ಸಾಮಾಜಿಕ ಚಿಂತಕ ಜಿ.ರಾಜಶೇಖರ್ ಸ್ಮಾರಕ ಜ್ಞಾನ ವೇತನ 2024 ಕ್ಕೆ ಆಹ್ವಾನ; ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 30 ಕಡೆ ದಿನ-scholarship news g rajshekhar memorial knowledge scholarship 1 lakh rupees last date to apply 2024october 30 kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಸಾಮಾಜಿಕ ಚಿಂತಕ ಜಿ.ರಾಜಶೇಖರ್ ಸ್ಮಾರಕ ಜ್ಞಾನ ವೇತನ 2024 ಕ್ಕೆ ಆಹ್ವಾನ; ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 30 ಕಡೆ ದಿನ

ಸಾಮಾಜಿಕ ಚಿಂತಕ ಜಿ.ರಾಜಶೇಖರ್ ಸ್ಮಾರಕ ಜ್ಞಾನ ವೇತನ 2024 ಕ್ಕೆ ಆಹ್ವಾನ; ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 30 ಕಡೆ ದಿನ

ಉಡುಪಿಯ ಲೇಖಕ ಜಿ.ರಾಜಶೇಖರ್‌ ಅವರ ಸ್ಮರಣಾರ್ಥ ಜ್ಞಾನ ವೇತನವನ್ನು ನೀಡುವುದಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೊಬರ್‌ 30 ಕಡೆಯ ದಿನಾಂಕ.

ಸಾಮಾಜಿಕ ಚಿಂತಕ ಜಿ.ರಾಜಶೇಖರ್‌ ಸ್ಮರಣಾರ್ಥ ಜ್ಞಾನ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸಾಮಾಜಿಕ ಚಿಂತಕ ಜಿ.ರಾಜಶೇಖರ್‌ ಸ್ಮರಣಾರ್ಥ ಜ್ಞಾನ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಲೇಖಕ, ಸಾರ್ವಜನಿಕ ಚಿಂತಕ ಹಾಗೂ ಸಾಮಾಜಿಕ ಚಳುವಳಿಗಾರ ಜಿ ರಾಜಶೇಖರ್ ನಮ್ಮನ್ನು ಅಗಲಿ ಎರಡು ವರ್ಷಗಳಾಗಿವೆ. ಸೆಪ್ಟಂಬರ್ 16 ಅವರ ಹುಟ್ಟುಹಬ್ಬದ ದಿನವಾಗಿದೆ. ಅವರಿಗೆ ಇಂತಹ ವೈಯಕ್ತಿಕ ಸಂಭ್ರಮಗಳ ಕುರಿತು ಯಾವ ಅಕ್ಕರೆಯೂ ಇರಲಿಲ್ಲ ಎನ್ನುವುದು ನಿಜವಾದರೂ, ನಾವು ಈ ದಿನವನ್ನು ಅವರ ಅಚ್ಚಳಿಯದ ಚಿಂತನಾಶೀಲ ಕಾರ್ಯಚಟುವಟಿಕೆಗಳಿಗೆ ಸೂಕ್ತ ಗೌರವ ಸಲ್ಲಿಸುವ ಅವಕಾಶವೆಂದು ಭಾವಿಸುತ್ತೇವೆ. ಈ ಪ್ರಯುಕ್ತ ಎರಡನೆಯ ಜಿ.ರಾಜಶೇಖರ್ ಸ್ಮಾರಕ ಜ್ಞಾನ ವೇತನ ವನ್ನು ಘೋಷಿಸುತ್ತಿದ್ದೇವೆ. ಅನೇಕರ ಬೆಂಬಲದ ಕಾರಣವಾಗಿ ಜಿ.ರಾಜಶೇಖರ್ ಅವರು ‘ಕಾಗೋಡು ಸತ್ಯಾಗ್ರಹ’ ದಂತಹ ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಯಿತು. ಚಾರಿತ್ರಿಕ ಆಕರ ಹಾಗು ಪತ್ರಿಕಾ ವರದಿಗಳ ವಿಸ್ತಾರವೂ ನಿಖರವೂ ಆದ ಆಧ್ಯಯನದ ಫಲವಾದ ಈ ಕೃತಿಯು ಸ್ವತಂತ್ರೋತ್ತರ ಕಾಲದ ಐತಿಹಾಸಿಕ ಜನ ಚಳುವಳಿಯ ಪ್ರಮುಖ ದಾಖಲೆಯಾಗಿದೆ. ಪ್ರಸ್ತುತ ಜ್ಞಾನವೇತನವು, ಕಾಲದ ಗುಣಗ್ರಾಹಿಯಾದ ‘ಕಾಗೋಡು ಸತ್ಯಾಗ್ರಹ’ ದಂತಹ ಕೃತಿಗಳನ್ನು ಕಟ್ಟಲು ಕನ್ನಡದ ಯುವ ಬರಹಗಾರರು, ಸಂಶೋಧಕರು ಹಾಗು ಪತ್ರಕರ್ತರಿಗೆ ಸ್ಪೂರ್ತಿದಾಯಕವಾಗಲಿ ಎಂಬುದು ನಮ್ಮ ಸದುದ್ದೇಶವಾಗಿದೆ ಎನ್ನುವುದು ಬರಹಗಾರ ಅರುಣ್‌ ಜೋಳದ ಕೂಡ್ಲಿಗಿ ಅವರ ವಿವರಣೆ.

ಜ್ಞಾನ ವೇತನ ವಿವರಗಳು:

1) ಒಟ್ಟು 1,00,000 ರೂಪಾಯಿ ಮೊತ್ತದ ಜ್ಞಾನವೇತನವನ್ನು, 18-35 ರ ವಯಸ್ಸಿನ ಮಿತಿಯಲ್ಲಿ ಇರುವ ಒಬ್ಬ ಅಭ್ಯರ್ಥಿಗೆ ನಾಲ್ಕು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ವಿತರಿಸಲಾಗುವುದು.

2) ವೇತನ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಸಂಶೋಧನೆಯ ವಿಷಯ ಹಾಗು ಸಂಶೋಧನಾ ವಿಧಾನವನ್ನು ಒಳಗೊಂಡ ಸಂಶೋಧನಾ ಪ್ರಸ್ತಾವನೆ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನಾಂಕ.

3) ಶೈಕ್ಷಣಿಕ ಕ್ಷೇತ್ರದಲ್ಲಿ ನುರಿತರಾಗಿರುವವರು, ಅನುಭವಿ ಲೇಖಕರನ್ನು ಒಳಗೊಂಡ ಸಲಹಾ ಮಂಡಳಿಯು ಒಬ್ಬ ಅಭ್ಯರ್ತಿಯನ್ನು ವೇತನಕ್ಕೆ ಆಯ್ಕೆ ಮಾಡುತ್ತದೆ.

4) ಆಯ್ಕೆಯಾದ ಅಭ್ಯರ್ತಿಯು ಸಂಶೋಧನೆಗೆ ಆಯ್ದುಕೊಂಡ ಚಾರಿತ್ರಿಕ ವಿಷಯದ ಮೇಲೆ, ಸಾಕ್ಷಿ-ಪುರಾವೆ ಹಾಗು ಆಳ-ಅಗಲ (narrative journalism) ಉಳ್ಳ ವರದಿಗಳ ಆಧಾರದಲ್ಲಿ ಸಂಶೋಧನೆ ನಡೆಸಬೇಕು. ಸಲಹಾ ಮಂಡಳಿಯು ಸಂಶೋಧನಾ ಕಾರ್ಯದಲ್ಲಿ ಮಾರ್ಗದರ್ಶನ ನೀಡುತ್ತದೆ.

5) ಮಹಿಳೆ, ಕಡೆಗಣಿತ ಜಾತಿ ಪಗಂಡ ಹಾಗು ಅಲ್ಪ ಸಂಖ್ಯಾತ ವರ್ಗದ ಅಭ್ಯರ್ತಿಗಳಿಗೆ ಪ್ರಥಮ ಪ್ರಾಶಸ್ಯವಿರುತ್ತದೆ.

6) ಸೂಚಿತ ಸಂಶೋಧನಾ ವಲಯಗಳು:

*ಮತೀಯ ದ್ವೇಷ/ ಕೂಡುಕಟ್ಟು/ ಸಹಬಾಳ್ವೆ – ಇವುಗಳ ಸಾಮಾಜಿಕ- ಸಾಂಸ್ಕತಿಕ ಬೇರುಗಳು; ಇಂದಿನ ವಾಸ್ತವಿಕ ಸ್ಥಿತಿಗತಿ- ಸ್ಥಳ-ವಿದ್ಯಮಾನ ಅಧ್ಯಯನ *ಜಾತಿ ಯಜಮಾನಿಕೆ, ಅಸಮಾನತೆ, ಅನ್ಯಾಯಗಳ ಮುಂದುವರಿಕೆಯ

ಸಾಮಾಜಿಕ-ರಾಜಕೀಯ ಕಾರಣಗಳು- ಸ್ಥಳ-ವಿದ್ಯಮಾನ ಅಧ್ಯಯನ

ಕಡೆಗಣಿತ ಸಮುದಾಯಗಳ ( ಸ್ಥಳ, ಸಮುದಾಯ ನಿರ್ದಿಷ್ಟತೆ ಇರಬೇಕು) ಪ್ರತಿರೋಧ ಚರಿತ್ರೆ ಮತ್ತೂ ಪ್ರಸ್ತುತ ಪರಿಸ್ಥಿತಿಯ ನೈಜತೆ

ಆಧುನಿಕ ಸಾಂಸ್ಥಿಕ ವ್ಯವಸ್ಥೆಗಳ ( ಕಾನೂನು, ನ್ಯಾಯಿಕ, ಆರೋಗ್ಯ, ಶಿಕ್ಷಣ, ಮಹಿಳೆ- ಮಕ್ಕಳ ಕಲ್ಯಾಣ ಇತ್ಯಾದಿ) ವೈಫಲ್ಯದ ಕಾರ್ಯ-ಕಾರಣ -ಪರಿಣಾಮ

ಶ್ರಮಿಕರ ಆಂತರಿಕ ವಲಸೆ: ಸಾಮಾಜಿಕ ಕಾರ್ಯ-ಕಾರಣ, ವಲಸೆಯ ನಕ್ಷೆ, ಪ್ರದೇಶ ಭಿನ್ನತೆ, ಹೊರಗಿಡುವಿಕೆ, ಕಡೆಗಣಿಸುವಿಕೆ, ಸಾಮಾಜಿಕ ಪರಿಣಾಮಗಳು.

ಕಡೆಗಣಿತ ಸಮುದಾಯಗಳ ಕಲ್ಯಾಣಕ್ಕಾಗಿ ವಿಜ್ಞಾನ ತಂತ್ರಜ್ಞಾನ- ವರ್ತಮಾನದ ಸ್ಥಿತಿ ಗತಿ, ಎದುರಿಸ ಬೇಕಾದ ಸವಾಲುಗಳು, ಸಾಗಬೇಕಾದ ಹಾದಿ.

ಜೀವಸಂಕುಲ, ಪರಿಸರ ಮತ್ತು ಮಾನವ ಅಸ್ತಿತ್ವದ ಸಮಸ್ಯೆಗಳು

ಈ ಸೂಚಿತ ವಿಷಯಗಳಲ್ಲದೆ ಸಂಶೋಧನೆಗೆ ಅರ್ಹವಾದ ಸಾಮಾಜಿಕ ಕಾಳಜಿಯ/ಕುತೂಹಲಕರ ವಸ್ತುಗಳಿಗೂ ಅವಕಾಶವಿದೆ

ಸಲಹಾ ಸಮಿತಿಯ ಆಯ್ಕೆಯೇ ಅಂತಿಮ

7. ಪ್ರಸ್ತಾವನೆ ಕಳುಹಿಸಲು ವಿಳಾಸ:grskksv@gmail.com. Enquiry : 7838263911

 

mysore-dasara_Entry_Point