Popular Biscuits: ಅಂದಿಗೂ ಇಂದಿಗೂ ಭಾರತೀಯರು ಮೆಚ್ಚುವ 5 ಬಿಸ್ಕೀಟ್‌ಗಳಿವು; ಇದರಲ್ಲಿ ಯಾವುದು ನಿಮ್ಮ ಫೇವರಿಟ್‌
ಕನ್ನಡ ಸುದ್ದಿ  /  ಜೀವನಶೈಲಿ  /  Popular Biscuits: ಅಂದಿಗೂ ಇಂದಿಗೂ ಭಾರತೀಯರು ಮೆಚ್ಚುವ 5 ಬಿಸ್ಕೀಟ್‌ಗಳಿವು; ಇದರಲ್ಲಿ ಯಾವುದು ನಿಮ್ಮ ಫೇವರಿಟ್‌

Popular Biscuits: ಅಂದಿಗೂ ಇಂದಿಗೂ ಭಾರತೀಯರು ಮೆಚ್ಚುವ 5 ಬಿಸ್ಕೀಟ್‌ಗಳಿವು; ಇದರಲ್ಲಿ ಯಾವುದು ನಿಮ್ಮ ಫೇವರಿಟ್‌

ಅಂದಿಗೂ ಇಂದಿಗೂ ಭಾರತೀಯರ ಜಿಹ್ವ ಚಾಪಲ್ಯ ತಣಿಸುವಲ್ಲಿ 5 ಬಿಸ್ಕತ್ತುಗಳು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಈ ಬಿಸ್ಕತ್ತುಗಳು ಪ್ರತಿ ಭಾರತೀಯರ ಮನೆಯ ಭಾಗವಾಗಿವೆ. ಮನೆ ಮನೆಯಲ್ಲೂ ಇವುಗಳ ಸ್ವಾದ, ರುಚಿ ಹರಡುವುದನ್ನು ಕಾಣಬಹುದಾಗಿದೆ. ಯಾವುದು ಆ 5 ಬಿಸ್ಕೀಟ್‌ಗಳು ತಿಳಿಯಲು ಈ ಸ್ಟೋರಿ ಓದಿ.

ಅಂದಿಗೂ ಇಂದಿಗೂ ಭಾರತೀಯರು ಮೆಚ್ಚುವ 5 ಬಿಸ್ಕೀಟ್‌ಗಳಿವು
ಅಂದಿಗೂ ಇಂದಿಗೂ ಭಾರತೀಯರು ಮೆಚ್ಚುವ 5 ಬಿಸ್ಕೀಟ್‌ಗಳಿವು

ಭಾರತೀಯರು ಬಿಸ್ಕತ್ತು ಪ್ರಿಯರು. ಇಲ್ಲಿ ಚಿಕ್ಕ ಮಕ್ಕಳಷ್ಟೇ ಅಲ್ಲ, ವಯಸ್ಸಾದವರಿಗೂ ಬಿಸ್ಕತ್ತಿನ ಮೇಲೆ ವಿಶೇಷ ಒಲವು. ಬಿಸ್ಕೀಟ್‌ನ ಸ್ವಾದವೇ ಅಂತಹದ್ದು. ಇದು ಎಂತಹವರನ್ನೂ ಸೆಳೆದು ಬಿಡುವ ಮಾಯಾಶಕ್ತಿಯನ್ನು ಹೊಂದಿದೆ.

ವಿಭಿನ್ನ ರುಚಿ, ಪರಿಮಳ, ಸ್ವಾದದ ಮೂಲಕ ಬಿಸ್ಕತ್ತು ಸಾವಿರಾರು ಮಂದಿಯ ಹೃದಯವನ್ನು ಕದ್ದಿದೆ. ಇಂದಿಗೂ ಚಹಾ, ಕಾಫಿಯೊಂದಿಗೆ ಬಿಸ್ಕತ್ತು ಸವಿಯುವ ಹಲವರು ಹಲವರು ನಮ್ಮ ನಡುವೆ ಇದ್ದಾರೆ.

ಚಹ ಅಥವಾ ಕಾಫಿಯಲ್ಲಿ ಬಿಸ್ಕತ್ತು ಅದ್ದಿಕೊಂಡು ತಿನ್ನುತ್ತಿದ್ದರೆ, ಆಹಾ... ಆ ಮಜಾವೇ ಬೇರೆ. ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು ಅದರ ಸವಿ.

ಅಂದಿಗೂ ಇಂದಿಗೂ ಭಾರತೀಯರ ಜಿಹ್ವ ಚಾಪಲ್ಯ ತಣಿಸುವಲ್ಲಿ 5 ಬಿಸ್ಕತ್ತುಗಳು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಈ ಬಿಸ್ಕತ್ತುಗಳ ಪ್ರತಿ ಭಾರತೀಯರ ಮನೆಯ ಭಾಗವಾಗಿವೆ. ಮನೆ ಮನೆಯಲ್ಲೂ ಇವುಗಳ ಸ್ವಾದ, ರುಚಿ ಹರಡುವುದನ್ನು ಕಾಣಬಹುದಾಗಿದೆ.

ಭಾರತದಲ್ಲಿ ಬಿಸ್ಕತ್ತನ್ನು ಬೆಳಿಗ್ಗೆ ಹಾಗೂ ಸಂಜೆ ವೇಳೆ ಸ್ನ್ಯಾಕ್ಸ್‌ ರೂಪದಲ್ಲಿ ಸೇವಿಸುತ್ತಾರೆ. ಮಕ್ಕಳ ಟಿಫಿನ್‌ಗೂ ಇದೇ ಸ್ನಾಕ್ಸ್‌. ಮಕ್ಕಳಿಗಂತೂ ಈ ಬಿಸ್ಕತ್ತುಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಎಂದೆಂದಿಗೂ ಭಾರತೀಯರು ಮೆಚ್ಚುವ 5 ಬಿಸ್ಕತ್ತುಗಳು ಇಲ್ಲಿವೆ ನೋಡಿ.

ಪಾರ್ಲೆಜಿ

ಬಹುಶಃ ಪಾರ್ಲೆಜಿ ಪ್ರಿಯರು ಇಲ್ಲವೇ ಇಲ್ಲ ಎನ್ನಬಹುದು. ನಮ್ಮ ಬಾಲ್ಯದಿಂದ ಇಲ್ಲಿಯವರೆಗೆ ನಮ್ಮನ್ನು ತನ್ನ ವಿಶಿಷ್ಟ ರುಚಿಯಿಂದ ಸೆಳೆದಿದೆ ಪಾರ್ಲೆಜಿ ಬಿಸ್ಕತ್ತು. ಇಂದಿಗೂ ಪಾರ್ಲೆಜಿ ಬಿಸ್ಕತ್ತನ್ನ ಬ್ಯಾಗ್‌ನಲ್ಲಿಟ್ಟು ಓಡಾಡುವವರು ಇದ್ದಾರೆ. ಇದು ಇಂದಿಗೂ ಹಲವರ ಫೇವರಿಟ್‌ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಸಾಂಪ್ರದಾಯಿಕ ಬಿಸ್ಕತ್ತು ಪ್ರತಿ ಭಾರತೀಯರ ಮನೆಯಲ್ಲಿ ಇಂದಿಗೂ ಸೇವಿಸುವ ರೂಢಿ ಇದೆ. ಇದು ಒಂದು ರೀತಿಯ ನಾಸ್ಟಾಲಿಜಿಕ್‌ ಫೀಲ್‌ ಕೊಡುವುದು ಸುಳ್ಳಲ್ಲ. ಭಿನ್ನ ರುಚಿ, ಕೈಗೆಟುಕುವ ಬೆಲೆಯ ಕಾರಣ ಎಲ್ಲಾ ವಯೋಮಾನದವರು ಇದನ್ನು ಮೆಚ್ಚಿ ತಿನ್ನುತ್ತಾರೆ. ಪಾರ್ಲೆಜಿ ಬಿಸ್ಕತ್ತಿನ ಕವರ್‌ ಎಂದಿಗೂ ಅಂದಿಗೂ ಹಾಗೆಯೇ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ.

ಬ್ರಿಟಾನಿಯಾ ಬೌರ್ಬನ್‌

ಚಾಕೊಲೇಟ್‌ ಸುವಾಸನೆಯ ಈ ಕೋಕಾ ಬಿಸ್ಕತ್ತಿನ ಮಧ್ಯೆ ಚಾಕೊಲೇಟ್‌ ಕ್ರೀಮ್‌ ಅನ್ನು ತುಂಬಿಸಿರುತ್ತಾರೆ. ಚಾಕೊಲೇಟ್‌ನ ಮೇಲೆ ಅಲ್ಲಲ್ಲಿ ಸಕ್ಕರೆಯ ಕಾಳುಗಳನ್ನು ಉದುರಿಸಿಟ್ಟು ಸಿಹಿ ಹೆಚ್ಚುವಂತೆ ಮಾಡಲಾಗುತ್ತದೆ. ಈ ಬೌರ್ಬನ್‌ ಬಿಸ್ಕತ್ತಿನ ಸ್ವಾದ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಇಷ್ಟವಾಗುತ್ತದೆ. ಬಿಸ್ಕತ್ತು ಬಿಡಿಸಿಕೊಂಡು ಮಧ್ಯದ ಕ್ರೀಮ್‌ವನ್ನು ನಾಲಿಗೆಯಿಂದ ನೆಕ್ಕಿ ತಿನ್ನುವುದು ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಇಷ್ಟ. ಈ ಬಿಸ್ಕತ್ತು ಭಾರತೀಯ ಇಷ್ಟದ ಬಿಸ್ಕತ್ತಿನ ಎರಡನೇ ಸ್ಥಾನದಲ್ಲಿದೆ.

ಗುಡ್‌ ಡೇ

ಒಂದು ಕಾಲದಲ್ಲಿ ಶ್ರೀಮಂತರ ಬಿಸ್ಕತ್ತು ಎಂದು ಹೆಸರು ಪಡೆದಿದ್ದ ಬ್ರಿಟಾನಿಯಾ ಗುಡ್‌ ಡೇ ಭಾರತೀಯರ ಅಚ್ಚುಮೆಚ್ಚಿನ ಬಿಸ್ಕತ್ತು. ಬೆಣ್ಣೆಯ ರುಚಿ, ಬಾಯಲ್ಲಿಟ್ಟರೆ ಕರಗುವ ಇದರ ಸ್ವಾದಕ್ಕೆ ಮಾರು ಹೋಗದವರಿಲ್ಲ. ಇಂದಿಗೂ ಚಹಾ ಸಮಯದಲ್ಲಿ ಇದು ಸಂಗಾತಿಯಾಗುತ್ತದೆ. ಚಹಾ, ಕಾಫಿಯೊಂದಿಗೆ ಸವಿಯಲು ಈ ಬಿಸ್ಕತ್ತು ಹೇಳಿ ಮಾಡಿಸಿದ್ದು.

ಹೈಡ್‌ ಅಂಡ್‌ ಸೀಕ್‌

ಪಾರ್ಲೆಯವರ ಹೈಡ್‌ ಅಂಡ್‌ ಸೀಕ್‌ ಬಿಸ್ಕತ್ತು ಹೆಸರಿನಿಂದಲೇ ಗಮನ ಸೆಳೆದಿತ್ತು. ಇದು ಒಂದು ರೀತಿ ಐಷರಾಮಿ ಬಿಸ್ಕತ್ತು ಅಂತಲೇ ಹೇಳಬಹುದು. ಚಾಕೊಲೇಟ್‌ಗಳಿಂದ ಸಮೃದ್ಧವಾಗಿರುವ ಈ ಬಿಸ್ಕತ್ತು ಮಕ್ಕಳಿಗಂತೂ ಸಖತ್‌ ಫೇವರಿಟ್ಟು. ಇದನ್ನು ತಿನ್ನುತ್ತಿದ್ದರೆ, ತಿನ್ನುತ್ತಲೇ ಇರಬೇಕು ಎನ್ನಿಸುವುದು ನಿಜ. ನಾಲಿಗೆ ರುಚಿ ಮೊಗ್ಗುಗಳನ್ನು ಅರಳಿಸುವ ಈ ಬಿಸ್ಕತ್ತು ಭಾರತೀಯ ನೆಚ್ಚಿನ ಬಿಸ್ಕತ್ತಿನಲ್ಲಿ ಒಂದಾಗಿದೆ.

ಸನ್‌ಫೀಸ್ಟ್‌ ಮಾರಿ

ದುಂಡನೆಯ, ಗರಿಗರಿಯಾದ ಹೆಚ್ಚಿ ಸಿಹಿಯಲ್ಲದ ಮಾರಿ ಬಿಸ್ಕತ್ತು ಭಾರತೀಯರೆಲ್ಲರ ಅಚ್ಚುಮೆಚ್ಚು. ಇದು ಚಹಾ, ಕಾಫಿಯೊಂದಿಗೆ ದಿ ಬೆಸ್ಟ್‌ ಕಾಂಬಿನೇಷನ್‌ ಅಂತಲೇ ಹೇಳಬಹುದು. ಇದು ಮಕ್ಕಳಿಗಿಂತ ದೊಡ್ಡವರ ಫೇವರಿಟ್‌. ಆರಾಮವಿಲ್ಲದವರಿಗೂ ಈ ಬಿಸ್ಕತ್ತೇ ಆಹಾರ. ಒಟ್ಟಾರೆ ಮಾರಿ ಎಲ್ಲರ ಮನ ಕದ್ದ ನಾರಿ.

Whats_app_banner