ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024: ಅತೀ ಕಡಿಮೆ ಬೆಲೆಗೆ ಇಳಿಯುತ್ತಿದೆ ಆಪಲ್ ಐಪ್ಯಾಡ್, ಆಫರ್ ಪರಿಶೀಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024: ಅತೀ ಕಡಿಮೆ ಬೆಲೆಗೆ ಇಳಿಯುತ್ತಿದೆ ಆಪಲ್ ಐಪ್ಯಾಡ್, ಆಫರ್ ಪರಿಶೀಲಿಸಿ

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024: ಅತೀ ಕಡಿಮೆ ಬೆಲೆಗೆ ಇಳಿಯುತ್ತಿದೆ ಆಪಲ್ ಐಪ್ಯಾಡ್, ಆಫರ್ ಪರಿಶೀಲಿಸಿ

Flipkart Big Billion Days 2024: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 ಸೆಪ್ಟೆಂಬರ್​ 29ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆ ಅತೀ ಕಡಿಮೆ ಬೆಲೆಗೆ ಆಪಲ್ ಐಪ್ಯಾಡ್ ಇಳಿಕೆಯಾಗುತ್ತಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024: ಅತೀ ಕಡಿಮೆ ಬೆಲೆಗೆ ಇಳಿಯುತ್ತಿದೆ ಆಪಲ್ ಐಪ್ಯಾಡ್
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024: ಅತೀ ಕಡಿಮೆ ಬೆಲೆಗೆ ಇಳಿಯುತ್ತಿದೆ ಆಪಲ್ ಐಪ್ಯಾಡ್

Flipkart Big Billion Days 2024: ಅತಿದೊಡ್ಡ ಹಾಗೂ ಪ್ರಸಿದ್ಧ ಇ-ಕಾಮರ್ಸ್ ಪ್ಲಾಟ್​ಫಾರಂ ಫ್ಲಿಪ್​ಕಾರ್ಟ್​ ಈ ವರ್ಷದ ಅತಿದೊಡ್ಡ ಬಿಗ್​ ಬಿಲಿಯನ್ ಡೇಸ್ ದಿನಾಂಕವನ್ನು ಘೋಷಿಸಿದೆ. ಈ ವೇಳೆ ಅನೇಕ ಬ್ರ್ಯಾಂಡ್​​ಗಳ ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಂಕ್ ಕೊಡುಗೆ ಸೇರಿದಂತೆ ಅನೇಕ ಆಫರ್​​​ಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಕಡಿಮೆ ಅಂದರೆ ಕಡಿಮೆ ದರದ ರಿಯಾಯಿತಿಯಲ್ಲಿ ವಸ್ತುಗಳ ಖರೀದಿಗೆ ಲಭ್ಯ ಇರಲಿವೆ. ಈ ಪೈಕಿ ಬಹುನಿರೀಕ್ಷಿತ 9ನೇ ಜನರೇಷನ್ ಆಪಲ್ ಐಪ್ಯಾಡ್​ ಅನ್ನು ಕಡಿಮೆ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇಂಥದೊಂದ್ದು ಕಡಿಮೆ ರಿಯಾಯಿತಿ ಸಿಗುತ್ತಿರುವುದು 2020ರ ನಂತರ ಇದೇ ಮೊದಲ ಬಾರಿಗೆ.

Apple iPad 9G ಕಡಿಮೆ ಬೆಲೆಗೆ

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟ ದಿನಾಂಕ ಸೆಪ್ಟೆಂಬರ್​ 29ರಿಂದ ಪ್ರಾರಂಭವಾಗುತ್ತದೆ. ಬಿಗ್ ಬಿಲಿಯನ್ ಡೇಸ್ ಮಾರಾಟದ ಸ್ನೀಕ್ ಪೀಕ್ ಪುಟದ ಪ್ರಕಾರ, iPad 9th-generatiomn 20,000 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಲಭ್ಯವಾಗಲಿದಯಂತೆ. ಈ ಬೆಲೆಯು ಬ್ಯಾಂಕ್ ಆಫರ್​​ ನಂತರವೇ ಅಥವಾ ಅದು ಫ್ಲಾಟ್ ಆಫರ್​ ಪಡೆಯುತ್ತದೆಯೇ ಎಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ. ಆದರೆ, 9ನೇ ಜನರೇಷನ್​ 64GB ಸಾಮರ್ಥ್ಯವುಳ್ಳ ಐಪ್ಯಾಡ್ ಬೆಲೆ ಕೇವಲ 18 ಸಾವಿರಕ್ಕೂ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ.

ಬಿಗ್ ಬಿಲಿಯನ್ ಡೇಸ್ ಮಾರಾಟದ ದಿನಾಂಕ

ಬಿಗ್ ಬಿಲಿಯನ್ ಡೇಸ್ ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗಲಿದೆ. ಆದರೆ ಇದು ಫ್ಲಿಪ್‌ಕಾರ್ಟ್ ಪ್ಲಸ್ ಬಳಕೆದಾರರಿಗೆ ಸೆಪ್ಟೆಂಬರ್ 29 ರಿಂದಲೇ ಪ್ರಾರಂಭವಾಗಲಿದೆ.

ಡೀಲ್‌ಗಳು ಮತ್ತು ಕೊಡುಗೆಗಳು

ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಶಾಪರ್‌ಗಳು ವಿವಿಧ ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸೆಸರಿಗಳ (ಸ್ಮಾರ್ಟ್ ಟಿವಿಗಳು, ಲ್ಯಾಪ್‌ಟಾಪ್‌ಗಳು, ಹೆಡ್‌ಫೋನ್‌ಗಳು, ಗೇಮಿಂಗ್ ಕನ್ಸೋಲ್‌ಗಳು ಮತ್ತು ಇತರ ತಾಂತ್ರಿಕ ವಸ್ತುಗಳಿಗೆ) ವಸ್ತುಗಳಿಗೆ ಭಾರಿ ಆಫರ್​ ಸಿಗುವ ಸಾಧ್ಯತೆ ಇದೆ. ಅಂದರೆ ಶೇ 50 ರಿಂದ 80ರ ವರೆಗೆ ರಿಯಾಯಿತಿ ಸಿಗುವ ನಿರೀಕ್ಷೆ ಇದೆ. ಗೃಹೋಪಯೋಗಿ ಉಪಕರಣಗಳಿಗೂ ಶೇ 80 ವರೆಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಕೆಲ ರೆಫ್ರಿಜರೇಟರ್‌ಗಳು ಮತ್ತು 4K ಸ್ಮಾರ್ಟ್ ಟಿವಿಗಳಿಗೆ ಶೇ 75ರ ವರೆಗೆ ಆಫರ್​ ಸಿಗುವ ನಿರೀಕ್ಷೆ ಇದೆ.

ಬಿಗ್ ಬಿಲಿಯನ್ ಡೇಸ್: ಬ್ಯಾಂಕ್ ಆಫರ್ಸ್​, ಇತರೆ ಕೊಡುಗೆ

ಬ್ಯಾಂಕ್ ಆಫರ್ಸ್: ಅರ್ಹ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ಸ್​ಗಳಿಗೆ ಆಫರ್​​ಗಳನ್ನು ಒದಗಿಸಲು ಫ್ಲಿಪ್‌ಕಾರ್ಟ್ ಉನ್ನತ ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಇಂತಿಷ್ಟು ಎಂದು ಶಾಪಿಂಗ್ ಮಾಡಿದರೆ ಶೇ 5ರಿಂದ 15ರ ತನಕ ಡಿಸ್ಕೌಂಟ್ ಸಿಗುವ ಸಾಧ್ಯತೆ ಇದೆ.

ವಿನಿಮಯ (ಎಕ್ಸ್​ಚೇಂಜ್) ಆಫರ್ಸ್: ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್​​ಫೋನ್​​ಗಳು ಅಥವಾ ಲ್ಯಾಪ್​ಟಾಪ್​​ಗಳನ್ನು ಎಕ್ಸ್​ಚೇಂಜ್​ ಕೂಡ ಮಾಡಿಕೊಂಡು ಹೊಸ ವಸ್ತುವನ್ನು ಖರೀದಿಸಲು ಅವಕಾಶ ಇದೆ.

ನೋ-ಕಾಸ್ಟ್ EMI: ಸ್ಮಾರ್ಟ್ ಟಿವಿಗಳು ಅಥವಾ ಉನ್ನತ-ಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ ಫ್ಲಿಪ್‌ಕಾರ್ಟ್ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳೂ ಇರಲಿವೆ. ಹಾಗಾಗಿ, ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಬಡ್ಡಿ ಇಲ್ಲದೆ ಸುಲಭ ಕಂತುಗಳಲ್ಲಿ ಇಎಂಐ ಕಂತು ಪಾವತಿಸಲು ಅವಕಾಶ ಸಿಕ್ಕಂತಾಗುತ್ತದೆ.

ಕ್ಯಾಶ್‌ಬ್ಯಾಕ್ ಮತ್ತು ಕೂಪನ್‌ಗಳು: ಗ್ರಾಹಕರು ಕ್ಯಾಶ್‌ಬ್ಯಾಕ್ ಡೀಲ್‌ಗಳು ಮತ್ತು ಡಿಸ್ಕೌಂಟ್ ಕೂಪನ್‌ಗಳಿಂದ ಲಾಭ ಪಡೆಯಬಹುದು. ಆ ಮೂಲಕ ತಮ್ಮ ಬಜೆಟ್ ಅನ್ನು ಮತ್ತಷ್ಟು ವಿಸ್ತರಿಸಲು ನೆರವಾಗಬಹುದು. ಒಟ್ಟಾರೆ ಉಳಿತಾಯಕ್ಕೆ ಅನುವು ಮಾಡಿಕೊಡುತ್ತದೆ.

Whats_app_banner