ದೀಪಾವಳಿಗೆ ಬಾಯಲ್ಲಿ ನೀರೂರಿಸುವ ಕೋವಾ ಕರ್ಜಿಕಾಯಿ ಮಾಡಿ; ಹಬ್ಬದಲ್ಲಿ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಇಷ್ಟಪಟ್ಟು ತಿಂತಾರೆ
ಕೋವಾ ಕರ್ಜಿಕಾಯಿ: ದೀಪಾವಳಿ ಹಬ್ಬದಲ್ಲಿ ಏನಾದರೂ ವೆರೈಟಿ ಸಿಹಿಯನ್ನು ಮಾಡಬೇಕೆಂದು ಯೋಚಿಸುವವರಿಗೆ ಕೋವಾ ಕರ್ಜಿಕಾಯಿ ಉತ್ತಮ ಆಯ್ಕೆಯಾಗಿರುತ್ತದೆ. ಸಿಹಿಯನ್ನು ಹೆಚ್ಚು ಇಷ್ಟ ಪಡುವವರ ಖುಷಿಯನ್ನು ಹೆಚ್ಚಿಸಲು ಇಷ್ಟು ಬೆಸ್ಟ್. ಈ ಕೋವಾ ಕರ್ಜಿಕಾಯಿ ಸ್ವೀಟ್ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಕೋವಾ ಕರ್ಜಿಕಾಯಿ: ದೀಪಾವಳಿ ಹಬ್ಬ ಬಂದೇ ಬಿಡ್ತು. ಬೆಳಕಿನ ಹಬ್ಬದಲ್ಲಿ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಹೊಸ ಬಟ್ಟೆ, ಬಣ್ಣ ಬಣ್ಣದ ರಂಗೋಲಿ, ಪಟಾಕಿ ಸದ್ದಿನೊಂದಿಗೆ ರುಚಿ ರುಚಿಯಾದ ಸಿಹಿ ತಿನಿಸುಗಳು ಸಂಪೂರ್ಣವಾಗಿ ದೀಪಾವಳಿಯ ಖುಷಿಯಲ್ಲಿ ಮಿಂದೇಳುವಂತೆ ಮಾಡುತ್ತದೆ. ಸಾಮಾನ್ಯವಾಗಿ ದೀಪಾವಳಿ ಬರುತ್ತಿದ್ದಂತೆ ಹೊಸ ಹೊಸ ಅಡುಗೆಗಳನ್ನು ಮಾಡಲು ಮನೆಯಲ್ಲಿ ತಯಾರಿ ನಡೆಯುತ್ತದೆ. ಆ ಅಡುಗೆಗಳು ಎಲ್ಲರಿಗೂ ಇಷ್ಟವಾಗುವಂತಿರಬೇಕೆಂದು ಸಾಕಷ್ಟು ಮಹಿಳೆಯರು ಸಾಕಷ್ಟು ಸರ್ಕಸ್ ಮಾಡುತ್ತಾರೆ. ಹೀಗಾಗಿ ಮಕ್ಕಳಿಂದ ಹಿಡಿದು ಹಿರಿಯರವರಿಗೆ ಎಲ್ಲರೂ ಇಷ್ಟಪಡುವಂತ ಕೋವಾ ಕರ್ಜಿಕಾಯಿ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಕೋವಾ ಕರ್ಜಿಕಾಯಿ ಮಾಡಲು ಬೇಕಾಗುವ ಪದಾರ್ಥಗಳು
ಮೈದಾ ಹಿಟ್ಟು
500 ಗ್ರಾಂ ಕೋವಾ
250 ಗ್ರಾಂ ತುಪ್ಪ
100 ಗ್ರಾಂ ಸಕ್ಕರೆ
ಸ್ವಲ್ಪ ಜಾಪತ್ರೆ ಎಲೆ
2 ಗ್ರಾಂ ಎಲಕ್ಕಿ ಪುಡಿ
ಪುಡಿ ಕಡಲೆ ಹಿಟ್ಟು
50 ಗ್ರಾಂ ಅಡುಗೆ ಸೋಡಾ
ಕರಿಯಲು ಬೇಕಾಗುವಷ್ಟು ಎಣ್ಣೆ
ಕೋವಾ ಕರ್ಜಿಕಾಯಿ ಮಾಡುವ ವಿಧಾನ
ಕರ್ಜಿಕಾಯಿಯನ್ನು ತಯಾರಿಸಲು ಮೊಲು ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಕೋವಾವನ್ನು ಮಿಕ್ಸ್ ಮಾಡಿಕೊಂಡು ತುಪ್ಪದೊಂದಿಗೆ ಹುರಿಯಿರಿ. ಇದಕ್ಕೆ ಸ್ವಲ್ಪ ಮೆಂತೆ ಪುಡಿ, ಸಕ್ಕರೆ, ಏಲಕ್ಕಿಯನ್ನು ಸೇರಿ ಪೇಸ್ಟ್ ಮಾಡಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿಯ ಮೈದಾ ಹಿಟ್ಟಿಗೆ ಬೇಕಿಂಗ್ ಸೋಡಾವನ್ನು ಸೇರಿಸಿ. ಇದಕ್ಕೆ ಸ್ವಲ್ಪ ತುಪ್ಪವನ್ನು ಸೇರಿ ನೀರನ್ನು ಬೆರೆಸಿ ಪೂರಿ ಹಿಟ್ಟಿನ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಿ. ನಂತರ ಒಲೆಯನ್ನು ಹೊತ್ತಿಸಿ ಅದರ ಮೇಲೆ ಬಾಣಲೆಯನ್ನು ಇಡಿ. ಬಾಣಲೆಗೆ ಉಳಿದ ಸಕ್ಕರೆಯನ್ನು ಸುರಿದು ಎರಡು ಲೋಕ ನೀರು ಹಾಕಿ ಸ್ವಲ್ಪ ಹದ ಆಗುವವರಿಗೆ ಇಡಿ. ನಂತರ ಇದನ್ನು ಕೆಳಗಿಸಿಕೊಂಡು ಪಕ್ಕಕ್ಕೆ ಇಡಿ. ಬಳಿಕ ಪೂರಿ ರೀತಿಯಲ್ಲಿ ತಯಾರಿಸಿಕೊಂಡಿರುವ ಹಿಟ್ಟನ್ನು ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಸ್ವಲ್ಪ ದಪ್ಪಗೆ ಪುರಿಯ ಹಾಗೆ ಒತ್ತಿ.
ನಂತರ ಹಿಟ್ಟಿನ ಮಧ್ಯ ಭಾಗದಲ್ಲಿ ಕೋವಾ ಮಿಶ್ರಣವನ್ನು ಹಾಕಿ ಅರ್ಧ ಚಂದ್ರಾಕಾರದಲ್ಲಿ ಮುಚ್ಚಿ. ಅಂಚುಗಳನ್ನು ಸುತ್ತಿ ವಿನ್ಯಾಸ ಮಾಡಿಕೊಳ್ಳಿ. ಇದಕ್ಕೆ ಕರ್ಜಿಕಾಯಿ ಮಾಡುವ ಚಿಕ್ಕ ಉಪಕರಣವನ್ನು ಬಳಸಬಹುದು. ನಂತರ ಇವುಗಳನ್ನು ಸ್ವಲ್ಪ ಬಣ್ಣ ಬರುವವರಿಗೆ ಎಣ್ಣೆಯಲ್ಲಿ ಹುರಿದು ಪಕ್ಕಕ್ಕೆ ಇಟ್ಟುಕೊಳ್ಳಿ. ಸಿದ್ಧವಾಗಿರುವ ಕರ್ಜಿಕಾಯಿಗೆ ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡಿರುವ ಸಕ್ಕರೆ ಪಾಕ ಅರ ಮೇಲೆ ಸುರಿಯಿರಿ ಅಥವಾ ಅದರೊಂದಿಗೆ ಸೇರಿಸಿದರೆ ಬಾಯಲ್ಲಿ ನೀರೂರಿಸುವ ಕೋವಾ ಕರ್ಜಿಕಾಯಿ ಸಿದ್ಧವಾಗುತ್ತದೆ. ಈ ದೀಪಾವಳಿಗೆ ಈ ಸಿಹಿಯನ್ನು ನಿಮ್ಮ ಪ್ರೀತಿಪಾತ್ರರರೊಂದಿಗೆ ಹಂಚಿಕೊಂಡು ತಿನ್ನಿ. ಇದು ನಿಮ್ಮ ಬೆಳಕಿನ ಹಬ್ಬವನ್ನು ಹೆಚ್ಚಿಸುತ್ತದೆ.