Karnataka by election results 2024: ಕರ್ನಾಟಕದಲ್ಲಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ; ಬಿಜೆಪಿ, ಜೆಡಿಎಸ್‌ಗೆ ಹಿನ್ನಡೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka By Election Results 2024: ಕರ್ನಾಟಕದಲ್ಲಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ; ಬಿಜೆಪಿ, ಜೆಡಿಎಸ್‌ಗೆ ಹಿನ್ನಡೆ

Karnataka by election results 2024: ಕರ್ನಾಟಕದಲ್ಲಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ; ಬಿಜೆಪಿ, ಜೆಡಿಎಸ್‌ಗೆ ಹಿನ್ನಡೆ

Karnataka by election results 2024: ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಕಾಂಗ್ರೆಸ್‌ ಮೂರೂ ಕ್ಷೇತ್ರಗಳಲ್ಲೂ ಭಾರೀ ಮುನ್ನಡೆ ಪಡೆದಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುನ್ನಡೆ ಪಡೆದಿದ್ದು, ಯಾಸಿರ್‌ ಪಠಾಣ್‌, ಸಿ.ಪಿ.ಯೋಗೇಶ್ವರ್‌, ಅನ್ನಪೂರ್ಣ ಗೆಲುವಿನ ಹಾದಿಯಲ್ಲಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುನ್ನಡೆ ಪಡೆದಿದ್ದು, ಯಾಸಿರ್‌ ಪಠಾಣ್‌, ಸಿ.ಪಿ.ಯೋಗೇಶ್ವರ್‌, ಅನ್ನಪೂರ್ಣ ಗೆಲುವಿನ ಹಾದಿಯಲ್ಲಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಇದರ ನಡುವೆ ಆರಂಭದಲ್ಲಿ ಮೂರೂ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಈಗ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್‌ ಮೂರೂ ಕಡೆ ಭಾರೀ ಮುನ್ನಡೆ ಸಾಧಿಸಿದೆ. ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಕವಾಗಿ ಬಿಜೆಪಿ ಜೆಡಿಎಸ್‌ ಅಭ್ಯರ್ಥಿಗಳು ಅಲ್ಪ ಮುನ್ನಡೆ ಪಡೆದಿದ್ದರೂ ಮುಂದಿನ ಹಂತಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಹಿಂದಿಕ್ಕಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ಕೆಲವು ಸುತ್ತುಗಳ ಮತ ಎಣಿಕೆ ಬಾಕಿಯಿದ್ದು, ಮಧ್ಯಾಹ್ನದ ಹೊತ್ತಿಗೆ ಅಂತಿಮ ಫಲಿತಾಂಶ ಹೊರ ಬರಬಹುದು. ಇದರ ನಡುವೆ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದ್ದರಿಂದ ಪಕ್ಷದ ಕಾರ್ಯಕರ್ತರೂ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಚನ್ನಪಟ್ಟಣದಲ್ಲಂತೂ ಡಿಕೆಶಿವಕುಮಾರ್‌ ಹಾಗೂ ಸಿಪಿ ಯೋಗೇಶ್ವರ್‌ ಪರವಾಗಿ ಸಂಭ್ರಮ ಜೋರಾಗಿದೆ.

ಚನ್ನಪಟ್ಟಣದಲ್ಲಿ ತುರುಸಿನ ಸ್ಪರ್ಧೆ

ಚನ್ನಪಟ್ಟಣದಲ್ಲಿ ಹತ್ತನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. 23,210 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ 61,265 ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 41,472 ಮತ ಗಳಿಸಿದ್ದಾರೆ. ನಿಖಿಲ್ ಸತತ ಮೂರನೇ ಬಾರಿಗೆ ಸೋಲಿನ ಹಾದಿಯಲ್ಲಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಯೋಗೇಶ್ವರ್ ಮೆರವಣಿಗೆಗೆ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ನ ಯಾಸಿರ್ ಪಠಾಣ್12,251 ಮತಗಳ ಮುನ್ನಡೆ ದೊರಕಿದ್ದು, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಹಿನ್ನೆಡೆಯಾಗಿದೆ.

ಸಂಡೂರಲ್ಲಿ ಹೇಗಿದೆ

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 8238 ಮತಗಳಿಂದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದು ಬಹುತೇಕ ಗೆಲುವು ನಿಕ್ಕಿಯಾಗಿದೆ.

ಸಂಡೂರಿನಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಗೆಲುವಿನ ಹಂತದಲ್ಲಿದ್ದಾರೆ. ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಅವರು ನಿಖಿಲ್‌ ಕುಮಾರಸ್ವಾಮಿ ಅವರನ್ನು ಹಿಂದಿಕ್ಕಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿಯ ಭರತ್‌ ಬೊಮ್ಮಾಯಿ ಅವರನ್ನು ಕಾಂಗ್ರೆಸ್‌ ಯಾಸಿರ್‌ ಪಠಾಣ್‌ ಹಿಂದೆ ಹಾಕಿ ಮುಂದೆ ಸಾಗಿದರು.

ಸಂಡೂರಿನಲ್ಲಿ ಮತ ಎಣಿಕೆ ಮುಗಿದು ಫಲಿತಾಂಶ ಘೋಷಣೆ ಬಾಕಿಯಿದ್ದರೆ, ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್‌ ಅವರೂ ಭಾರೀ ಮುನ್ನಡೆ ಕಾಯ್ದುಕೊಂಡಿದು ಗೆಲುವಿನ ಹಾದಿಯಲ್ಲಿದ್ದರು. ಅದೇ ರೀತಿ ಶಿಗ್ಗಾಂವಿಯಲ್ಲೂ ಕೆಲವು ಸುತ್ತುಗಳ ಮತ ಎಣಿಕೆ ಬಾಕಿಯಿದ್ದು, ಅಂತಿಮ ಫಲಿತಾಂಶ ಹೊರ ಬರಬೇಕಿದೆ.

ಎನ್‌ಡಿಎಗೆ ಹಿನ್ನಡೆ

ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಮೂರು ಪಕ್ಷಗಳ ಕ್ಷೇತ್ರಗಳಾಗಿದ್ದವು. ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ, ಸಂಡೂರಿನಲ್ಲಿ ಕಾಂಗ್ರೆಸ್‌ನ ತುಕಾರಾಂ ಇದ್ದರು. ಆದರೆ ಕಾಂಗ್ರೆಸ್‌ ಒಂದು ಸ್ಥಾನದ ಜತೆಗೆ ಇನ್ನೂ ಎರಡು ಸ್ಥಾನಗಳನ್ನು ಪಡೆಯುವ ಹಂತಕ್ಕೆ ಬಂದಿದೆ. ಎರಡೂ ಕ್ಷೇತ್ರದಲ್ಲಿ ಎನ್‌ಡಿಎಗೆ ಭಾರೀ ಹಿನ್ನಡೆ ಆಗುವ ಸನ್ನಿವೇಶ ಇದೆ.

Whats_app_banner