AWS ಸಹಭಾಗಿತ್ವದಲ್ಲಿ ಜನರೇಟಿವ್ ಎಐ ಪರಿಚಯಿಸಿದ ಟಾಟಾ ಕನ್ಸಲ್ಟೆನ್ಸಿ; ಬ್ಯುಸಿನೆಸ್ ಕ್ಷೇತ್ರಕ್ಕೆ ಬೊಂಬಾಟ್ ಪ್ರಯೋಜನ
ಟಾಟಾ ಕನ್ಸ್‌ಲ್ಟೆನ್ಸಿ ಅಮೆಜಾನ್ ವೆಬ್ ಸರ್ವೀಸ್ ಜೊತೆ ಸಹಭಾಗಿತ್ವದಲ್ಲಿ ಜನರೇಟಿವ್ ಎಐ ಪರಿಚಯಿಸಿದೆ. ಇದರಿಂದ ವ್ಯವಹಾರ ಕ್ಷೇತ್ರಕ್ಕೆ ಸಾಕಷ್ಟು ಲಾಭವಾಗಲಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಎಡಬ್ಲ್ಯೂಎಸ್ (ಅಮೆಜಾನ್ ವೆಬ್ ಸರ್ವೀಸ್) ಜನರೇಟಿವ್ ಎಐ ಪರಿಚಯಿಸಿದೆ. ಇದು ವ್ಯವಹಾರಗಳಿಗೆ ಎಐ ಹಾಗೂ ಎಡಬ್ಲ್ಯೂಎಸ್ ಜನರೇಟಿವ್ ಐಎ ಸೇವೆಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಹೊಸ ರೀತಿಯು ವ್ಯವಹಾರ ಮೌಲ್ಯಗಳಿಗೆ ಇದು ಬೇರೆಯದೇ ಆಯಾಮ ಒದಗುವಂತೆ ಮಾಡಲಿದೆ.
ಕಂಪನಿಯು ದೊಡ್ಡ ಕ್ಯಾಟಲಾಗ್ ಅನ್ನು ಅಭಿವೃದ್ಧಿ ಪಡಿಸಿದೆ. ಮಾತ್ರವಲ್ಲ 10,000ಕ್ಕೂ ಹೆಚ್ಚು ಉದ್ಯೋಗಿಗಳು ಇದರ ಬಗ್ಗೆ ತರಬೇತಿ ಪಡೆಯಲು ನೆರವಾಗುವಂತೆ ಹಣ ಹೂಡಿಕೆ ಮಾಡಿದೆ.
ಕಂಪನಿಯು ಈಗ ಉದ್ಯೋಗಿಗಳ ಪ್ರಮಾಣೀಕರಣದ ಮೇಲೆ ಹೆಚ್ಚು ಗಮನ ಹರಿಸಿದೆ. 25,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಎಡಬ್ಲ್ಯೂಎಸ್ ಜನರೇಟಿವ್ ಎಐ ಸರ್ವೀಸ್ ಸರ್ಟಿಫಿಕೇಟ್ ನೀಡುವ ಯೋಜನೆ ಹಾಕಿಕೊಂಡಿದೆ.
ಟಿಸಿಎಸ್ ಎಐ ತಂತ್ರಜ್ಞಾನವು ವ್ಯವಹಾರಗಳಿಗೆ ಹೇಗೆ ಸಹಾಯ ಮಾಡುತ್ತದೆ
ಅಮೆಜಾನ್ ಬೆಡ್‌ರಾಕ್‌ನಂತಹ ಎಡಬ್ಲ್ಯೂಎಸ್ ಸೇವೆಗಳನ್ನು ಬಳಸಿಕೊಂಡು ವ್ಯವಹಾರದ ಅಗತ್ಯಗಳಿಗೆ ಹೊಂದುವಂತೆ ಸರಿಯಾದ ಪರಿಹಾರ ಹುಡುಕಲು ಇದು ಸಹಾಯ ಮಾಡುತ್ತದೆ. ಟಿಸಿಎಸ್ ಕನ್ಸ್‌ಲ್ಟೆಂಟ್ ತನ್ನ ಕ್ಲೈಂಟ್‌ಗಳಿಗೆ ತಮ್ಮ ವ್ಯಾಪಾರದ ಸಂದರ್ಭದಲ್ಲಿನ ತೊಂದರೆಗಳ, ಅನಾನುಕೂಲಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ. ಅಲ್ಲದೆ ತನ್ನ ಸಹಯೋಗದಿಂದ ಹೊಸ ಹೊಸ ಪ್ರಯೋಗ ಮಾಡಲು ಅನುಕೂಲ ಮಾಡಿಕೊಡುತ್ತದೆ.
ಈಗಾಗಲೇ ನ್ಯೂಯಾರ್ಕ್, ಪಿಟ್ಸ್‌ಬರ್ಗ್, ಟೊರೊಂಟೊ, ಆಂಸ್ಟರ್‌ಡ್ಯಾಮ್ ಮತ್ತು ಟೋಕಿಯೊ ಸೇರಿದಂತೆ ಪ್ರಮುಖ ನಗರ ಕೇಂದ್ರಗಳಲ್ಲಿ ನೆಲೆಗೊಂಡಿರುವ ಕಂಪನಿಯ ನಾವೀನ್ಯತೆ ಮತ್ತು ಸಂಶೋಧನಾ ಕೇಂದ್ರಗಳಾದ ಟಿಸಿಎಸ್ ಪೇಸ್ ಪೋರ್ಟ್‌ಗಳಲ್ಲಿ ಈ ಆವಿಷ್ಕಾರದ ಉಪಯೋಗವನ್ನು ಪಡೆಯಬಹುದಾಗಿದೆ. ಈ ಹೊಸ ಆವಿಷ್ಕಾರದಿಂದ ಅಕಾಡೆಮಿಕ್ ರೀಸರ್ಚ್‌ಗಳು ಹಾಗೂ ಸ್ಟಾರ್ಟ್‌ಅಪ್ ಪಾರ್ಟ್‌ನರ್‌ಶಿಪ್‌ಗಳನ್ನು ಕೂಡ ಕಂಪನಿ ನಿಯಂತ್ರಣ ಮಾಡಬಹುದು.
ʼಈ ಎಐ ಜನರೇಟಿವ್ ನಿಯೋಜನೆಯನ್ನು ಪರಿಣಾಮಕಾರಿಯಾಗಿ ಮತ್ತು ವಿಶ್ವಾಸಾರ್ಹವಾಗಿಸಲು ಸೃಜನಶೀಲತೆ, ಉತ್ಪಾದಕತೆ, ಮತ್ತು ವ್ಯಾಪಾರ ಮೌಲ್ಯ ಸೇರಿದಂತೆ ಹಲವು ಆಯಾಮಗಳಲ್ಲಿ ತಂತ್ರಜ್ಞಾನವನ್ನು ಸಮಗ್ರವಾಗಿ ಸಂಪರ್ಕಿಸಬೇಕು. ಜನರೇಟಿವ್ AI ನಲ್ಲಿ ಆಳವಾದ ಸಾಮರ್ಥ್ಯಗಳನ್ನು ನಿರ್ಮಿಸಲು ನಾವು ಮಾಡಿದ ಎಲ್ಲಾ ಹೂಡಿಕೆಗಳಿಂದ ಡ್ರಾ, AWS ನೊಂದಿಗೆ ನಮ್ಮ ಬಲವಾದ ಪಾಲುದಾರಿಕೆ ಮತ್ತು ನಮ್ಮ ಗ್ರಾಹಕರ ವ್ಯವಹಾರಗಳ ಸಂದರ್ಭೋಚಿತ ಜ್ಞಾನ, ಅವರ ಬೆಳವಣಿಗೆಯನ್ನು ಹೆಚ್ಚಿಸಲು ಉತ್ಪಾದಕ AI ಯ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ನಾವು ಅವರಿಗೆ ಸಮಗ್ರ ವಿಧಾನವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತೇವೆʼ ಎಂದು ಟಿಸಿಎಸ್ ಎಐ ಕ್ಲೌಡ್ ಘಟಕದ ಉಪ ಮುಖ್ಯಸ್ಥ ಕೃಷ್ಣಮೋಹನ್ ಹೇಳಿದ್ದಾರೆ.
ಕನ್ಸಲ್ಟಿಂಗ್ ಅಂಡ್ ಅಡ್ವೈಸರಿ, ಸಲ್ಯೂಷನ್ ಡಿಸೈನ್, ಪ್ರೋಟೊಟೈಪಿಂಗ್, ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಟ್ರೈನಿಂಗ್, ಫೈನ್ ಟ್ಯೂನಿಂಗ್, ಗಾರ್ಡಿಯಲ್ ಏಜೆಂಟ್ ಡಿಸೈನ್, ಪ್ರೊಟೆಕ್ಟ್ ಡೆಲಿವರಿ ಹಾಗೂ ಆನ್‌ಗೋಯಿಂಗ್ ಮೈಂಟೇನೆಸ್ಸ್ ಇವುಗಳಿಗೆ ಟಿಸಿಎಸ್ ಜನರೇಟಿವ್ ಐಎ ಸೇವೆಗಳನ್ನು ಒದಗಿಸಲು ಆಫರ್ ನೀಡುತ್ತಿದೆ. ಡೆವಲಪರ್‌ಗಳಿಗೆ ನೇರವಾಗಿ ಐಎ ಚಾಲಿತ ಕೋಡ್‌ಗಳನ್ನು ಶಿಫಾರಸು ಮಾಡಲು Amazon CodeWhisperer ಅನ್ನು ನಿಯೋಜಿಸಲು TCS ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ.
ವಿಭಾಗ