಅವಲೋಕನ ಇಲ್ಲಿದೆ.

ಬೆಂಗಳೂರಿನ ಜೆಪಿ ನಗರದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್‌ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭಾನುವಾರ ಭೇಟಿ ನೀಡಿದರು. (ANI Photo)
ಬೆಂಗಳೂರಿನ ಜೆಪಿ ನಗರದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್‌ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭಾನುವಾರ ಭೇಟಿ ನೀಡಿದರು. (ANI Photo) (Congress Twitter)

ಕರ್ನಾಟಕದ ಚುನಾವಣಾ ಕಣದಲ್ಲಿ ಚುನಾವಣಾ ವಿಷಯವಾಗಿ ಭ್ರಷ್ಟಾಚಾರ, ಕೋಮುವಾದ, ಜಾತಿರಾಜಕಾರಣ ಸದ್ದು ಮಾಡುತ್ತಿದೆ. ಅದರ ಜತೆಗೆ ಸಹಕಾರಿ ಕ್ಷೇತ್ರದ ʻನಂದಿನಿʼ ವರ್ಸಸ್‌ ʻಅಮುಲ್‌ʼ ಗಮನಸೆಳೆದಿದೆ. ಕರ್ನಾಟಕದ ಚುನಾವಣೆಯಲ್ಲಿ ʻನಂದಿನಿʼ ವರ್ಸಸ್‌ ʻಅಮುಲ್‌ʼ ಗದ್ದಲ ನಿಜಕ್ಕೂ ಪರಿಣಾಮ ಬೀರಬಲ್ಲ ಪ್ರಚಾರ ವಿಷಯವೇ? ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕದ ಅರ್ಥ ವ್ಯವಸ್ಥೆಯಲ್ಲಿ ಸಹಕಾರಿ ಹೈನೋದ್ಯಮದ ಮಹತ್ವವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಇದು. ದತ್ತಾಂಶ ಸಹಿತವಾದ ಅವಲೋಕನ ಇಲ್ಲಿದೆ.

ಹಾಲು ಉತ್ಪಾದಿಸುವ ಕುಟುಂಬಗಳ ಪಾಲಿನ ರಾಜ್ಯ ಶ್ರೇಯಾಂಕಕ್ಕೆ ಬಂದಾಗ ಪಟ್ಟಿಯ ಮಧ್ಯಭಾಗದಲ್ಲಿದೆ ಕರ್ನಾಟಕ…

ರಾಜ್ಯಕ್ಕೆ ಸಂಬಂಧಿಸಿದ 2018-19 ರ ಪರಿಸ್ಥಿತಿಯ ಮೌಲ್ಯಮಾಪನ ಸಮೀಕ್ಷೆ(SAS) ಯ ದತ್ತಾಂಶವು ಹಾಲು ಉತ್ಪಾದಿಸುವ ಗ್ರಾಮೀಣ ಕುಟುಂಬಗಳ ಪಾಲನ್ನು ನಮಗೆ ತಿಳಿಸುತ್ತದೆ. ಕರ್ನಾಟಕದಲ್ಲಿ ಈ ಸಂಖ್ಯೆ ಶೇ.23.6 ಇದೆ. ರಾಷ್ಟ್ರೀಯ ಜನಸಂಖ್ಯಾ ಆಯೋಗದ 2023 ರ ಜನಸಂಖ್ಯೆಯ ಪ್ರಕ್ಷೇಪಗಳ ಪ್ರಕಾರ, ಕರ್ನಾಟಕದ ಜನಸಂಖ್ಯೆಯಲ್ಲಿ ಗ್ರಾಮೀಣ ಕುಟುಂಬಗಳು ಶೇಕಡ 56 ಪಾಲನ್ನು ಹೊಂದಿವೆ ಎಂಬ ಅಂಶವನ್ನು ಗಮನಿಸಿದರೆ, ಇದರರ್ಥ ಕರ್ನಾಟಕದ ಸುಮಾರು 13 ಪ್ರತಿಶತ ಕುಟುಂಬಗಳು ಹಾಲು ಉತ್ಪಾದಕ ಕುಟುಂಬಗಳು.

ಇದನ್ನು ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಹೇಗೆ?

ಭಾರತದ ಪ್ರಮುಖ ಕೃಷಿ ರಾಜ್ಯಗಳು (ಭಾರತದ ಕೃಷಿ ಕುಟುಂಬಗಳಲ್ಲಿ ಕನಿಷ್ಠ 1 ಪ್ರತಿಶತದಷ್ಟು ಮನೆಗಳು) ರಾಜ್ಯದಲ್ಲಿ ಪಶು ಸಂಗೋಪನೆಯು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಕ್ರಮವಾಗಿ ಜೋಡಿಸಿ ನೋಡಿದರೆ, ಕರ್ನಾಟಕವು ಆ ಪಟ್ಟಿಯ ಮಧ್ಯದಲ್ಲಿ ಕಂಡುಬರುತ್ತದೆ. ಅಂದರೆ, 20 ಪ್ರಮುಖ ಕೃಷಿ ರಾಜ್ಯಗಳಲ್ಲಿ ಹಾಲು ಉತ್ಪಾದಿಸುವ ಗ್ರಾಮೀಣ ಕುಟುಂಬಗಳ ಪಾಲು (23.6 ಪ್ರತಿಶತ) ಮತ್ತು ಹಾಲು ಉತ್ಪಾದಿಸುವ ಕೃಷಿ ಕುಟುಂಬಗಳ ಪಾಲು (43.1 ಪ್ರತಿಶತ)ಗಳನ್ನು ಗಮನಿಸಿದರೆ 11 ನೇ ಸ್ಥಾನದಲ್ಲಿ ನಮ್ಮ ರಾಜ್ಯವಿದೆ. 2018-19 ರ ಎಸ್‌ಎಎಸ್ ಸಮೀಕ್ಷೆಯ ಹಿಂದಿನ ವರ್ಷದಲ್ಲಿ ಕನಿಷ್ಠ 4,000 ರೂಪಾಯಿ ಮೌಲ್ಯದ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿದ ಮತ್ತು ಕನಿಷ್ಠ ಒಬ್ಬ ಸದಸ್ಯ ಕೃಷಿಯಲ್ಲಿ ಸ್ವಯಂ ಉದ್ಯೋಗಿಗಳನ್ನು ಹೊಂದಿರುವ ಕೃಷಿ ಕುಟುಂಬಗಳು ಎಂದು ವ್ಯಾಖ್ಯಾನಿಸಿದೆ.

ಈ ಅಂಕಿ-ಅಂಶವು ಕರ್ನಾಟಕ ಚುನಾವಣೆಯಲ್ಲಿ ಅಮುಲ್ ವರ್ಸಸ್ ನಂದಿನಿ ಹೆಚ್ಚು ಸಮಸ್ಯೆಯಾಗಲ್ಲ ಎಂಬುದನ್ನು ಬಿಂಬಿಸುತ್ತದೆ.

ಹಾಲು ಉತ್ಪಾದಿಸುವ ಕೃಷಿ ಮತ್ತು ಗ್ರಾಮೀಣ ಕುಟುಂಬಗಳ ಪಾಲು (ರಾಜ್ಯವಾರು ಚಿತ್ರಣ)
ಹಾಲು ಉತ್ಪಾದಿಸುವ ಕೃಷಿ ಮತ್ತು ಗ್ರಾಮೀಣ ಕುಟುಂಬಗಳ ಪಾಲು (ರಾಜ್ಯವಾರು ಚಿತ್ರಣ)

ಆದರೆ ಸಹಕಾರಿ ಸಂಸ್ಥೆಗಳಿಗಾಗಿ ಹಾಲು ಉತ್ಪಾದಿಸುವವರ ಪ್ರಮಾಣ ಅತ್ಯಧಿಕ

ಪರಿಸ್ಥಿತಿಯ ಮೌಲ್ಯಮಾಪನ ಸಮೀಕ್ಷೆ(SAS) ಸಹ ಹಾಲು ಮಾರಾಟದಲ್ಲಿ ಸಹಕಾರಿಗಳ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ. ಸಹಕಾರಿ ಸಂಸ್ಥೆಗಳಿಗೆ ಮಾರಾಟವಾಗುವ ಹಾಲಿನ ಮೌಲ್ಯದಲ್ಲಿ ಒಟ್ಟಾರೆ ಮತ್ತು ತಲಾವಾರು ಪಾಲನ್ನು ಪರಿಗಣಿಸಿದಾಗ ಸಹಕಾರಿ ಸಂಘಗಳು ಕರ್ನಾಟಕದಲ್ಲಿ ಪ್ರಮುಖವಾಗಿವೆ ಎಂಬುದನ್ನು ಡೇಟಾ ತೋರಿಸುತ್ತದೆ.

ಹಾಲಿನ ಒಟ್ಟಾರೆ ಮೌಲ್ಯಕ್ಕೆ ಸಂಬಂಧಿಸಿ, 50 ಪ್ರತಿಶತಕ್ಕಿಂತ ಹೆಚ್ಚು ಕರ್ನಾಟಕದಲ್ಲಿ ಸಹಕಾರಿ ಸಂಸ್ಥೆಗಳಿಗೆ ಮಾರಾಟವಾಗುತ್ತದೆ, ಡೇರಿ ದೈತ್ಯ ಅಮುಲ್‌ನ ತವರು ಗುಜರಾತ್‌ ನಂತರ ಎರಡನೆಯ ಸ್ಥಾನದಲ್ಲಿದೆ ನಮ್ಮ ಕರ್ನಾಟಕ. ಗ್ರಾಮೀಣ ಅಥವಾ ಕೃಷಿ ಕುಟುಂಬಗಳು ಮಾರಾಟ ಮಾಡುವ ಹಾಲನ್ನು ನೋಡಿದರೆ ಸಹಕಾರಿ ಸಂಸ್ಥೆಗಳಿಗೆ ಮಾರಾಟವಾಗುವ ಹಾಲಿನ ತಲಾ ಮೌಲ್ಯದಲ್ಲಿ ಕರ್ನಾಟಕವು ಎರಡನೇ ಅಥವಾ ಮೂರನೇ ಸ್ಥಾನದಲ್ಲಿದೆ.

ಸಹಕಾರಿ ಸಂಸ್ಥೆಗಳಿಗೆ ಮಾರಾಟವಾದ ಹಾಲಿನ ಮೌಲ್ಯ (ರಾಜ್ಯವಾರು ಚಿತ್ರಣ)
ಸಹಕಾರಿ ಸಂಸ್ಥೆಗಳಿಗೆ ಮಾರಾಟವಾದ ಹಾಲಿನ ಮೌಲ್ಯ (ರಾಜ್ಯವಾರು ಚಿತ್ರಣ)

ಹಾಲನ್ನು ಮಾರಾಟ ಮಾಡುವ ನಿಖರವಾದ ಸಹಕಾರಿಯ ಬಗ್ಗೆ ವಿವರಗಳನ್ನು ಎಸ್‌ಎಎಸ್‌ ವಿವರಿಸದೇ ಇದ್ದರೂ, ನಂದಿನಿಯು ಕರ್ನಾಟಕದ ಡೇರಿ ರೈತರಿಂದ ಹಾಲನ್ನು ಅತಿ ಹೆಚ್ಚು ಖರೀದಿದಾರ ಎಂದು ಊಹಿಸುವುದಕ್ಕೆ ಸಮಂಜಸವಾಗಿದೆ. ಇದು ಅಮುಲ್‌ ಬಂದರೆ ನಂದಿನಿಯು ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತದೆ ಎಂಬ ಭಯವನ್ನು (ಆಧಾರವಿಲ್ಲದೇ ಇದ್ದಾಗ್ಯೂ ಸಹ) ಕರ್ನಾಟಕದಲ್ಲಿ ಪ್ರಬಲವಾದ ʻರಾಜಕೀಯ ವಿಷಯʼವನ್ನಾಗಿ ಮಾಡುತ್ತದೆ.

ಸಹಕಾರಿ ಸಂಸ್ಥೆಗಳಿಗಾಗಿಯೆ ಉತ್ಪಾದಿನ ಹಾಲಿನ ಮೌಲ್ಯ (ರಾಜ್ಯವಾರು ಚಿತ್ರಣ)
ಸಹಕಾರಿ ಸಂಸ್ಥೆಗಳಿಗಾಗಿಯೆ ಉತ್ಪಾದಿನ ಹಾಲಿನ ಮೌಲ್ಯ (ರಾಜ್ಯವಾರು ಚಿತ್ರಣ)

ಕರ್ನಾಟಕದ ಡೇರಿ ಆರ್ಥಿಕತೆಯಲ್ಲಿ ನಂದಿನಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆಯೇ?

ರಾಜ್ಯದಲ್ಲಿ 2018-19 ಮತ್ತು 2012-13 ರ ಎಸ್‌ಎಎಸ್ ಸಮೀಕ್ಷೆಯಲ್ಲಿ ಸಹಕಾರಿ ಸಂಸ್ಥೆಗಳಿಗೆ ಮಾರಾಟವಾದ ಒಟ್ಟು ಹಾಲಿನ ಮೌಲ್ಯದಲ್ಲಿನ ಪಾಲಿನ ಸರಳ ಹೋಲಿಕೆಯು ಅದು ಹೊಂದಿದೆ ಎಂಬುದನ್ನು ಸೂಚಿಸುತ್ತದೆ. 2012-13 ಮತ್ತು 2018-19 ರ ನಡುವೆ ಮಾರಾಟವಾದ ಹಾಲಿನ ಒಟ್ಟು ಮೌಲ್ಯದಲ್ಲಿ ಸಹಕಾರಿಗಳ ಪಾಲು ಸುಮಾರು ಮೂರನೇ ಎರಡರಿಂದ ಅರ್ಧಕ್ಕಿಂತ ಹೆಚ್ಚಿಗೆ ಕುಸಿಯಿತು. ಖಚಿತವಾಗಿ ಹೇಳುವುದಾದರೆ, ಎರಡು ಸಮೀಕ್ಷೆಗಳಲ್ಲಿನ ವಿಧಾನದಲ್ಲಿನ ವ್ಯತ್ಯಾಸದಿಂದಾಗಿ ಈ ಸಂಖ್ಯೆಗಳನ್ನು ನಿಖರವಾಗಿ ಹೋಲಿಸಲಾಗುವುದಿಲ್ಲ ಎಂಬ ಎಚ್ಚರಿಕೆಯೊಂದಿಗೆ ಓದಬೇಕು.

ರಾಜ್ಯದಲ್ಲಿ 2018-19 ಎಸ್‌ಎಎಸ್‌ನಲ್ಲಿ, ಸ್ವಯಂ-ಬಳಕೆಗಾಗಿ ಬಳಸಿದ ಹಾಲಿನ ಪ್ರಮಾಣದ ಬಗ್ಗೆ ಮನೆಯವರಿಗೆ ನಿರ್ದಿಷ್ಟವಾಗಿ ಕೇಳಲಾಯಿತು; ಮತ್ತು ಇತರ ಮನೆಗಳು, ಸಹಕಾರಿಗಳು ಮತ್ತು ಖಾಸಗಿ ಪ್ರೊಸೆಸರ್‌ಗಳಿಗೆ ಮಾರಾಟವಾದ ಪ್ರಮಾಣ. ಇದು ವಿವಿಧ "ಇತರ" ವರ್ಗದಲ್ಲಿ ವಿಲೇವಾರಿ ಮೊತ್ತದ 3.6 ಪ್ರತಿಶತವನ್ನು ಮಾತ್ರ ಬಿಡುತ್ತದೆ. 2012-13ರ ಸಮೀಕ್ಷೆಯಲ್ಲಿ, ಕುಟುಂಬಗಳಿಗೆ ಅವರ ಮೊದಲ ಮತ್ತು ಎರಡನೆಯ ಪ್ರಮುಖ ವಿಲೇವಾರಿ ಕುರಿತು ವಿವರಗಳನ್ನು ಕೇಳಲಾಯಿತು, ಆದರೆ ಉಳಿದವುಗಳಲ್ಲ. ಆದ್ದರಿಂದ ವಿಲೇವಾರಿಯ ಸುಮಾರು 30 ಪ್ರತಿಶತದಷ್ಟು ಗಮ್ಯಸ್ಥಾನವು ವಿವಿಧ ವರ್ಗದಲ್ಲಿ ಉಳಿದಿದೆ ಎಂಬುದರ ಕಡೆಗೆ ದತ್ತಾಂಶ ಬೆಳಕುಚೆಲ್ಲಿದೆ.

ರಾಜ್ಯದಲ್ಲಿ ಜಿಲ್ಲಾವಾರು ಹಾಲು ಉತ್ಪಾದನೆ (2020-21)
ರಾಜ್ಯದಲ್ಲಿ ಜಿಲ್ಲಾವಾರು ಹಾಲು ಉತ್ಪಾದನೆ (2020-21)

ನಂದಿನಿ ಸಮಸ್ಯೆ - ಭೌಗೋಳಿಕ ರಾಜಕೀಯ ವ್ಯಾಪ್ತಿ

ಸಮಸ್ಯೆಯ ರಾಜಕೀಯ ಪ್ರಭಾವಕ್ಕೆ ಸಂಬಂಧಿಸಿ ಇದು ಒಂದು ಪ್ರಮುಖ ಪ್ರಶ್ನೆ. ಕರ್ನಾಟಕದ ಎಲ್ಲ ಹೈನುಗಾರರು ಒಂದು ಭೌಗೋಳಿಕ ವ್ಯಾಪ್ತಿಯಲ್ಲಿ ಕೇಂದ್ರೀಕೃತವಾಗಿದ್ದರೆ, ಅದು ಒಟ್ಟಾರೆ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು.

ದನ ಮತ್ತು ಎಮ್ಮೆಗಳ ಪ್ರಮಾಣ ಜಿಲ್ಲಾವಾರು (2019ರ ದತ್ತಾಂಶ)
ದನ ಮತ್ತು ಎಮ್ಮೆಗಳ ಪ್ರಮಾಣ ಜಿಲ್ಲಾವಾರು (2019ರ ದತ್ತಾಂಶ)

ಎಸ್‌ಎಎಸ್ ರಾಜ್ಯ ಮಟ್ಟವನ್ನು ಮೀರಿ ವಿಘಟಿತ ಡೇಟಾವನ್ನು ನೀಡದಿದ್ದರೂ, 2019 ರಲ್ಲಿ ಕೊನೆಯದಾಗಿ ನಡೆಸಲಾದ ಕರ್ನಾಟಕದ ಸ್ವಂತ ಜಾನುವಾರು ಗಣತಿಯಲ್ಲಿ ಉಲ್ಲೇಖಿಸಿದ ಕೆಲವು ಮಾಹಿತಿ ಲಭ್ಯವಾಗಿದೆ. ಇದು ಜಾನುವಾರು ಮತ್ತು ಹಾಲು ಉತ್ಪಾದನೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಭೌಗೋಳಿಕ ಪಾಕೆಟ್‌ಗಳು ಕರ್ನಾಟಕದಲ್ಲಿ ಒಂದೇ ಆಗಿರುವುದಿಲ್ಲ ಎಂಬುದನ್ನು ತೋರಿಸುತ್ತದೆ.

ಮೊದಲನೆಯದು ಚಿಕ್ಕಮಗಳೂರು, ರಾಮನಗರ, ಹಾಸನ ಮತ್ತು ಮಂಡ್ಯದಂತಹ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಹೋಗುವ ಕರಾವಳಿಯ ಉದ್ದಕ್ಕೂ ಒಂದು ಚಾಪವನ್ನು ಕೇಂದ್ರೀಕರಿಸಿದೆ; ಹಾಲಿನ ಉತ್ಪಾದನೆಯು (ಪ್ರತಿ 1000 ಮನೆಗಳಿಗೆ) ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ. ನಂದಿನಿ ವರ್ಸಸ್ ಅಮುಲ್ ಎಂಬುದನ್ನು ಚುನಾವಣಾ ವಿಷಯವಾಗಿ ನಿರೂಪಿಸುವುದಕ್ಕೆ ಅಧಿಕೃತ ಮಾಹಿತಿಯು ನಮಗೆ ಹೇಳುವುದಕ್ಕಿಂತ ಹೆಚ್ಚಿನ ಸೆಳೆತವನ್ನು ಹೊಂದಿರುವ ಸ್ಥಳಗಳ ಬಗ್ಗೆ ಸ್ಥಳೀಯ ರಾಜಕಾರಣಿಗಳು ಉತ್ತಮ ಮಾಹಿತಿಯನ್ನು ಹೊಂದಿರುತ್ತಾರೆ.

Whats_app_banner