ಕನ್ನಡ ಸುದ್ದಿ  /  ಕರ್ನಾಟಕ  /  Jds Candidates List: ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ, ಭವಾನಿ ರೇವಣ್ಣಗೆ ಕೈತಪ್ಪಿದ ಟಿಕೆಟ್‌, ಯಾರಿಗೆ ಎಲ್ಲಿಯ ಟಿಕೆಟ್‌, ಇಲ್ಲಿದೆ ವಿವರ

JDS Candidates List: ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ, ಭವಾನಿ ರೇವಣ್ಣಗೆ ಕೈತಪ್ಪಿದ ಟಿಕೆಟ್‌, ಯಾರಿಗೆ ಎಲ್ಲಿಯ ಟಿಕೆಟ್‌, ಇಲ್ಲಿದೆ ವಿವರ

2023 Karnataka Legislative Assembly election: ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ(JDS Candidates List) ಪ್ರಕಟಗೊಂಡಿದೆ. ಒಟ್ಟು 49 ಕ್ಷೇತ್ರಗಳಿಗೆ 49 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ತೀವ್ರ ಕುತೂಹಲ ಮೂಡಿಸಿದ ಹಾಸನ ಕ್ಷೇತ್ರದ ಟಿಕೆಟ್‌ ಹೆಚ್.ಪಿ. ಸ್ವರೂಪ್‌ಗೆ ನೀಡಲಾಗಿದೆ

JDS Candidates List: ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ, ಭವಾನಿ ರೇವಣ್ಣಗೆ ಕೈತಪ್ಪಿದ ಟಿಕೆಟ್‌, ಯಾರಿಗೆ ಎಲ್ಲಿಯ ಟಿಕೆಟ್‌, ಇಲ್ಲಿದೆ ವಿವರ
JDS Candidates List: ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ, ಭವಾನಿ ರೇವಣ್ಣಗೆ ಕೈತಪ್ಪಿದ ಟಿಕೆಟ್‌, ಯಾರಿಗೆ ಎಲ್ಲಿಯ ಟಿಕೆಟ್‌, ಇಲ್ಲಿದೆ ವಿವರ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 49 ಕ್ಷೇತ್ರಗಳಿಗೆ 49 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ತೀವ್ರ ಕುತೂಹಲ ಮೂಡಿಸಿದ ಹಾಸನ ಕ್ಷೇತ್ರದ ಟಿಕೆಟ್‌ ಹೆಚ್.ಪಿ. ಸ್ವರೂಪ್‌ಗೆ ನೀಡಲಾಗಿದೆ. ಇಲ್ಲಿನ ಟಿಕೆಟ್‌ ಭವಾನಿ ರೇವಣ್ಣ ನೀಡುವ ನಿರೀಕ್ಷೆ ಇತ್ತು. ಚಿಕ್ಕಮಗಳೂರಿನ ಕಡೂರು ಕ್ಷೇತ್ರದ ಟಿಕೆಟ್ ವೈಎಸ್​ವಿ ದತ್ತಾಗೆ ದೊರಕಿದೆ.

ಟ್ರೆಂಡಿಂಗ್​ ಸುದ್ದಿ

ಜೆಡಿಎಸ್‌ ಪಕ್ಷದ ವಿಧಾನಸಭೆ ಚುನಾವಣೆಯ 2ನೇ ಪಟ್ಟಿಯನ್ನು ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ HD ಕುಮಾರಸ್ವಾಮಿ ಅವರು, ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಸಿಎಂ ಇಬ್ರಾಹಿಂ ಅವರು, ಮಾಜಿ ಸಚಿವರಾದ ಶ್ರೀ HD ರೇವಣ್ಣ ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಬಿಡುಗಡೆ ಮಾಡಿದ್ದಾರೆ. ಇಂದು ಪಕ್ಷ ಸೇರಿದ ಹಲವು ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿ ಇರುವುದನ್ನು ಗಮನಿಸಬಹುದು.

ಜೆಡಿಎಸ್‌ ಎರಡನೇ ಪಟ್ಟಿಯಲ್ಲಿ ಯಾವ ಕ್ಷೇತ್ರ ಯಾರಿಗೆ?

ಹಾಸನ ಕ್ಷೇತ್ರ: ಹೆಚ್​​ಪಿ ಸ್ವರೂಪ್

ಕುಡಚಿ ಕ್ಷೇತ್ರ: ಆನಂದ ಮಾಳಗಿ

ಸವದತ್ತಿ ಯಲ್ಲಮ್ಮ: ಸೌರಬ್ ಆನಂದ್​ ಚೋಪ್ರಾ

ಆಥಣಿ: ಶಶಿಕಾಂತ್ ಪಡಸಲಗಿ

ಯಲ್ಲಾಪುರ: ಡಾ.ನಾಗೇಶ್ ನಾಯ್ಕ್​

ಗುಂಡ್ಲುಪೇಟೆ: ಕಡಬೂರು ಮಂಜುನಾಥ್

ಯಲಹಂಕ: ಮುನೇಗೌಡ

ಯಶವಂತಪುರ: ಜವರಾಯಿಗೌಡ

ತಿಪಟೂರು: ಶಾಂತಕುಮಾರ್

ಶಿರಾ: ಆರ್.ಉಗ್ರೇಶ್

ಹಾನಗಲ್: ಮನೋಹರ ತಹಶೀಲ್ದಾರ್​

ಸಿಂದಗಿ: ವಿಶಾಲಾಕ್ಷಿ ಶಿವಾನಂದ್​

ಗಂಗಾವತಿ: ಹೆಚ್.ಆರ್.ಚನ್ನಕೇಶವ

ಜೇವರ್ಗಿ: ದೊಡ್ಡಪ್ಪಗೌಡ

ಶಹಾಪುರ: ಗುರುಲಿಂಗಪ್ಪಗೌಡ

ಕಡೂರು: ವೈಎಸ್​ವಿ ದತ್ತಾ

ಹೊಳೆನರಸೀಪುರ: ಹೆಚ್.ಡಿ.ರೇವಣ್ಣ

ಸಕಲೇಶಪುರ: ಹೆಚ್.ಕೆ.ಕುಮಾರಸ್ವಾಮಿ

ಅರಕಲಗೂಡು: ಎ.ಮಂಜು

ಶ್ರವಣಬೆಳಗೊಳ: ಬಾಲಕೃಷ್ಣ

ಮಹಾಲಕ್ಷ್ಮೀ ಲೇಔಟ್: ರಾಜಣ್ಣ

ಮಾಯಕೊಂಡ: ಆನಂದಪ್ಪ

ಹುಬ್ಬಳ್ಳಿ ಪೂರ್ವ: ವೀರಭದ್ರಪ್ಪಯ್ಯ

ಕುಮಟ: ಸೂರಜ್ ಸೋನಿ ನಾಯಕ್

ಹಳಿಯಾಳ: ಎಸ್ ಎಲ್ ಘೋಟ್ನೆಸ್ಕರ್

ಭಟ್ಕಳ: ನಾಗೇಂದ್ರ ನಾಯಕ್

ಶಿರಸಿ: ಉಪೇಂದ್ರ ಪೈ

ಕಾರವಾರ: ಚೈತ್ರಾ ಕೋಟಾಕರ್

ಪುತ್ತೂರು: ದಿವ್ಯಾ ಪ್ರಭ

ಅರಕಲಗೂಡು: ಎ ಮಂಜು

ಮಹಾಲಕ್ಷ್ಮಿ ಲೇಔಟ್: ರಾಜಣ್ಣ

ಚಿತ್ತಪುರ: ನ್ಯಾಯದೀಶ ಸುಭಾಷ್ ಚಂದ್ರ ರಾಥೋಡ್

ಕಲಬುರಗಿ ಉತ್ತರ: ನಾಸೀರ್ ಹುಸೇನ್

ಬಳ್ಳಾರಿ: ಅಲ್ಲಬಕ್ಸ್ ಮುನ್ನ

ಹರಪ್ಪನ ಹಳ್ಳಿ: ನೂರ್ ಅಹಮದ್

ಕೊಳ್ಳೆಗಾಲ: ನಿವೃತ್ತ ಪೊಲೀಸ್ ಪುಟ್ಟ ಸ್ವಾಮಿ

ಗುಂಡ್ಲುಪೇಟೆ: ಕಡಬುರು ಮಂಜುನಾಥ್

ಕಾರ್ಕಳ: ಶ್ರೀಕಾಂತ್ ಕೊಚ್ಚುರ್

ಉಡುಪಿ: ದಕ್ಷತ್ವ ಆರ್ ಶೆಟ್ಟಿ

ಕುಂದಾಪುರ: ರಮೇಶ್ ಕುಂದಾಪುರ

ಕನಕಪುರ: ನಾಗರಾಜ್

ಯಲಹಂಕ: ಮುನೇಗೌಡ

ಯಶವಂತಪುರ: ಜವರಾಯಿಗೌಡ

ತಿಪಟೂರು: ಶಾಂತ ಕುಮಾರ್

ಶಿರಾ: ಆರ್ ಉಗ್ರೇಶ್

ಹಾನಗಲ್: ನೋಹರ್ ತಹಶಿಲ್ದಾರ್

ಸಿಂದಗಿ: ವಿಶಾಲಕ್ಷಿ ಶಿವಾನಂದ್

ಹೆಚ್ ಡಿ ಕೋಟೆ: ಜಯಪ್ರಕಾಶ್

ಇಂದು ಚಿತ್ರದುರ್ಗದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಶಹಾಪುರದ ಮಾಜಿ ಶಾಸಕರಾದ ಗುರುಲಿಂಗಪ್ಪ ಗೌಡ, ಗುರು ಪಾಟೀಲ್, ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅನೇಕ ಪ್ರಮುಖ ನಾಯಕರು ಶುಕ್ರವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾರವಾರದ ಚೈತ್ರ ಕೊಡೇಕರ್, ಪಾವಗಡದ ಶ್ರೀರಾಮ್, ಮಾಯಕೊಂಡದ ಸವಿತಾ ಬಾಯಿ, ಪುತ್ತೂರಿನ ದಿವ್ಯಾ ಪುತ್ತೂರು, ದಿವ್ಯಪ್ರಭಾ ಗೌಡ, ಸಲಾಂ ವಿಟ್ಲ ಸೇರಿದಂತೆ ನೂರಾರು ಪ್ರಮುಖ ನಾಯಕರು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ಓದಿ.

IPL_Entry_Point