Soya Chunks Fry Recipe: ನಾನ್‌ವೆಜ್‌ ತಿನ್ನದವರಿಗೆ ಬೆಸ್ಟ್‌ ಪ್ರೋಟೀನ್‌ ಮೂಲ ಇದು; ಸೋಯಾಚಂಕ್ಸ್‌ ಫ್ರೈ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  Soya Chunks Fry Recipe: ನಾನ್‌ವೆಜ್‌ ತಿನ್ನದವರಿಗೆ ಬೆಸ್ಟ್‌ ಪ್ರೋಟೀನ್‌ ಮೂಲ ಇದು; ಸೋಯಾಚಂಕ್ಸ್‌ ಫ್ರೈ ರೆಸಿಪಿ

Soya Chunks Fry Recipe: ನಾನ್‌ವೆಜ್‌ ತಿನ್ನದವರಿಗೆ ಬೆಸ್ಟ್‌ ಪ್ರೋಟೀನ್‌ ಮೂಲ ಇದು; ಸೋಯಾಚಂಕ್ಸ್‌ ಫ್ರೈ ರೆಸಿಪಿ

Soya bean Chunks; ಮಾಂಸಾಹಾರ ಸೇವಿಸದೆ ಇರುವವರಿಗೆ ಅನೇಕ ಬದಲಿ ಆಹಾರಗಳಿವೆ. ನಾನ್‌ವೆಜ್‌ನಲ್ಲಿರುವ ಪ್ರೋಟೀನ್‌ ಮೂಲಗಳೇ ಸಸ್ಯಹಾರಿಯಲ್ಲಿರುತ್ತದೆ. ಅದರಲ್ಲಿ ಸೋಯಾಬೀನ್‌ ಚಂಕ್ಸ್‌ ಕೂಡಾ ಒಂದು. ಇದು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ.

ಸೋಯಾಚಂಕ್ಸ್‌ ಫ್ರೈ ರೆಸಿಪಿ
ಸೋಯಾಚಂಕ್ಸ್‌ ಫ್ರೈ ರೆಸಿಪಿ (PC: UnSplash)

Soya bean Chunks; ವಿಶೇಷವಾಗಿ ಮೊಟ್ಟೆ, ಮಾಂಸ, ಡೈರಿ ಮತ್ತು ಇತರ ನಾನ್‌ವೆಜ್‌ ಸೇವಿಸದ ಸಸ್ಯಾಹಾರಿಗಳಿಗೆ ಇದು ಉತ್ತಮ ಆಹಾರ. ಇದರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇದ್ದು, ಬೇಯಿಸಲು ಕೂಡಾ ಬಹಳ ಸುಲಭ. ರುಚಿಯೂ ಸೂಪರ್‌.

ಅಂಗಾಂಶಗಳ ಬೆಳವಣಿಗೆ ಮತ್ತು ನಿರ್ವಹಣೆ, ಹಾರ್ಮೋನುಗಳು, ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದು, ಶಕ್ತಿಯನ್ನು ಒದಗಿಸುವುದು, ಮೂಳೆಗಳು, ಸ್ನಾಯುಗಳ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಸೋಯಾಚಂಕ್ಸ್‌ನಿಂದ ಅನೇಕ ರೆಸಿಪಿಗಳನ್ನು ತಯಾರಿಸಬಹುದು. ಅದರಲ್ಲಿ ಚೋಯಾಚಂಕ್ಸ್‌ ಪ್ರೈ ಬಹಳ ರುಚಿಯಾಗಿರುತ್ತದೆ. ಇದನ್ನೂ ನೀವು ಸ್ನಾಕ್ಸ್‌ ಆಗಿ ಅಥವಾ ಊಟಕ್ಕೆ ಸೈಡ್ಸ್‌ ಆಗಿ ಸೇವಿಸಬಹುದು. ಸೋಯಾಚಂಕ್ಸ್‌ ಫ್ರೈ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ.

ಸೋಯಾಚಂಕ್ಸ್‌ ಫ್ರೈ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಸೋಯಾಚಂಕ್ಸ್‌ - 2 ಕಪ್‌
  • ಧನಿಯಾ - 1 ಟೀ ಸ್ಪೂನ್‌
  • ಕರಿಮೆಣಸು - ¾ ಟೀ ಸ್ಪೂನ್‌
  • ಸೋಂಫು - ½ ಟೀ ಸ್ಪೂನ್‌
  • ಜೀರ್ಗೆ - ½ ಟೀ ಸ್ಪೂನ್‌
  • ಒಣಮೆಣಸಿನಕಾಯಿ - 4
  • ಕರಿಬೇವು - 1ಎಸಳು
  • ಅರಿಶಿನ - ಅಗತ್ಯಕ್ಕೆ ತಕ್ಕಷ್ಟು
  • ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಟೇಬಲ್‌ ಸ್ಪೂನ್‌
  • ಕೊತ್ತಂಬರಿ ಸೊಪ್ಪು - 1/2 ಕಟ್ಟು
  • ಅಚ್ಚ ಖಾರದ ಪುಡಿ - 1 ಟೀ ಸ್ಪೂನ್‌
  • ಈರುಳ್ಳಿ - 2
  • ಎಣ್ಣೆ - 4 ಟೇಬಲ್‌ ಸ್ಪೂನ್‌

ಸೋಯಾಚಂಕ್ಸ್‌ ಫ್ರೈ ತಯಾರಿಸುವ ವಿಧಾನ

  • ಒಂದು ಪಾತ್ರೆಯಲ್ಲಿ ನೀರು ಬಿಸಿ ಆಗಲು ಬಿಡಿ, ಸ್ವಲ್ಪ ಉಪ್ಪು ಸೇರಿಸಿ ಬಿಸಿ ನೀರಿಗೆ ಸೋಯಾ ಚಂಕ್ಸ್‌ ಸೇರಿಸಿ.
  • ಸೋಯಾಚಂಕ್ಸ್‌ 5 ನಿಮಿಷ ಕುಕ್‌ ಮಾಡಿ ಸ್ಟೌಫ್‌ ಆಫ್‌ ಮಾಡಿ, ನೀರನ್ನು ಶೋಧಿಸಿ ತಣ್ಣಗಾಗಲು ಬಿಡಿ.
  • ಬಾಣಲೆಯಲ್ಲಿ ಧನಿಯಾ, ಕರಿಮೆಣಸು, ಸೋಂಫು, ಜೀರ್ಗೆ, ಒಣಮೆಣಸಿನಕಾಯಿ ಸೇರಿಸಿ ಕಡಿಮೆ ಉರಿಯಲ್ಲಿ 1 ನಿಮಿಷ ಡ್ರೈ ರೋಸ್ಟ್‌ ಮಾಡಿ.
  • ಹುರಿದುಕೊಂಡ ಮಿಶ್ರಣ ತಣ್ಣಗಾದಾಗ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
  • ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ.
  • ಕರಿಬೇವು, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ, ಇದರೊಂದಿಗೆ ಪುಡಿ ಮಾಡಿದ ಮಿಶ್ರಣ ಸೇರಿಸಿ.
  • ನಂತರ ಉಪ್ಪು, ಅರಿಶಿನ, ಅಚ್ಚ ಖಾರದ ಪುಡಿ ಸೇರಿಸಿ ಮಿಕ್ಸ್‌ ಮಾಡಿ.
  • ಈ ಮಿಶ್ರಣದೊಂದಿಗೆ ಬೇಯಿಸಿದ ಸೋಯಾ ಚಂಕ್ಸ್‌ ಸೇರಿಸಿ ( ಮೊದಲು, ಹೆಚ್ಚುವರಿ ನೀರನ್ನು ಹಿಂಡಿ ತೆಗೆಯಿರಿ) ಮಿಕ್ಸ್‌ ಮಾಡಿ.
  • 1-2 ನಿಮಿಷ ಫ್ರೈ ಮಾಡಿ, ಸ್ವಲ್ಪ ನೀರು ಚಿಮುಕಿಸಿ ಮುಚ್ಚಳ ಮುಚ್ಚಿ 3 ನಿಮಿಷ ಕುಕ್‌ ಮಾಡಿ.
  • ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್‌ ಮಾಡಿ ಸರ್ವ್‌ ಮಾಡಿ.

Whats_app_banner