Hair Care: ಕೂದಲು ಸೊಂಪಾಗಿ ಬೆಳೆಯುತ್ತಿಲ್ಲವೆಂಬ ಚಿಂತೆ ಇನ್ನು ಬೇಡ: ಈ ಐದು ಸಲಹೆಗಳನ್ನು ತಪ್ಪದೆ ಪಾಲಿಸಿ-hair care how to get a healthy hair on your scalp how to maintain a hair health how to keep your hair healthy rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ಕೂದಲು ಸೊಂಪಾಗಿ ಬೆಳೆಯುತ್ತಿಲ್ಲವೆಂಬ ಚಿಂತೆ ಇನ್ನು ಬೇಡ: ಈ ಐದು ಸಲಹೆಗಳನ್ನು ತಪ್ಪದೆ ಪಾಲಿಸಿ

Hair Care: ಕೂದಲು ಸೊಂಪಾಗಿ ಬೆಳೆಯುತ್ತಿಲ್ಲವೆಂಬ ಚಿಂತೆ ಇನ್ನು ಬೇಡ: ಈ ಐದು ಸಲಹೆಗಳನ್ನು ತಪ್ಪದೆ ಪಾಲಿಸಿ

Hair Care: ತಲೆಗೂದಲಿನ ಬಗ್ಗೆ ಯಾರಿಗೆ ಮೋಹ ಇರುವುದಿಲ್ಲ ಹೇಳಿ? ಆದರೆ ಕೂದಲು ಇತ್ತೀಚಿನ ದಿನಗಳಲ್ಲಿ ಬೆಳವಣಿಗೆ ಕಾಣುತ್ತಿಲ್ಲ ಎಂಬ ದೂರು ಅನೇಕರದ್ದು. ನೀವು ಕೂಡ ಇಂlಹ ಸಮಸ್ಯೆಯಲ್ಲಿ ಸಿಲುಕಿದ್ದರೆ ಕೂದಲಿನ ಬೆಳವಣಿಗೆಯ ವೇಗವನ್ನು ಹೆಚ್ಚಿಸುವ ಪ್ರಮುಖ ಸಲಹೆಗಳು ಇಲ್ಲಿವೆ:

ಕೂದಲಿನ ಬೆಳವಣಿಗೆಯ ವೇಗವನ್ನು ಹೆಚ್ಚಿಸುವ ಪ್ರಮುಖ ಸಲಹೆಗಳು ಇಲ್ಲಿವೆ,
ಕೂದಲಿನ ಬೆಳವಣಿಗೆಯ ವೇಗವನ್ನು ಹೆಚ್ಚಿಸುವ ಪ್ರಮುಖ ಸಲಹೆಗಳು ಇಲ್ಲಿವೆ,

ಉದ್ದವಾದ, ಬಲಿಷ್ಠವಾದ, ಸೊಂಪಾದ ಕೂದಲನ್ನು ಹೊಂದಬೇಕೆಂಬ ಆಸೆ ಅನೇಕರದ್ದು. ಆದರೆ ಈಗಿನ ರಾಸಾಯನಿಕ ಯುಗದಲ್ಲಿ ಈ ರೀತಿಯ ಕೂದಲನ್ನು ಹೊಂದುವುದು ಕನಸಿನ ಮಾತು ಎಂಬಂತಾಗಿದೆ. ಆದರೆ ನೀವು ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು, ಸೂಕ್ತವಾದ ಉತ್ಪನ್ನಗಳನ್ನು ಬಳಕೆ ಮಾಡುವುದರಿಂದ ವೇಗವಾಗಿ, ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಕಾಣಲು ಖಂಡಿತ ಸಾಧ್ಯವಿದೆ. ನಿಮ್ಮ ಕೂದಲು ಸೊಂಪಾಗಿ ಬೆಳೆದು ತನ್ನ ಹೊಳಪನ್ನು ಕಾಯ್ದುಕೊಳ್ಳಲು ನೀವು ಪಾಲಿಸಬಹುದಾದ ಸಲಹೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ತಲೆಗೂದಲು ಸೊಂಪಾಗಿ ಬೆಳೆಯಲು ಇಲ್ಲಿದೆ ಸಲಹೆ

1. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು: ಸುಮ್ಮನೆ ಕುಳಿತು ತನ್ನ ಕೂದಲು ಬೆಳೆಯಬೇಕು ಎಂದರೆ ಅದು ಸಾಧ್ಯವಿಲ್ಲ. ಕೂದಲಿನ ಬೆಳವಣಿಗೆಗೆ ಸೂಕ್ತ ಪೋಷಕಾಂಶಗಳ ಅಗತ್ಯ ಕೂಡ ಇರುತ್ತದೆ. ಜೀವಸತ್ವಗಳು ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರಗಳನ್ನು ಸೇವಿಸುವುದು ಕೂದಲಿನ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ಕೂದಲಿನ ಬೆಳವಣಿಗೆಗೆ ನೀವು ಯಾವೆಲ್ಲ ಪೋಷಕಾಂಶಗಳನ್ನು ಸೇವಿಸಬೇಕು ಎನ್ನವುದುನ್ನು ನೋಡುವುದಾದರೆ:

ಪ್ರೊಟೀನ್: ಕೂದಲು ಪ್ರಾಥಮಿಕವಾಗಿ ಕೆರಾಟಿನ್ ಎಂಬ ಪ್ರೊಟೀನ್‌ನಿಂದ ಮಾಡಲ್ಪಟ್ಟಿದೆ. ಮೊಟ್ಟೆ, ಮೀನು, ಮಾಂಸ ಮತ್ತು ದ್ವಿದಳ ಧಾನ್ಯಗಳಂತಹ ಆಹಾರ ಪದಾರ್ಥಗಳಿಂದ ನೀವು ಸಾಕಷ್ಟು ಪ್ರೊಟೀನ್‍ಗಳನ್ನು ಪಡೆಯಲು ಸಾಧ್ಯವಿದೆ.
ಬಯೋಟಿನ್: ಕೂದಲಿನ ಬೆಳವಣಿಗೆಗೆ ಬಿ ವಿಟಮಿನ್ ಅತ್ಯಗತ್ಯವಾಗಿದೆ. ಡ್ರೈಫ್ರೂಟ್ಗಳು, ಸಿಹಿ ಗೆಣಸು ಹಾಗೂ ಪಾಲಕ್ ಸೊಪ್ಪು ಸೇರಿದಂತೆ ಇನ್ನೂ ಅನೇಕ ಆಹಾರ ಪದಾರ್ಥಗಳಲ್ಲಿ ನಿಮಗೆ ಬಯೋಟಿನ್ ಸಿಗುತ್ತದೆ.
ಕಬ್ಬಿಣಾಂಶ: ಕಬ್ಬಿಣಾಂಶದ ಕೊರತೆಯು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಮಾಂಸಗಳು, ಬೀನ್ಸ್, ಹಸಿರು ತರಕಾರಿಗಳ ಸೇವನೆಯನ್ನು ನೀವು ಹೆಚ್ಚಿಸಿಕೊಳ್ಳಬೇಕು.
ಒಮೆಗಾ 3: ಈ ಕೊಬ್ಬಿನಾಮ್ಲಗಳು ಕೂದಲನ್ನು ಪೋಷಿಸುವ ಕಾರ್ಯವನ್ನು ಮಾಡುತ್ತದೆ. ಮೀನು, ವಾಲ್ನಟ್ಸ್, ಅಗಸೆ ಬೀಜಗಳು ಹಾಗೂ ಚಿಯಾ ಬೀಜಗಳಲ್ಲಿ ನಿಮಗೆ ಒಮೆಗಾ 3 ಸಮೃದ್ಧವಾಗಿ ಸಿಗುತ್ತದೆ.
ಒಮೆಗಾ -3 ಕೊಬ್ಬಿನಾಮ್ಲಗಳು: ಈ ಕೊಬ್ಬುಗಳು ಕೂದಲಿನ ಕಿರುಚೀಲಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಮೀನು, ವಾಲ್ನಟ್ಸ್, ಅಗಸೆಬೀಜಗಳು ಮತ್ತು ಚಿಯಾ ಬೀಜಗಳಿಂದ ಒಮೆಗಾ -3 ಗಳನ್ನು ಪಡೆಯಬಹುದು.

ನೆತ್ತಿಯನ್ನು ಮಸಾಜ್ ಮಾಡುವುದು: ನೆತ್ತಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಕೂದಲಿಗೆ ಹೆಚ್ಚಿನ ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತದೆ ಹಾಗೂ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ನಿಮ್ಮ ನೆತ್ತಿಯ ಮೇಲೆ ಬೆರಳುಗಳನ್ನು ಆಡಿಸುವ ಮೂಲಕ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಇದಕ್ಕಾಗಿ ನೀವು ನೈಸರ್ಗಿಕ ತೆಂಗಿನೆಣ್ಣೆ, ಕ್ಯಾಸ್ಟರ್ ಎಣ್ಣೆಗಳನ್ನು ಬಳಕೆ ಮಾಡಬಹುದಾಗಿದೆ.

2. ಸೂಕ್ತವಾದ ಕೂದಲಿನ ಉತ್ಪನ್ನಗಳನ್ನು ಆಯ್ಕೆಮಾಡಿ: ಕೂದಲಿನ ಪೋಷಣೆಗೆ ಸೂಕ್ತ ಉತ್ಪನ್ನಗಳ ಆಯ್ಕೆ ಕೂಡ ಮುಖ್ಯವಾಗುತ್ತದೆ. ಸಲ್ಫೇಟ್ಗಳು ಹಾಗೂ ಪ್ಯಾರೆಬೆನ್ಗಳಿಂದ ಮುಕ್ತವಾಗಿರುವಂತಹ ಶಾಂಪೂ ಹಾಗೂ ಕಂಡಿಷನರ್ಗಳನ್ನು ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ಇವುಗಳು ನಿಮ್ಮ ಕೂದಲಿನಲ್ಲಿರುವ ನೈಸರ್ಗಿಕ ತೈಲವನ್ನು ತೆಗೆದು ಹಾಕಿ ಕೂದಲನ್ನು ಶುಷ್ಕಗೊಳಿಸುವ ಮೂಲಕ ಹಾನಿಯುಂಟು ಮಾಡುತ್ತದೆ. ಹೀಗಾಗಿ ಆದಷ್ಟು ಕೂದಲಿಗೆ ನೈಸರ್ಗಿಕ ಪದಾರ್ಥಗಳ ಮೂಲಕವೇ ಪೋಷಣೆ ನೀಡುವ ಪ್ರಯತ್ನ ಮಾಡಿ. ಅತಿಯಾದ ರಾಸಾಯನಿಕಗಳ ಬಳಕೆಯನ್ನು ತಪ್ಪಿಸಿ .

3. ಕೂದಲಿನ ಸೌಂದರ್ಯವರ್ಧಕ ಸಾಧನಗಳನ್ನು ಬಳಕೆ ಮಾಡಬೇಡಿ: ಅನೇಕರು ಕೂದಲಿಗೆ ಬ್ಲೋ ಡ್ರೈಯರ್, ಸ್ಟ್ರೇಟ್ನರ್ ಇತ್ಯಾದಿಗಳನ್ನು ಬಳಕೆ ಮಾಡುತ್ತಾರೆ. ಇವುಗಳು ಕೂದಲಿಗೆ ಅತಿಯಾದ ಶಾಖವನ್ನು ಒದಗಿಸುವುದರಿಂದ ಕೂದಲಿಗೆ ಹಾನಿಯುಂಟಾಗುತ್ತದೆ ಮಾತ್ರವಲ್ಲದೆ ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಹೀಗಾಗಿ ಕೂದಲಿಗೆ ಈ ರೀತಿಯ ಸಾಧನಗಳನ್ನು ಬಳಕೆ ಮಾಡದೇ ಇರುವುದೇ ಉತ್ತಮ. ಅನಿವಾರ್ಯದ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಬಳಕೆ ಮಾಡಿ ಬಳಿಕ ಕೂದಲಿನ ಪೋಷಣೆ ಮಾಡುವುದನ್ನು ಮರೆಯಬೇಡಿ.

4. ಕಾಲ ಕಾಲಕ್ಕೆ ಕೂದಲನ್ನು ಕತ್ತರಿಸಿ: ಕೂದಲಿನ ಬೆಳವಣಿಗೆ ಬಗ್ಗೆ ಹೇಳುತ್ತಾ ಕೂದಲು ಕತ್ತರಿಸಿ ಎನ್ನುತ್ತಿದ್ದಾರಲ್ವಾ ಎಂದು ನಿಮಗೆ ಗೊಂದಲವಾಗುತ್ತಿರಬಹುದು. ಆದರೆ, ಕಾಲ ಕಾಲಕ್ಕೆ ಕೂದಲಿನ ತುದಿಯನ್ನು ಕತ್ತರಿಸುವುದರಿಂದ ಕೂದಲು ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ. ವಿಭಜಿತ ತುದಿಗಳನ್ನು ಆಗಾಗ ಕತ್ತರಿಸುತ್ತಲೇ ಇರಬೇಕು. ಒಡೆದ ಅಥವಾ ಟಿಸಿಲೊಡೆದ ಕೂದಲು ಮತ್ತೆ ಬೆಳೆಯುದಿಲ್ಲ. ಹೀಗಾಗಿ ಆಗಾಗ ಕೂದಲಿನ ತುದಿಗೆ ಕತ್ತರಿ ಹಾಕುತ್ತಿರಬೇಕು.

mysore-dasara_Entry_Point