Karnataka Pre Poll Survey: 2018ರ ಚುನಾವಣೆಯ ಸಮೀಕ್ಷೆಗಳು ಏನು ಹೇಳಿದ್ದವು? ನಂತರ ಏನಾಯಿತು? ಇಲ್ಲಿದೆ ಸಂಪೂರ್ಣ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Pre Poll Survey: 2018ರ ಚುನಾವಣೆಯ ಸಮೀಕ್ಷೆಗಳು ಏನು ಹೇಳಿದ್ದವು? ನಂತರ ಏನಾಯಿತು? ಇಲ್ಲಿದೆ ಸಂಪೂರ್ಣ ವಿವರ

Karnataka Pre Poll Survey: 2018ರ ಚುನಾವಣೆಯ ಸಮೀಕ್ಷೆಗಳು ಏನು ಹೇಳಿದ್ದವು? ನಂತರ ಏನಾಯಿತು? ಇಲ್ಲಿದೆ ಸಂಪೂರ್ಣ ವಿವರ

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ (Karnataka Assembly Elections) ಅಬ್ಬರ ಜೋರಾಗಿದೆ. ಅದರಲ್ಲೂ ಚುನಾವಣಾ ಪೂರ್ವ ಸಮೀಕ್ಷೆಗಳು ಒಂದೊಂದು ಪಕ್ಷಕ್ಕೆ ಮೆಜಾರಿಟಿ ಕೊಡುತ್ತಿವೆ. ಆದರೆ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮೀಕ್ಷೆಗಳು ಏನು ಹೇಳಿದ್ದವು? ಫಲಿತಾಂಶ ಬಂದ ಬಳಿಕ ಏನಾಯಿತು? ಇಲ್ಲಿದೆ ಸಂಪೂರ್ಣ ವಿವರ.

2018ರಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು
2018ರಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು (Twitter)

ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ (Karnataka Assembly Elections) ಕಾವು ಜೋರಾಗಿದೆ. ಮತದಾನಕ್ಕೆ ಬೆರಳಣಿಕೆ ದಿನಗಳು ಮಾತ್ರ ಬಾಕಿ ಉಳಿದಿವೆ. ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ (BJP), ವಿರೋಧ ಪಕ್ಷ ಕಾಂಗ್ರೆಸ್ (Congress)​ ಪೂರ್ಣ ಬಹುಮತದೊಂದಿಗೆ ಮತ್ತೆ ಗದ್ದುಗೆಗೇರಲು ರಾಷ್ಟ್ರೀಯ ನಾಯಕರನ್ನೇ ಚುನಾವಣಾ ಅಖಾಡಕ್ಕಿಳಿಸಿ ರಂಗು ಹೆಚ್ಚಿಸಿವೆ. ಮತ್ತೊಂದೆಡೆ 1994ರ ಬಳಿಕ ಮತ್ತೊಮ್ಮೆ, ಸ್ಪಷ್ಟ ಬಹುಪತ ಪಡೆದು ಸರ್ಕಾರ ರಚಿಸುವ ಕನಸಿನೊಂದಿಗೆ ಜೆಡಿಎಸ್ (JDS)​ ಅಬ್ಬರದ ಪ್ರಚಾರದಲ್ಲಿ ತೊಡಗಿದೆ.

ಇದರ ಬೆನ್ನಲ್ಲೇ ಚುನಾವಣಾ ಪೂರ್ವ ಸಮೀಕ್ಷೆಗಳು (Election Pre Poll Survey) ಹೊರ ಬೀಳುತ್ತಿವೆ. ಝೀ ನ್ಯೂಸ್‌-ಮ್ಯಾಟ್ರಿಜ್‌, ಸಿ-ವೋಟರ್​​ ಸೇರಿ ಪ್ರಮುಖ ಸಂಸ್ಥೆಗಳು ಸಮೀಕ್ಷೆಗಳನ್ನು ಪ್ರಕಟಿಸಿವೆ. ಒಂದೊಂದು ಸಂಸ್ಥೆ, ಒಂದೊಂದು ಪಕ್ಷಕ್ಕೆ ಮೆಜಾರಿಟಿ ಕೊಡುತ್ತಿವೆ. ಇದೇ ಸಂಸ್ಥೆಗಳು 2018ರ ವಿಧಾನಸಭಾ ಚುನಾವಣೆಯಲ್ಲೂ ಸಮೀಕ್ಷೆಗಳನ್ನು ಪ್ರಕಟಿಸಿದ್ದವು. ಹಾಗಾದರೆ ಅಂದಿನ ಅಂಕಿ ಅಂಶಗಳು ಏನು ಹೇಳಿದ್ದವು? ಯಾವ ಪಕ್ಷವು ಅಧಿಕ ಸ್ಥಾನ ಪಡೆದಿತ್ತು? ಫಲಿತಾಂಶದ ನಂತರ ಆಗಿದ್ದೇನು ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ.

2018ರ ಚುನಾವಣಾ ಸಮೀಕ್ಷೆಗಳು ಏನು ಹೇಳಿದ್ದವು?

2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರವಾಗುತ್ತವೆ ಎಂದು ಪ್ರಕಟವಾಗಿದ್ದ ಕೆಲವು ಸಮೀಕ್ಷಾ ವರದಿಗಳ ಭವಿಷ್ಯ ನಿಜವಾಗಿತ್ತು. ಇನ್ನೂ ಕೆಲವು ಸಮೀಕ್ಷೆಗಳು ತಲೆಕೆಳಗಾಗಿದ್ದವು. ಅಂತಿಮವಾಗಿ ಕಾಂಗ್ರೆಸ್​​-ಜೆಡಿಎಸ್​​ ಜೊತೆಗೂಡಿ ಮೈತ್ರಿ ಸರ್ಕಾರ ರಚನೆಯಾಯಿತು.

ರಿಪಬ್ಲಿಕ್ ಟಿವಿ ಸಮೀಕ್ಷೆ

ಬಿಜೆಪಿ 95 ರಿಂದ 114 ಸ್ಥಾನ, ಕಾಂಗ್ರೆಸ್​​ 73 ರಿಂದ 82 ಕ್ಷೇತ್ರಗಳಲ್ಲಿ ಗೆಲುವು, ಜೆಡಿಎಸ್​ 32 ರಿಂದ 43 ಸೀಟ್​​ ಮತ್ತು ಇತತರು 2 ರಿಂದ 3 ಗೆಲ್ಲಬಹುದು ಎಂದು ಹೇಳಿತ್ತು. ಇದು ಶೇಕಡಾ 90ರಷ್ಟು ನಿಜವಾಗಿತ್ತು.

ಟುಡೇಸ್​ ಚಾಣಕ್ಯ ಸಮೀಕ್ಷೆ

ಬಿಜೆಪಿ 120 ± 11 (11 ಹೆಚ್ಚಾಗಬಹುದು ಅಥವಾ 11 ಕಡಿಮೆಯಾಗಬಹುದು), ಕಾಂಗ್ರೆಸ್​​ 73 ± 11 (11 ಹೆಚ್ಚಾಗಬಹುದು ಅಥವಾ 11 ಕಡಿಮೆಯಾಗಬಹುದು), ಜೆಡಿಎಸ್​ 26 ± 7 (7 ಹೆಚ್ಚಾಗಬಹುದು ಅಥವಾ 7 ಕಡಿಮೆಯಾಗಬಹುದು) ಇತರರು ಮೂವರು ಗೆಲ್ಲಬಹುದು ಎಂದು ಹೇಳಿತ್ತು. ಅದರಂತೆ ಇದರ ಭವಿಷ್ಯವೂ ಶೇ 90ರಷ್ಟು ಸತ್ಯವಾಗಿತ್ತು.

ಇಂಡಿಯಾ ಟುಡೇ ಸಮೀಕ್ಷೆ

ಇಂಡಿಯಾ ಟುಡೇ ಸಮೀಕ್ಷೆ ಸಂಪೂರ್ಣ ತಲೆಕೆಳಗಾಗಿತ್ತು. ಬಿಜೆಪಿ 79 ರಿಂದ 92 ಸ್ಥಾನ, ಕಾಂಗ್ರೆಸ್​​ 106 ರಿಂದ 118 ಸ್ಥಾನ ಪಡೆದು ಅಧಿಕಾರಕ್ಕೆ ಬರುತ್ತೆ ಎಂದು ಹೇಳಿತ್ತು. ಹಾಗೆಯೇ ಜೆಡಿಎಸ್​ 22 ರಿಂದ 30 ಸೀಟ್​ ಗೆಲ್ಲುತ್ತೆ ಎಂದು ಪ್ರಕಟಿಸಿತ್ತು.

ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ

ಟೈಮ್ಸ್​ನೌ ಸಮೀಕ್ಷಾ ವರದಿ ಕೂಡ ಉಲ್ಟಾ ಆಗಿತ್ತು. ಬಿಜೆಪಿ 80-93, ಕಾಂಗ್ರೆಸ್​​ 90-103, ಜೆಡಿಎಸ್​ 31-39 ಸ್ಥಾನ ಗೆಲ್ಲುತ್ತದೆ ಎಂದು ಹೇಳಿತ್ತು.

2018 ಚುನಾವಣಾ ಸಮೀಕ್ಷೆಗಳು ಹೀಗಿದ್ದವು

ಚುನಾವಣಾ ಪೂರ್ವ ಸಮೀಕ್ಷೆಬಿಜೆಪಿಕಾಂಗ್ರೆಸ್​ಜೆಡಿಎಸ್​​ಇತರರು
ರಿಪಬ್ಲಿಕ್​ ಟಿವಿ95-11473-8232-4302-03
ಟುಡೇಸ್​ ಚಾಣಕ್ಯ120 ± 1173 ± 1126 ± 73 ± 3
ಇಂಡಿಯಾ ಟುಡೇ79-92106-11822-30-
ಟೈಮ್ಸ್​ನೌ- ವಿಎಂಆರ್​​80-9390-10331-39-
ನ್ಯೂಸ್​​ ಎಕ್ಸ್​​-ಸಿಎನ್​ಎಕ್ಸ್​102-11072-7835-3903-04
ಎಬಿಪಿ ಸಿ-ವೋಟರ್​97-10987-9921-301-8
ಇಂಡಿಯಾ ಟಿವಿ87973503

ನ್ಯೂಸ್​​ ಎಕ್ಸ್​-ಸಿಎನ್​ಎಕ್ಸ್

2018ರಲ್ಲಿ ನ್ಯೂಸ್​​ ಎಕ್ಸ್​-ಸಿಎನ್​ಎಕ್ಸ್​ ಸಮೀಕ್ಷೆ ಪಕ್ಕಾ ಭವಿಷ್ಯ ನುಡಿದಿತ್ತು. ಬಿಜೆಪಿ 102 ರಿಂದ 110 ಸ್ಥಾನ, ಕಾಂಗ್ರೆಸ್​ 72 ರಿಂದ 78 ಸ್ಥಾನ, ಜೆಡಿಎಸ್​​ 38 ರಿಂದ 39 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಇತರರು 3 ರಿಂದ 4 ಸ್ಥಾನಗಳನ್ನು ಗೆದುಕೊಳ್ಳಲಿದ್ದಾರೆ ಎಂದು ಹೇಳಿತ್ತು.

ಸಿ-ವೋಟರ್​ ಸಮೀಕ್ಷೆ

2018ರಲ್ಲಿ ಸಿ ವೋಟರ್​ ಸಮೀಕ್ಷೆಯ ಭವಿಷ್ಯ ಹುಸಿಯಾಗಿತ್ತು. ಅಂದು ಕಾಂಗ್ರೆಸ್​ ಪಕ್ಷವು ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಕಾಂಗ್ರೆಸ್‌ 102 ಸ್ಥಾನ, ಬಿಜೆಪಿ 96 ಕ್ಷೇತ್ರಗಳಲ್ಲಿ ಗೆಲುವು, ಜೆಡಿಎಸ್​​ 25 ಕ್ಷೇತ್ರಗಳಲ್ಲಿ ಜಯದ ನಗೆ ಬೀರಲಿದೆ ಎಂದು ತಿಳಿಸಿತ್ತು.

ಎಬಿಪಿ-ಸಿ ವೋಟರ್ ಸಮೀಕ್ಷೆ

ಎಬಿಪಿ-ಸಿ ವೋಟರ್​ ಸಮೀಕ್ಷೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಬಂದಿದ್ದವು. ಅದರಂತೆ ಫಲಿತಾಂಶದ ವೇಳೆಯೂ ಬಿಜೆಪಿಯೇ ಅಧಿಕ ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 97 ರಿಂದ 109 ಸ್ಥಾನ, ಕಾಂಗ್ರೆಸ್​ 87 ರಿಂದ 99 ಸ್ಥಾನ, ಜೆಡಿಎಸ್​​​ 21 ರಿಂದ 30 ಕ್ಷೇತ್ರಗಳಲ್ಲಿ ಜಯಿಸಲಿದೆ. ಇತರರು 1 ರಿಂದ 8 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿತ್ತು.

2018ರ ಚುನಾವಣಾ ಫಲಿತಾಂಶ ಏನಾಯಿತು?

2018ರಲ್ಲಿ ಬಹುತೇಕ ಚುನಾವಣಾ ಸಮೀಕ್ಷೆಗಳು ಬಹುತೇಕ ನಿಜವಾಗಿದ್ದವು. ಬಿಜೆಪಿಯೇ ಅಧಿಕ ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಜೊತೆಗೆ ಕೆಲವು ಸಮೀಕ್ಷೆಗಳು ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು.

ಪಕ್ಷಬಿಜೆಪಿಕಾಂಗ್ರೆಸ್​ಜೆಡಿಎಸ್​ಇತರೆ
ಗೆಲುವು104803703

ಆದರೆ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ 104 ಸ್ಥಾನ, ಕಾಂಗ್ರೆಸ್‌ 80 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಜೆಡಿಎಸ್‌ 37 ಕ್ಷೇತ್ರಗಳಲ್ಲಿ ಗೆದ್ದು ಸಮೀಕ್ಷೆಯ ಭವಿಷ್ಯವನ್ನೇ ತಲೆಕೆಳಗೆ ಮಾಡಿತ್ತು. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆದರೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

Whats_app_banner