ಕನ್ನಡ ಸುದ್ದಿ  /  ಜೀವನಶೈಲಿ  /  After Puc: ದ್ವಿತೀಯ ಪಿಯುಸಿ ಬಳಿಕ ಆರ್ಟ್ಸ್‌ ವಿದ್ಯಾರ್ಥಿಗಳು ಕಲಿಯಬಹುದಾದ 10 ಡಿಪ್ಲೊಮಾ ಕೋರ್ಸ್‌ಗಳು

After Puc: ದ್ವಿತೀಯ ಪಿಯುಸಿ ಬಳಿಕ ಆರ್ಟ್ಸ್‌ ವಿದ್ಯಾರ್ಥಿಗಳು ಕಲಿಯಬಹುದಾದ 10 ಡಿಪ್ಲೊಮಾ ಕೋರ್ಸ್‌ಗಳು

Top 10 Diploma Courses After 12th: ದ್ವಿತೀಯ ಪಿಯುಸಿ ಫಲಿತಾಂಶದ ಸಮಯದಲ್ಲಿ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳು ಮತ್ತು ಹೆತ್ತವರಲ್ಲಿ ಇರಬಹುದು. ಇಂತಹ ಸಮಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಡಿಪ್ಲೊಮಾ ಕೋರ್ಸ್‌ ಮಾಡಿ ಶೀಘ್ರದಲ್ಲಿ ಉದ್ಯೋಗ ಪಡೆಯಲು ಬಯಸಬಹುದು. 12ನೇ ತರಗತಿ ಮುಗಿದ ಬಳಿಕ ಮಾಡಬಹುದಾದ 10 ಡಿಪ್ಲೊಮಾ ಕೋರ್ಸ್‌ಗಳ ವಿವರ ಇಲ್ಲಿ ನೀಡಲಾಗಿದೆ.

After Puc: ದ್ವಿತೀಯ ಪಿಯುಸಿ ಬಳಿಕ ಆರ್ಟ್ಸ್‌ ವಿದ್ಯಾರ್ಥಿಗಳಿಗೆ 10 ಡಿಪ್ಲೊಮಾ ಕೋರ್ಸ್‌
After Puc: ದ್ವಿತೀಯ ಪಿಯುಸಿ ಬಳಿಕ ಆರ್ಟ್ಸ್‌ ವಿದ್ಯಾರ್ಥಿಗಳಿಗೆ 10 ಡಿಪ್ಲೊಮಾ ಕೋರ್ಸ್‌

ಕರ್ನಾಟಕ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ (Karnataka 2nd PUC Results 2024) ಸಂದರ್ಭದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಮುಂದೇನು ಎಂದು ಯೋಚಿಸಬಹುದು. ಬಡತನ, ಕೌಟುಂಬಿಕ ಪರಿಸ್ಥಿತಿ ಇತ್ಯಾದಿ ಕಾರಣಗಳಿಂದ ಪಿಯುಸಿ ಬಳಿಕ ಶಿಕ್ಷಣ ಮೊಟಕುಗೊಳಿಸುವ ಪ್ರಯತ್ನ ಮಾಡುವುದಕ್ಕಿಂತ ಇನ್ನೊಂದೆರಡು ವರ್ಷ ಕಷ್ಟ ಅನುಭವಿಸೋಣ ಎಂದು ಮುಂದಿನ ಶಿಕ್ಷಣದತ್ತ ಯೋಚಿಸಿದರೆ ಭವಿಷ್ಯದ ಬದುಕು ಇನ್ನಷ್ಟು ಉತ್ತಮವಾಗಿರಲಿದೆ. ಪಿಯುಸಿ ಬಳಿಕ ಯಾವೆಲ್ಲ ಡಿಪ್ಲೊಮಾ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ವಿದ್ಯಾರ್ಥಿ ಓದುಗರಿಗೆ, ಪೋಷಕರಿಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ದ್ವಿತೀಯ ಪಿಯುಸಿ ಬಳಿಕ ಡಿಪ್ಲೊಮಾ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ನಿರ್ದಿಷ್ಟ ಉದ್ಯಮದ ಅವಶ್ಯಕತೆಗೆ ತಕ್ಕಂತೆ ನಿರ್ದಿಷ್ಟ ಪ್ರ್ಯಾಕ್ಟಿಕಲ್‌ ಸ್ಕಿಲ್‌ ಕಲಿಯುವ ಅವಕಾಶ ಡಿಪ್ಲೊಮಾ ಕೋರ್ಸ್‌ಗಳಿಂದ ದೊರಕುತ್ತದೆ. ನಿಮ್ಮ ಆಸಕ್ತಿ ಮತ್ತು ಬದುಕಿನ ಗುರಿಗಳಿಗೆ ತಕ್ಕಂತೆ ನಿಮಗೆ ಸೂಕ್ತವೆನಿಸುವ ಡಿಪ್ಲೊಮಾ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು.

ಸೆಕೆಂಡ್‌ ಪಿಯುಸಿ ಬಳಿಕ ಆರ್ಟ್ಸ್‌ ವಿದ್ಯಾರ್ಥಿಗಳು ಮಾಡಬಹುದಾದ 10 ಡಿಪ್ಲೊಮಾ ಕೋರ್ಸ್‌ಗಳು

ಡಿಪ್ಲೊಮಾ ಇನ್‌ ಗ್ರಾಫಿಕ್‌ ಡಿಸೈನ್‌

ಈಗಿನ ಡಿಜಿಟಲ್‌ ಜಗತ್ತಿನಲ್ಲಿ ಗ್ರಾಫಿಕ್‌ ವಿನ್ಯಾಸಕರಿಗೆ ಬೇಡಿಕೆ ಹೆಚ್ಚಾಗಿದೆ. ವಿಷುಯಲ್‌ ಕಮ್ಯುನಿಕೇಷನ್‌ ವಿಭಾಗದಲ್ಲಿ ಕರಿಯರ್‌ ಪಡೆಯಲು ಈ ಡಿಪ್ಲೊಮಾ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು. ಟೈಪೊಗ್ರಫಿ, ಕಲರ್‌ ಥಿಯರಿ, ಲೇಔಟ್‌ ಡಿಸೈನ್‌ ಇತ್ಯಾದಿ ಸ್ಕಿಲ್ಸ್‌ ಕಲಿಯಬಹುದು. ಅಡಾಬ್‌ ಫೋಟೋಶಾಪ್‌, ಇಲ್ಯುಸ್ಟ್ರೇಟರ್‌, ಇನ್‌ಡಿಸೈನ್‌ ಇತ್ಯಾದಿಗಳನ್ನು ಕಲಿಯಬಹುದು. ಲೋಗೋ, ಪೊಸ್ಟರ್‌, ಬ್ರೌಷರ್‌ ಇತ್ಯಾದಿಗಳನ್ನು ವಿನ್ಯಾಸ ಮಾಡಬಹುದು. ಈಗಿನ ಸೋಷಿಯಲ್‌ ಮೀಡಿಯಾ ಕಾಲದಲ್ಲಿ ಗ್ರಾಫಿಕ್‌ ಡಿಸೈನರ್‌ಗಳಿಗೆ ಅವಕಾಶ ಹೆಚ್ಚಾಗಿದೆ.

ಡಿಪ್ಲೊಮಾ ಇನ್‌ ಇಂಟೀರಿಯರ್‌ ಡಿಸೈನ್‌

ಈಗ ರಿಯಲ್‌ ಎಸ್ಟೇಟ್‌, ಹೊಸ ಮನೆ ನಿರ್ಮಾಣ ಇತ್ಯಾದಿ ಚಟುವಟಿಕೆಗಳು ಉತ್ತುಂಗದಲ್ಲಿದೆ. ಮನೆಯ ಇಂಟೀರಿಯರ್‌ ಡಿಸೈನ್‌ ಕ್ಷೇತ್ರದಲ್ಲಿ ಅವಕಾಶಗಳು ಸಾಕಷ್ಟಿವೆ. ಮನೆಯ ಇಂಟೀರಿಯರ್‌ಗೆ ಹಲವು ಲಕ್ಷ ವ್ಯಯಿಸಲು ಜನರು ಹಿಂಜರಿಯುತ್ತಿಲ್ಲ. ಇಂತಹ ಸಮಯದಲ್ಲಿ ಇಂಟೀರಿಯರ್‌ ಡಿಸೈನರ್‌ಗಳಿಗೆ ಅವಕಾಶ ಹೆಚ್ಚಾಗಿದೆ. ಮನೆಯಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು ಅಚ್ಚುಕಟ್ಟಾಗಿ ಬಳಕೆಗೆ ಯೋಗ್ಯವಾಗುವಂತೆ, ಅಂದವಾಗಿ ಕಾಣಿಸುವಂತೆ ಮಾಡುವ ಪರಿಣಿತರಿಗೆ ಬೇಡಿಕೆಯಿದೆ. ಡಿಸೈನ್‌ ಪ್ರಿನ್ಸಿಪಅಲ್‌, ಸ್ಪೇಸ್‌ ಪ್ಲ್ಯಾನಿಂಗ್‌, ಫರ್ನಿಚರ್‌ ಡಿಸೈನ್‌, ಲೈಟಿಂಗ್‌ ಡಿಸೈಣ್‌ ಇತ್ಯಾದಿ ವಿವಿಧ ವಿಷಯಗಳನ್ನು ಈ ಕೋರ್ಸ್‌ನಲ್ಲಿ ಕಲಿಯಬಹುದು. ಆಟೋಕ್ಯಾಡ್‌, ಸ್ಕೆಚ್‌ಅಪ್‌ ಇತ್ಯಾದಿ ಸಾಫ್ಟ್‌ವೇರ್‌ ಟೂಲ್‌ ಕಲಿತು 2ಡಿ ಮತ್ತು 3ಡಿ ಡಿಸೈನ್‌ಗಳನ್ನು ಈ ಕೋರ್ಸ್‌ನಲ್ಲಿ ಕಲಿಯಬಹುದು.

ಡಿಪ್ಲೊಮಾ ಮೆಡಿಕಲ್‌ ಲ್ಯಾಬ್‌ ಟೆಕ್ನಿಷಿಯನ್‌

ಪಿಯುಸಿ ಬಳಿಕ ಮೆಡಿಕಲ್‌ ಲ್ಯಾಬ್‌ ಟೆಕ್ನಿಷಿಯನ್‌ ಕಲಿಯಬಹುದು. ಆರ್ಟ್ಸ್‌ ಓದಿರುವವರು ಒಂದು ವರ್ಷ ಹೆಚ್ಚುವರಿಯಾಗಿ ವಿಜ್ಞಾನ ವಿಷಯವನ್ನು ಈ ಕೋರ್ಸ್‌ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಕೆಲವೊಂದು ಸಂಸ್ಥೆಗಳು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಪರಿಗಣಿಸಬಹುದು. ಪಿಯಸಿ ವಿಜ್ಞಾನ ಓದಿರುವವರಿಗೆ ಈ ಕಷ್ಟವಿಲ್ಲ. ಕೊರೊನಾ ಬಳಿಕ ಲ್ಯಾಬ್‌ ಟೆಕ್ನಿಷಿಯನ್‌ಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ.

ಡಿಪ್ಲೊಮಾ ಇನ್‌ ಒಟಿ ಟೆಕ್ನಿಷಿಯನ್‌

ಪಿಯುಸಿ ಆರ್ಟ್ಸ್‌ ಬಳಿಕ ಈ ಕೋರ್ಸ್‌ನಲ್ಲಿ ಒಂದು ವರ್ಷ ಹೆಚ್ಚುವರಿಯಾಗಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಟಿ ಟೆಕ್ನಿಷಿಯನ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ.

ಡಿಪ್ಲೊಮಾ ಇನ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌

ಆರೋಗ್ಯಸೇವೆ ನಿರ್ವಹಣೆ ವಿಭಾಗದಲ್ಲಿ ಉದ್ಯೋಗ ಪಡೆಯಲು ಬಯಸುವವರು ಪಿಯುಸಿ ಕಲಾ ವಿಭಾಗದಲ್ಲಿ ಕಲಿತು ಡಿಪ್ಲೊಮಾ ಇನ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌ ಕೋರ್ಸ್‌ಗೆ ಸೇರಬಹುದು.

ಡಿಪ್ಲೊಮಾ ಇನ್‌ ಫ್ಯಾಷನ್‌ ಡಿಸೈನ್‌

ಫ್ಯಾಷನ್‌ ಉದ್ಯಮದಲ್ಲಿ ಕರಿಯರ್‌ ರೂಪಿಸಿಕೊಳ್ಳಲು ಬಯಸುವವರಿಗೆ ಫ್ಯಾಷನ್‌ ಡಿಸೈನ್‌ ಡಿಪ್ಲೊಮಾ ಕೋರ್ಸ್‌ ಸೂಕ್ತವಾಗಬಹುದು. ವಿನ್ಯಾಸ, ಪ್ಯಾಟರ್ನ್‌ ಮೇಕಿಂಗ್‌, ಗಾರ್ಮೆಂಟ್‌, ಟೆಕ್ಸ್‌ಟೈಲ್‌ ಆಯ್ಕೆ ಇತ್ಯಾದಿ ಹಲವು ವಿಷಯಗಳನ್ನು ಕಲಿಯಬಹುದು. ಅಡಾಬ್‌ ಇಲ್ಯುಸ್ಟ್ರೇಟರ್‌, ಫೋಟೋಶಾಪ್‌ ಇತ್ಯಾದಿ ಟೂಲ್‌ಗಳನ್ನು ಬಳಸಲು ಈ ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ. ಇವುಗಳಲ್ಲಿ ಡಿಸೈನ್‌ ಮತ್ತು ಸ್ಕೆಚ್‌ ಮಾಡಬೇಕಾಗುತ್ತದೆ.

ಡಿಪ್ಲೊಮಾ ಇನ್‌ ಡಿಜಿಟಲ್‌ ಮಾರ್ಕೆಟಿಂಗ್‌

ಆನ್‌ಲೈನ್‌ ಮಾರ್ಕೆಟಿಂಗ್‌ ವಿಭಾಗದಲ್ಲಿ ಕರಿಯರ್‌ ರೂಪಿಸಲು ಡಿಪ್ಲೊಮಾ ಇನ್‌ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಸೂಕ್ತ ಆಯ್ಕೆಯಾಗಿದೆ. ಡಿಜಿಟಲ್‌ ಮಾರ್ಕೆಟಿಂಗ್‌ ಫಂಡಮೆಂಟಲ್ಸ್‌ ಅನ್ನು ಈ ಕೋರ್ಸ್‌ನಲ್ಲಿ ಕಲಿಯಬಹುದು. ಅಂದರೆ, ಸರ್ಚ್‌ ಎಂಜಿನ್‌ ಆಪ್ಟಿಮೈಜೇಷನ್‌, ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌, ಇಮೇಲ್‌ ಮಾರ್ಕೆಟಿಂಗ್‌, ಕಂಟೆಂಟ್‌ ಮಾರ್ಕೆಟಿಂಗ್‌ ಇತ್ಯಾದಿಗಳನ್ನು ಕಲಿಯಬಹುದು. ಈ ಡಿಜಿಟಲ್‌ ಯುಗದಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಕೌಶಲ ಕಲಿತವರಿಗೆ ಒಳ್ಳೆಯ ಅವಕಾಶ ಮತ್ತು ಉತ್ತಮ ವೇತನದ ಉದ್ಯೋಗಗಳು ಕಾಯುತ್ತಿವೆ .

ಡಿಪ್ಲೊಮಾ ಇನ್‌ ಫಾರಿನ್‌ ಲ್ಯಾಂಗ್ವೇಜ್‌

ಹೊಸ ಭಾಷೆಗಳನ್ನು ಕಲಿಯಲು ಮತ್ತು ಸಂವಹನ ಕೌಶಲ ಉತ್ತಪಡಿಸಿಕೊಳ್ಳಲು ಬಯಸುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ.

ಡಿಪ್ಲೊಮಾ ಇನ್‌ ಬ್ಯೂಟಿ ಆಂಡ್‌ ವೆಲ್‌ನೆಸ್‌

ಬ್ಯೂಟಿ ಉದ್ಯಮದಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ.

ಇವಿಷ್ಟು ಕೋರ್ಸ್‌ಗಳನ್ನು ಉದಾಹರಣೆಯಾಗಿ ನೀಡಲಾಗಿದೆ. ಪಿಯುಸಿ ಬಳಿಕ ಮುಂದೆ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟತೆ ನಿಮ್ಮಲ್ಲಿ ಇರಲಿ. ಭವಿಷ್ಯದಲ್ಲಿ ಏನಾಗಲು ಬಯಸುವಿರಿ ಎನ್ನುವುದನ್ನು ಯೋಚಿಸಿ ಕೋರ್ಸ್‌ ಆಯ್ಕೆ ಮಾಡಿಕೊಳ್ಳಿ. ಫ್ರೆಂಡ್‌ ಆಯ್ಕೆ ಮಾಡಿಕೊಂಡ ಎಂದು ಕಣ್ಣುಮುಚ್ಚಿ ನೀವು ಆ ಕೋರ್ಸ್‌ ತೆಗೆದುಕೊಳ್ಳಬೇಡಿ. ನೀವು ಜೀವನಪೂರ್ತಿ ದುಡಿಯಬೇಕಾದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ರಿಸರ್ಚ್‌ ಮಾಡುವುದು ಅಗತ್ಯವಾಗಿದೆ.