ಶಿವಮೊಗ್ಗ ಕರ್ನಾಟಕ ಸಂಘ ಪ್ರಶಸ್ತಿಗೆ ರಹಮತ್ ತರೀಕೆರೆ, ಗುರುರಾಜ್ ದಾವಣಗೆರೆ, ರಾಜಾರಾಂ ತಲ್ಲೂರು ಸಹಿತ 12 ಲೇಖಕರ ಆಯ್ಕೆ
Awards Announced ಶಿವಮೊಗ್ಗದ ಕರ್ನಾಟಕ ಸಂಘವು ಹನ್ನೆರಡು ಪ್ರಶಸ್ತಿಗಳಿಗೆ ವಿವಿಧ ಲೇಖಕರ ಹನ್ನೆರಡು ಕೃತಿಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಕರ್ನಾಟಕದ ಪ್ರಮುಖ ಲೇಖಕರ ಹೆಸರು ಇದೆ.
ಶಿವಮೊಗ್ಗ:ಶಿವಮೊಗ್ಗದ ಪ್ರತಿಷ್ಠಿತ ಕರ್ನಾಟಕ ಸಂಘವು ಕೊಡಮಾಡುವ ವಿವಿಧ ಪ್ರಶಸ್ತಿಗಳಿಗೆ ಲೇಖಕರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲೂ ಕುವೆಂಪು. ಎಸ್‌ವಿ ಪರಮೇಶ್ವರ ಭಟ್ಟ, ಎಂ.ಕೆ.ಇಂದಿರಾ. ಜಿ.ಎಸ್.ಶಿವರುದ್ರಪ್ಪ, ಲಂಕೇಶ್, ಹಾಮಾನಾಯಕ್, ಯುಆರ್‌ಅನಂತಮೂರ್ತಿ. ಕೆ.ವಿ. ಸುಬ್ಬಣ್ಣ, ನಾ.ಡಿಸೋನಾ, ಡಾ.ಚಂದ್ರಪ್ಪಗೌಡ, ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರೀ, ಹಸೂಡಿ ವೆಂಕಟಶಾಸ್ತ್ರೀ ಅವರ ಹೆಸರಿನ ಪ್ರಶಸ್ತಿಗಳಿಗೆ ಹನ್ನೆರಡು ಲೇಖಕರನ್ನು ಆಯ್ಕೆ ಮಾಡಲಾಗಿದೆ. ಕಾದಂಬರಿ, ನಾಟಕ, ಕವನಸಂಕಲನ ಅನುವಾದ, ಅಂಕಣ, ಸಣ್ಣ ಕಥೆಗಳು, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ವೈದ್ಯ ಸಾಹಿತ್ಯ ಸಹಿತ ನಾನಾ ವಲಯಗಳಲ್ಲಿನ ಕೃತಿಗಳಿಗೆ ಈ ಪ್ರಶಸ್ತಿಗಳನ್ನು ಮೂರು ದಶಕದಿಂದಲೂ ಕರ್ನಾಟಕ ಸಂಘ ನೀಡುತ್ತಾ ಬರುತ್ತಿದೆ.
ವಿಜೇತರಿಗೆ ತಲಾ 1೦,೦೦೦ ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಪುಸ್ತಕ ಬಹುಮಾನ ಕಾರ್ಯಕ್ರಮವು 2024ರ ಸೆಪ್ಟಂಬರ್ 22ರ ಭಾನುವಾರದಂದು ಕರ್ನಾಟಕ ಸಂಘದ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ, ಇದಕ್ಕೂ ಮೊದಲು ಮಧ್ಯಾಹ್ನ 3 ಗಂಟೆಗೆ ವಿಜೇತ ಸಾಹಿತಿಗಳೊಂದಿಗೆ ಸಂವಾದ ಇರಲಿದೆ ಎಂದು ಕರ್ನಾಟಕ ಸಂಘ ತಿಳಿಸಿದೆ.
ಮೂರು ದಶಕದ ಹಿಂದೆಯೇ ಎಂಎಸ್ಸಿ ಗಣಿತವನ್ನು ಸಂಡೂರಿನಲ್ಲಿರುವ ಕಲಬುರಗಿ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರದಲ್ಲಿ ಓದುವಾಗ ಹಾ.ಮಾ.ನಾಯಕರು ಬಂದಿದ್ದರು. ಅವರ ಆತಿಥ್ಯ ನೋಡಿಕೊಳ್ಳುವ ಅವಕಾಶ ದೊರೆತಿತ್ತು. ಅವರೊಂದಿಗೆ ಒಡನಾಡಿದ ಕ್ಷಣಗಳು ಹಸಿರಾಗಿವೆ. ಈಗ ಅವರ ಹೆಸರಿನಲ್ಲಿಯೇ ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ ಎಂದು ಲೇಖಕ ಗುರುರಾಜ್ ದಾವಣಗೆರೆ ಹೇಳಿದ್ದಾರೆ.
1 ಕುವೆಂಪು (ಕಾದಂಬರಿ) – ಕೊಳ್ಳ – ಡಾ ಕೆ.ಬಿ. ಪವಾರ
2 ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ) – ಎಂ. ಡಾಕ್ಯುಮೆಂಟ್ – ಶ್ರೀ ರಾಜಾರಾಂ ತಲ್ಲೂರು
3 ಶ್ರೀಮತಿ ಎಂ.ಕೆ. ಇಂದಿರಾ (ಮಹಿಳಾ ಸಾಹಿತ್ಯ) – ಇರವಿನ ಅರಿವು – ಡಾ. ಕಾತ್ಯಾಯನಿ ಕುಂಜಿಬೆಟ್ಟು
4 ಶ್ರೀ ಪಿ. ಲಂಕೇಶ್ (ಮುಸ್ಲಿಂ ಬರಹಗಾರರು) – ಸಂಪಿಗೆಯ ಪರಿಮಳ – ಶ್ರೀ ಅದೀಬ್ ಅಕ್ತರ್
5 ಡಾ. ಜಿ. ಎಸ್. ಶಿವರುದ್ರಪ್ಪ (ಕವನ ಸಂಕಲನ) – ಒದ್ದೆಗಣ್ಣಿನ ದೀಪ – ಶ್ರೀ ಚಾಂದ್ ಪಾಷ ಎನ್. ಎಸ್.
6 ಡಾ. ಹಾ.ಮಾ. ನಾಯಕ (ಅಂಕಣ) – ಹಸಿರು ಮಂಥನ – ಶ್ರೀ ಗುರುರಾಜ್ ಎಸ್. ದಾವಣಗೆರೆ
7 ಡಾ. ಯು.ಆರ್. ಅನಂತಮೂರ್ತಿ (ಸಣ್ಣ ಕಥಾ ಸಂಕಲನ) – ನಕ್ಶತ್ರಕ್ಕಂಟಿದ ಮುತ್ತಿನ ನೆತ್ತರು – ಶ್ರೀ ಗೋವಿಂದರಾಜು ಎಂ. ಕಲ್ಲೂರು
8 ಡಾ. ಕೆ.ವಿ. ಸುಬ್ಬಣ್ಣ (ನಾಟಕ) – ಒಂದು ಕಾನೂನಾತ್ಮಕ ಕೊಲೆ – ಶ್ರೀ ಶಿವಕುಮಾರ ಮಾವಲಿ
9 ಶ್ರೀ ಕುಕ್ಕೆ ಸುಬ್ರಮಣ್ಯ ಶಾಸ್ತ್ರೀ (ಪ್ರವಾಸ ಸಾಹಿತ್ಯ) – ಜೆರುಸಲೆಮ್ – ಡಾ. ರಹಮತ್ ತರೀಕೆರೆ
10 ಶ್ರೀ ಹಸೂಡಿ ವೆಂಕಟಶಾಸ್ತ್ರೀ (ವಿಜ್ಞಾನ ಸಾಹಿತ್ಯ) – ಜೀವವೈವಿಧ್ಯ ವನ್ಯಜೀವಿಗಳು ಮತ್ತು ಸಂರಕ್ಷಣೆ – ಡಾ. ಎನ್.ಎಸ್. ಹೆಗಡೆ
11 ಡಾ. ನಾ. ಡಿಸೋಜ (ಮಕ್ಕಳ ಸಾಹಿತ್ಯ) – ಬ್ಯುಟಿ ಹಕ್ಕಿ – ಡಾ. ಲಲಿತಾ ಕೆ. ಹೊಸಪ್ಯಾಟಿ
12 ಡಾ. ಎಚ್.ಡಿ. ಚಂದ್ರಪ್ಪಗೌಡ (ವೈದ್ಯ ಸಾಹಿತ್ಯ) – ಕಣ್ಣ ಬೆರಗು ಬವಣೆ – ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್
ವಿಭಾಗ