ಹೈಡಿ ಹೆಸರು ಕೇಳಿದ್ದೀರಿ ಅಲ್ವಾ? ಕಾಲ್ಪನಿಕ ಕಥೆಯೊಂದು ಜಗತ್ತು ವ್ಯಾಪಿಸಿಕೊಂಡಿದ್ದು ಹೀಗೆ: ರಂಗಸ್ವಾಮಿ ಮೂಕನಹಳ್ಳಿ ಬರಹ-did you hear heidis name this is how a fairy tale spanned the world written by rangaswamy mookanahalli smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೈಡಿ ಹೆಸರು ಕೇಳಿದ್ದೀರಿ ಅಲ್ವಾ? ಕಾಲ್ಪನಿಕ ಕಥೆಯೊಂದು ಜಗತ್ತು ವ್ಯಾಪಿಸಿಕೊಂಡಿದ್ದು ಹೀಗೆ: ರಂಗಸ್ವಾಮಿ ಮೂಕನಹಳ್ಳಿ ಬರಹ

ಹೈಡಿ ಹೆಸರು ಕೇಳಿದ್ದೀರಿ ಅಲ್ವಾ? ಕಾಲ್ಪನಿಕ ಕಥೆಯೊಂದು ಜಗತ್ತು ವ್ಯಾಪಿಸಿಕೊಂಡಿದ್ದು ಹೀಗೆ: ರಂಗಸ್ವಾಮಿ ಮೂಕನಹಳ್ಳಿ ಬರಹ

ಮಕ್ಕಳ ನೆಚ್ಚಿನ ಕಾರ್ಟೂನ್‌ ಹೈಡಿ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಈ ಕಾಲ್ಪನಿಕ ಕಥೆಯೊಂದು ಜಗತ್ತು ವ್ಯಾಪಿಸಿಕೊಂಡಿದ್ದು ಹೀಗೆ ಎನ್ನುವುದರ ಕುರಿತು ರಂಗಸ್ವಾಮಿ ಮೂಕನಹಳ್ಳಿಯವರು ನೀಡಿದ ಸುಂದರ ವಿವರಣೆ ಇಲ್ಲಿದೆ.

ಹೈಡಿ ಹೆಸರು ಕೇಳಿದ್ದೀರಿ ಅಲ್ವಾ? ಆ ಕಾಲ್ಪನಿಕ ಕಥೆಯ ಜಗತ್ತು ತೆರೆದುಕೊಂಡ ಬಗ್ಗೆ ಇಲ್ಲಿದೆ ಮಾಹಿತಿ
ಹೈಡಿ ಹೆಸರು ಕೇಳಿದ್ದೀರಿ ಅಲ್ವಾ? ಆ ಕಾಲ್ಪನಿಕ ಕಥೆಯ ಜಗತ್ತು ತೆರೆದುಕೊಂಡ ಬಗ್ಗೆ ಇಲ್ಲಿದೆ ಮಾಹಿತಿ

ಪ್ರವಾಸವನ್ನ ಉದ್ಯಮವಾಗಿ ಹೇಗೆ ಡೆವೆಲಪ್ ಮಾಡುತ್ತಾರೆ ಎನ್ನುವುದಕ್ಕೆ ಸ್ವಿಸ್ ನಲ್ಲಿರುವ ಹೈಡಿಲ್ಯಾಂಡ್ ಉತ್ತಮ ಉದಾಹರಣೆ . ಶಿಥಿಲ ಕಟ್ಟಡಗಳನ್ನ ಜತನದಿಂದ ಕಾಪಾಡಿಕೊಂಡು ಪ್ರವಾಸಿಗರ ಸೆಳೆಯುವ ರೋಮ್ , ಚಿಕ್ಕ ಪುಟ್ಟ ವಿಷಯಗಳನ್ನ ಕೂಡ ಆಸ್ಥೆಯಿಂದ ಕಾಪಾಡಿಕೊಂಡು ನಮ್ಮದು ಎನ್ನುವ ಬಹುತೇಕ ಯೂರೋಪಿಯನ್ ದೇಶಗಳಿಂದ ನಾವು ಕಲಿಯಬೇಕಾದ್ದು ಬಹಳವಿದೆ . ಇರಲಿ . ಹೈಡಿಲ್ಯಾಂಡ್ ಬಗ್ಗೆ ಒಂದಷ್ಟು ಮಾಹಿತಿ ಕೆಳಗಿನ ಸಾಲುಗಳಲ್ಲಿದೆ ಓದಿ .

ಹೈಡಿ ಅಂದರೆ ಜರ್ಮನ್ ಭಾಷೆಯಲ್ಲಿ `ನೋಬೆಲ್’, `ವೆರಿ ಕೈಂಡ್’ ಅನ್ನುವ ಅರ್ಥಕೊಡುತ್ತದೆ. ಜೊಹನ್ನ್ನ ಸ್ಪೈರಿ ಎನ್ನುವ ಪ್ರಸಿದ್ಧ ಲೇಖಕಿ `ಹೈಡಿ’ ಅನ್ನುವ ಒಂದು ಕಾದಂಬರಿಯನ್ನು ಬರೆದಳು. ಅದನ್ನು ಕಾದಂಬರಿ ಅನ್ನುವುದಕ್ಕಿಂತ ಮಕ್ಕಳಿಗಾಗಿ ಬರೆದ ಕಥೆ ಎನ್ನಬಹುದು. ಸರಿಸುಮಾರು 1880ರಲ್ಲಿ ಪ್ರಕಟಗೊಂಡ ಹೈಡಿ ಎಂಬ ಪುಟ್ಟ ಬಾಲಕಿಯೊಬ್ಬಳ ಸುತ್ತ ಸುತ್ತುವ ಕಥೆ. ಸ್ವಿಸ್ನು ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಅಂದಿನಿಂದ ಇಂದಿನವರೆಗೂ ಉತ್ತಮ ಮಾರಾಟ ಕಂಡ ಹೆಗ್ಗಳಿಕೆ ಕೂಡ ಈ ಪುಸ್ತಕಕ್ಕೆ ಸಿಕ್ಕಿದೆ. ಇದೊಂದು ಅನಾಥ ಮಗುವಿನ ಕಥೆ. ಹೈಡಿ ಎನ್ನುವ ಪುಟ್ಟ ಬಾಲಕಿ, ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಅವಳ ಚಿಕ್ಕಮ್ಮ ಐದು ವರ್ಷಗಳ ಕಾಲ ಈ ಬಾಲೆಯನ್ನು ಸಲಹುತ್ತಾಳೆ. ಹೈಡಿಗೆ ಐದು ವರ್ಷವಾದಾಗ ಆಕೆಯನ್ನು ಆಕೆ ಅಜ್ಜನ ಸುಪರ್ದಿಗೆ ಒಪ್ಪಿಸಿ, ಜರ್ಮನಿಯ ಫ್ರಾಂಕ್ಫಸರ್ಟ್ ನಗರದಲ್ಲಿ ಆಕೆಗೆ ಸಿಕ್ಕ ಕೆಲಸಕ್ಕೆಂದು ಹೊರಟುಹೋಗುತ್ತಾಳೆ.

ಆಲ್ಪ್ಸ್ ವಾತಾವರಣದಲ್ಲಿ ಈ ಹುಡುಗಿ ಬೆಳೆದ ಕಥೆ. ಬಾಲ್ಯದ ಹಸಿಹಸಿ ನೆನಪುಗಳು ಗಟ್ಟಿಗೊಂಡ ಸಂಬಂಧಗಳು, ಅವಳು ಮರಳಿ ಬಂದಾಗ ಆಗುವ ಬದಲಾವಣೆ ಮುಂತಾದವನ್ನು ಕುತೂಹಲಕಾರಿಯಾಗಿ ಮಕ್ಕಳಿಗಾಗಿ ಹೆಣೆದ ಕಥೆ. ಇದೊಂದು ಕಾಲ್ಪನಿಕ ಕಥೆ, ಆದರೂ ಇಲ್ಲಿಯ ಜನಮನದಲ್ಲಿ ಹೈಡಿ ಫ್ಯಾಕ್ಟರ್ ಸಾಕಷ್ಟು ಪ್ರಬಲವಾಗಿಯೇ ನೆಲೆಗೊಂಡಿದೆ. ಇಲ್ಲಿನ ಪ್ರವಾಸೋದ್ಯಮ ಇಲಾಖೆ, ಕಥೆಯಲ್ಲಿ ವರ್ಣಿಸಿರುವ ಆಲ್ಫ್ಸ್ ಪರ್ವತ ಶ್ರೇಣಿಯನ್ನು ಹೈಡಿಲ್ಯಾಂಡ್ ಎಂದೇ ಕರೆದಿದೆ. ಲಿಚನ್ಸ್ಟೈ ನ್ ಎನ್ನುವ ಒಂದು ದೇಶದ ಸರಹದ್ದಿಗೆ ಹೊಂದಿಕೊಂಡಿರುವ ಈ ನೆಲವನ್ನು ಹೈಡಿ ಹೆಸರಿನೊಂದಿಗೆ ಜೋಡಿಸಿ, ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ.

ಹೈಡಿ ಎಂಬ ಪದ ಜಗದ್ವ್ಯಾಪಿಯಾಗುವಂತೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಸರಿಸುಮಾರಿ ಇಪ್ಪತ್ತು ಚಲನಚಿತ್ರಗಳು ಈಕೆಯ ಕಥೆಯನ್ನಾಧರಿಸಿ ಚಿತ್ರೀಕರಣಗೊಂಡಿವೆ. ಬೇರೆ ಬೇರೆ ಭಾಷೆಗಳಲ್ಲಿ, ಆಯಾ ಭಾಷೆಯ ಪ್ರಸಿದ್ಧ ಲೇಖಕರು ಹೈಡಿಯನ್ನು ಭಾಷಾಂತರಿಸಿದ್ದಾರೆ. ಇಂದಿಗೂ ಹೈಡಿ ಅಮೆರಿಕಾದಲ್ಲಿ ಪ್ರಥಮ ಹೆಸರಾಗಿ ಬಳಸಲ್ಪಡುತ್ತಿದೆ. ಜರ್ಮನ್ ಮಾತನಾಡುವ ಎಲ್ಲ ದೇಶಗಳಲ್ಲಿ ಹೈಡಿ ಇತರ ಹೆಸರುಗಳೊಂದಿಗೆ ಜೋಡಿಸಲ್ಪಟ್ಟಿದೆ. ಹೈಡಿ ಹೆಸರಿನಲ್ಲಿ ಸಂಗೀತ, ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯ. ಒಂದು ಕಾಲ್ಪನಿಕ ಕಥೆಯನ್ನು ಸತ್ಯಕ್ಕಿಂತ ಹೆಚ್ಚಾಗಿ ಇಲ್ಲಿನ ಜನ ಜಗತ್ತಿಗೆ ಮಾರುವ ರೀತಿ ನೋಡಿದರೆ, ಇವರು ಅತ್ಯುತ್ತಮ ಮಾರಾಟಗಾರರು ಎಂದು ಒಪ್ಪಲೇಬೇಕು.

mysore-dasara_Entry_Point