Gold Price fall: ಚಿನ್ನದ ಬೆಲೆ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ? ಕರ್ನಾಟಕದಲ್ಲಿ ಇಂದಿನ ಚಿನ್ನ ಬೆಳ್ಳಿ ರೇಟ್‌ ತಿಳಿಯಿರಿ
ಕನ್ನಡ ಸುದ್ದಿ  /  ಕರ್ನಾಟಕ  /  Gold Price Fall: ಚಿನ್ನದ ಬೆಲೆ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ? ಕರ್ನಾಟಕದಲ್ಲಿ ಇಂದಿನ ಚಿನ್ನ ಬೆಳ್ಳಿ ರೇಟ್‌ ತಿಳಿಯಿರಿ

Gold Price fall: ಚಿನ್ನದ ಬೆಲೆ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ? ಕರ್ನಾಟಕದಲ್ಲಿ ಇಂದಿನ ಚಿನ್ನ ಬೆಳ್ಳಿ ರೇಟ್‌ ತಿಳಿಯಿರಿ

Gold Price fall Today: ಕಳೆದ ಒಂದು ವಾರದಲ್ಲಿ ಚಿನ್ನದ ದರ ಗಮನಾರ್ಹವಾಗಿ ಇಳಿಕೆ ಕಂಡಿದೆ. ಆದರೆ, ನವೆಂಬರ್‌ 19ರಂದು ಚಿನ್ನ ಬೆಳ್ಳಿ ರೇಟ್‌ ತುಸು ಏರಿಕೆ ಕಂಡಿದೆ. ಹಳದಿ ಲೋಹದ ಮೇಲಿನ ಹೂಡಿಕೆಗೆ ಇದು ಸಕಾಲವೇ? ಆಭರಣ, ಚಿನ್ನದ ನಾಣ್ಯ, ಡಿಜಿಟಲ್‌ ಚಿನ್ನ ಖರೀದಿಸುವವರು ಗಮನಿಸಿ.

Gold Price fall: ಚಿನ್ನದ ದರ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ?
Gold Price fall: ಚಿನ್ನದ ದರ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ? (PTI)

Gold Price fall Today: ಹಬ್ಬದ ಋತುವಿನಲ್ಲಿ ದರ ಹೆಚ್ಚಳದಿಂದ ಆತಂಕಗೊಳಿಸಿದ ಹಳದಿ ಲೋಹ ಚಿನ್ನದ ದರ ಮೂರು ದಿನದ ಹಿಂದೆ ಸಾಕಷ್ಟು ಇಳಿಕೆ ಕಂಡಿತ್ತು. ಮೂರು ದಿನದ ಹಿಂದೆ ಹತ್ತು ಗ್ರಾಂ ಚಿನ್ನದ ದರ ಸುಮಾರು 4 ಸಾವಿರ ರೂಪಾಯಿಯಷ್ಟು ಇಳಿಕೆ ಕಂಡು ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ವಿಶೇಷವೆಂದರೆ, ಭಾರತದಲ್ಲಿ ಮಾತ್ರ ಚಿನ್ನದ ದರ ಇಳಿಕೆ ಕಂಡಿತ್ತು. ಜಾಗತಿಕವಾಗಿ ಚಿನ್ನದ ದರ ಏರಿಕೆ ಕಂಡಿತ್ತು. ಭಾರತದಲ್ಲಿ ಹಬ್ಬ ಮುಗಿದ ಬಳಿಕ ಬೇಡಿಕೆ ಕಡಿಮೆಯಾದ ಕಾರಣ ಚಿನ್ನದ ದರ ಇಳಿಕೆ ಕಂಡಿತ್ತು. ಆದರೆ, ಇಂದು ನವೆಂಬರ್‌ 19ರಂದು ಮತ್ತೆ ದರ ಏರಿಕೆ ಕಾಣುವ ಸೂಚನೆ ದೊರಕಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕಳೆದ ಮೂರು ವರ್ಷಗಳಲ್ಲಿಯೇ ಮೊದಲ ಭಾರಿಗೆ ಅತ್ಯಧಿಕ ವೀಕ್ಲಿ ದರ ಇಳಿಕೆಗೆ ಚಿನ್ನದ ದರ ಕಳೆದ ವಾರ ಸಾಕ್ಷಿಯಾಗಿತ್ತು. ಅಮೆರಿಕದ ಡಾಲರ್‌ ಸದೃಢವಾಗಿರುವುದು ಮತ್ತು ಹೂಡಿಕೆದಾರರ ಆದ್ಯತೆ ಬದಲಾಗುತ್ತಿರುವ ಕಾರಣದಿಂದ ಕಳೆದ ವಾರ ದರ ಇಳಿಕೆ ಕಂಡಿತ್ತು. ಕಳೆದ ಶುಕ್ರವಾರ ಚಿನ್ನದ ದರ ಹತ್ತು ಗ್ರಾಂಗೆ 75,813 ರೂಗೆ ತಲುಪಿ, 1200 ರೂಪಾಯಿಯಷ್ಟು ಇಳಿಕೆ ಕಂಡಿತ್ತು. ಡಾಲರ್‌ ಸದೃಢಗೊಂಡಿರುವುದು ಚಿನ್ನದ ದರ ಇಳಿಕೆಗೆ ಪ್ರಮುಖ ಕಾರಣವಾಗಿತ್ತು.

ಚಿನ್ನ ಖರೀದಿಗೆ ಸಕಾಲವೇ?

ಈಗ ಬಿಟ್‌ಕಾಯಿನ್‌ ದರ ಕಾಯಿನ್‌ಗೆ 93,000 ಡಾಲರ್‌ ತಲುಪಿದೆ. ಇದರಿಂದಾಗಿ ಜನರು ಸುರಕ್ಷಿತ ಸಾಂಪ್ರದಾಯಿಕ ಹೂಡಿಕೆಯಾದ ಚಿನ್ನದಿಂದ ತುಸು ದೂರ ಸರಿದಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈಗಲೂ ಸಾಕಷ್ಟು ಜನರು ಚಿನ್ನದ ಮೇಲೆ ನಂಬಿಕೆ ಇಟ್ಟಿರುವುದರಿಂದ ದರ ಸ್ಥಿರವಾಗಿದೆ ಎಂದು ಚಿನಿವಾರ ಪೇಟೆಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. "ಸದ್ಯ ದರ ಕಡಿಮೆಯಾಗಿದ್ದರೂ, ದೀರ್ಘಕಾಲದ ಗುರಿಗಳನ್ನು ಹೊಂದಿರುವವರಿಗೆ ಚಿನ್ನವು ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆಯಾಗಿದೆ. ಹಣದುಬ್ಬರ ದರ ಏರಿಕೆ ಕಾಣುತ್ತಿರುವುದು, ಬಡ್ಡಿ ದರ ಹೆಚ್ಚಳ ಮುಂತಾದ ಕಾರಣಗಳಿಂದ ಚಿನ್ನದ ಮೇಲಿನ ಹೂಡಿಕೆಗೆ ಅಲ್ಪಾವಧಿ ಲಾಭ ಕಡಿಮೆ ಇರಬಹುದು" ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್‌ 19ರಂದು ಚಿನ್ನ ಬೆಳ್ಳಿ ರೇಟ್‌ ಎಷ್ಟು?

ಇಂದಿನ ಚಿನ್ನದ ಬೆಲೆ ಕಲಬುರಗಿ, ದಾವಣಗೆರೆ ಗೋಲ್ಡ್ ರೇಟ್, ಮಂಗಳೂರು, ಮೈಸೂರು, ಬೆಂಗಳೂರು ಗೋಲ್ಡ್‌ ರೇಟ್‌ ಎಷ್ಟು ಎಂದು ಸಾಕಷ್ಟು ಜನರು ಹುಡುಕುತ್ತಿದ್ದಾರೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಒಂದೇ ರೀತಿಯ ದರ ಇರುತ್ತದೆ. ಕೆಲವೊಮ್ಮೆ ಚಿನ್ನದ ವ್ಯಾಪಾರಿಗಳಿಂದ ವ್ಯಾಪಾರಿಗಳಿಗೆ ದರ ವ್ಯತ್ಯಾಸ ಇರಲೂಬಹುದು. ಕಳೆದ ವಾರದ ಇಳಿಕೆಗೆ ಹೋಲಿಸಿದರೆ ಸೋಮವಾರ ಚಿನ್ನದ ದರ ತುಸು ಏರಿಕೆ ಕಂಡಿದೆ. ನವೆಂಬರ್‌19ರಂದು (Todays gold rate) ಬೆಂಗಳೂರಿನಲ್ಲಿ 22 ಕ್ಯಾರೆಟ್‌ ಚಿನ್ನದ 7,065 ರೂಪಾಯಿ, 24 ಕ್ಯಾರೆಟ್‌ಚಿನ್ನ ದರ 7,707 ರೂಪಾಯಿ ಇದೆ. ಕರ್ನಾಟಕದ ಬಹುತೇಕ ಕಡೆ ಇದೆ ದರ ಇದೆ.

22 ಕ್ಯಾರೆಟ್‌ ಚಿನ್ನದ ದರ (ನವೆಂಬರ್‌ 19)

ಬೆಂಗಳೂರಿನಲ್ಲಿ ಇಂದು 1 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 7,065 ರೂಪಾಯಿ ಇದೆ. ನಿನ್ನೆ 6,995 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 70 ರೂಪಾಯಿ ಹೆಚ್ಚಾಗಿದೆ. ಇದೇ ಸಮಯದಲ್ಲಿ 8 ಗ್ರಾಂ ಚಿನ್ನದ ದರ ಇಂದು 56,520 ರೂಪಾಯಿ ಇದೆ. ನಿನ್ನೆ 55,960 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 560 ರೂಪಾಯಿ ಏರಿಕೆ ಕಂಡಿದೆ. ಇದೇ ಸಮಯದಲ್ಲಿ 10 ಗ್ರಾಂ ಚಿನ್ನದ ದರ ಇಂದು 70,650 ರೂಪಾಯಿ ಇತ್ತು. ನಿನ್ನೆ 69,950 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 700 ರೂಪಾಯಿ ಏಎರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು 7,06,500 ರೂಪಾಯಿ ಇದೆ. ನಿನ್ನೆ 6,99,500 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 7,000 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್‌ ಚಿನ್ನದ ದರ (ನವೆಂಬರ್‌ 19)

ಬೆಂಗಳೂರಿನಲ್ಲಿ ಸೋಮವಾರ 1 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 7,707 ರೂಪಾಯಿ ಇದೆ. ನಿನ್ನೆ 7,631 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 76 ರೂಪಾಯಿ ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 61,656 ರೂಪಾಯಿ ಇದೆ. ನಿನ್ನೆ 61,048 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 608 ರೂಪಾಯಿ ಏರಿಕೆ ಕಂಡಿದೆ. ಇದೇ ಸಮಯದಲ್ಲಿ 10 ಗ್ರಾಂ ಚಿನ್ನದ ದರ 77,070 ರೂಪಾಯಿಗೆ ತಲುಪಿದೆ. ನಿನ್ನೆ 76,310 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 760 ರೂ ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು 7,70,700 ರೂಪಾಯಿ ಇದೆ. ನಿನ್ನೆ 7,63,100 ರೂಪಾಯಿ ಇತ್ತು. ಇಂದು 7,600 ರೂಪಾಯಿ ಏರಿಕೆ ಕಂಡಿದೆ.

ಬೆಂಗಳೂರಲ್ಲಿ ಬೆಳ್ಳಿ ದರ ಎಷ್ಟು?

ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರ ಗ್ರಾಂಗೆ 91.50 ರೂಪಾಯಿ ಇದೆ. ಎಂಟು ಗ್ರಾಂಗೆ 732 ರೂಪಾಯಿ, 10 ಗ್ರಾಂಗೆ 915 ರೂಪಾಯಿ, 100 ಗ್ರಾಂಗೆ 9,150 ರೂಪಾಯಿ, 1 ಕೆಜಿಗೆ 91,500 ರೂಪಾಯಿ ಇದೆ.

Whats_app_banner