ಕ್ಯಾನ್ಸರ್ ಬಾರದಂತೆ ತಡೆಯುವುದರಿಂದ ಹೃದಯದ ಆರೋಗ್ಯ ಕಾಪಾಡುವವರೆಗೆ, ಅಗಸೆ ಬೀಜದ ಎಣ್ಣೆ ಸೇವನೆಯಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ
ಅಗಸೆಬೀಜದಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ, ತೂಕ ಇಳಿಕೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣದವರೆಗೆ ಇದರ ಉಪಯೋಗ ಹಲವು. ಆದರೆ ಅಗಸೆ ಬೀಜದ ಎಣ್ಣೆ ಕೂಡ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಕ್ಯಾನ್ಸರ್ ಬಾರದಂತೆ ತಡೆಯುವುದರಿಂದ ಹೃದ್ರೋಗ ನಿಯಂತ್ರಣದವರೆಗೆ ಅಗಸೆಬೀಜದ ಎಣ್ಣೆಯಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ .
ಗುರುಗುಂಜಿ ಗಾತ್ರದ ಅಗಸೆ ಬೀಜವು ಆರೋಗ್ಯದ ಗಣಿ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಚಿಕ್ಕ ಬೀಜವು ಮನುಷ್ಯನ ಆರೋಗ್ಯಕ್ಕೆ ಅದ್ಬುತ ಪ್ರಯೋಜನಗಳನ್ನು ನೀಡುತ್ತದೆ. ಅಗಸೆ ಬೀಜದಿಂದ ಮಾತ್ರವಲ್ಲ ಇದರಿಂದ ತಯಾರಿಸಿದ ಎಣ್ಣೆ ಕೂಡ ದೇಹಾರೋಗ್ಯದ ಮೇಲೆ ಸಾಕಷ್ಟು ಧನಾತ್ಮಕ ಪರಿಣಾಮ ಬೀರುತ್ತದೆ. ಹೃದಯದ ಆರೋಗ್ಯ ಕಾಪಾಡುವುದರಿಂದ ಮಧುಮೇಹ ನಿಯಂತ್ರಣದವರೆಗೆ ತ್ವಚೆಯ ಅಂದ ಹೆಚ್ಚುವುದರಿಂದ ಕ್ಯಾನ್ಸರ್ ಬಾರದಂತೆ ತಡೆಯುವವರೆಗೆ ಅಗಸೆ ಬೀಜದ ಎಣ್ಣೆ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ. ಇದು ದೇಹಕ್ಕೆ ಅಗತ್ಯವಾದ ಖನಿಜಗಳನ್ನು ಪೂರೈಸುವುದು ಮಾತ್ರವಲ್ಲದೆ ಅನಗತ್ಯ ಕೊಬ್ಬಿನಿಂದ ರಕ್ಷಿಸುತ್ತದೆ.
ಪೋಷಕಾಂಶಗಳ ಗಣಿ
ಅಗಸೆಬೀಜದ ಎಣ್ಣೆಯು ಆಲ್ಫಾ ಲಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಒಮೆಗಾ 3 ಕೊಬ್ಬಿನಾಮ್ಲವಾಗಿದೆ. ಈ ತೈಲವನ್ನು ಸೇವಿಸುವುದರಿಂದ AMA ಯನ್ನು ಇತರ ಅಗತ್ಯ ಕೊಬ್ಬಿನಾಮ್ಲಗಳಾದ ಡೊಕೊಸಾಹೆಕ್ಸೆನೊಯಿಕ್ ಆಮ್ಲ ಮತ್ತು ಐಕೋಸಾಪೆಂಟೆನೊಯಿಕ್ ಆಮ್ಲವಾಗಿ ಪರಿವರ್ತಿಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಅವಶ್ಯಕ. ಇದರೊಂದಿಗೆ, ಅಗಸೆಬೀಜದ ಎಣ್ಣೆಯು ಒಲೀಕ್, ಪಾಲ್ಮಿಟಿಕ್, ಲಿನೋಲಿಕ್ ಮತ್ತು ಲಿಗ್ನಾನ್ಸ್ ಅನ್ನು ಸಹ ಒಳಗೊಂಡಿದೆ. ಈ ಎಲ್ಲವೂ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳಾಗಿವೆ.
ಅಗಸೆ ಬೀಜದ ಎಣ್ಣೆಯ ಪ್ರಯೋಜನಗಳು
ಚರ್ಮದ ಆರೋಗ್ಯ ವೃದ್ಧಿಸುತ್ತದೆ: ನೀವು ಸುಕ್ಕು ಮುಕ್ತ ತ್ವಚೆಯನ್ನು ಬಯಸಿದರೆ, ಇಂದಿನಿಂದಲೇ ನಿಮ್ಮ ಆಹಾರ ಕ್ರಮದಲ್ಲಿ ಈ ಎಣ್ಣೆಯನ್ನು ಸೇರಿಸಲು ಪ್ರಾರಂಭಿಸಿ. ಎಣ್ಣೆಯಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ವಯಸ್ಸಾದ ಕಾರಣ ಕಾಣಿಸಿಕೊಳ್ಳುವ ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಸುಕ್ಕು ಮುಕ್ತಗೊಳಿಸುತ್ತದೆ.
ಕ್ಯಾನ್ಸರ್ ತಡೆಗಟ್ಟುವಿಕೆ: ಅಗಸೆಬೀಜದ ಎಣ್ಣೆಯಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ದೇಹವನ್ನು ಕೆಲವು ರೀತಿಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಈ ಕೊಬ್ಬಿನಾಮ್ಲಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
ಹೃದಯದ ಆರೋಗ್ಯ ರಕ್ಷಣೆ: ನೀವು ಹೃದಯದ ಆರೋಗ್ಯದ ಬಗ್ಗೆ ಅಸಡ್ಡೆ ಹೊಂದಲು ಬಯಸದಿದ್ದರೆ, ನೀವು ನಿಮ್ಮ ಆಹಾರದಲ್ಲಿ ಅಗಸೆಬೀಜದ ಎಣ್ಣೆಯನ್ನು ಸೇರಿಸಿಕೊಳ್ಳಬಹುದು. ಇದು ರಕ್ತನಾಳಗಳ ಊತವನ್ನು ಕಡಿಮೆ ಮಾಡುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.
ಮಧುಮೇಹವನ್ನು ನಿಯಂತ್ರಿಸುತ್ತದೆ: ಆಹಾರದಲ್ಲಿ ಅಗಸೆಬೀಜದ ಎಣ್ಣೆಯನ್ನು ಬಳಸುವುದು ಇನ್ಸುಲಿನ್ ಪ್ರತಿರೋಧ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ.
ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ: ಅಗಸೆ ಬೀಜದ ಎಣ್ಣೆಯು ಹೊಟ್ಟೆಯಲ್ಲಿ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ. ಅಗಸೆಬೀಜದ ಎಣ್ಣೆಯ ದೈನಂದಿನ ಬಳಕೆಯು ಕರುಳಿನ ಚಲನೆಯನ್ನು ಸುಧಾರಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.
ಅಗಸೆಬೀಜದ ಎಣ್ಣೆಯನ್ನು ಬಳಸುವ ವಿಧಾನ
ಅಗಸೆ ಬೀಜದ ಎಣ್ಣೆಯನ್ನು ಚಟ್ನಿ, ಸ್ಮೂಥಿಗೆ ಸೇರಿಸುವ ಮೂಲಕ ತಿನ್ನಬಹುದು. ಸಾಂಪ್ರದಾಯಿಕವಾಗಿ, ಅಗಸೆ ಬೀಜದ ಎಣ್ಣೆಯನ್ನು ಲಡ್ಡುಗಳಲ್ಲಿ ಬೆರೆಸಿ ಬಾಣಂತಿಯರಿಗೆ ತಿನ್ನಿಸಲಾಗುತ್ತದೆ. ಅಗಸೆಬೀಜದ ಎಣ್ಣೆಯನ್ನು ಸೇವಿಸಲು ಇದು ಉತ್ತಮ ಮಾರ್ಗವಾಗಿದೆ.
ಅಗಸೆ ಬೀಜದ ಎಣ್ಣೆಯನ್ನು ಬಿಸಿ ಮಾಡಬೇಡಿ
ಅಗಸೆ ಬೀಜದ ಎಣ್ಣೆಯಲ್ಲಿ ಆಹಾರವನ್ನು ಬೇಯಿಸಬೇಡಿ ಏಕೆಂದರೆ ಈ ಎಣ್ಣೆಯ ಸ್ಮೋಕಿಂಗ್ ಪಾಯಿಂಟ್ ತುಂಬಾ ಕಡಿಮೆಯಾಗಿದೆ ಮತ್ತು ಬಿಸಿ ಮಾಡಿದಾಗ, ಅದು ಹಾನಿಕಾರಕ ಸಂಯುಕ್ತಗಳನ್ನು ರೂಪಿಸಲು ಪ್ರಾರಂಭಿಸುತ್ತದೆ. ಹಾಗಾಗಿ ಹಸಿಯಾಗಿ ಬೆರೆಸುವುದು ಉತ್ತಮ ವಿಧಾನ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾವನ್ನು ಆಧರಿಸಿದ್ದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ)
ವಿಭಾಗ