ಕನ್ನಡ ಸುದ್ದಿ  /  Karnataka  /  Mysuru - Chennai Vande Bharat Express: Vande Bharat On Mysuru-bengaluru-chennai Route Hits Calf, Suffers Dent: Report

Mysuru - Chennai Vande Bharat Express: ತಮಿಳುನಾಡಲ್ಲಿ ವಂದೇ ಭಾರತ್‌ಗೆ ಕರು ಡಿಕ್ಕಿ; ರೈಲಿಗೆ ಹಾನಿ

Mysuru - Chennai Vande Bharat Express: ತಮಿಳುನಾಡಿನ ಅರಕೋಣಂ ಎಂಬಲ್ಲಿ ಗುರುವಾರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸುವಾಗ ಬೀಡಾಡಿ ಕರು ಡಿಕ್ಕಿ ಹೊಡಿದಿದೆ.ಇದು ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸಿದೆ. ಕರು ಮೃತಪಟ್ಟಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ)
ವಂದೇ ಭಾರತ್‌ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ) (HT_PRINT)

ಬೆಂಗಳೂರು: ಮೈಸೂರು- ಬೆಂಗಳೂರು-ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ತಮಿಳುನಾಡಿನ ಅರಕೋಣ ಸಮೀಪ ಸಂಚರಿಸುವಾಗ ಹಾನಿ ಆಗಿದೆ. ಗುರುವಾರ ಪ್ರಯಾಣದ ವೇಳೆ ಕರು ಒಂದು ಡಿಕ್ಕಿ ಹೊಡೆದ ಕಾರಣ ರೈಲಿಗೆ ಹಾನಿ ಆಗಿರುವಂಥದ್ದು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದು ವಾರದ ಹಿಂದಷ್ಟೆ ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ಸೆಮಿ ಹೈ ಸ್ಪೀಡ್‌ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದ್ದರು.

ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, ತಮಿಳುನಾಡಿನ ಅರಕೋಣಂ ಎಂಬಲ್ಲಿ ಗುರುವಾರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸುವಾಗ ಬೀಡಾಡಿ ಕರು ಡಿಕ್ಕಿ ಹೊಡಿದಿದೆ. ಈ ಸೆಮಿ ಹೈ ಸ್ಪೀಡ್‌ ರೈಲು ಮೈಸೂರು ಬಿಟ್ಟರೆ ಬೆಂಗಳೂರಿನ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಲ್ಲಿ ಒಂದು ನಿಲುಗಡೆ ಪಡೆಯುತ್ತದೆ. ಇದು ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸಿದೆ. ಕರು ಮೃತಪಟ್ಟಿದೆ.

ಘಾಟ್‌ ಸೆಕ್ಷನ್‌ ಮತ್ತು ತಿರುವುಗಳಿರುವ ಸ್ಥಳದಲ್ಲಿ ರೈಲು ಗಂಟೆಗೆ ಸರಾಸರಿ 75 ಕಿ.ಮೀ.ಯಿಂದ 77 ಕಿ.ಮೀ. ತನಕ ವೇಗದಲ್ಲಿ ಸಂಚರಿಸುತ್ತದೆ. ಇದು ದೇಶದಲ್ಲಿ ಸಂಚರಿಸುತ್ತಿರುವ ಐದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಪೈಕಿ ಕನಿಷ್ಠ ವೇಗ ಎಂದು ದಾಖಲಾಗಿದೆ.

ಈ ಅಪಘಾತದ ಬಳಿಕ ರೈಲು ಚೆನ್ನೈ ತಲುಪುವುದಕ್ಕಿಂತ ಮೊದಲೇ ಹಾನಿ ಪ್ರಮಾಣ ಅಂದಾಜಿಸುವುದಕ್ಕಾಗಿ ಕೆಲವು ನಿಮಿಷ ಮಾರ್ಗ ಮಧ್ಯೆ ನಿಲುಗಡೆ ಪಡೆದುಕೊಂಡಿತ್ತು. ಬಳಿಕ ಚೆನ್ನೈಗೆ ಪ್ರಯಾಣಿಸಿತ್ತು. ಅಕ್ಟೋಬರ್‌ ತಿಂಗಳಿಂದೀಚೆಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಸಂಬಂಧಿಸಿದಂತೆ ಇದು ಐದನೇ ಅಪಘಾತ ಪ್ರಕರಣ.

ಈ ಕುರಿತು ಪ್ರತಿಕ್ರಿಯಿಸಿದ ದಕ್ಷಿಣ ರೈಲ್ವೆಯ ಸಾರ್ವಜನಿಕ ಅಧಿಕಾರಿ, ಕರುವಿನ ಮಾಲೀಕರನ್ನು ಪತ್ತೆಹಚ್ಚಲಾಗುವುದು. ಅವರ ವಿರುದ್ಧ ಕೇಸ್‌ ದಾಖಲಿಸಿ, ಭಾರಿ ಮೊತ್ತದ ದಂಡವನ್ನೂ ವಸೂಲಿ ಮಾಡಲಾಗುವುದು. ಭವಿಷ್ಯದಲ್ಲಿ ಈ ರೀತಿ ಘಟನೆ ಆಗದೇ ಇರಲು ಇಂತಹ ಕ್ರಮ ಅನಿವಾರ್ಯ ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.

ರೈಲ್ವೆ ಹಳಿಗಳ ಸಮೀಪ ಹಸುಗಳು ಓಡಾಡುವುದು, ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಮುಂದಿನ ಆರು ತಿಂಗಳುಗಳ ಅವಧಿಯಲ್ಲಿ ರೈಲ್ವೆ ಹಳಿಗೆ ಎರಡೂ ಬದಿ 1000 ಕಿ.ಮೀ. ಉದ್ದಕ್ಕೆ ಆವರಣ ನಿರ್ಮಿಸಲಾಗುವುದು ಎಂದು ಹೇಳಿದ್ದರು.

ಗಮನಿಸಬಹುದಾದ ಇತರೆ ಸುದ್ದಿಗಳು

ಮನುಷ್ಯ ಮುಖದ ಮೇಕೆ ಮರಿ ನೋಡಿ ದಂಗಾದ ಜನ; ವಿಡಿಯೋ ನೀವೂ ನೋಡಿ!

Human shaped lamb: ಮೇಕೆ ಮರಿಯ ಮುಖ ಕನ್ನಡಕ ಹಾಕಿಕೊಂಡ ಮುದುಕನಂತಿದೆ ಎಂದು ಮಾಲೀಕ ನಬಾಬ್ ಖಾನ್ ಹೇಳಿದ್ದಾರೆ. ಈ ವಿಚಿತ್ರ ಕುರಿಮರಿ ಶುಕ್ರವಾರ ಜನಿಸಿತು, ಯಾರು ಇಲ್ಲಿಯವರೆಗೆ ಜೀವಂತವಾಗಿದ್ದಾರೆ. ಈ ಕುರಿಮರಿ ಅಲ್ಪಾಯುಷ್ಯ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

ಸಿ, ಡಿ ಗ್ರೂಪ್‌ ನೌಕರರಿಗೆ ಶುಭಸುದ್ದಿ; ಪತಿ-ಪತ್ನಿ ಪ್ರಕರಣದಲ್ಲಿ ಅಂತರ್‌ ಜಿಲ್ಲಾ ವರ್ಗಾವಣೆಗೆ ಒಪ್ಪಿಗೆ

Karnataka Cabinet Decisions: ರಾಜ್ಯದ ಸರ್ಕಾರಿ ನೌಕರರ ವಿಶೇಷವಾಗಿ ಸಿ ಮತ್ತು ಡಿ ಗ್ರೂಪ್‌ ನೌಕರರಿಗೆ ರಾಜ್ಯ ಸರ್ಕಾರ ಗುರುವಾರ ಶುಭ ಸುದ್ದಿ ನೀಡಿದೆ. ಪತಿ-ಪತ್ನಿ ವರ್ಗಾವಣೆ ಕೇಸ್‌ನಲ್ಲಿದ್ದ ಅಡ್ಡಿಯನ್ನು ನಿವಾರಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

IPL_Entry_Point