ಉಡುಪಿ ಸೇರಿ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್; ಮುನ್ನೆಚರಿಕೆ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
Karnataka Weather: ರಾಜ್ಯಾದ್ಯಂತ ಮಳೆ ಆಗುತ್ತಿದೆ. ಕೆಲವೆಡೆ ಜಲಪಾತಗಳು, ನದಿ, ಕಾಲುವೆಗಳು ತುಂಬಿ ಹರಿಯುತ್ತಿವೆ. ಇಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದ್ದು ಮುನ್ನೆಚರಿಕೆ ಕ್ರಮವಾಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕರ್ನಾಟಕ ಹವಾಮಾನ ಜುಲೈ 9: ಇಂದು ಬೆಳಗ್ಗೆ 05:50ಕ್ಕೆ ಸೂರ್ಯೋದಯವಾಗಿದ್ದು ಸಂಜೆ 6:50ಕ್ಕೆ ಸೂರ್ಯಾಸ್ತವಾಗಲಿದೆ. 08:47 ಕ್ಕೆ ಚಂದ್ರೋಯವಾಗಲಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನ ವಾತಾವರಣ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಿನ್ನೆ ಕರ್ನಾಟಕದ ಯಾವ ಸ್ಥಳಗಳಲ್ಲಿ ಮಳೆ ಆಯ್ತು? ಇಂದು ಎಲ್ಲೆಲ್ಲಿ ಮಳೆ ಆಗಲಿದೆ? ಹವಾಮಾನ ಇಲಾಖೆ ಎಲ್ಲೆಲ್ಲಿ ಅಲರ್ಟ್ ಘೋಷಿಸಿದೆ? ಇಲ್ಲಿದೆ ವಿವರ.
ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?
ಸೋಮವಾರ ಕರಾವಳಿಯ ಬಹುತೇಕ ಸ್ಥಳಗಳಲ್ಲಿ, ಒಳನಾಡಿನ ಅನೇಕ ಸ್ಥಳಗಳಲ್ಲಿ ಭಾರೀ ಮಳೆ ಆಗಿದೆ. ಉ. ಕನ್ನಡದ ಕದ್ರಾದಲ್ಲಿ 23, ಕುಮಟಾದಲ್ಲಿ 22, ಗೇರ್ಸೊಪ್ಪದಲ್ಲಿ 20 ಶಿರಾಲಿಯಲ್ಲಿ 20 ಸೆಮೀ ಮಳೆ ಆಗಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಆಗಿರುವ ಪ್ರದೇಶ ಎಂದು ಘೋಷಣೆ ಆಗಿದೆ. ಉಳಿದಂತೆ ಮಂಕಿಯಲ್ಲಿ 19, ಉಡುಪಿಯಲ್ಲಿ 18, ಹೊನ್ನಾವರದಲ್ಲಿ 17, ಕುಂದಾಪುರದಲ್ಲಿ 18, ಲಿಂಗನಮಕ್ಕಿಯಲ್ಲಿ 14, ಕೊಲ್ಲೂರಿನಲ್ಲಿ 12, ಉತ್ತರ ಕನ್ನಡದಲ್ಲಿ 12, ಕೋಟ, ಮಂಗಳೂರು ವಿಮಾನ ನಿಲ್ದಾಣ, ಕಾರವಾರ, ಅಂಕೋಲಾ, ಆಗುಂಬೆಯಲ್ಲಿ ತಲಾ 11, ಆಗುಂಬೆಯಲ್ಲಿ 9, ಪಣಂಬೂರಿನಲ್ಲಿ 8, ಗೋಕರ್ಣದಲ್ಲಿ 7, ಸುಳ್ಯದಲ್ಲಿ 7, ಲೋಂಡಾದಲ್ಲಿ 7, ಸಿದ್ದಾಪುರ, ಮಣಿ, ಮೂಲ್ಕಿ, ಪುತ್ತೂರಿನಲ್ಲಿ 6, ಯಲ್ಲಾಪುರ, ಕಾರ್ಕಳ, ಕಮ್ಮರಡಿ, ಚಿಕ್ಕಮಗಳೂರು, ಭಾಗಮಂಡಲದಲ್ಲಿ 5, ತ್ಯಾಗರ್ತಿ, ಮಂಗಳೂರಿನಲ್ಲಿ 4 ಸೆಮೀನಷ್ಟು ಮಳೆ ಆಗಿದೆ.
ಇಂದು ಎಲ್ಲಿ ಮಳೆ ಆಗಲಿದೆ, ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?
ಇಂದು ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ/ಗುಡುಗು ಸಹಿತ ಮಳೆ ಆಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಮುನ್ನೆಚರಿಕೆ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೀದರ್, ಕಲಬುರ್ತಿ, ಚಿಕ್ಕಮಗಳುರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಕೂಡಾ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಕರವಾಳಿ ತೀರದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನ ವಾತಾವರಣ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವಣವಿದ್ದು ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 30-40 ವೇಗದಲ್ಲಿ ಬೀಸಲಿದೆ. ಗರಿಷ್ಠ ತಾಪಮಾನ 27° ಹಾಗೂ ಕನಿಷ್ಠ ತಾಪಮಾನ 21° C ಇರಲಿದೆ. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.
ಇಂದು ಪ್ರಮುಖ ನಗರಗಳ ವಾತಾವರಣ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 28) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.
ಬೆಂಗಳೂರು - 20°ಸೆ.
ಮಂಗಳೂರು- 22°ಸೆ.
ಚಿತ್ರದುರ್ಗ- 21.4°ಸೆ.
ಗದಗ- 21.6°ಸೆ.
ಹೊನ್ನಾವರ- 23.6°ಸೆ.
ಕಲಬುರ್ಗಿ- 23.6 ಸೆ.
ಬೆಳಗಾವಿ- 23°ಸೆ.
ಕಾರವಾರ- 26°ಸೆ.