Brain Teaser: 80 ರಷ್ಟು ಮಂದಿ ಉತ್ತರ ಹೇಳಲು ವಿಫಲವಾಗಿದ್ದಾರೆ; ನೀವು ಗಣಿತದಲ್ಲಿ ಪರಿಣಿತರಿದ್ದರೆ ಈ ಬ್ರೈನ್ ಟೀಸರ್ ಗೆ ಉತ್ತರಿಸಿ
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಬ್ರೈನ್ ಟೀಸರ್ ವೊಂದು ಸಖತ್ ವೈರಲ್ ಆಗಿದ್ದು, ಟ್ರಿಕ್ ಸಮೀಕರಣಗಳೊಂದಿಗೆ ಅನೇಕರನ್ನು ಗೊಂದಲಕ್ಕೀಡು ಮಾಡಿದೆ. ಹೆಚ್ಚಿನ ಜನರಿಗೆ ಈ ಲೆಕ್ಕವನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಗಣಿತದಲ್ಲಿ ನೀವು ತುಂಬಾ ಪರಿಣಿತರಾಗಿದ್ದರೆ ಒಂದೇ ನಿಮಿಷದಲ್ಲಿ ಈ ಬ್ರೈನ್ ಟೀಸರ್ ಗೆ ಉತ್ತರ ಹೇಳಿ.
ಗಣಿತ ಎಂದರೆ ಸಾಕು ತುಂಬಾ ಜನ ಹೆದರಿಕೊಳ್ಳುತ್ತಾರೆ. ಗಣಿತದಲ್ಲಿನ ಸಂಖ್ಯೆಗಳು ಸಮೀಕರಣಗಳು ಹಾಗೂ ಸೂತ್ರಗಳು ಬಹುತೇಕರಿಗೆ ತಲೆಯಲ್ಲಿ ಉಳಿಯುವುದಿಲ್ಲ. ಅಷ್ಟು ಸಲುಭವಾಗಿ ಅರ್ಥವಾಗುವುದಿಲ್ಲ. ಹೀಗಾಗೆ ಗಣಿತ ಎನ್ನುವಷ್ಟರಲ್ಲಿ ತಲೆ ಬಿಸಿ ಮಾಡಿಕೊಳ್ಳುತ್ತಾರೆ. ಆದರೆ ಸ್ವಲ್ಪ ತಾಳ್ಮೆಯನ್ನು ತಂದುಕೊಂಡರೆ ಕೆಲವೊಂದು ಲೆಕ್ಕಗಳನ್ನು ಸುಲಭವಾಗಿ ಬಿಡಿಸಬಹುದು. ಕೆಲವೊಂದು ಸಂಯೋಜನೆಗಳು ತುಂಬಾ ಸರಳವಾಗಿರುತ್ತವೆ. ಇವುಗಳನ್ನು ಬಿಡಿಸಲು ತುಂಬಾ ರೋಮಾಂಚನಕಾರಿಯಾಗುತ್ತದೆ. ನಮ್ಮ ಮನಸ್ಸನ್ನು ತಿರುಚುವ ಮತ್ತು ನಮ್ಮ ಸಮಸ್ಯೆಯನ್ನು ಪರಿಹರಿಸುವ ಮೆದುಳಿನ ಟೀಸರ್ ಗಳು ಗಣಿತವನ್ನು ವಿನೋದ ಮತ್ತು ಆಕರ್ಷಕವಾಗಿಸುವ ಮಾರ್ಗವನ್ನು ಹೊಂದಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಬ್ರೈನ್ ಟೀಸರ್ ಗಳು ಆಗಾಗಾ ವೈರಲ್ ಆಗುತ್ತಿರುತ್ತವೆ. ಇವು ನಮ್ಮ ಕಣ್ಣು, ಮೆದುಳಿಗೆ ಚಾಲೆಂಜ್ ಎನಿಸುವಂತೆ ಇರುತ್ತವೆ. ನೋಡಲು ಸರಳವಾಗಿದ್ದರೂ ಬಹುತೇಕರು ಈ ಬ್ರೈನ್ ಟೀಸರ್ ಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವರು ಸುಲಭವಾಗಿ ಬ್ರೈನ್ ಟೀಸರ್ ಗಳನ್ನು ಬಿಡಿಸುತ್ತಾರೆ. ಬ್ರೈನಿ ಬಿಟ್ಸ್ ಹಬ್ ಎಂಬ ಎಕ್ಸ್ ಖಾತೆಯಲ್ಲಿ ಒಂದು ಒಗಟನ್ನು ಹಂಚಿಕೊಳ್ಳಲಾಗಿದೆ. ಇದು ಅನೇಕರನ್ನು ತಲೆ ಕೆರೆದುಕೊಳ್ಳುವಂತೆ ಮಾಡುತ್ತಿದೆ. ಪೋಸ್ಟ್ ಮಾಡಿರುವ ಚಿತ್ರದಲ್ಲಿನ ಲೆಕ್ಕವನ್ನು ಬಿಡಿಸಲು ಶೇಕಡಾ 80 ರಷ್ಟು ಮಂದಿ ವಿಫಲವಾಗಿದ್ದಾರೆ. ಪೋಸ್ಟ್ ನಾಲ್ಕು ಸಮೀಕರಣಗಳಿವೆ: "1 + 1 = 2", "2 + 2 = 8", "3 + 3 = 18", ಮತ್ತು "4 + 4 = ?".
ಮೂರು ಸಮೀಕರಗಳನ್ನು ಆಧಾರಿಸಿ ನಾಲ್ಕನೆಯ ಸಮೀಕರಣಕ್ಕೆ ಉತ್ತರವನ್ನು ಕಂಡುಕೊಳ್ಳಬೇಕಿದೆ. ವೈರಲ್ ಆಗಿರುವ ಪೋಸ್ಟ್ ಇಲ್ಲಿದೆ. ನೀವು ಗಣಿತದಲ್ಲಿ ಪರಿಣಿತರಾಗಿದ್ದರೆ ಈ ಸಮೀಕರಣವನ್ನು ಒಂದು ನಿಮಿಷದಲ್ಲಿ ಬಿಡಿಸಿ.
ನೆಟ್ಟಿಗರು ಈ ಪ್ರಶ್ನೆಗೆ ಉತ್ತರವನ್ನು ಕಾಮೆಂಟ್ ಮಾಡಿದ್ದಾರೆ. ಬ್ರೈನಿ ಬಿಟ್ಸ್ ಹಬ್ ಮೈಂಡ್ ಬೆಂಡಿಂಗ್ ಟೀಸರ್ ಅನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕೋಲಾಹಲವನ್ನು ಉಂಟುಮಾಡಿದ ಮತ್ತೊಂದು ಒಗಟು ನೇರವಾದ ಗಣಿತ ಪರೀಕ್ಷೆಯನ್ನು ಮುಂದಿಟ್ಟಿದೆ.
"ಗಣಿತ ಪರೀಕ್ಷೆ: 24 ÷ 6 ÷ 2 = ?"
ಇದು ಸುಲಭವೆಂದು ತೋರುತ್ತದೆಯಾದರೂ, ಲೆಕ್ಕ ಬಿಡಿಸಲು ಮುಂದಾದರೆ ಉತ್ತರ ಕಂಡುಕೊಳ್ಳುವುದು ಮಾತ್ರ ಕಷ್ಟವಾಗುತ್ತದೆ. ಮೂಲ ಗಣಿತ ನಿಯಮಗಳ ಬಗ್ಗೆ ನಮ್ಮ ಜ್ಞಾನವನ್ನು ಪ್ರಶ್ನಿಸುವಂತೆ ಇದೆ. ಇಷ್ಟು ಸರಳ ಸಂಖ್ಯೆಗಳೊಂದಿಗೆ, ಏಕೆ ಕಷ್ಟಕರವೆಂದು ತೋರುತ್ತದೆ? ಗಣಿತವು ಯಾವಾಗಲೂ ಸಂಕೀರ್ಣ ಸೂತ್ರಗಳ ಬಗ್ಗೆ ಅಲ್ಲ ಎಂದು ಇದು ನೆನಪಿಸುತ್ತದೆ. ಕೆಲವೊಮ್ಮೆ, ಇದು ಸಮಸ್ಯೆಯನ್ನು ಸರಿಯಾಗಿ ವ್ಯಾಖ್ಯಾನಿಸುವ ಬಗ್ಗೆ.
ಗಣಿತದ ಪ್ರತಿಭೆ ಎಂದು ನೀವು ನಂಬಿದರೆ ಅಥವಾ ನಿಮ್ಮ ಮೆದುಳಿಗೆ ಸವಾಲು ಹಾಕಲು ಬಯಸಿದರೆ, ಈ ಬ್ರೈನ್ ಟೀಸರ್ ಗಳನ್ನು ಪ್ರಯತ್ನಿಸಿ. ಇವು ಕ್ಲಿಷ್ಟಕರವೆಂದು ತೋರಬಹುದು, ಆದರೆ ಅವುಗಳನ್ನು ಪರಿಹರಿಸುವ ತೃಪ್ತಿಯು ಪ್ರಯತ್ನಕ್ಕೆ ಯೋಗ್ಯವಾಗಿದೆ. ನೀವು ಸಮೀಕರಣವನ್ನು ಭೇದಿಸಲಿ ಅಥವಾ ವಿಫಲವಾಗಿರಲಿ, ಈ ಮೆದುಳಿನ ಟೀಸರ್ ಗಳು ಗಣಿತದೊಂದಿಗೆ ಮೋಜಿನ, ವಿಭಿನ್ನ ರೀತಿಯಲ್ಲಿ ತೊಡಗಿಸಿಕೊಳ್ಳಲು ಪರಿಪೂರ್ಣ ಅವಕಾಶವನ್ನು ಒದಗಿಸುತ್ತವೆ. ಈ ಎರಡೂ ಬ್ರೈನ್ ಟೀಸರ್ ಗಳಿಗೆ ನೀವೇನಾದರೂ ಕಡಿಮೆ ಸಮಯದಲ್ಲಿ ಉತ್ತರವನ್ನು ಕಂಡುಕೊಂಡಿದ್ದರೆ ನಿಮಗೆ ಗಣಿತ ಜ್ಞಾನ ಚೆನ್ನಾಗಿದೆ ಎಂದರ್ಥ.