Gruhalakshmi: ನಿಮಗಿನ್ನೂ ಗೃಹಲಕ್ಷ್ಮಿ 2000 ರೂ ಬಂದಿಲ್ವ, 26 ಲಕ್ಷ ಗೃಹಿಣಿಯರಿಗೆ ತಲುಪದ ಗೃಹಲಕ್ಷ್ಮಿ, ಹಣ ಬಿಡುಗಡೆ ತಡೆ ಹಿಡಿದ ಇಲಾಖೆ
ಕನ್ನಡ ಸುದ್ದಿ  /  ಕರ್ನಾಟಕ  /  Gruhalakshmi: ನಿಮಗಿನ್ನೂ ಗೃಹಲಕ್ಷ್ಮಿ 2000 ರೂ ಬಂದಿಲ್ವ, 26 ಲಕ್ಷ ಗೃಹಿಣಿಯರಿಗೆ ತಲುಪದ ಗೃಹಲಕ್ಷ್ಮಿ, ಹಣ ಬಿಡುಗಡೆ ತಡೆ ಹಿಡಿದ ಇಲಾಖೆ

Gruhalakshmi: ನಿಮಗಿನ್ನೂ ಗೃಹಲಕ್ಷ್ಮಿ 2000 ರೂ ಬಂದಿಲ್ವ, 26 ಲಕ್ಷ ಗೃಹಿಣಿಯರಿಗೆ ತಲುಪದ ಗೃಹಲಕ್ಷ್ಮಿ, ಹಣ ಬಿಡುಗಡೆ ತಡೆ ಹಿಡಿದ ಇಲಾಖೆ

Karnataka Gruhalakshmi Scheme status: ಕರ್ನಾಟಕ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಎರಡನೇಕಂತು ತಲುಪಿಲ್ಲ ಎಂದು ರಾಜ್ಯದ ಬಹುತೇಕ ಜಿಲ್ಲೆಗಳ ಗೃಹಿಣಿಯರು ಹೇಳಿಕೊಂಡಿದ್ದಾರೆ. ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಇಲಾಖೆ ಹಣ ಬಿಡುಗಡೆ ತಡೆಹಿಡಿದಿದೆ. (ವರದಿ: ಎಚ್‌. ಮಾರುತಿ)

26 ಲಕ್ಷ ಗೃಹಿಣಿಯರಿಗೆ ತಲುಪದ ಗೃಹಲಕ್ಷ್ಮಿ, ಹಣ ಬಿಡುಗಡೆ ತಡೆ ಹಿಡಿದ ಇಲಾಖೆ
26 ಲಕ್ಷ ಗೃಹಿಣಿಯರಿಗೆ ತಲುಪದ ಗೃಹಲಕ್ಷ್ಮಿ, ಹಣ ಬಿಡುಗಡೆ ತಡೆ ಹಿಡಿದ ಇಲಾಖೆ

ಬೆಂಗಳೂರು: ಗೃಹಿಣಿಯರಿಗೆ ಮಾಸಿಕ 2000 ರೂ.ಗಳನ್ನು ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಶೇ.ನೂರರಷ್ಟು ಯಶಸ್ವಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಐದು ಗ್ಯಾರಂಟಿಗಳಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ಧನಸಹಾಯ ನೀಡುವ ಈ ಗೃಹಲಕ್ಷ್ಮಿ ಯೋಜನೆ ಈ ಐದು ಗ್ಯಾರಂಟಿಗಳಲ್ಲಿ ಇದೂ ಒಂದಾಗಿದೆ. ಯೋಜನೆ ಆರಂಭವಾದ ಸೆಪ್ಟಂಬರ್ ತಿಂಗಳಿನಿಂದ ಇದುವರೆಗೂ ನೊಂದಣಿ ಮಾಡಿಕೊಂಡಿರುವ 1.2 ಕೋಟಿ ಗೃಹಿಣಿಯರ ಪೈಕಿ 26 ಲಕ್ಷ ಯಜಮಾನಿಯರಿಗೆ ಹಣ ತಲುಪಿಲ್ಲ. ಆಗಸ್ಟ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಈ ಯೋಜನೆಗೆ ಚಾಲನೆ ನೀಡಿದ್ದರು. ಜಾರಿಗೊಂಡ ನಂತರ ಶೇ.88ರಷ್ಟು ಗೃಹಿಣಿಯರು ಮೊದಲ ತಿಂಗಳ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ನಂತರದ ಕಂತು ತಲುಪಿಲ್ಲ ಎಂದು ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲ್ಲೂಕುಗಳ ಗೃಹಿಣಿಯರು ಹೇಳಿಕೊಂಡಿದ್ದಾರೆ.

ಕಾರಣಗಳೇನು?

ಬ್ಯಾಂಕ್‌ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳದಿರುವುದು, ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದು ಪರಿಶೀಲನೆ ಮಾಡದಿರುವುದು ಆಧಾರ್‌ ಜೋಡಣೆ ಆಗಿರುವುದೊಂದು ಖಾತೆ, ನೋಂದಣಿ ವೇಳೆ ನೀಡಿರುವುದು ಬೇರೊಂದು ಖಾತೆ, ಬ್ಯಾಂಕ್‌ ಖಾತೆಗೆ ಇ–ಕೆವೈಸಿ ಮಾಡಿಸದಿರುವುದು, ಪಡಿತರ ಚೀಟಿಯಲ್ಲಿ ಯಜಮಾನಿಯರ ಹೆಸರು ಎಲ್ಲರಿಗಿಂತ ಮೊದಲು ಇಲ್ಲದಿರುವುದು, ನೋಂದಣಿ ವೇಳೆ ನೀಡಿದ ಹೆಸರಿಗೂ ಬ್ಯಾಂಕ್‌ ಖಾತೆಯಲ್ಲಿರುವ ಹೆಸರಿಗೂ ಹೊಂದಾಣಿಕೆ ಆಗದಿರುವುದು-ಈ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ 2000 ರೂ. ದಿಂದ ಯಜಮಾನಿಯರು ವಂಚಿತರಾಗಿದ್ದಾರೆ.

ಇದುವರೆಗೂ ಶೇ.88ರಷ್ಟು ಗೃಹಿಣಿಯರಿಗೆ ಈ ಯೋಜನೆಯ ಲಾಭ ಲಭ್ಯವಾಗುತ್ತಿದ್ದು ಇನ್ನೂ ಶೇ.21ರಷ್ಟು ಮಂದಿಗೆ ದೊರಕಿಲ್ಲ. ಆದರೆ ಅಧಿಕಾರಿಗಳು ಹಣ ತಲುಪಲು ವಿಳಂಬವಾಗಿರುವುದಕ್ಕೆ ನಾನಾ ಸಬೂಬುಗಳನ್ನು ನೀಡುತ್ತಿದ್ದಾರೆ. ಆಧಾರ್ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿರುವ ಹೆಸರು ಹೊಂದಾಣಿಕೆ ಆಗುತ್ತಿಲ್ಲ. ಆಧಾರ್ ಲಿಂಕ್ ವಿಫಲವಾಗಿರುತ್ತದೆ ಇಲ್ಲವೇ ತಪ್ಪು ವಿಳಾಸ ನೀಡಿರುತ್ತಾರೆ. ಆದ್ದರಿಂದ ಹಣ ಬಿಡುಗಡೆ ವಿಳಂಬವಾಗಿರುತ್ತದೆ ಎಂದು ಹೇಳುತ್ತಿದ್ದಾರೆ.

ಈ ಯೋಜನೆ ಯಜಮಾನಿಯರಿಗೆ ಅಪಾರ ಪ್ರಮಾಣದಲ್ಲಿ ನೆರವಿಗೆ ಧಾವಿಸುತ್ತಿರುವುದರಲ್ಲಿ ಸಂದೇಹವಿಲ್ಲ. ಮನೆಗೆ ದಿನಸಿ ತರಲು, ಮಕ್ಕಳ ಶಾಲಾ ಕಾಲೇಜು ಶುಲ್ಕ, ಆಸ್ಪತ್ರೆ ವೆಚ್ಚ ಇತ್ಯಾದಿ ನೆರವಿಗೆ ಬರುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಕೆಲವರಿಗೆ ಮೊದಲ ತಿಂಗಳ ಕಂತು ಪಾವತಿಯಾಗಿದ್ದರೆ ಅನೇಕ ಮಹಿಳೆಯರಿಗೆ ಎರಡು ತಿಂಗಳ ಹಣ ಬ್ಯಾಂಕ್ ಖಾತೆಗೆ ಬಂದಿಲ್ಲ. ಕೆಲವು ಮಹಿಳೆಯರಿಗೆ 15-20 ದಿನಗಳು ತಡವಾಗಿ ತಲುಪಿರುವ ಉದಾಹರಣೆಗಳೂ ಉಂಟು.

ನನಗೆ ಬಂದಿದ್ದರೆ ನಮ್ಮ ನೆರೆ ಹೊರೆಯವರಿಗೆ ಬಂದಿರುವುದಿಲ್ಲ. ಅಥವಾ ಅವರಿಗೆ ಬಂದಿದ್ದರೆ ನನಗೆ ಬಂದಿರುವುದಿಲ್ಲ ಎಂದೂ ಅವರು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಕಡೆ ನಿಮ್ಮ ಹೆಸರು ಎರಡು ಅಥವಾ ಮೂರನೇ ಪಟ್ಟಿಯಲ್ಲಿದ್ದು ತಲುಪಲು ತಡವಾಗಬಹುದು ಎಂದೂ ಅಧಿಕಾರಿಗಳು ಹೇಳುತ್ತಿದ್ದಾರೆ. ಮತ್ತೆ ಕೆಲವು ಜಿಲ್ಲೆಗಳಲ್ಲಿ ಹೆಸರು ಹೊಂದಾಣಿಕೆ ಆಗದಿರುವ ಕಾರಣ ಹಣ ಬಿಡುಗಡೆಯನ್ನು ತಡೆಹಿಡಿಯಲಾಗಿದೆ. ಈ ತಪ್ಪನ್ನು ಸರಿಪಡಿಸಿದ ನಂತರ ಸರಿ ಹೋಗಬಹುದು ಎನ್ನುತ್ತಾರೆ.

ಸಚಿವರ ಆದೇಶ

ಈ ನೂನ್ಯತೆಗಳನ್ನು ಸರಿಪಡಿಸಲು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮನೆ ಮನೆಗೆ ತೆರಳಿ ಸರಿಪಡಿಸುವಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಬಹತೇಕ ಕುಟುಂಬಗಳೂ ತಮ್ಮ ಖರ್ಚು ವೆಚ್ಚಗಳಿಗೆ ಈ ಹಣವನ್ನೇ ನೆಚ್ಚಿಕೊಂಡಿದ್ದಾರೆ. ದೀಪಾವಳಿಯ ಹೊತ್ತಿಗೆ ಬಾಕಿ ಸೇರಿದಂತೆ ಈ ತಿಂಗಳ ಹಣವನ್ನೂ ಬಿಡುಗಡೆ ಮಾಡಿದರೆ ಸಹಾಯವಾಗುತ್ತದೆ ಎಂದು ಗೃಹಿಣಿಯರು ಹೇಳುತ್ತಾರೆ.

ವರದಿ: ಎಚ್‌. ಮಾರುತಿ, ಬೆಂಗಳೂರು

Whats_app_banner