PM Modi: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ಗೆ ಪ್ರಾಣ ಬೆದರಿಕೆ; ಯಾದಗಿರಿಯ ಕೂಲಿ ಕಾರ್ಮಿಕನ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Pm Modi: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ಗೆ ಪ್ರಾಣ ಬೆದರಿಕೆ; ಯಾದಗಿರಿಯ ಕೂಲಿ ಕಾರ್ಮಿಕನ ಬಂಧನ

PM Modi: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ಗೆ ಪ್ರಾಣ ಬೆದರಿಕೆ; ಯಾದಗಿರಿಯ ಕೂಲಿ ಕಾರ್ಮಿಕನ ಬಂಧನ

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಕೂಲಿ ಕಾರ್ಮಿಕ ಮೊಹಮ್ಮದ್ ರಸೂಲ್ ಕಡ್ದಾರೆ ಎಂಬಾತನನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ, ಇಲ್ಲಿದೆ ಮಾಹಿತಿ.

ಪ್ರಧಾನಿ ನರೇಂದ್ರ ಮೋದಿ (ಎಡ ಚಿತ್ರ); ಆರೋಪಿ ಮೊಹಮ್ಮದ್ ರಸೂಲ್ ಕಡ್ದಾರೆ (ಬಲ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಎಡ ಚಿತ್ರ); ಆರೋಪಿ ಮೊಹಮ್ಮದ್ ರಸೂಲ್ ಕಡ್ದಾರೆ (ಬಲ ಚಿತ್ರ)

ಯಾದಗಿರಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕೂಲಿ ಕಾರ್ಮಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೊಹಮ್ಮದ್ ರಸೂಲ್ ಕಡ್ದಾರೆ (45) ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್‌ನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ರಸೂಲ್ ಕಡ್ದಾರೆ ಸುರಪುರ ತಾಲೂಕು ರಂಗಂಪೇಟೆಯ ನಿವಾಸಿ. ತನಿಖೆಯ ಕಾರಣ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ಧಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೊಹಮ್ಮದ್ ರಸೂಲ್ ಕಡ್ದಾರೆ ವಿರುದ್ಧ ಐಪಿಸಿ ಸೆಕ್ಷನ್ 505 (1) (ಬಿ), 25 (1) (ಬಿ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಕೇಸ್ ದಾಖಲಾಗಿದೆ. ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಶರಣು ನಾಯಕ್‌ ಅವರು ಮೊಹಮ್ಮದ್ ರಸೂಲ್ ಕಡ್ದಾರೆ ವಿರುದ್ಧ ದೂರು ದಾಖಲಿಸಿದ್ದರು.

ವಿಡಿಯೋ ಹೇಳಿಕೆ ಶೇರ್ ಮಾಡಿದ್ದ ಮೊಹಮ್ಮದ್ ರಸೂಲ್

ಮೊಹಮ್ಮದ್ ರಸೂಲ್ ಕಡ್ದಾರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ವಿಡಿಯೋದಲ್ಲಿ, “ಮೋದಿ ನೀನು ಉತ್ತಮ ಆಡಳಿತ ನೀಡುತ್ತಿಲ್ಲ. ಚಹಾ ಮಾರಾಟ ಮಾಡುತ್ತಿದ್ದೆ. ಬಿಜೆಪಿ ಹೊರತಾಗಿ ನೀನು ಮುಖಾಮುಖಿಯಾಗುವುದಾದರೆ ನಾನು ನಿನ್ನನ್ನು ಎದುರಿಸುವುದಕ್ಕೆ ಸಿದ್ಧನಾಗಿದ್ದೇನೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿನ್ನ ನರ ಕಟ್‌ ಆಗಲಿದೆ. ಕಾಂಗ್ರೆಸ್ ಜಿಂದಾಬಾದ್‌” ಎಂದು ಅರಚಿರುವುದು ಕಂಡುಬಂದಿತ್ತು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧವೂ ಇದೇ ರೀತಿ ಅರಚಾಡಿದ್ದು, ಅದನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ. ಈ ವಿಡಿಯೋವನ್ನು ಸಾಕ್ಷ್ಯವಾಗಿಟ್ಟುಕೊಂಡು ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಶರಣು ನಾಯಕ್‌ ದೂರು ದಾಖಲಿಸಿದ್ದರು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner