ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಎಷ್ಟೊತ್ತಿಗೆ? ನೇರ ಪ್ರಸಾರ ವೀಕ್ಷಿಸುವುದೇಗೆ?
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಎಷ್ಟೊತ್ತಿಗೆ? ನೇರ ಪ್ರಸಾರ ವೀಕ್ಷಿಸುವುದೇಗೆ?

ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಎಷ್ಟೊತ್ತಿಗೆ? ನೇರ ಪ್ರಸಾರ ವೀಕ್ಷಿಸುವುದೇಗೆ?

Independence Day 2024: ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಹಿಂದಿನ ಸಾಧನೆಗಳನ್ನು ಪ್ರತಿಬಿಂಬಿಸಲಿದ್ದಾರೆ ಹಾಗೂ ಭವಿಷ್ಯದ ಗುರಿಗಳ ಕುರಿತು ಮಾತನಾಡಲಿದ್ದಾರೆ.

ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಎಷ್ಟೊತ್ತಿಗೆ? ನೇರ ಪ್ರಸಾರ ವೀಕ್ಷಿಸುವುದೇಗೆ?
ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಎಷ್ಟೊತ್ತಿಗೆ? ನೇರ ಪ್ರಸಾರ ವೀಕ್ಷಿಸುವುದೇಗೆ?

ನವದೆಹಲಿ: ಆಗಸ್ಟ್ 15ರ ಗುರುವಾರ ಭಾರತವು ತನ್ನ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಸತತ 11ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಬೆಳಿಗ್ಗೆ 7:30ಕ್ಕೆ ಮಾಡಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಎಲ್ಲಿ ಲೈವ್ ವೀಕ್ಷಿಸಬಹುದು? ಎಷ್ಟೊತ್ತಿಗೆ?

ಈ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಪ್ರೆಸ್ ಇನ್​ಫರ್ಮೇಷನ್ ಬ್ಯೂರೋ (ಪಿಐಬಿ) ಯೂಟ್ಯೂಬ್ ಚಾನೆಲ್​​ನಲ್ಲಿ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್​​ಫಾರ್ಮ್​​ಗಳಾದ ಎಕ್ಸ್ ಖಾತೆಯಲ್ಲಿ ಪಿಐಬಿ (@PIB_India) ಮತ್ತು ಮೋದಿ ಟ್ವಿಟರ್ ಹ್ಯಾಂಡಲ್​ನಲ್ಲಿ ಪ್ರಸಾರ ಮಾಡಲಾಗುತ್ತದೆ.

ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ಹಿಂದಿನ ಸಾಧನೆಗಳನ್ನು ಮೆಲುಕು ಹಾಕಿ, ಭವಿಷ್ಯದ ಗುರಿಗಳನ್ನು ವಿವರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಿದ್ದಾರೆ. ಭಾಷಣದ ನಂತರ ಭಾರತದ ಮಿಲಿಟರಿ ಪರಾಕ್ರಮ, ಸಾಂಸ್ಕೃತಿಕ ವೈವಿಧ್ಯತೆ, ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುವ ಭವ್ಯ ಮೆರವಣಿಗೆ ನಡೆಯಲಿದೆ.

ಈ ಬಾರಿಯ ಥೀಮ್ ಏನು?

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ದೃಷ್ಟಿಕೋನದೊಂದಿಗೆ ಸರ್ಕಾರ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ‘ವಿಕಸಿತ ಭಾರತ’ ಎಂಬ ಥೀಮ್ ಹೊಂದಿದೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಭಾರತದ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಅತಿಥಿಗಳು ಯಾರು?

ಕೆಂಪು ಕೋಟೆಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಿಂದ 4,000ಕ್ಕೂ ಅಧಿಕ ಮಂದಿ ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ. ಈ ವಿಶೇಷ ಅತಿಥಿಗಳಲ್ಲಿ ರೈತರು, ಯುವಕರು, ಮಹಿಳೆಯರು ಮತ್ತು ಬಡವರು ಸೇರಿದ್ದಾರೆ . ಇವರನ್ನು ಭಾರತದ ಪ್ರಗತಿಗೆ ಪ್ರಮುಖವೆಂದು ಪ್ರಧಾನಿ ಮೋದಿ ಗುರುತಿಸಿದ್ದಾರೆ.

ಪ್ರತಿಯೊಬ್ಬ ಅತಿಥಿಯನ್ನು ಒಬ್ಬ ಕುಟುಂಬದ ಸದಸ್ಯರೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನಿಸಲಾಗಿದೆ. 4,000 ಅತಿಥಿಗಳನ್ನು 11 ಗುಂಪುಗಳಾಗಿ ವರ್ಗೀಕರಿಸಲಾಗಿದೆ.

  • ಕೃಷಿ ಮತ್ತು ರೈತರ ಕಲ್ಯಾಣ ವರ್ಗ - 1,000
  • ಯುವ ವ್ಯವಹಾರಗಳ ವರ್ಗ - 600
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗ - 300
  • ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ - 300
  • ಬುಡಕಟ್ಟು ವ್ಯವಹಾರ - 300
  • ಶಾಲಾ ಶಿಕ್ಷಣ ಮತ್ತು ಸಾಕ್ಷರತೆ - 200
  • ಗಡಿ ರಸ್ತೆಗಳ ಸಂಸ್ಥೆ/ರಕ್ಷಣಾ ಸಚಿವಾಲಯ - 200
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ - 150
  • ಕ್ರೀಡೆ - 150
  • ನೀತಿ ಆಯೋಗ ವರ್ಗ - 1,200 ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.

ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದವರಿಗೂ ವಿಶೇಷ ಆಹ್ವಾನ

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪದಕ ಮುಡಿಗೇರಿಸಿಕೊಂಡ ಭಾರತದ ಕ್ರೀಡಾಪಟುಗಳಿಗೆ ಆಹ್ವಾನ ನೀಡಲಾಗಿದೆ. ಮನು ಭಾಕರ್, ಸ್ವಪ್ನಿಲ್ ಕುಸಾಲೆ, ಹಾಕಿ ತಂಡ, ನೀರಜ್ ಚೋಪ್ರಾ, ಅಮನ್ ಸೆಹ್ರಾವತ್ ಅವರು ಕೆಂಪು ಕೋಟೆಗೆ ಬರಲಿದ್ದಾರೆ.

Whats_app_banner