Parenting Tips: ಮಕ್ಕಳು ಮನೆಬಿಟ್ಟು ಓಡಿಹೋಗಲು ಕಾರಣವೇನು? ಪೋಷಕರು ಗಮನಿಸಬೇಕಾದ ಅಂಶಗಳು- ಮನದ ಮಾತು ಅಂಕಣ-column why children getting out from home running away reasons why do kids want leave home psychologists opinion pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಮಕ್ಕಳು ಮನೆಬಿಟ್ಟು ಓಡಿಹೋಗಲು ಕಾರಣವೇನು? ಪೋಷಕರು ಗಮನಿಸಬೇಕಾದ ಅಂಶಗಳು- ಮನದ ಮಾತು ಅಂಕಣ

Parenting Tips: ಮಕ್ಕಳು ಮನೆಬಿಟ್ಟು ಓಡಿಹೋಗಲು ಕಾರಣವೇನು? ಪೋಷಕರು ಗಮನಿಸಬೇಕಾದ ಅಂಶಗಳು- ಮನದ ಮಾತು ಅಂಕಣ

Parenting Tips: ಮನಃಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್‌ ಇಂದಿನ ಅಂಕಣದಲ್ಲಿ ಮಕ್ಕಳು ಮನೆ ಬಿಟ್ಟು ಓಡಿಹೋಗುವ ವಿಚಾರಕ್ಕೆ ಸಂಬಂಧಪಟ್ಟಂತೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಬಹುತೇಕ ಪೋಷಕರು ಭಾವಿಸುವಂತೆ ಮನೆಬಿಟ್ಟು ಹೋಗುವುದೆಂದರೆ ಮಕ್ಕಳು ಬೇಕೆಂದೇ ಮಾಡುವ ಕೆಲಸ, ಅಸಹಕಾರ, ಅಗೌರವ, ಅವಿಧೇಯತೆ ಅಥವಾ ದಂಗೆಯಲ್ಲ ಎಂದು ಇವರು ಹೇಳಿದ್ದಾರೆ.

ಮನದ ಮಾತು ಅಂಕಣ
ಮನದ ಮಾತು ಅಂಕಣ (emma-simpson-mNGaaLeWEp0-unsplash)

Parenting Tips: ಮಕ್ಕಳಿಗೆ ಮನೆಯಷ್ಟು ಸುರಕ್ಷಿತ ಸ್ಥಳ ಮತ್ತೊಂದಿಲ್ಲ. ಮನೆಯಲ್ಲಿ ಸಿಗುವ ವಾತ್ಸಲ್ಯ ಮಮತೆ ಎಲ್ಲಿಯೂ ಹುಡುಕಿದರೂ ಸಿಗುವುದಿಲ್ಲ. ಆದರೂ ಕೆಲವು ಮಕ್ಕಳು ಹೇಳದೆ ಕೇಳದೆ ಮನೆಬಿಟ್ಚು ಓಡಿಹೋಗುತ್ತಾರೆ. ಇದಕ್ಕೆ ಕಾರಣವೇನಿರಬಹುದು ? ಮನೆಬಿಟ್ಟು ಹೋಗುವುದರಿಂದ ಅವರಿಗಾಗುವ ಲಾಭವಾದರೂ ಏನು? ಮನೆಯವರಿಗೆಲ್ಲಾ ಗಾಬರಿ ಮತ್ತು ಬೇಸರವಾಗುತ್ತದೆ ಎಂದು ತಿಳಿದಿದ್ದರೂ ಸಹ ಇಂಥ ದೆೊಡ್ಡ ಹೆಜ್ಜೆ ಇಡುವ ನಿರ್ಧಾರ ಹೇಗೆ ತೆಗೆದುಕೊಳ್ಳುತ್ತಾರೆ. ಪೋಷಕರು ಇದನ್ನು ಹೇಗೆ ತಡೆಯಬಹುದು ?

ಅಷ್ಚು ಸುಲಭವಾಗಿ ಕಾರಣವಿಲ್ಲದೆ ಯಾವ ಮಕ್ಕಳೂ ಸಹ ತಮ್ಮ ಮನೆಯನ್ನು ಬಿಟ್ಟು ಓಡಿಹೋಗಲು ಸಾಧ್ಯವಾಗುವುದಿಲ್ಲ. ಅನೇಕ ರೀತಿಯ ಕಾರಣಗಳಿರುತ್ತವೆ.

ಕುತೂಹಲ, ಒತ್ತಡ, ಪಾರಾಗುವಿಕೆ, ಹೋರಾಟ, ಸಾಹಸ

ಕೆಲವು ಮಕ್ಕಳು ಸನ್ನಿವೇಶಗಳಿಂದ, ಅದರಿಂದಾಗುವ ಪರಿಣಾಮಗಳಿಂದ, ಕೆಲಸ ಕಾರ್ಯಗಳಿಂದ, ಕರ್ತವ್ಯಗಳಿಂದ ತಪ್ಪಿಸಿಕೊಳ್ಳುವ ಕಾರಣಕ್ಕಾಗಿ ಓಡಿಹೋದರೆ, ಇನ್ನು ಕೆಲವು ಮಕ್ಕಳು ಹೊರ ಜಗತ್ತಿನ ಬಗ್ಗೆ ಇರುವ ಕುತೂಹಲ ಮತ್ತು ಹೊಸ ಅನುಭವ ಪಡೆಯುವ ಕಾರಣಕ್ಕಾಗಿ ಓಡಿಹೋಗುತ್ತಾರೆ. ಇನ್ನು ಕೆಲವು ಮಕ್ಕಳ ಸ್ವಭಾವತಃ ಸಾಹಸವಂತರಾಗಿರುತ್ತಾರೆ. ಇಂಥ ಮಕ್ಕಳು ಮನೆ ಬಿಟ್ಟು ಹೊರಗಡೆ ಬದುಕುವುದು ಸಾಹಸಕಾರ್ಯವೆಂದು ಭಾವಿಸಿ ಓಡಿಹೋಗುತ್ತಾರೆ.

ಹೀಗೆ ನಾನಾ ಕಾರಣಗಳಿಂದಾಗಿ ಪುಟ್ಟ ಮಕ್ಕಳಿಂದ ಹಿಡಿದು ಹದಿಹರೆಯದ ಮಕ್ಕಳ ತನಕ ಮನೆ ಬಿಟ್ಟು ಓಡಿ ಹೋಗುವ ಸಾಧ್ಯತೆಯಿರುತ್ತದೆ.

ಆದರೆ, ಬಹುತೇಕ ಪೋಷಕರು ಭಾವಿಸುವಂತೆ ಇದು ಮಕ್ಕಳಿಂದ ಉದ್ದೇಶಪೂರ್ವಕವಾದ ಅಸಹಕಾರ, ಅಗೌರವ, ಅವಿಧೇಯತೆ ಅಥವಾ ದಂಗೆಯಲ್ಲ. ಮಕ್ಕಳು ಓಡಿಹೋಗಲು ಕಾನೂನುಬದ್ಧ ಕಾರಣಗಳಿವೆ. ಈ ನಡವಳಿಕೆಯನ್ನು ತಡೆಗಟ್ಟಲು ಮತ್ತು ಪರಿಹರಿಸಲು ಇರುವ ಅಂಶಗಳ ಕುರಿತು ಮನೆಯ ಹಿರಿಯರು ಅರ್ಥಮಾಡಿಕೊಳ್ಳುವುದು ಅಗತ್ಯ.

  • ಮಕ್ಕಳು ಸಾಕಷ್ಚು ನೋವು ನಿರಾಸೆ ಅಸಹಾಯಕತನದಿಂದಲೇ ಕಠಿಣ ನಿರ್ಧಾರ ಮಾಡಿ ಮನೆಯನ್ನು ತೊರೆಯುತ್ತಾರೆ. ಪೋಷಕರ ಮತ್ತು ಮಕ್ಕಳ ನಡುವೆ ವಿಪರೀತವಾದ ವೈಮನಸ್ಯವಿದ್ದು ಪ್ರತಿನಿತ್ಯ ವಾದವಿವಾದಗಳು ಹೆಚ್ಚಾಗುತ್ತಿದ್ದು ಅದರಿಂದ ಮಕ್ಕಳು ಬೇಸತ್ತು, ಮನೆಯಲ್ಲಿ ಇದ್ದು ಪ್ರಯೋಜನವಿಲ್ಲ, ನಾನು ಯಾರಿಗೂ ಬೇಡವಾದವನು/ಳು, ನನ್ನನ್ನು ಯಾರು ಪ್ರೀತಿಸುವರಿಲ್ಲ, ನನ್ಮನ್ನು ಯಾರು ಅರ್ಥಮಾಡಿಕೊಳ್ಳುವರಿಲ್ಲವೆಂದು ಭಾವಿಸಿ ಹೊರಗಡೆ ಬೇರೆಯವರ ಆಸರೆಯಿಂದಲೋ ಅಥವ ನಾನು ಬದುಕಬಲ್ಲೆ ಎನ್ನುವ ಆತ್ಮ ವಿಶ್ವಾಸವಿಂದಲೋ ಮನೆಬಿಟ್ಟು ಹೊಗುವ ನಿರ್ಧಾರ ತೆಗೆದುಕೊಂಡಿರುತ್ತಾರೆ.
  • ಕೆಲವೊಮ್ಮೆ ಪೋಷಕರಿಂದ ವಿಪರೀತವಾದ ದೈಹಿಕ ಅಥವ ಮಾನಸಿಕ ಕಿರುಕುಳವಿದ್ದು ಅಥವ ಮಕ್ಕಳು ತಪ್ಪು ಮಾಡಿದಾಗ ಕಠಿಣ ಶಿಕ್ಷೆ ನೀಡುವ ಪೋಷಕರಿದ್ದರೆ, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಮಕ್ಕಳು ಮನೆ ಬಿಡಬಹುದು.
  • ಬಹಳ ಕಟ್ಟುನಿಟ್ಟು, ಅತಿಯಾದ ಶಿಸ್ತನ್ನು ಸಹ ಮಕ್ಕಳ ಮೇಲೆ ಹೇರಿದರೆ, ತಮ್ಮ ಮಿತಿ ಮೀರಿ ಸಹಿಸಲು ಯತ್ನಿಸಿರುತ್ತಾರೆ. ಇದನ್ನೂ ಮೀರೀಯೂ ಕೆಲವೊಮ್ಮೆ ಶಿಸ್ತು ಪಾಲಿಸದೇ ಇದ್ದಲ್ಲಿ ಪೋಷಕರು ಕಠಿಣ ಕ್ರಮ ತೆಗೆದುಕೊಂಡಲ್ಲಿ ಅಥವ ಶಿಕ್ಷೆ ಜಾರಿಸಿದರೆ ಮಕ್ಕಳು ಬೇಸತ್ತು, ಭಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಉದ್ದೇಶದಿಂದ ಮನೆಯನ್ನು ತೊರೆಯಬಹುದು
  • ಇನ್ನು ಕೆಲವು ಸಂಧಭ೯ಗಳಲ್ಲಿ ಮಕ್ಕಳು ತಪ್ಪು ಮಾಡಿದಾಗ ಅಥವ ಪೋಷಕರ ಅಪೇಕ್ಷೆಗಳನ್ನು ಪೂರೈಸದಿದ್ದರೆ ಹಿರಿಯರು ರೇಗಿಸುವುದುು, ಅಪಹಾಸ್ಯ ಮಾಡುವುದು, ಅತಿಯಾಗಿ ನಿಂದಿಸುವುದು, ದೌರ್ಜನ್ಯ ಮಾಡುವುದು, ಕೀಳಾಗಿ ನೋಡುವುದು, ಎಲ್ಲರ ಮುಂದೆ ಹಣೆಪಟ್ಟಿ ಹಚ್ಚಿ ಕರೆಯುವುದು ಮಾಡಿದಾಗ ಮಕ್ಕಳು ಬೇಸರವಾಗಿ ಹೊರಗಡೆ ದಾರಿ ಮಾಡಿಕೊಳ್ಳಬಹುದು.
  • ಒಮೊಮ್ಮೆ ತಂದೆ ತಾಯಿಯ ನಡುವೆ ಮನಸ್ತಾಪಗಳಿದ್ದು, ಸದಾ ಮನೆಯಲ್ಲಿ ವಾದ ವಿವಾದ ಕದನಗಳು ನಡೆಯುತ್ತಿದ್ದು, ಮಕ್ಕಳನ್ನು ನಿರ್ಲಕ್ಷಿಸಿ, ಎಷ್ಟೂ ಗಮನ ಕೊಡದೆ ತಮ್ಮ ಪಾಡಿಗೆ ಜಗಳದಲ್ಲಿ ಮುಳುಗಿ ಹೋಗಿದ್ದರೆ, ಮಕ್ಕಳು ಬೇಸತ್ತು ಮನೆಯಿಂದ ಓಡಿ ಹೋಗುವ ಸಾಧ್ಯತೆಯಿರುತ್ತದೆ. ಒಮೊಮ್ಮೆ ಪೋಷಕರ ಗಮನ ಸೆಳೆಯಲು ಅಥವ ಪೋಷಕರಿಗೆ ಪಾಠ ಕಲಿಸಬೇಕೆನ್ನುವ ಉದ್ದೇಶದಿಂದಲೂ ಮಕ್ಕಳು ಹೀಗೆ ಮಾಡುವುದುಂಟು
  • ಇನ್ನು ಪ್ರೀತಿ ಪ್ರೇಮ ವಿಷಯದಲ್ಲಿಯೂ ಕೂಡ ಹದಿಹರೆಯದ ಮಕ್ಕಳು ಪ್ರೀತಿಸುವ ವ್ಯಕ್ತಿಯ ಜೊತೆ ಓಡಿಹೋಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ.
  • ಪೋಷಕರು ಮಕ್ಕಳ ಪ್ರೀತಿಗೆ ವಿರುದ್ಧವಿದ್ದು, ಪ್ರೀತಿ ಮುಂದುವರೆಯಲು ಅಡ್ಡಿ ಮಾಡಿದಾಗ, ಬೇರೆ ವಿಧಿಯಲ್ಲದೆ ಮನೆ ಬಿಟ್ಟು ಓಡಿಹೋಗುತ್ತಾರೆ.
  • ಪೋಷಕರ ಅರಿವಿಲ್ಲದೆಯೆ ಕಾನೂನು ವಿರುದ್ಧವಾಗಿ ಅಪರಾಧಗಳೇನಾದರು ಸ್ನೇಹಿತರೊಡನೆ ಕೂಡಿ ಮಾಡಿದ್ದರೆ, ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಮನೆಬಿಟ್ಟು ಹೋಗಬಹುದು.

ಇದನ್ನೂ ಓದಿ: ನಿಮ್ಮದು ವಿಳಂಬ ಪ್ರವೃತ್ತಿನಾ? ಯಾವುದೇ ಕೆಲಸವನ್ನಾದ್ರೂ ನಾಳೆ ಮಾಡಿದ್ರಾಯ್ತು ಎಂಬ ಆಲಸಿ ಮನೋಭಾವದಿಂದ ಹೊರ ಬರೋದು ಹೇಗೆ– ಮನದ ಮಾತು

ಪರಿಹಾರವೇನು?

1. ಪರ್ಯಾಯ ಮಾರ್ಗಗಳನ್ನು ಒದಗಿಸಿ: ಶಿಕ್ಷೆ ನೀಡುವ ಬದಲು ಮಕ್ಕಳಿಗೆ ಅವರ ಭಾವನೆಗಳು ಮತ್ತು ಅಗತ್ಯಗಳನ್ನು ನಿಭಾಯಿಸಲು ಪರ್ಯಾಯ ಮಾರ್ಗಗಳನ್ನು ಒದಗಿಸಿ. ಶಾಂತಗೊಳಿಸುವ ತಂತ್ರಗಳನ್ನು ಕಲಿಸುವುದು, ಸಂವೇದನಾ ಅಗತ್ಯಗಳನ್ನು ಪೂರೈಸುವುದು, ಅವರಿಗೆ ಸಂವಹನ ಮಾಡಲು ಸಹಾಯ ಮಾಡುವುದು ಅಥವಾ ಸುರಕ್ಷಿತವಾದ ವಾತಾವರಣವನ್ನು ಸೃಷ್ಟಿಸುವುದು.

2. ಭಾವನಾತ್ಮಕ ಒಡನಾಟ: ಮಕ್ಕಳೊಂದಿಗೆ ಭಾವನಾತ್ಮಕವಾಗಿ ಆಟ ಮತ್ತು ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ನಿಜವಾಗಿಯೂ ಸಂತೋಷ ಕೊಡುವ ಚಟುವಟಿಕೆಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಅವರಿಗೆ ನೀಡಿ. ಈ ಕ್ಷಣಗಳಲ್ಲಿ ಸಂಪೂರ್ಣವಾಗಿ ಮಕ್ಕಳ ಜೊತೆ ನಿಮ್ಮನ್ನು ತೊಡಗಿಸಿಕೊಳ್ಳಿ, ಮಾನಸಿಕ ಒಡನಾಟ ಮಕ್ಕಳು ಸುರಕ್ಷಿತವಾಗಿರಲು ಮತ್ತು ಓಡಿಹೋಗುವ ಪ್ರಚೋದನೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ

3. ಸ್ಪಷ್ಟ ನಿಯಮಗಳು: ಮಕ್ಕಳು ಕುಟುಂಬದ ಗಡಿಗಳನ್ನು(family boundary) ಮತ್ತು ಪಲಾಯನದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ನಿರೀಕ್ಷೆಗಳನ್ನು ಸ್ಪಷ್ಟವಾಗಿ ಮಕ್ಕಳಿಗೆ ಸಂವಹನ ಮಾಡುವ ಮೂಲಕ ಮತ್ತು ಸ್ಥಿರವಾಗಿ ನಿಯಮಗಳನ್ನು ಜಾರಿಗೊಳಿಸುವ ಮೂಲಕ, ಮಕ್ಕಳು ಏನನ್ನು ನಿರೀಕ್ಷಿಸಬಹುದೆಂದು ತಿಳಿಸಿಕೊಡುತ್ತದೆ

5 . ಆಪ್ತಸಮಾಲೋಚಕರ ಅಥವಾ ಮನಃಶಾಸ್ತಜ್ಞರ ಸಹಾಯವನ್ನು ಪಡೆಯಿರಿ: ನಿಮ್ಮ ಮಗುವಿನ ಪಲಾಯನವು ಗಮನಾರ್ಹ ತೊಂದರೆಯನ್ನು ಉಂಟುಮಾಡುತ್ತಿದ್ದರೆ ಅಥವಾ ಅವರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ವೃತ್ತಿಪರರ ಸಹಾಯವನ್ನು ಪಡೆಯುವುದು ಉತ್ತಮ. ಆಪ್ತಸಮಾಲೋಚಕರು ಪ್ರಚೋದಕಗಳನ್ನು ಗುರುತಿಸಲು ಮತ್ತು ತಪ್ಪಿಸಿಕೊಳ್ಳುವ ನಡವಳಿಕೆಯನ್ನು ನಿರ್ವಹಿಸಲು ಮಾರ್ಗದರ್ಶನ ನೀಡುತ್ತಾರೆ.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

 

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

mysore-dasara_Entry_Point