ಪ್ರಪಂಚದಲ್ಲೇ ಅತಿ ಹೆಚ್ಚು ಒತ್ತಡವಿರುವ ಪಟ್ಟಣಗಳ ಪಟ್ಟಿ ಬಿಡುಗಡೆ; ಇದರಲ್ಲಿ ಭಾರತದ ಈ ನಗರವೇ ನಂಬರ್‌ ಒನ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರಪಂಚದಲ್ಲೇ ಅತಿ ಹೆಚ್ಚು ಒತ್ತಡವಿರುವ ಪಟ್ಟಣಗಳ ಪಟ್ಟಿ ಬಿಡುಗಡೆ; ಇದರಲ್ಲಿ ಭಾರತದ ಈ ನಗರವೇ ನಂಬರ್‌ ಒನ್‌

ಪ್ರಪಂಚದಲ್ಲೇ ಅತಿ ಹೆಚ್ಚು ಒತ್ತಡವಿರುವ ಪಟ್ಟಣಗಳ ಪಟ್ಟಿ ಬಿಡುಗಡೆ; ಇದರಲ್ಲಿ ಭಾರತದ ಈ ನಗರವೇ ನಂಬರ್‌ ಒನ್‌

ನಮ್ಮ ಸುತ್ತಲಿನ ಪರಿಸರ ಶಾಂತವಾಗಿದ್ದರೆ, ಮನಸ್ಸು ಪ್ರಫುಲ್ಲವಾಗಿರುತ್ತದೆ. ಆದರೆ ಒತ್ತಡ, ಕರ್ಕಶ ಶಬ್ದ, ಜನಜಂಗುಳಿ ಇದ್ದರೆ ಬದುಕು ದುಸ್ತರ ಎನ್ನಿಸುವುದು ಸಹಜ. ಪ್ರಪಂಚದಲ್ಲೇ ಅತಿ ಹೆಚ್ಚು ಒತ್ತಡವಿರುವ ಪಟ್ಟಣಗಳ ಪಟ್ಟಿ ಬಿಡುಗಡೆಯಾಗಿದೆ. ಆ ಪಟ್ಟಿಯಲ್ಲಿ ಭಾರತದ ಕೆಲವು ನಗರಗಳೂ ಇವೆ. ಹಾಗಾದರೆ ಪ್ರಪಂಚದಲ್ಲಿ ಅತಿ ಹೆಚ್ಚು ಒತ್ತಡ ಇರುವ ಪಟ್ಟಣಗಳು ಯಾವುವು ನೋಡಿ.

ಪ್ರಪಂಚದಲ್ಲೇ ಅತಿ ಹೆಚ್ಚು ಒತ್ತಡವಿರುವ ಪಟ್ಟಣಗಳ ಪಟ್ಟಿ ಬಿಡುಗಡೆ; ಇದರಲ್ಲಿ ಭಾರತದ ಈ ನಗರವೇ ನಂಬರ್‌ ಒನ್‌

International News Most stressful city in the world List 6 Cities are Most stressful city Mumbai Top one rst
ಪ್ರಪಂಚದಲ್ಲೇ ಅತಿ ಹೆಚ್ಚು ಒತ್ತಡವಿರುವ ಪಟ್ಟಣಗಳ ಪಟ್ಟಿ ಬಿಡುಗಡೆ; ಇದರಲ್ಲಿ ಭಾರತದ ಈ ನಗರವೇ ನಂಬರ್‌ ಒನ್‌ International News Most stressful city in the world List 6 Cities are Most stressful city Mumbai Top one rst

ಒತ್ತಡ... ಇಂದು ಪ್ರಪಂಚದಾದ್ಯಂತ ಮಕ್ಕಳಾದಿಯಾಗಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಇದೊಂದು ಮಾನಸಿಕ ಪ್ರಕ್ರಿಯೆಯಾಗಿದ್ದು, ಇದು ಎಲ್ಲಾ ವಯಸ್ಸಿನವರ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ಅವರನ್ನು ಶಾಂತಗೊಳಿಸದೆ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುವಂತೆ ಮಾಡುತ್ತದೆ. ಸುತ್ತಮುತ್ತಲಿನ ಪರಿಸ್ಥಿತಿಗಳು, ಹವಾಮಾನ, ಜನ ಮತ್ತು ನಾವು ನಿರ್ವಹಿಸುವ ಕೆಲಸಗಳು ಒತ್ತಡಕ್ಕೆ ಕಾರಣವೆಂದು ಹೇಳಬಹುದು. ಆದರೆ ಒತ್ತಡ ಖಂಡಿತ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅಪಾಯಕಾರಿ. ಒತ್ತಡಕ್ಕೆ ಚಿಕಿತ್ಸೆ ನೀಡದಿದ್ದರೆ ಅದು ಅಧಿಕ ರಕ್ತದೊತ್ತಡ, ಹೃದ್ರೋಗ, ಬೊಜ್ಜು, ಪಾರ್ಶ್ವವಾಯು ಮತ್ತು ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಒಂದು ಅಧ್ಯಯನದ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗಿಂತ ನಗರಗಳಲ್ಲಿ ವಾಸಿಸುವ ಜನರು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ. ಅವರಲ್ಲಿ ಸಾಕಷ್ಟು ಆತಂಕ ಮತ್ತು ಮಾನಸಿಕ ಅಸ್ವಸ್ಥತೆಗಳಿವೆ ಎಂದು ತೋರುತ್ತದೆ. ಪ್ರಪಂಚದಲ್ಲಿ ಸಾವಿರಾರು ನಗರಗಳಲ್ಲಿ ಅತ್ಯಂತ ಒತ್ತಡದ ನಗರಗಳಿವೆ. ಅವುಗಳಲ್ಲಿ ಟಾಪ್ ಆರು ಒತ್ತಡದ ನಗರಗಳ ಪಟ್ಟಿ ಇಲ್ಲಿದೆ. ಅದರಲ್ಲಿ ನಮ್ಮ ದೇಶದ ಎರಡು ನಗರಗಳಿವೆ. ಅದರಲ್ಲೂ ನಮ್ಮ ದೇಶದ ಈ ನಗರವು ಒತ್ತಡದಿಂದ ತುಂಬಿರುವ ನಗರಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಮುಂಬೈ

ಮುಂಬೈ ವಿಶ್ವದ ಅತ್ಯಂತ ಒತ್ತಡದ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿನ ನಿವಾಸಿಗಳು ವಾಯುಮಾಲಿನ್ಯದಿಂದ ಬಳಲುತ್ತಿದ್ದಾರೆ. ಅರ್ಧದಷ್ಟು ಜನರ ಮೇಲೆ ನೇರವಾದ ಬೆಳಕು ಸಹ ಬೀಳುತ್ತಿಲ್ಲ. ಇದು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಸಮಸ್ಯೆಗಳೂ ಉಂಟಾಗುತ್ತವೆ. ಮುಂಬೈ ತುಂಬಾ ಜನನಿಬಿಡವಾಗಿದೆ. ಇದರಿಂದ ಎಲ್ಲಿಗೆ ಹೋಗಬೇಕೋ ಅಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿ ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಕಾಲದಲ್ಲಿ ಆರೋಗ್ಯ ಸೇವೆ ನೀಡುವುದು ಕಷ್ಟವಾಗಿದೆ. ಮುಂಬೈನ ಜೀವನ ತುಂಬಾ ಒತ್ತಡದಿಂದ ಕೂಡಿದೆ. ಇದು ನಿಜಕ್ಕೂ ಸವಾಲಿನ ವಾತಾವರಣವನ್ನು ಒದಗಿಸುತ್ತದೆ.

ಲಾಗೋಸ್

ಲಾಗೋಸ್ ಆಫ್ರಿಕಾದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. ಇದು ನೈಜೀರಿಯಾದಲ್ಲಿದೆ. ಇಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಎಲ್ಲಿಗೆ ಹೋಗಬೇಕೆಂದರೂ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಇರಬೇಕಾಗುತ್ತದೆ. ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ. ಬಾಡಿಗೆಗೆ ಮನೆಯೂ ಸಿಗುತ್ತಿಲ್ಲ. ಜೀವನ ಪರಿಸ್ಥಿತಿಗಳು ಕಳಪೆಯಾಗಿವೆ. ಲಾಗೋಸ್‌ನಲ್ಲಿ ವಾಸಿಸುವುದು ಕಷ್ಟ ಸಾಧ್ಯವಾಗಿದೆ.

ಮನಿಲಾ

ಫಿಲಿಪ್ಪೀನ್ಸ್‌ನ ರಾಜಧಾನಿ ಮನಿಲಾ. ಈ ನಗರವು ಭಾರೀ ಟ್ರಾಫಿಕ್ ಹೊಂದಿದೆ. ಎಲ್ಲಿಗೆ ಹೋದರೂ ಅಸಹ್ಯವೆನಿಸುತ್ತದೆ. ಅತಿಯಾದ ಟ್ರಾಪಿಕ್‌ನಿಂದಾಗಿ ಪ್ರಯಾಣಿಕರು ತೀವ್ರ ನಿರಾಶೆಗೊಂಡಿದ್ದಾರೆ. ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಮೂಲಸೌಕರ್ಯ ಮತ್ತು ಸಾರ್ವಜನಿಕ ಸಾರಿಗೆ ಕೊರತೆಯೂ ಇದೆ. ಹೆಚ್ಚಿನ ಜನಸಂಖ್ಯೆಯಿಂದಾಗಿ ಮಾಲಿನ್ಯವು ಅಧಿಕವಾಗಿದೆ. ನೈರ್ಮಲ್ಯವೂ ಸೀಮಿತವಾಗಿದೆ.

ನವದೆಹಲಿ

ನವದೆಹಲಿ ಭಾರತದ ರಾಜಧಾನಿ. ಈ ಮಹಾನಗರದಲ್ಲಿ ವಾಸಿಸುವುದು ಒಂದು ಸವಾಲಿನ ಪ್ರಯಾಣವಾಗಿದೆ. ತೀವ್ರ ವಾಯುಮಾಲಿನ್ಯ, ತೀವ್ರ ಚಳಿ, ಆರೋಗ್ಯ ಸಮಸ್ಯೆಗಳು, ಉಸಿರಾಟ ಸಂಬಂಧಿ ಕಾಯಿಲೆಗಳು ಮುಂತಾದ ಕಾರಣಗಳಿಂದ ಈ ನಗರದಲ್ಲಿ ಜೀವನ ನಡೆಸುವುದು ಒತ್ತಡದಿಂದ ಕೂಡಿದೆ. ಸಂಚಾರ ದಟ್ಟಣೆಯೂ ತೀವ್ರವಾಗಿದೆ. ಕಚೇರಿಗೆ ಹೋಗಬೇಕೆಂದರೆ ಎರಡರಿಂದ ಮೂರು ಗಂಟೆ ಟ್ರಾಫಿಕ್‌ನಲ್ಲಿಯೇ ಇರಬೇಕಾಗುತ್ತದೆ. ನವದೆಹಲಿಯಲ್ಲಿ ವಾಸಿಸುವುದು ಸವಾಲಿನ ಸಂಗತಿಯಾಗಿದೆ.

ಬಾಗ್ದಾದ್

ಬಾಗ್ದಾದ್ ವಿಶ್ವದ ಆರನೇ ಅತಿ ಹೆಚ್ಚು ಒತ್ತಡದ ನಗರವಾಗಿದೆ. ಇಲ್ಲಿ ನಿರಂತರ ಸಂಘರ್ಷಗಳು ನಡೆಯುತ್ತಿವೆ. ಗಲಭೆಗಳಿಂದ ಜನರು ಅಸ್ಥಿರತೆ ಮತ್ತು ಅನಿಶ್ಚಿತತೆಯಿಂದ ಅಲ್ಲಿ ವಾಸಿಸುತ್ತಾರೆ. ಇದು ಅಲ್ಲಿ ವಾಸಿಸುವ ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಲಿಂಗ ಸಮಾನತೆಯೂ ಇಲ್ಲಿ ಕಡಿಮೆ. ಮಹಿಳೆಯರಿಗೆ ಯಾವುದೇ ಅವಕಾಶ ನೀಡುತ್ತಿಲ್ಲ. ಯಾವುದೇ ಮೂಲಸೌಕರ್ಯ ಇರುವುದಿಲ್ಲ. ಬಹಳ ಸೀಮಿತವಾಗಿವೆ. ಅರ್ಧದಷ್ಟು ಜನರಿಗೆ ಶಿಕ್ಷಣವೂ ಸಿಗುತ್ತಿಲ್ಲ.

ಕಾಬೂಲ್

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್. ಇಲ್ಲಿ ವಾಸಿಸುವ ಜನರು ದೈನಂದಿನ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಾರೆ. ಇದು ಅವರ ಒತ್ತಡದ ಮಟ್ಟವನ್ನು ಗಂಭೀರವಾಗಿ ಹೆಚ್ಚಿಸಬಹುದು. ಆರ್ಥಿಕ ಪ್ರಗತಿಯೊಂದಿಗೆ ಅಥವಾ ಸಾಮಾಜಿಕವಾಗಿ ಶಾಂತಿಯುತವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಜನರು ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ಬಡತನ ಮತ್ತು ನಿರುದ್ಯೋಗ ಇಲ್ಲಿ ತಾಂಡವಾಡುತ್ತಿದೆ. ಕಾಬೂಲ್ ಸದಾ ಸಂಘರ್ಷದಿಂದಲೇ ತುಂಬಿರುತ್ತದೆ.

Whats_app_banner