Chanakya Niti: ಜೀವನದಲ್ಲಿ ಈ ಮೂವರ ಬಗ್ಗೆ ಜಾಗರೂಕರಾಗಿರಬೇಕು, ಅವರು ಹಾವಿಗಿಂತ ಅಪಾಯಕಾರಿ ಎನ್ನುತ್ತಾರೆ ಚಾಣಕ್ಯ
Chanakya Niti Kannada: ಚಾಣಕ್ಯರು ಹೇಳಿದ ಜೀವನಪಾಠಗಳನ್ನು ಕೇಳಿದರೆ ಸೋಲು ಎಂದಿಗೂ ಬಾಧಿಸುವುದಿಲ್ಲ. ಚಾಣಕ್ಯರು ಹೇಳುತ್ತಾರೆ ಜೀವನದಲ್ಲಿ ಮೂವರು ವ್ಯಕ್ತಿಗಳ ಜೊತೆ ಎಂದಿಗೂ ಜಾಗೃತರಾಗಿರಬೇಕು, ಅವರು ಹಾವಿಗಿಂತಲೂ ವಿಷಕಾರಿ ಎಂದು. ಹಾಗಾದರೆ ಆ ಮೂವರು ಯಾರು ನೋಡಿ.
ಆಚಾರ್ಯ ಚಾಣಕ್ಯರ ಪ್ರಕಾರ ಈ ಜಗತ್ತಿನಲ್ಲಿ ಕೆಲವು ಮನುಷ್ಯರು ಹಾವಿಗಿಂತಲೂ ಅಪಾಯಕಾರಿಯಾಗಿರುತ್ತಾರೆ. ಅಂತಹವರನ್ನು ನಂಬಿದರೆ ಅವರು ಬೆನ್ನಿಗೆ ಚೂರಿ ಹಾಕುವುದು ಖಂಡಿತ. ಅವರು ನಮಗೆ ತಿಳಿಯದಂತೆ ನಮ್ಮ ಜೀವನವನ್ನು ನಾಶ ಮಾಡುತ್ತಾರೆ. ಅಂತಹವರ ಬಳಿ ಸಹಾಯ ಕೇಳುವುದು, ಅಂತಹವರ ಸಹವಾಸ ಮಾಡುವುದು ಎಂದಿಗೂ ಒಳ್ಳೆಯದಲ್ಲ ಎನ್ನುವ ಚಾಣಕ್ಯ ಜೀವನದಲ್ಲಿ ಸುಖವಾಗಿರಬೇಕು ಎಂದರೆ ಅಂತಹವರಿಂದ ದೂರ ಇರಬೇಕು ಎನ್ನುತ್ತಾರೆ.
ಚಾಣಕ್ಯನ ಪ್ರಕಾರ ಅತಿಯಾಗಿ ಕೋಪಗೊಳ್ಳುವ ಮನುಷ್ಯದಿಂದ ದೂರವಿರಬೇಕು. ಅವರ ಮನಸ್ಸು ಶುದ್ಧವಿದ್ದರೂ ವರ್ತನೆ ಸರಿ ಇರುವುದಿಲ್ಲ. ವಿಪರೀತ ಕೋಪ ಬಂದಾಗ ಆ ವ್ಯಕ್ತಿ ಎಂತಹ ಮಟ್ಟಕ್ಕೂ ಇಳಿಯಬಹುದು. ಅಲ್ಲದೆ ತನ್ನ ಕೋಪದಿಂದ ಇತರರಿಗೂ ಹಾನಿ ಮಾಡಬಹುದು. ಕೋಪ ಬಂದಾಗ ತಾಳ್ಮೆಯನ್ನು ಕಳೆದುಕೊಳ್ಳುವ ವ್ಯಕ್ತಿಗಳು ನಿಮ್ಮ ಶತ್ರುಗಳಿಗಿಂತಲೂ ಅಪಾಯಕಾರಿ. ಹಾಗಾಗಿ ಅವರಿಂದ ದೂರ ಇರಬೇಕು ಎನ್ನುತ್ತಾರೆ.
ದುರಾಸೆ ಹೊಂದಿರುವ ವ್ಯಕ್ತಿ ನಿಮ್ಮೆದುರು ನಿಮ್ಮ ಜೊತೆ ಚೆನ್ನಾಗಿ ಇರುವಂತೆ ನಟಸಿ, ಹಿಂದಿನಿಂದ ತಿವಿಯುವ ಕೆಲಸ ಮಾಡುತ್ತಾರೆ. ದುರಾಸೆ ಇರುವವರಲ್ಲಿ ಒಳ್ಳೆಯತನವನ್ನು ಎಂದಿಗೂ ನಿರೀಕ್ಷೆ ಮಾಡದಿರಿ. ಅವರು ತಮಗೆ ಅವಶ್ಯಕತೆ ಇದ್ದಾಗ ಒಳ್ಳೆಯವರಂತೆ ನಟಿಸಿ ನಂತರ ತಮ್ಮ ಬುದ್ಧಿಯನ್ನು ತೋರುತ್ತಾರೆ. ಇಂತಹ ವ್ಯಕ್ತಿಗಳು ನಿಮ್ಮ ವೈಯಕ್ತಿಕ ಬದುಕು ನಿಮ್ಮ ಪ್ರಗತಿಗೂ ಹಾನಿ ಮಾಡಬಹುದು. ಅಂತಹವರಿಂದ ದೂರ ಇರುವುದು ಅವಶ್ಯ.
ಚಾಣಕ್ಯರು ಹೇಳುವ ಮೂರನೇ ವ್ಯಕ್ತಿ ಸ್ವಾರ್ಥಿಗಳು. ಈ ಜಗತ್ತಿನಲ್ಲಿ ಸ್ವಾರ್ಥಿಗಳನ್ನು ಎಂದಿಗೂ ನಂಬಬಾರದು. ಸ್ವಾರ್ಥಿಗಳು ವಿಷದ ಹಾವಿಗಿಂತಲೂ ಡೆಂಜರ್. ಇವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಸ್ವಾರ್ಥಿಗಳನ್ನು ಬೆಳೆಸುವುದರಿಂದ ಸ್ವಾರ್ಥ ಪ್ರಪಂಚ ಬೆಳೆಯುತ್ತದೆ. ಆರೋಗ್ಯಕರ ಸಮಾಜಕ್ಕೂ ಇವರು ಮಾರಕ. ಸ್ವಾರ್ಥಿಗಳು ಎಂದಿಗೂ ನೇರಾನೇರ ಇರುವುದಿಲ್ಲ. ಅವರು ಹಿಂದಿನಿಂದ ಮಸಲತ್ತು ಮಾಡುತ್ತಾರೆ. ಹಾಗಾಗಿ ಎಂದಿಗೂ ಸ್ವಾರ್ಥಿಗಳ ಬಲೆಗೆ ಸಿಲುಕದಿರಿ ಎಂದು ಚಾಣಕ್ಯ ಬುದ್ಧಿಮಾತು ಹೇಳುತ್ತಾರೆ.
ಇದನ್ನೂ ಓದಿ
Chanakaya Niti: ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯನ್ನು ನಂಬುವ ಮೊದಲು 4 ನಾಲ್ಕು ಅಂಶಗಳನ್ನು ಗಮನಿಸಬೇಕು; ಆ ಅಂಶಗಳು ಯಾವುವು ನೋಡಿ
ಜೀವನದಲ್ಲಿ ನನಗೆ ಯಾರೂ ಬೇಡ, ಯಾರೊಂದಿಗೂ ಸಂಬಂಧ ಬೇಕಾಗಿಲ್ಲ ಎಂದು ಎಂದಿಗೂ ಯೋಚಿಸಬೇಡಿ. ಏಕೆಂದರೆ ಯಾರಿಗೆ ಯಾವಾಗ ಯಾರ ಅವಶ್ಯಕತೆ ಬರಬಹುದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಂತ ಎಲ್ಲರನ್ನೂ ನಂಬಿ ಸ್ನೇಹಿ, ಪ್ರೀತಿ, ವಿಶ್ವಾಸ ಗಳಿಸಲೂ ಸಾಧ್ಯವಿಲ್ಲ. ಸಮಾಜದಲ್ಲಿ ಬದುಕುತ್ತಿರುವ ನಾವು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಅವಶ್ಯವಾಗುತ್ತದೆ. ಆದರೆ ಇದರರ್ಥ ಚೆನ್ನಾಗಿ ಮಾತನಾಡುವ ಎಲ್ಲರೂ ಒಳ್ಳೆಯವರು ಎಂದಲ್ಲ. ಚೆನ್ನಾಗಿ ಮಾತನಾಡುವವರು ಕುರುಡಾಗಿ ನಂಬುವುದೂ ತಪ್ಪು.
ವಿಭಾಗ