Airtel IPL Plans: ಕ್ರಿಕೆಟ್ ಪ್ರಿಯರಿಗೆ ಏರ್‌ಟೆಲ್ ಗುಡ್ ನ್ಯೂಸ್; ಕಡಿಮೆ ಮೊತ್ತದ ಐಪಿಎಲ್ ಪರಿಷ್ಕೃತ ರಿಚಾರ್ಜ್ ಪ್ಲಾನ್‌ಗಳ ಘೋಷಣೆ
ಕನ್ನಡ ಸುದ್ದಿ  /  ಜೀವನಶೈಲಿ  /  Airtel Ipl Plans: ಕ್ರಿಕೆಟ್ ಪ್ರಿಯರಿಗೆ ಏರ್‌ಟೆಲ್ ಗುಡ್ ನ್ಯೂಸ್; ಕಡಿಮೆ ಮೊತ್ತದ ಐಪಿಎಲ್ ಪರಿಷ್ಕೃತ ರಿಚಾರ್ಜ್ ಪ್ಲಾನ್‌ಗಳ ಘೋಷಣೆ

Airtel IPL Plans: ಕ್ರಿಕೆಟ್ ಪ್ರಿಯರಿಗೆ ಏರ್‌ಟೆಲ್ ಗುಡ್ ನ್ಯೂಸ್; ಕಡಿಮೆ ಮೊತ್ತದ ಐಪಿಎಲ್ ಪರಿಷ್ಕೃತ ರಿಚಾರ್ಜ್ ಪ್ಲಾನ್‌ಗಳ ಘೋಷಣೆ

Airtel IPL Recharge Plans: ತಮ್ಮ ಮೊಬೈಲ್‌ಗಳಲ್ಲೇ ಐಪಿಎಲ್ ಪಂದ್ಯಗಳನ್ನು ನೋಡುವ ಕ್ರಿಕೆಟ್ ಪ್ರಿಯವರಿಗೆ ಏರ್‌ಟೆಲ್ ಪರಿಷ್ಕೃತ ರಿಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ.

ಐಪಿಎಲ್ 2024 ವೀಕ್ಷಿಸಲು ಏರ್‌ಟೆಲ್ ಕಡಿಮೆ ಮೊತ್ತದ ರಿಚಾರ್ಜ್ ಪ್ಲಾನ್‌ಗಳನ್ನು ಘೋಷಿಸಿದೆ.
ಐಪಿಎಲ್ 2024 ವೀಕ್ಷಿಸಲು ಏರ್‌ಟೆಲ್ ಕಡಿಮೆ ಮೊತ್ತದ ರಿಚಾರ್ಜ್ ಪ್ಲಾನ್‌ಗಳನ್ನು ಘೋಷಿಸಿದೆ.

ಐಪಿಎಲ್ 2024 ಕ್ರಿಕೆಟ್ ಪ್ರಿಯರಿಗೆ ಏರ್‌ಟೆಲ್ ಗುಡ್ ನ್ಯೂಸ್ ನೀಡಿದೆ. ತನ್ನ ಗ್ರಾಹಕರಿಗೆ ಸೀಮಿತ ಅವಧಿಯ ಐಪಿಎಲ್ ಆಫರ್‌ಗಳನ್ನು ನೀಡುವುದಾಗಿ ಘೋಷಿಸಿದೆ. ಈ ಮಟ್ಟಿಗೆ, ಹೊಸ ಡೇಟಾ ಪ್ಯಾಕ್‌ಗಳ ಬಿಡುಗಡೆಯೊಂದಿಗೆ ಅಸ್ತಿತ್ವದಲ್ಲಿರುವ ಡೇಟಾ ಪ್ಯಾಕ್‌ಗಳನ್ನು ಮಾರ್ಪಡಿಸಲಾಗಿದೆ. ಇದಷ್ಟೇ ಅಲ್ಲದೆ, ಡಿಜಿಟಲ್ ಬಳಕೆದಾರರಿಗಾಗಿ ಏರ್‌ಟೆಲ್ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಏರ್‌ಟೆಲ್ ಬಿಡುಗಡೆ ಮಾಡಿರುವ ಮೊಬೈಲ್‌ಗಳಲ್ಲೇ ಐಪಿಎಲ್ ವೀಕ್ಷಿಸುವ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್‌ಗಳು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ.

ಏರ್‌ಟೆಲ್ ಐಪಿಎಲ್ ಡೇಟಾ ಪ್ಯಾಕ್‌ಗಳ ವಿವರ ಹೀಗಿದೆ

ಪ್ರಸ್ತುತ 49 ರೂಪಾಯಿ ಹಾಗೂ 99 ರೂಪಾಯಿಗಳ ಡೇಟಾ ಪ್ಯಾಕ್‌ಗಳನ್ನು ಏರ್‌ಟೆಲ್ ಪರಿಷ್ಕರಣೆ ಮಾಡಿದೆ. ಈ ಪ್ಯಾಕ್‌ಗಳು ಇದೀಗ ಕಡಿಮೆ ಮೊತ್ತಕ್ಕೆ ಸಿಗುತ್ತಿವೆ. ಅಂದರೆ 49 ರೂಪಾಯಿ ರಿಚಾರ್ಚ್ ಪ್ಲಾನ್ ಈಗ ಕೇವಲ 39 ರೂಪಾಯಿಗೆ ಹಾಗೂ 99 ರೂಪಾಯಿ ರಿಚಾರ್ಜ್ ಪ್ಲಾನ್ 79 ರೂಪಾಯಿಗೆ ಸಿಗುತ್ತಿವೆ. ಈ ಡೇಟಾ ಪ್ಯಾಕ್ ಅನ್ನು ಕ್ರಿಕೆಟ್ ಅಭಿಮಾನಿಗಳು ಐಪಿಎಲ್ 2024 ಗಾಗಿ ಬಳಸುತ್ತಾರೆ ಎಂದು ಕಂಪನಿ ಹೇಳಿದೆ.

ಏರ್‌ಟೆಲ್ 39 ರೂಪಾಯಿಗಳ ಡೇಟಾ ಪ್ಯಾಕ್ ವಿವರಗಳನ್ನು ನೋಡುವುದಾದರೆ 1 ದಿನದ ವ್ಯಾಲಿಡಿಟಿಯೊಂದಿಗೆ ಎಫ್‌ಯುಪಿ 20 ಜಿಬಿ ಅನಿಯಮಿತ ಡೇಟಾ ಇರಲಿದೆ. ಇದು ಮುಗಿಯುತ್ತಿದ್ದಂತೆ ಡೇಟಾ ವೇಗವು 64 ಕೆಬಿಪಿಎಸ್ ತಲುಪುತ್ತದೆ.

ಏರ್‌ಟೆಲ್ ಡೇಟಾ ಪ್ಯಾಕ್ ರೀಚಾರ್ಜ್ ಯೋಜನೆಗಳು: ಏರ್‌ಟೆಲ್ 79 ಡೇಟಾ ಪ್ಯಾಕ್ ವಿವರಗಳನ್ನು ನೋಡುವುದಾದರೆ ಈ ಪ್ಲಾನ್‌ಗೆ 2 ದಿನಗಳ ವ್ಯಾಲಿಡಿಟಿ ಇರುತ್ತದೆ . ಎಫ್‌ಯುಪಿ 20 ಜಿಬಿಯೊಂದಿಗೆ ಅನಿಯಮಿತ ಡೇಟಾ ಸಿಗುತ್ತದೆೆ. ಆ ನಂತರ, ಡೇಟಾ ವೇಗವು 64 ಕೆಬಿಪಿಎಸ್ ತಲುಪುತ್ತದೆ. ಈ ಏರ್ ಟೆಲ್ ಡೇಟಾ ಪ್ಯಾಕ್ ಮೂಲಕ ನೀವು 40 ಜಿಬಿ ಹೈ ಸ್ಪೀಡ್ ಡೇಟಾವನ್ನು ಪಡೆಯಬಹುದು!

ಏರ್‌ಟೆಲ್ ಡಿಜಿಟಲ್ ಟಿವಿ ಬಳಕೆದಾರರಿಗೆ ಸ್ಟಾರ್ ಸ್ಪೋರ್ಟ್ಸ್ 4ಜಿ ಸೇವೆ

ಪ್ರಿಪೇಯ್ಡ್ ಬಳಕೆದಾರರಿಗೆ ಡೇಟಾ ಪ್ಯಾಕ್‌ಗಳನ್ನು ಕಡಿತಗೊಳಿಸಿರುವ ಏರ್‌ಟೆಲ್, ತನ್ನ ಡಿಟಿಎಚ್‌ ಬಳಕೆದಾರರು ಮತ್ತು ಡಿಜಿಟಲ್ ಟಿವಿ ಬಳಕೆದಾರರಿಗೆ ಸ್ಟಾರ್ ಸ್ಪೋರ್ಟ್ಸ್ 4K ಸೇವೆಯನ್ನು ಪರಿಚಯಿಸಿದೆ. ಪರಿಣಾಮವಾಗಿ ಈ ಐಪಿಎಲ್ 2024ರ ಸೀಸನ್‌ನಲ್ಲಿ ಬಳಕೆದಾರರ ಅನುಭವ ಮತ್ತಷ್ಟು ಸುಧಾರಿಸಲಿದೆ ಎನ್ನಲಾಗಿದೆ. ಮಾರ್ಚ್ 22 ರಿಂದ ನೀವು ತಡೆರಹಿತ ಲೈವ್ ಸ್ಟ್ರೀಮಿಂಗ್ ಪಡೆಯಬಹುದು ಎಂದು ಏರ್‌ಟೆಲ್ ಹೇಳಿದೆ.

ವೊಡಾಫೋನ್ ಐಡಿಯಾದಿಂದಲೂ ಐಪಿಎಲ್ ಆಫರ್‌ಗಳ ಘೋಷಣೆ

ವೊಡಾಫೋನ್ ಐಡಿಯಾ (ವಿಐ) ಟೆಲಿಕಾಂ ಸಂಸ್ಥೆಗಳೂ ಕೂಡ ಐಪಿಎಲ್ 2024 ಡೇಟಾ ಪ್ಯಾಕ್ ಆಫರ್‌ಗಳನ್ನು ನೀಡುತ್ತಿವೆ. ಐಪಿಎಲ್ 2024 ಆರಂಭವಾಗಿರುವುದರಿಂದ ವೊಡಾಫೋನ್ ಐಡಿಯಾ ಕೂಡ ವಿಶೇಷ ಕೊಡುಗೆಗಳನ್ನು ತಂದಿದೆ. 181 ರೂಪಾಯಿಗಳ ಪ್ಯಾಕ್‌ನಲ್ಲಿ ಶೇಕಡಾ 50 ರಷ್ಟು ಹೆಚ್ಚುವರಿ ದೈನಂದಿನ ಡೇಟಾವನ್ನು ನೀಡಲಾಗುತ್ತಿದೆ ಎಂದು ಅದು ಹೇಳಿದೆ. ಅದೇ ಸಮಯದಲ್ಲಿ 75 ಪ್ಯಾಕ್ ಹೆಚ್ಚುವರಿ 25 ಪ್ರತಿಶತ ದೈನಂದಿನ ಡೇಟಾವನ್ನು ನೀಡುತ್ತಿರುವುದಾಗಿ ಮಾಹಿತಿ ನೀಡಿದೆ.

ಇದಲ್ಲದೆ ವೊಡಾಫೋನ್ ಐಡಿಯಾ ವಿವಿಧ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಕಡಿತಗೊಳಿಸಿದೆ. 699 ರೂಪಾಯಿಯಿಂದ 3,199 ವರೆಗಿನ ರಿಚಾರ್ಚ್ ಪ್ಲಾನ್‌ಗಳ ಮೇಲೆ 50 ರೂಪಾಯಿಂದ 100 ರೂಪಾಯಿಯವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಐಪಿಎಲ್ ಟೂರ್ನಿ ಉದ್ದಕ್ಕೂ ಈ ರಿಯಾಯಿತಿಗಳು ಲಭ್ಯವಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ವಿಐ ಆ್ಯಪ್‌ ಮೂಲಕ ಪಡೆಯಬಹುದು.

Whats_app_banner