Ganesh Chaturthi 2022: ಗಣೇಶ ಮೂರ್ತಿ ವಿಸರ್ಜನೆಗೆ ಇದೆಯಾ ಮುಹೂರ್ತ?
ಕನ್ನಡ ಸುದ್ದಿ  /  ಜೀವನಶೈಲಿ  /  Ganesh Chaturthi 2022: ಗಣೇಶ ಮೂರ್ತಿ ವಿಸರ್ಜನೆಗೆ ಇದೆಯಾ ಮುಹೂರ್ತ?

Ganesh Chaturthi 2022: ಗಣೇಶ ಮೂರ್ತಿ ವಿಸರ್ಜನೆಗೆ ಇದೆಯಾ ಮುಹೂರ್ತ?

ಗಣೇಶನ ಹಬ್ಬ ಬಂದೇ ಬಿಟ್ಟಿದೆ. ಗಣೇಶನ ಪ್ರತಿಷ್ಠಾಪನೆ ಮಾಡಿ ಪೂಜಿಸಿದರಾಯಿತೇ? ಇಲ್ವಲ್ಲ.. ಎಲ್ಲ ಮುಗಿದ ಮೇಲೆ ಗಣೇಶ ಮೂರ್ತಿಯ ವಿಸರ್ಜನೆಯೂ ಆಗಬೇಕಲ್ಲ. ಅದಕ್ಕೆ ಮುಹೂರ್ತ ಏನಾದರೂ ಇದೆಯೇ? ಯಾವಾಗ ವಿಸರ್ಜಿಸಬೇಕು? ಅದಕ್ಕೆ ದಿನ ಏನಾದರೂ ಇದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

<p>ಪರಿಸರಸ್ನೇಹಿ ಗಣೇಶನ ಮೂರ್ತಿ ಖರೀದಿಸುತ್ತಿರುವ ಮಕ್ಕಳು. (HT photo)</p>
ಪರಿಸರಸ್ನೇಹಿ ಗಣೇಶನ ಮೂರ್ತಿ ಖರೀದಿಸುತ್ತಿರುವ ಮಕ್ಕಳು. (HT photo) (HT_PRINT)

ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿದೆ. ಎಲ್ಲರ ಮನೆಗಳಲ್ಲಿ ಗಣೇಶನನ್ನು ಕೂರಿಸುವ ಸಂಭ್ರಮ ಸಡಗರ. ಸಾರ್ವಜನಿಕ ಗಣೇಶೋತ್ಸವಕ್ಕೂ ಈ ಸಲ ಕೊರತೆ ಇಲ್ಲ. ಕೋವಿಡ್‌ ಸಂಕಷ್ಟದ ನಂತರ ಸಂಕಷ್ಟಹರ ವಿ‍ಘ್ನೇಶನ ಹಬ್ಬದ ಆಚರಣೆ ಶುರುವಾಗಿದೆ. ಹೌದು ನಾಳೆ ಸಂಜೆ ಹೊತ್ತಿಗೆ ಗಣೇಶನ ಪೂಜೆ ಮುಗಿಸಿ ವಿಸರ್ಜನೆಯ ಸಂಭ್ರಮ ಶುರುವಾಗುತ್ತದೆ.

ಎಲ್ಲ ಮುಗಿದ ಮೇಲೆ ಗಣೇಶ ಮೂರ್ತಿಯ ವಿಸರ್ಜನೆಯೂ ಆಗಬೇಕಲ್ಲ. ಅದಕ್ಕೆ ಮುಹೂರ್ತ ಏನಾದರೂ ಇದೆಯೇ? ಯಾವಾಗ ವಿಸರ್ಜಿಸಬೇಕು? ಅದಕ್ಕೆ ದಿನ ಏನಾದರೂ ಇದೆಯೇ? ಎಂಬ ಪ್ರಶ್ನೆ ಸಹಜ. ಕೆಲವು ಬಲ್ಲವರ ಪ್ರಕಾರ ಗಣೇಶ ವಿಗ್ರಹ ವಿಸರ್ಜನೆಗೂ ಮುಹೂರ್ತ ಇದೆ.

ಹತ್ತು ದಿನಗಳ ಹಬ್ಬದ ಆಚರಣೆ ಆದ ಕಾರಣ, ಸೆಪ್ಟೆಂಬರ್ 9 ರಂದು ಶುಕ್ರವಾರ, ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆಗೆ ಶುಭ ಮುಹೂರ್ತ ಇದೆ.

ಅನಂತ ಚತುರ್ದಶಿ ತಿಥಿ ಆರಂಭ - ಸೆಪ್ಟೆಂಬರ್ 08 ರಂದು ರಾತ್ರಿ 09:02 ರಿಂದ

ಅನಂತ ಚತುರ್ದಶಿ ತಿಥಿ ಕೊನೆಗೊಳ್ಳುವ ಸಮಯ - ಸೆಪ್ಟೆಂಬರ್ 09 ರಂದು ಸಂಜೆ 06:07 ರವರೆಗೆ

ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಬೆಳಗ್ಗೆ 06:09 ರಿಂದ 10:45 ರವರೆಗೆ

ಮಧ್ಯಾಹ್ನ ಮುಹೂರ್ತ (ಚರ) - ಸಂಜೆ 04:53 ರಿಂದ 06:25 ರವರೆಗೆ

ಮಧ್ಯಾಹ್ನ ಮುಹೂರ್ತ (ಶುಭಾ) - ಮಧ್ಯಾಹ್ನ 12:17 ರಿಂದ 01:49 ರವರೆಗೆ

ರಾತ್ರಿ ಮುಹೂರ್ತ (ಲಾಭಾ) - ರಾತ್ರಿ 09:21 ರಿಂದ 10:49 ರವರೆಗೆ

ರಾತ್ರಿ ಮುಹೂರ್ತ (ಶುಭ, ಅಮೃತ, ಚರ) - ಮಧ್ಯಾಹ್ನ 12:17 ರಿಂದ 04:41 ರವರೆಗೆ

----

ಇನ್ನು ಗಣೇಶ ಚತುರ್ಥಿಯಂದು ಅಂದರೆ ನಾಳೆಯೇ ಗಣೇಶ ವಿಸರ್ಜನೆ ಮಾಡುವುದಾದರೆ,

ಮಧ್ಯಾಹ್ನ ಮುಹೂರ್ತ (ಚರ, ಲಾಭ) - ಮಧ್ಯಾಹ್ನ 03:26 ರಿಂದ 06:31 ರವರೆಗೆ

ಸಂಜೆ ಮುಹೂರ್ತ (ಶುಭ, ಅಮೃತ, ಚರ) - ಸಂಜೆ 07:58 ರಿಂದ 12:20 ರವರೆಗೆ ಮಾಡಬಹುದು.

ಸೆಪ್ಟೆಂಬರ್ 01

ಮುಂಜಾನೆಯ ಮುಹೂರ್ತ (ಲಾಭಾ) - ತಡರಾತ್ರಿ 03:14 ರಿಂದ 04:41 ರವರೆಗೆ,

ಗುರುವಾರ ಒಂದೂವರೆ ದಿನದ ನಂತರ ಗಣೇಶ ವಿಸರ್ಜನೆಗೆ ಶುಭ ಮುಹೂರ್ತ

ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಮಧ್ಯಾಹ್ನ 12:20 ರಿಂದ 03:25 ರವರೆಗೆ

ಮಧ್ಯಾಹ್ನ ಮುಹೂರ್ತ (ಶುಭಾ) - ಸಂಜೆ 04:58 ರಿಂದ 06:31 ರವರೆಗೆ

ಸಂಜೆ ಮುಹೂರ್ತ (ಅಮೃತ, ಚರ) - ಸಂಜೆ 06:31 ರಿಂದ 09:25 ರವರೆಗೆ

ರಾತ್ರಿ ಮುಹೂರ್ತ (ಲಾಭಾ) - ತಡರಾತ್ರಿ 12:20 ರಿಂದ ಸೆಪ್ಟೆಂಬರ್‌ 2ರ ನಸುಕಿನ 01:47 ರವರೆಗೆ ಮುಹೂರ್ತ ಇದೆ.

ಸೆಪ್ಟೆಂಬರ್ 02

ಮುಂಜಾನೆಯ ಮುಹೂರ್ತ (ಶುಭಾ, ಅಮೃತ) - ನಸುಕಿನ 03:14 ರಿಂದ 06:09 ರವರೆಗೆ

ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಬೆಳಗ್ಗೆ 06:09 ರಿಂದ 10:47 ರವರೆಗೆ

ಮಧ್ಯಾಹ್ನ ಮುಹೂರ್ತ (ಚರ) - ಸಂಜೆ 04:57 ರಿಂದ 06:30 ರವರೆಗೆ

ಮಧ್ಯಾಹ್ನ ಮುಹೂರ್ತ (ಶುಭಾ) - ಮಧ್ಯಾಹ್ನ 12:19 ರಿಂದ 01:52 ರವರೆಗೆ

ರಾತ್ರಿ ಮುಹೂರ್ತ (ಲಾಭಾ) - ರಾತ್ರಿ 09:25 ರಿಂದ 10:52 ರವರೆಗೆ

ರಾತ್ರಿ ಮುಹೂರ್ತ (ಶುಭ, ಅಮೃತ, ಚರ) - ತಡರಾತ್ರಿ 12:19 ರಿಂದ ಸೆಪ್ಟೆಂಬರ್ 03ರ ಮುಂಜಾನೆ 04:41 ರವರೆಗೆ,

ಸೆಪ್ಟೆಂಬರ್ 4

ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಬೆಳಗ್ಗೆ 07:41 ರಿಂದ ಮಧ್ಯಾಹ್ನ 12:19 ರವರೆಗೆ

ಮಧ್ಯಾಹ್ನ ಮುಹೂರ್ತ (ಶುಭಾ) - ಮಧ್ಯಾಹ್ನ 01:51 ರಿಂದ 03:24 ರವರೆಗೆ

ಸಂಜೆ ಮುಹೂರ್ತ (ಶುಭ, ಅಮೃತ, ಚರ) - ಸಂಜೆ 06:29 ರಿಂದ ರಾತ್ರಿ 10:51 ರವರೆಗೆ

ಸೆಪ್ಟೆಂಬರ್ 05

ಸೆಪ್ಟೆಂಬರ್‌ 4ರ ರಾತ್ರಿ ಮುಹೂರ್ತ (ಲಾಭ) - ಸೆಪ್ಟೆಂಬರ್‌ 5ರ ನಸುಕಿನ 01:46 ರಿಂದ 03:14 ರವರೆಗೆ,

ಮುಂಜಾನೆಯ ಮುಹೂರ್ತ (ಶುಭಾ) - ಮುಂಜಾನೆ 04:41 ರಿಂದ 06:09 ರವರೆಗೆ

ಸೆಪ್ಟೆಂಬರ್ 6

ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಬೆಳಗ್ಗೆ 09:13 ನಿಂದ 01:50 ರವರೆಗೆ

ಮಧ್ಯಾಹ್ನ ಮುಹೂರ್ತ (ಶುಭಾ) - ಮಧ್ಯಾಹ್ನ 03:23 ರಿಂದ 04:55 ರವರೆಗೆ

ಸಂಜೆ ಮುಹೂರ್ತ (ಲಾಭಾ) - ಸಂಜೆ 07:55 ರಿಂದ 09:23 ರವರೆಗೆ

ರಾತ್ರಿ ಮುಹೂರ್ತ (ಶುಭ, ಅಮೃತ, ಚರ) - ರಾತ್ರಿ 10:50 ರಿಂದ ಸೆಪ್ಟೆಂಬರ್ 07ರ ನಸುಕಿನ 03:13 ರವರೆಗೆ ಗಣೇಶ ವಿಸರ್ಜನೆಗೆ ಮುಹೂರ್ತದ ಅವಕಾಶ.

ಯಾವ ದಿನ ಗಣೇಶ ವಿಸರ್ಜನೆ ಏನು ಫಲ

ಗಣೇಶ ಚತುರ್ಥಿಯಂದು ಗಣೇಶ ವಿಸರ್ಜನೆ

ಗಣೇಶನ ಪೂಜೆಯ ನಂತರ ಗಣೇಶ ಚತುರ್ಥಿಯ ಅದೇ ದಿನದಂದು ಗಣೇಶ ವಿಸರ್ಜನೆಯನ್ನು ಮಾಡಬಹುದು. ಹಿಂದು ದೇವತೆಗಳ ಹೆಚ್ಚಿನ ಪೂಜಾ ವಿಧಿ(ಗಳು) ಪೂಜೆಯ ಕೊನೆಯಲ್ಲಿ ವಿಸರ್ಜನೆ ಅಥವಾ ಉತ್ಥಾಪನನ್ನು ಒಳಗೊಂಡಿದೆ. ಆದಾಗ್ಯೂ, ಗಣೇಶ ಚತುರ್ಥಿಯಂದೇ ಗಣೇಶ ವಿಸರ್ಜನೆ ಹೆಚ್ಚು ಜನಪ್ರಿಯವಾಗಿಲ್ಲ.

ಒಂದೂವರೆ ದಿನದ ಗಣೇಶ ವಿಸರ್ಜನೆ

ಇದು ಜನಪ್ರಿಯ ಆಚರಣೆ. ಗಣೇಶ ಚತುರ್ಥಿಯ ಮರುದಿನ ಮಾಡುವ ಗಣೇಶ ವಿಸರ್ಜನೆಯನ್ನು ಒಂದೂವರೆ ದಿನದ ಗಣೇಶ ವಿಸರ್ಜನೆ ಎಂದು ಕರೆಯಲಾಗುತ್ತದೆ. ಗಣೇಶ ಚತುರ್ಥಿಯ ಮರುದಿನ ಮಧ್ಯಾಹ್ನಗಣೇಶನ ಪೂಜೆಯನ್ನು ಮಾಡುತ್ತಾರೆ. ಮಧ್ಯಾಹ್ನದ ನಂತರ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುತ್ತಾರೆ.

3ನೇ ದಿನ, 5ನೇ ದಿನ ಮತ್ತು 7ನೇ ದಿನ ಗಣೇಶ ವಿಸರ್ಜನೆ

ಅನಂತ ಚತುರ್ದಶಿಯ ದಿನವು ಗಣೇಶ ವಿಸರ್ಜನೆಗೆ ಅತ್ಯಂತ ಮಹತ್ವದ ದಿನವಾಗಿದ್ದರೂ, ಅನೇಕ ಕುಟುಂಬಗಳು ಗಣೇಶ ಚತುರ್ಥಿಯ ದಿನದಿಂದ 3, 5 ಅಥವಾ 7ನೇ ದಿನದಂದು ಗಣೇಶ ವಿಸರ್ಜನೆ ಮಾಡುತ್ತಾರೆ. ಈ ಎಲ್ಲ ದಿನಗಳು ಬೆಸ ಸಂಖ್ಯೆಯವು.

ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆ

ಆರಂಭದಲ್ಲೇ ಹೇಳಿದ ಪ್ರಕಾರ, ಗಣೇಶನಿಗೆ ಅನಂತ ಚತುರ್ದಶಿ ಅತ್ಯಂತ ಮಹತ್ವದ ದಿನ. ಗಣೇಶ ವಿಸರ್ಜನೆಯ ಹೊರತಾಗಿ, ಅನಂತ ಚತುರ್ದಶಿಯು ಭಗವಾನ್ ವಿಷ್ಣುವನ್ನು ಅನಂತ ರೂಪದಲ್ಲಿ ಪೂಜಿಸಲು ಬಹಳ ಮಹತ್ವದ ದಿನ. ಗಣೇಶ ಚತುರ್ಥಿಯಂದು ಪ್ರಾರಂಭವಾಗುವ ಗಣೇಶೋತ್ಸವವು ಅನಂತ ಚತುರ್ದಶಿಯಂದು ಮುಕ್ತಾಯಗೊಳ್ಳುತ್ತದೆ. ಆದ್ದರಿಂದ ಭಾದ್ರಪದ ಮಾಸದಲ್ಲಿ ಗಣೇಶೋತ್ಸವವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಹಬ್ಬದ ಕೊನೆಯ ದಿನವನ್ನು ಗಣೇಶ ವಿಸರ್ಜನೆ ಎನ್ನುತ್ತಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

Whats_app_banner