ಅಂತರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನ ಇಂದು; ಭಾರತವೇ ಹೆಚ್ಚು ಹಾವಿನ ಅನಾಹುತ ಎದುರಿಸುವ ದೇಶ, ಹಾವು ಕಡಿದಾಗ ತಕ್ಷಣವೇ ಏನು ಮಾಡಬೇಕು-health news international snake bite day 2024 india become hot spot in snake what is first aid for immediate relief kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅಂತರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನ ಇಂದು; ಭಾರತವೇ ಹೆಚ್ಚು ಹಾವಿನ ಅನಾಹುತ ಎದುರಿಸುವ ದೇಶ, ಹಾವು ಕಡಿದಾಗ ತಕ್ಷಣವೇ ಏನು ಮಾಡಬೇಕು

ಅಂತರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನ ಇಂದು; ಭಾರತವೇ ಹೆಚ್ಚು ಹಾವಿನ ಅನಾಹುತ ಎದುರಿಸುವ ದೇಶ, ಹಾವು ಕಡಿದಾಗ ತಕ್ಷಣವೇ ಏನು ಮಾಡಬೇಕು

ಭಾರತದಲ್ಲಿ ಹಾವಿನ ಕಡಿತದಿಂದ ಸಾಯುವವರ ಸಂಖ್ಯೆ ವಿಶ್ವದಲ್ಲೇ ಅಧಿಕ. ನಿರಂತರ ಜಾಗೃತಿ ನಂತರವೂ ಹಾವು ಕಡಿತವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಕಡಿಮೆ. ಆರು ವರ್ಷದಿಂದ ಹಾವಿನ ಕಡಿತ ಜಾಗೃತಿ ಮೂಡಿಸಲು ಅಂತರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನವನ್ನೂ ಆಚರಿಸಲಾಗುತ್ತಿದೆ.

ಹಾವಿನ ಕಡಿತದ ಜಾಗೃತಿ ಮೂಡಿಸಲು ಸೆಪ್ಟಂಬರ್‌ 19ರಂದು ಅಂತರಾಷ್ಟ್ರೀಯ ದಿನ ಆಚರಿಸಲಾಗುತ್ತಿದೆ.
ಹಾವಿನ ಕಡಿತದ ಜಾಗೃತಿ ಮೂಡಿಸಲು ಸೆಪ್ಟಂಬರ್‌ 19ರಂದು ಅಂತರಾಷ್ಟ್ರೀಯ ದಿನ ಆಚರಿಸಲಾಗುತ್ತಿದೆ.

ಹಾವು ಕಡಿತ ಜಾಗತಿಕ ಸಮಸ್ಯೆ. ಜಗತ್ತಿನ ಎಲ್ಲಾ ದೇಶಗಳಲ್ಲೂ ಬಗೆಬಗೆಯ ಹಾವುಗಳಿವೆ. ಹಾವುಗಳಲ್ಲಿದ್ದಲ್ಲಿ ಕಡಿತವೂ ಸಾಮಾನ್ಯವೇ. ಆದರೆ ಇಡೀ ವಿಶ್ವದಲ್ಲಿ ಹಾವು ಕಡಿತದ ರಾಜಧಾನಿ ಎಂದು ಕರೆಯುವುದು ಭಾರತವನ್ನೇ. ಏಕೆಂದರೆ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹಾವುಗಳ ಸಂಖ್ಯೆ ಅಧಿಕ. ಇದರೊಟ್ಟಿಗೆ ಜಾಗೃತಿ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಹಾವು ಕಡಿತದಿಂದ ಮೃತಪಡುವವರ ಸಂಖ್ಯೆಯೂ ಏರಿಕೆಯಾಗಿದೆ. ಹಾವಿನ ಕಡಿತದಿಂದ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಕಾರಣದಿಂದಲೇ ಆರು ವರ್ಷದಿಂದ ಅಂತರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನವನ್ನಾಗಿ ಸೆಪ್ಟಂಬರ್‌ 19ರಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ಹಾವಿನ ಕಡಿತದ ಕುರಿತಾಗಿಯೇ ಜಾಗೃತಿ ಮೂಡಿಸಲಾಗುತ್ತಿದೆ.

ಹಾವು ಕಡಿತಕ್ಕೆ ಒಳಗಾದವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲು ಮೋಟಾರ್‌ಸೈಕಲ್‌ಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಇರಿಸುವುದು ಮತ್ತು ಅಪಾಯದ ಆಡಳಿತ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮುಂತಾದ ಆಯ್ಕೆಗಳನ್ನು ತಜ್ಞರು ಪರಿಶೀಲಿಸುತ್ತಾರೆ, ಇದರಿಂದಾಗಿ ಈ ಮಧ್ಯಸ್ಥಿಕೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಬಹುದು ಮತ್ತು ತಪ್ಪಿಸಬಹುದಾದ ಹಾವು ಕಡಿತದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳಿಗೆ ನೀಡಿರುವ ಸೂಚನೆ.

ಆದರೂ ಭಾರತದಲ್ಲಿ ಇಂತಹ ವ್ಯವಸ್ಥೆಯನ್ನು ಅಲ್ಲಲ್ಲಿ ಕಲ್ಪಿಸಲಾಗುತ್ತಿದೆ. ಆದರೆ ಹಾವು ಕಡಿತದಿಂದ ಆಗುವ ಪರಿಣಾಮ ತಡೆಯಲು ಔಷಧಿ ಕೊರತೆ ಅಲ್ಲಲ್ಲಿ ಕಾಡುತ್ತಲೇ ಇದೆ. ಆಂಟಿ ವೆನಮ್‌ ಎಂದು ಕರೆಯುವ ಈ ಔಷಧದಿಂದ ಹಾವಿನ ವಿಷ ರಕ್ತಕ್ಕೆ ಏರದಂತೆ ತಡೆಯಬಹುದು.

ಹಾವಿನಿಂದ ಸಾವು ಎಷ್ಟು?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹಾವು ಕಡಿತದಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಸುಮಾರು 1. 40 ಲಕ್ಷ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಭಾರತದಲ್ಲೇ ಪ್ರತಿ ವರ್ಷ 50,000 ಕ್ಕೂ ಹೆಚ್ಚು ಜನರು ಹಾವು ಕಡಿತದಿಂದ ಸಾಯುತ್ತಿದ್ದಾರೆ, ಭಾರತವು ಹಾವು ಕಡಿತದಿಂದ ಸಾವಿನ ಜಾಗತಿಕ ರಾಜಧಾನಿ ಎಂದೇ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.

ಈ ಕಾರಣದಿಂದಲೇ . 2018ರಲ್ಲಿ ಮೊದಲ ಅಂತಾರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನವನ್ನು ಆಚರಿಸಲಾಯಿತು.ಹಾವು ಕಡಿತದ ಬಗ್ಗೆ ಜಾಗೃತಿ ಮೂಡಿಸಲು ಹಲವು ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ಸಂಘ ಸಂಸ್ಥೆಗಳೂ ಚಟುವಟಿಕೆ ರೂಪಿಸುತ್ತವೆ.

ಯಾವ ಹಾವು ಅಪಾಯಕಾರಿ

ಭಾರತದಲ್ಲಿ 300 ವಿಧದ ಹಾವುಗಳಿದ್ದು, ಅವುಗಳೆಲ್ಲವೂ ಅಪಾಯಕಾರಿಯಲ್ಲ ಎನ್ನಲಾಗಿದೆ. ದೇಶದಲ್ಲಿ ಹಾವು ಕಡಿತದಿಂದ ಮೃತಪಡುವವರಲ್ಲಿ ಶೇ90 ಗೂ ಅಧಿಕ ಜನರು, ನಮ್ಮಲ್ಲಿನ ಕೇವಲ 4 ಜಾತಿಯ ಹಾವುಗಳ ಕಡಿತದಿಂದ ಮಾತ್ರ ಸಾವನ್ನಪ್ಪುತ್ತಾರೆ. ಹೀಗಾಗಿ ಆ ನಾಲ್ಕು ವಿಷಕಾರಿ ಹಾವುಗಳನ್ನು ಭಾರತದ ದೊಡ್ಡ ವಿಷಕಾರಿ ಹಾವುಗಳು ಎಂದು ವಿಭಾಗಿಸಲಾಗಿದೆ.

ನಾಗರಹಾವು, ಕೊಳಕು ಮಂಡಲ, ಕಟ್ಟುಹಾವು, ಉರಿ ಮಂಡಲ ಹೆಚ್ಚು ಅಪಾಯಕಾರಿ ಹಾವುಗಳು. ಈ ಹಾವುಗಳು ಗ್ರಾಮೀಣ/ನಗರ ಪ್ರದೇಶದ ಜನವಸತಿ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ ಹಾಗೂ ಇವುಗಳ ಕಡಿತದಿಂದಲೇ ಗರಿಷ್ಠ ಸಂಖ್ಯೆಯ ಜನ ಸಾವನಪ್ಪುತ್ತಿದ್ದಾರೆ. ಆದ ಕಾರಣ ನಾವು ಈ ನಾಲ್ಕು ಹಾವುಗಳ ಚಲನ ವಲನ, ಆಹಾರ ಪದ್ದತಿ ಇತ್ಯಾದಿ ವಿಷಯಗಳ ಬಗ್ಗೆ, ಮತ್ತೆ ಅವುಗಳ ಕಡಿತದಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿತರೆ ಹಾವುಗಳ ಕಡಿತದಿಂದ ಸುಲಭವಾಗಿ ಪಾರಾಗಬಹುದು ಎನ್ನುವುದು ಪರಿಸರ ಪರಿವಾರ ಬಳಗ ಸಲಹೆ.

ಮುನ್ನೆಚ್ಚರಿಕೆ ಕ್ರಮಗಳು ಹೀಗಿರಲಿದೆ

ರಾತ್ರಿ ವೇಳೆ ಜಮೀನು ಅಥವಾ ಮೈದಾನ ಪ್ರದೇಶಕ್ಕೆ ಹೋದಾಗ ಅಡ್ಡಾಯವಾಗಿ ಚಾರ್ಚ್ ಬಳಸುವುದು. ಸಾಧ್ಯವಾದರೇ ಶೂಗಳನ್ನು ಬಳಸುವುದು.

  • ಕಳೆ, ಹುಲ್ಲುಗಾವಲು, ಅರಣ್ಯ ಪ್ರದೇಶ, ಜಮೀನಿನಲ್ಲಿ ಕೆಲಸ ಮಾಡುವಾಗ ಗಮ್ ಬೂಟ್ ಬಳಸುವುದು.
  • ರಾತ್ರಿ ವೇಳೆ ಜಮೀನಿನ ಕಾವಲು ಕಾಯುವ ಸಂದರ್ಭದಲ್ಲಿ ಅಥವಾ ಇನ್ನವುದೆ ಉದ್ದೇಶದಿಂದ ಹೊರಗಿನ ಮೈದಾನದಲ್ಲಿ ಮಲಗಿದರೆ ಸೊಳ್ಳೆಪರದೆಗಳನ್ನು ಕಟ್ಟಿಕೊಳ್ಳುವುದು. ಇಲ್ಲವಾದರೆ ಮಚಾನ್/ ಅಟ್ಟಣೆಗಳನ್ನು ಬಳಸುವುದು.
  • ಮನೆಯಲ್ಲಿ, ಮನೆಯ ಸುತ್ತಮುತ್ತ ಇಲಿಗಳು ಇರದಂತೆ ನೋಡಿಕೊಳ್ಳುವುದು; ಸದಾ ಸ್ವಚ್ಛತೆ ಕಾಪಾಡಿಕೊಳ್ಳುವುದು.
  • ಹಾವು ಕಚ್ಚಿದಾಗ ಮಂತ್ರ ತಂತ್ರದ ಮೊರೆ ಹೋಗದೆ, ಹತ್ತಿರದ ಆಸ್ವತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು.

mysore-dasara_Entry_Point