Brain Teaser: ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆ ಹುಡುಕಿ; ಕೇವಲ 5 ಸೆಕೆಂಡ್‌ನಲ್ಲಿ ಸಿಕ್ರೆ ನಿಮ್ಮ ಮೈಂಡ್ ಬಲು ಚುರುಕು ಎಂದರ್ಥ!
Brain Teaser Task: ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆ ಹುಡುಕಿ; ಕೇವಲ 5 ಸೆಕೆಂಡ್ ಸಮಯ. ಚಿತ್ರ ನೋಡಿದ ತಕ್ಷಣ ನಿಮಗೆ ಅನಿಸುವುದು ಇದರಲ್ಲಿರುವ ಸಂಖ್ಯೆ 23 ಎಂದು. ಆದರೆ ಅದು ಎಲ್ಲಿ ಅಡಗಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ. ಸರ್ಚ್ ಮಾಡಿ. ಆ ನಂತರ ನಿಮ್ಮ ಉತ್ತರ ಸರಿ ಇದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ.
ಈ ಡಿಜಿಟಲ್ ಯುಗದಲ್ಲಿ ಜನರು ತಮಗೆ ಬೇಕಾದ ಹಾಗೆ ಸಮಯ ಕಳೆಯುತ್ತಿದ್ದಾರೆ. ಆದರೆ ಇದರಿಂದ ಪ್ರಯೋಜನ ಪಡೆದುಕೊಳ್ಳುವ ವಿಷಯಗಳು ಸಾಕಷ್ಟು ಇದೆ. ಈ ಕುರಿತು ಜನರು ಯೋಚನೆ ಮಾಡಬೇಕು. ಅಂತರ್ಜಾಲದಲ್ಲಿ ನಿಮಗೆ ಬೇಕಾದ ವಿಷಯಗಳು, ಶೈಕ್ಷಣಿಕ ಮಾಹಿತಿಗಳು, ತಿಳುವಳಿಕೆಯ ವಿಷಯಗಳನ್ನು ಅನ್ವೇಷಣೆ ಮಾಡಿ ಅವುಗಳನ್ನು ತಿಳಿದುಕೊಳ್ಳಲು ನೀವು ಪ್ರಯತ್ನಪಡಬೇಕು. ಹೀಗೆ ಮಾಡಲು ಸಾಕಷ್ಟು ಅವಕಾಶ ಇರುವಾಗಲೂ ಸಮಯ ವ್ಯರ್ಥ ಮಾಡುವುದು ಒಳ್ಳೆಯದಲ್ಲ. ನಿಮ್ಮ ಬುದ್ಧಿ ಚುರುಕು ಮಾಡಲು ನಾವಿಲ್ಲಿ ಬ್ರೈನ್ ಟೀಸರ್ ನೀಡಿದ್ದೇವೆ.
ಉತ್ತರ ಗೊತ್ತಾಯ್ತಾ?
ಈ ಚಿತ್ರದಲ್ಲಿರುವ ಸಂಖ್ಯೆಯನ್ನು ನೀವು 5 ಸೆಕೆಂಡಿನ ಒಳಗಡೆ ಹುಡುಕಿದಲ್ಲಿ ನಿಮ್ಮ ಮೈಂಡ್ ಶಾರ್ಪ್ ಆಗಿದೆ ಎಂದು ಅರ್ಥ. ಸಾಮಾನ್ಯವಾಗಿ ಎಲ್ಲರೂ ಇದರಲ್ಲಿರುವ ಸಂಖ್ಯೆಯನ್ನು ಊಹಿಸುತ್ತಾರೆ. ಮೇಲ್ನೋಟಕ್ಕೆ ಗೊತ್ತಾಗುತ್ತದೆ ಇದರಲ್ಲಿ 23 ಎಂಬ ಸಂಖ್ಯೆ ಇರಬಹುದು ಎಂದು ಆದರೆ ಕೇವಲ ಐದು ಸೆಕೆಂಡ್ ಒಳಗೆ ಅದು ಎಲ್ಲಿದೆ? ಎಂದು ಕಂಡು ಹಿಡಿಯುವುದು ಕುತೂಹಲಕಾರಿ ಸಂಗತಿ. ನೀವು ಎಷ್ಟು ಬೇಗ ಸಂಖ್ಯೆಯನ್ನು ಕಂಡುಹಿಡಿಯುತ್ತೀರೋ ನಿಮ್ಮ ಬುದ್ಧಿ ಅಷ್ಟು ಚುರುಕು ಎಂದು ಅರ್ಥ.
ಈ ಒಂದು ವೈರಲ್ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ, ಅದರ ಮೇಲೆ ಒಂದು ಸಂಖ್ಯೆ ಮತ್ತು ಅಕ್ಷರವನ್ನು ಬರೆಯಲಾಗಿದೆ. ಕಪ್ಪು ಹಿನ್ನೆಲೆ ಇದೆ ಮತ್ತು ಎಲ್ಲೆಡೆ 3 ಮತ್ತು Z ಎಂದು ತಲೆಕೆಳಗಾಗಿ ಬರೆಯಲಾಗಿದೆ. ಅಕ್ಷರ ಮತ್ತು ಸಂಖ್ಯೆಯ ಸಂಯೋಜನೆಯು ಬಹುತೇಕ ಒಂದು ಸಂಖ್ಯೆಯನ್ನು ಹೋಲುತ್ತದೆ.
ಹೀಗಿದೆ ವಿವರಣೆ
ಹೆಚ್ಚಿನ ಸಂದರ್ಭಗಳಲ್ಲಿ, ಜನರು ನಿಗದಿತ ಸಮಯದೊಳಗೆ ಸಂಖ್ಯೆಯನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಆದರೆ ಸಮಯದ ಚೌಕಟ್ಟಿನೊಳಗೆ ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಹಾಗಾಗಿ ಅವರಿಗೆ ಸರಿಯಾದ ಉತ್ತರವನ್ನೂ ಇಲ್ಲಿ ತಿಳಿಸಲಾಗಿದೆ. '23' ಸಂಖ್ಯೆಯು ಎರಡನೇ ಸಾಲಿನಲ್ಲಿದೆ ಮತ್ತು ಬಲದಿಂದ ಎರಡನೆಯದಾಗಿದೆ. ಸಂಖ್ಯೆಯ ನಿಖರವಾದ ಸ್ಥಳವನ್ನು ಕಂಡುಕೊಂಡಾಗ ಅನೇಕರು ಆಶ್ಚರ್ಯ ಪಡುತ್ತಾರೆ.
ಇಲ್ಲಿದೆ ಉತ್ತರ
ಏಕೆಂದರೆ ಅದನ್ನು ಪತ್ತೆಹಚ್ಚುವುದು ಸಾಕಷ್ಟು ಸುಲಭದ ವಿಚಾರವಾಗಿತ್ತು. ಇಂತಹ ಚಿತ್ರಗಳು ವೀಕ್ಷಕರ ಗ್ರಹಿಕೆಗೆ ಸವಾಲೊಡ್ಡುತ್ತದೆ. ತೀಕ್ಷ್ಣವಾದ ವೀಕ್ಷಣಾ ಕೌಶಲ್ಯ ಹೊಂದಿರುವ ಜನರು ಮಾತ್ರ ಇದನ್ನು ಬೇಗ ಗುರುತಿಸಬಹುದು. ಈ ಸವಾಲನ್ನು ಹೆಚ್ಚಿನ ಸಂಖ್ಯೆಯ ಜನರು ಆನಂದಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಚಟುವಟಿಕೆಗಳಿಗೆ ವಿವಿಧ ಆಯ್ಕೆಗಳಿವೆ ಆದರೆ ಆಪ್ಟಿಕಲ್ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವ ಅನೇಕ ಜನರಿದ್ದಾರೆ. ಇದು ಮೆದುಳಿನ ಅರಿವಿನ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತವೆ.
ವಿಭಾಗ