October 17 Kannada News Updates: ಕಾವೇರಿ ತೀರ್ಥೋದ್ಭವ- ತೀರ್ಥರೂಪಿಣಿಯಾಗಿ ದರುಶನ ನೀಡಿದ ಕೊಡಗಿನ ಕಾವೇರಿ
ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Mon, 17 Oct 202202:21 PM IST
ತೀರ್ಥರೂಪಿಣಿಯಾಗಿ ದರುಶನ ನೀಡಿದ ಕೊಡಗಿನ ಜೀವನದಿ ಕಾವೇರಿ
- ಇಂದು ಸಂಜೆ 7.22ರ ಸಲ್ಲುವ ಮೇಷ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ನೆರೆದಿದ್ದ ನೂರಾರು ಭಕ್ತರಿಗೆ ಕೊಡಗಿನ ಕುಲದೇವಿ ನಾಡಿನ ಜೀವನದಿ ಮಾತೆ ಕಾವೇರಿ ದರ್ಶನ ನೀಡಿದ್ದಾಳೆ.
- ಕೊಡಗು ಅಷ್ಟೇ ಅಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು.
- ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು.
- ತೀರ್ಥೋದ್ಭವಾಗುತ್ತಿದ್ದಂತೆ ತೀರ್ಥರೂಪಿಣಿಯಾದ ಕಾವೇರಿ ಮಾತೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸ್ಥಳದಲ್ಲಿದ್ದ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥವನ್ನು ಪ್ರೋಕ್ಷಣೆ ಮಾಡಿದರು.
Mon, 17 Oct 202212:24 PM IST
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಲು ಸುಗ್ರೀವಾಜ್ಞೆ
ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ.
ಅಕ್ಟೋಬರ್ 20ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ಪಡೆಯಲಿದೆ.
ಅನುಮೋದನೆ ಪಡೆದ ಬಳಿಕ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ.
ನಂತರ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕವನ್ನು ಮಂಡನೆ ಮಾಡಲಿದೆ.
Mon, 17 Oct 202212:24 PM IST
ಜೆಡಿಎಸ್ನಿಂದ ನವೆಂಬರ್ 1 ರಂದು ಮನೆ ಮನೆ ಮೇಲೆ ಕನ್ನಡ ಬಾವುಟ
ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದಂತೆ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಜ್ಯದ ಮನೆ ಮನೆ ಮೇಲೆ ಕನ್ನಡ ಬಾವುಟ ಹಾರಿಸಲು ಜೆಡಿಎಸ್ ಮುಂದಾಗಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು ಒಂದಿಲ್ಲೊಂದು ರೀತಿಯಲ್ಲಿ ಜನರ ಹತ್ತಿರವಾಗಲು ಕಸರತ್ತು ನಡೆಸುತ್ತಿವೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದರೆ, ಬಿಜೆಪಿ ಜನಸ್ಪಂದನ, ಜೆಡಿಎಸ್ ಜನತಾ ಮಿತ್ರ ಕಾರ್ಯಕ್ರಮ ನಡೆಸಿವೆ. ಆಮ್ ಆದ್ಮಿ ಪಕ್ಷ ಕೂಡ ಪರಿಶೋಧನಾ ಯಾತ್ರೆ ನಡೆಸಿದೆ.
Mon, 17 Oct 202212:24 PM IST
ಅ. 28 ರಂದು ರಾಜ್ಯಾದ್ಯಂತ 'ಕೋಟಿ ಕಂಠ ಗಾಯನ' ಕಾರ್ಯಕ್ರಮ
ಕನ್ನಡ ರಾಜ್ಯೋತ್ಸವ ಅಂಗವಾಗಿ ಅಕ್ಟೋಬರ 28 ರಂದು ರಾಜ್ಯಾದ್ಯಂತ ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ನಾಡಿನಾದ್ಯಂತ ಏಕಕಾಲದಲ್ಲಿ ಕನ್ನಡದ ಕವಿಗಳ ಆರು ಜನಪ್ರಿಯ ಗೀತೆಗಳನ್ನು ಕೋಟಿ ಕಂಠಗಳಲ್ಲಿ ಪ್ರಸ್ತುತಪಡಿಸಲಾಗುವುದು. ಬಾಗಲಕೋಟೆ ಜಿಲ್ಲೆಯ ಆಯ್ದ 17 ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.
Mon, 17 Oct 202209:04 AM IST
ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ, 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂ. ಜಮೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ (PM Kisan Samman Sammelan) ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ಸಮ್ಮೇಳನದಲ್ಲಿ 12ನೇ ಕಂತಿನ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇಂದು ಸುಮಾರು ಎಂಟು ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂ. ಜಮೆ ಮಾಡಲಾಗಿದೆ.
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್), ಪುಸಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್‍ಪಿಕೆ ರಸಗೊಬ್ಬರವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
Mon, 17 Oct 202208:00 AM IST
ರಾಹುಲ್ ಗಾಂಧಿ ಮತ ಚಲಾವಣೆ
ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಹಾಗೂ ಸಂಸದ ಡಿ ಕೆ ಸುರೇಶ್ ಅವರು ಬಳ್ಳಾರಿಯ ಸಂಗನಕಲ್ಲು ವಿಶ್ರಾಂತಿ ತಾಣದಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ನಿಮಿತ್ತ ಸೋಮವಾರ ಮತ ಚಲಾಯಿಸಿದರು.
Mon, 17 Oct 202208:00 AM IST
ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಜಯ
ಮೊದಲ ಅಧಿಕೃತ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಜಯ
ರೋಚಕ ಜಯ ಸಾಧಿಸಿದ ಭಾರತ
ಕೊನೆಯ ಎರಡು ಓವರ್‌ನಲ್ಲಿ ಪಂದ್ಯದ ಗತಿ ಬದಲಾಯಿಸಿದ ಭಾರತೀಯ ಬೌಲರ್‌ಗಳು
Mon, 17 Oct 202206:09 AM IST
ವೋಟಿಂಗ್ ಬಳಿಕ ಸೋನಿಯಾ ಗಾಂಧಿ ಹೇಳಿದ್ದೇನು?
ಇದಕ್ಕಾಗಿ ತುಂಬಾ ಸಮಯದಿಂದ ಕಾಯುತ್ತಿದ್ದೆ.
ಮತದಾನದ ಬಳಿಕ ಸೋನಿಯಾ ಗಾಂಧಿ ಹೇಳಿಕೆ
Mon, 17 Oct 202204:13 AM IST
ಸಂಗನಕಲ್ಲುವಿನಲ್ಲಿ ಮತಗಟ್ಟೆ ಸಿದ್ಧ
ಬಳ್ಳಾರಿಯ ಸಂಗನಕಲ್ಲುವಿನಲ್ಲಿರುವ ಭಾರತ್ ಜೋಡೋ ಯಾತ್ರಾ ಕ್ಯಾಂಪ್‌ಸೈಟ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತಗಟ್ಟೆ ಸಿದ್ಧಗೊಂಡಿದೆ.
ಬೆಳಗ್ಗೆ 10 ಗಂಟೆಗೆ ಮತಗಟ್ಟೆ ತೆರೆಯಲಾಗುತ್ತದೆ. ಎಂದು ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
Mon, 17 Oct 202203:40 AM IST
ಆಧುನಿಕ ಭಗೀರಥ ಮಳವಳ್ಳಿಯ ಕಲ್ಮನೆ ಕಾಮೇಗೌಡ ನಿಧನ
ಆಧುನಿಕ ಭಗೀರಥ ಮಳವಳ್ಳಿಯ ಕಲ್ಮನೆ ಕಾಮೇಗೌಡ ನಿಧನ
ಮಂಡ್ಯ ಜಿಲ್ಲೆಯ ಮಳವಳ್ಳಿಯ ಕಾಮೇಗೌಡ ಇಂದು ನಿಧನ
16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದಿದ್ದ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ ವಿಧಿವಶ
ತಮ್ಮ 86ನೇ ವಯಸ್ಸಿನಲ್ಲಿ ಅಸುನೀಗಿದ ಕೆರೆಗಳ ನಿರ್ಮಾತೃ
ಅನಾರೋಗ್ಯದಿಂದಾಗಿ ಇಂದು ಮುಂಜಾನೆ ಸಾವು
ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಕಾಮೇಗೌಡರನ್ನು ಪ್ರಶಂಸಿದ್ದರು.
Mon, 17 Oct 202203:40 AM IST
ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸಿದ್ಧತೆ
ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಇಂದು ಮತದಾನ.
ಮತದಾನಕ್ಕೆ ಸಿದ್ಧತೆ
ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯ ದೃಶ್ಯಗಳು ಹೀಗಿವೆ.
Mon, 17 Oct 202201:34 AM IST
ಕಾಂಗ್ರೆಸ್ ಅಧ್ಯಯಕ್ಷೀಯ ಚುನಾವಣೆಗೆ ಇಂದು ಮತದಾನ
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಇಂದು ಮತದಾನ ನಡೆಯಲಿದೆ.
ಇಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯ ನಡುವೆ ಮತದಾನ ಪ್ರಕ್ರಿಯೆ ನಡೆಯಲಿದೆ. ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಆಯಾ ಮತಗಟ್ಟೆಗಳಲ್ಲಿ ತಾವು ಬೆಂಬಲಿಸುವ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ.
ದೇಶದಾದ್ಯಂತ ಕನಿಷ್ಠ 9,200 ಕಾಂಗ್ರೆಸ್ ಪ್ರತಿನಿಧಿಗಳು ಪಕ್ಷದ 37ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ತಮ್ಮ ಮತವನ್ನು ಚಲಾಯಿಸಲಿದ್ದಾರೆ.
ಹಿರಿಯ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಕಣದಲ್ಲಿದ್ದಾರೆ.
Mon, 17 Oct 202201:34 AM IST
ಇಂದು ಇಂಡೋ-ಆಸೀಸ್ ಕದನ
ಇಂದು ಭಾರತ -ಆಸ್ಟ್ರೇಲಿಯಾ ನಡುವೆ ಮೊದಲ ಅಭ್ಯಸ ಪಂದ್ಯ
ಬ್ರಿಸ್ಬೇನ್‌ನಲ್ಲಿ ಅತಿಥೇಯ ಕಾಂಗರೂಗಳ ವಿರುದ್ಧ ಆಡಲಿರುವ ಭಾರತ.
ವಿರಾಟ್ ಹಾಗೂ ನಾಯ ರೋಹಿತ್ ಶರ್ಮಾ ಇಂದು ತಂಡಕ್ಕೆ ವಾಪಸ್
ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯಲಿರುವ ಪಂದ್ಯ.
ಪಂದ್ಯವು ಬೆಳಗ್ಗೆ 9:30ಕ್ಕೆ ಪ್ರಾರಂಭ.
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯದ ನೇರಪ್ರಸಾರ. ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
Mon, 17 Oct 202201:34 AM IST
ವಿಶ್ವಕಪ್‌ನಲ್ಲಿ ಇಂದಿನ ಪಂದ್ಯಗಳು
ಟಿ20 ವಿಶ್ವಕಪ್ ಗ್ರೂಪ್ ಹಂತದ ಪಂದ್ಯ
ಇಂದು ವೆಸ್ಟ್ ಇಂಡೀಸ್ ಮತ್ತು ಸ್ಕಾಟ್‌ಲ್ಯಾಂಡ್ ನಡುವೆ ಪಂದ್ಯ
ಗ್ರೂಪ್ ಬಿ ಅಲ್ಲಿ ಮೂರನೇ ಪಂದ್ಯ
ಇಂದಿನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಮತ್ತು ಐರ್ಲ್ಯಾಂಡ್ ನಡುವೆ ಪಂದ್ಯ
ಸೂಪರ್ 12 ಹಂತಕ್ಕೆ ಪ್ರವೇಶಿಲು ಎಲ್ಲಾ ತಂಡಗಳಿಂಗೆ ಪ್ರಮುಖ ಪಂದ್ಯ
Mon, 17 Oct 202201:34 AM IST
ಪ್ರೊ ಕಬಡ್ಡಿ ವರದಿ
ಯುಪಿ ಯೋಧಾಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಸೋಲು
44-37 ಪಾಯಿಂಟ್ ಅಂತರದಿಂದ ಸೋತ ಬುಲ್ಸ್
ಸತತ ಎರಡನೇ ಸೋಲು ಕಂಡ ವಿಕಾಸ್ ಕಂಡೋಲ ಬಳಗ
Mon, 17 Oct 202201:34 AM IST
ಆಭರಣ ಮಳಿಗೆ ಸಿಬ್ಬಂದಿಗೆ ಕಾರು-ಬೈಕ್ ಗಿಫ್ಟ್ ನೀಡಿದ ಮಾಲೀಕ
ತಮ್ಮ ಆಭರಣ ಮಳಿಗೆ ಸಿಬ್ಬಂದಿಗೆ ದೀಪಾವಳಿ ಉಡುಗೊರೆ ನೀಡಿದ ಮಾಲೀಕ.
ಚೆನ್ನೈನ ಆಭರಣ ಮಳಿಗೆಯ ಮಾಲೀಕರಿಂದ ಕಾರು ಮತ್ತು ಬೈಕ್ ಉಡುಗೊರೆ.
ʼಅವರು ಎಲ್ಲಾ ಏರಿಳಿತಗಳ ನಡುವೆಯೂ ನನ್ನೊಂದಿಗೆ ಕೆಲಸ ಮಾಡಿದ್ದಾರೆ. ಇದು ಅವರ ಕೆಲಸವನ್ನು ಪ್ರೋತ್ಸಾಹಿಸಲು ನೀಡಿದ ಉಡುಗೊರೆ. 10 ಮಂದಿಗೆ ಕಾರು ಮತ್ತು 20 ಮಂದಿಗೆ ಬೈಕ್ ನೀಡುತ್ತಿದ್ದೇವೆʼ ಎಂದು ಆಭರಣ ಮಳಿಗೆಯ ಮಾಲೀಕ ಜಯಂತಿ ಲಾಲ್ ಹೇಳಿದ್ದಾರೆ.
ವಿಭಾಗ