ಪಾತ್ರೆಗಳಿಗೆ ಅಂಟಿದ ಹಟಮಾರಿ ಜಿಡ್ಡಿನ ಕಲೆ ತೆಗೆಯೋದು ಕಷ್ಟ ಆಗಿದ್ಯಾ, ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ, ಪಾತ್ರೆ ಪಳಪಳ ಹೊಳೆಯುತ್ತೆ
ಅಡುಗೆಮನೆಯಲ್ಲಿ ಅತ್ಯಂತ ಕಷ್ಟದ ಕೆಲಸ ಎನ್ನಿಸೋದು ಜಿಡ್ಡಿನ ಪಾತ್ರೆಗಳನ್ನ ಸ್ವಚ್ಛ ಮಾಡೋದು. ಎಣ್ಣೆ, ಜಿಡ್ಡಿನಾಂಶ ಹಿಡಿದ ಪಾತ್ರೆಗಳನ್ನು ಸುಲಭವಾಗಿ ಕ್ಲೀನ್ ಮಾಡಲು ಆಗುವುದಿಲ್ಲ. ಎಷ್ಟೇ ಸ್ವಚ್ಛ ಮಾಡಿದ್ರು ಜಿಡ್ಡಿನಾಂಶ ಅಂಟಿಕೊಂಡಂತೆ ಅನ್ನಿಸುತ್ತದೆ. ಇಂತಹ ಹಟಮಾರಿ ಜಿಡ್ಡಿನ ಕಲೆ ತೆಗೆಯಲು ಇಲ್ಲಿದೆ ಒಂದಿಷ್ಟು ಸಿಂಪಲ್ ಐಡಿಯಾ, ನೀವೂ ಟ್ರೈ ಮಾಡಿ ನೋಡಿ.
ಅಡುಗೆಮನೆ ಸ್ವಚ್ಛ ಮಾಡುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಆದರೆ ಸ್ವಚ್ಛ ಮಾಡದೇ ಇರಲು ಸಾಧ್ಯವಿಲ್ಲ. ಅಡುಗೆಮನೆಯಲ್ಲಿ ಪಾತ್ರೆಗಳಿಗೆ ಜಿಡ್ಡು, ಕೊಳೆ, ಎಣ್ಣೆಯಂಶ ಅಂಟಿಕೊಳ್ಳುವುದು ಬಹಳ ಬೇಗ. ಅದರಲ್ಲೂ ಪಾತ್ರೆಗಳಿಗೆ ಅಂಟಿಕೊಂಡು ಜಿಡ್ಡಿನಾಂಶ ಹೋಗಲಾಡಿಸಲುವುದು ಕಷ್ಟಸಾಧ್ಯವಾಗುತ್ತದೆ.
ಜಿಡ್ಡಿನ ಅಂಶವು ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ಆಕರ್ಷಿಸುತ್ತದೆ. ಆ ಕಾರಣಕ್ಕೆ ಪಾತ್ರೆಗೆ ಅಂಟಿರುವ ಜಿಡ್ಡಿನಾಂಶವನ್ನು ತಪ್ಪದೇ ಸ್ವಚ್ಛ ಮಾಡಬೇಕು. ಆದರೆ ಏನೇ ಮಾಡಿದ್ರು ನಿಮ್ಮ ಅಡುಗೆಮನೆಯಲ್ಲಿರುವ ಪಾತ್ರೆಗಳಿಗೆ ಅಂಟಿಕೊಂಡ ಕಲೆ ಅಥವಾ ಜಿಡ್ಡಿನಂಶ ಹೋಗ್ತಾ ಇಲ್ಲ, ಇದ್ರಿಂದ ಆ ಪಾತ್ರೆಯನ್ನ ಎಸೆಯಬೇಕಷ್ಟೇ ಎನ್ನುವಂತಿದ್ದರೆ ಖಂಡಿತ ಎಸೆಯಬೇಡಿ, ಈ ಸಿಂಪಲ್ ಟ್ರಿಕ್ಸ್ ಅನುಸರಿಸಿದ್ರೆ ಖಂಡಿತ ಪಾತ್ರೆ ಹೊಸರಂತಾಗುತ್ತೆ, ಟ್ರೈ ಮಾಡಿ ನೋಡಿ.
ಜಿಡ್ಡಿನಾಂಶ ಇರುವ ಪಾತ್ರೆಗಳನ್ನು ಸ್ವಚ್ಛ ಮಾಡಲು ಟಿಪ್ಸ್
ಅಡುಗೆ ಎಣ್ಣೆ: ಇದೇನಪ್ಪಾ ಎಣ್ಣೆ ಹಾಗೂ ಜಿಡ್ಡಿನಾಂಶ ತೆಗೆಯಲು ಅಡುಗೆಎಣ್ಣೆ ಹೇಗೆ ಸಹಾಯವಾಗಬಹುದು ಎಂದು ನೀವು ಯೋಚಿಸಿರಬಹುದು. ಖಂಡಿತ ಇದು ಸಹಾಯವಾಗುತ್ತೆ. ಜಿಡ್ಡಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಅಡುಗೆ ಎಣ್ಣೆಯು ಉತ್ತಮ ಘಟಕಾಂಶವಾಗಿ ಕಾರ್ಯನಿರ್ವಹಿಸುತ್ತದೆ. ಅಡುಗೆ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು, ಜಿಡ್ಡಿನ ಪಾತ್ರೆಯ ಮೇಲೆ ಹಚ್ಚಿ. ಸ್ಪಾಂಜ್ ಅಥವಾ ಬಟ್ಟೆಯಿಂದ ಚೆನ್ನಾಗಿ ಉಜ್ಜಿ. ಈಗ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಡಿಶ್ ಸೋಪ್ ಮತ್ತು ಬೆಚ್ಚಗಿನ ನೀರನ್ನು ಬಳಸಿ.
ಅಕ್ಕಿ ನೀರು: ಅಕ್ಕಿ ನೀರು ಮುಖದ ಅಂದ ಹೆಚ್ಚಿಸುವುದು ಮಾತ್ರವಲ್ಲ, ಜಿಡ್ಡಿನ ಪಾತ್ರೆಗಳನ್ನು ಸ್ವಚ್ಛ ಮಾಡಲು ಕೂಡ ಸಹಕಾರಿ. ಕುದಿಯುವ ಅಕ್ಕಿಯಿಂದ ಅಕ್ಕಿ ನೀರನ್ನು ಹೊರತೆಗೆಯಿರಿ ಮತ್ತು ಜಿಡ್ಡಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಅದನ್ನು ಬಳಸಿ. ಇದರಿಂದ ಪಾತ್ರೆಯ ಮೇಲೆ ಅಂಟಿಕೊಂಡಿರುವ ಜಿಡ್ಡಿನ ಕಲೆಗಳೆಲ್ಲಾ ಮಾಯವಾಗುತ್ತದೆ.
ಟೂತ್‌ಪೇಸ್ಟ್: ಇದು ಹಲ್ಲುಜ್ಜಲು ಮಾತ್ರವಲ್ಲ ಜಿಡ್ಡಿನ ಪಾತ್ರೆಗಳನ್ನ ಸ್ವಚ್ಛಗೊಳಿಸಲು ಕೂಡ ಸಹಕಾರಿ. ಜಿಡ್ಡಿನ ಪಾತ್ರೆಗಳ ಮೇಲೆ ಟೂತ್‌ಪೇಸ್ಟ್ ಹಚ್ಚಿ. ಸ್ಪಾಂಚ್ ಅಥವಾ ಬ್ರಷ್‌ನಿಂದ ಚೆನ್ನಾಗಿ ಉಜ್ಜಿ. ನಂತರ ಶುದ್ಧ ನೀರಿನಿಂದ ತೊಳೆಯಿರಿ. ಇದು ಪಾತ್ರೆಯಲ್ಲಿ ಕೊಂಚವೂ ಜಿಡ್ಡಿನಾಂಶ ಇಲ್ಲದೇ ಇರುವಂತೆ ನೋಡಿಕೊಳ್ಳುತ್ತದೆ.
ಮೆಣಸಿಕಾಯಿ, ತೆಂಗಿನೆಣ್ಣೆ ಪೇಸ್ಟ್: ಅಡುಗೆಮನೆಯ ಅಗತ್ಯಗಳಲ್ಲಿ ಒಂದಾಗಿರುವ ಮೆಣಸಿನಕಾಯಿ ಶುಚಿಗೊಳಿಸುವ ಕಾರ್ಯಕ್ಕೂ ಬೆಸ್ಟ್. ಅದಕ್ಕಾಗಿ ಕೆಲವು ಹನಿ ತೆಂಗಿನೆಣ್ಣೆಯನ್ನು ಜಿಡ್ಡಿನ ಪಾತ್ರೆಯ ಮೇಲೆ ಹಾಕಿ, ಅದರ ಮೇಲೆ ಮೆಣಸಿನಕಾಯಿ ಪೇಸ್ಟ್ ಹಚ್ಚಿ. ಸ್ವಚ್ಚ ಸಮಯ ಹಾಗೇ ಬಿಡಿ. ನಂತರ ಸ್ವಚ್ಛವಾದ ಬಟ್ಟೆ ಅಥವಾ ಸ್ಪಂಜಿನಿಂದ ಉಜ್ಜಿ, ಶುದ್ಧವಾದ ನೀರಿನಿಂದ ತೊಳೆಯಿರಿ.
ನಿಂಬೆರಸ ಮತ್ತು ಉಪ್ಪು ಪೇಸ್ಟ್: ನಿಂಬೆಹಣ್ಣು ಬಹುಪಯೋಗಿ ಅನ್ನೋದು ಸುಳ್ಳಲ್ಲ. ಇದನ್ನು ಪಾತ್ರೆ ಸ್ವಚ್ಛ ಮಾಡಲು ಕೂಡ ಬಳಸಬಹುದು. ಉಪ್ಪು ಮತ್ತು ನಿಂಬೆಯ ಪೇಸ್ಟ್ ಮಾಡಿ ಮತ್ತು ಜಿಡ್ಡಿನ ಪಾತ್ರೆಗಳ ಮೇಲೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ಶುದ್ಧ ನೀರಿನಿಂದ ತೊಳೆಯಿರಿ.
ಡಿಶ್‌ವಾಶರ್, ಬಿಸಿನೀರು: ಜಿಡ್ಡಿನ ಪಾತ್ರೆಯನ್ನು ಸ್ವಚ್ಛ ಮಾಡಲು ಡಿಶ್ ಸೋಪ್/ವಾಶರ್ ಮತ್ತು ಬೆಚ್ಚಗಿನ ನೀರಿನ ಮಿಶ್ರಣವನ್ನು ಬಳಸಬಹುದು. ಇದನ್ನು ಮಾಡಲು, ಬೆಚ್ಚಗಿನ ನೀರಿನಿಂದ ಕೆಲವು ಹನಿ ಸೋಪ್ ಅನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣಕ್ಕೆ ಸ್ಪಂಜನ್ನು ಅದ್ದಿ ಮತ್ತು ಜಿಡ್ಡಿನ ಪಾತ್ರೆಯನ್ನು ಉಜ್ಜಿಕೊಳ್ಳಿ. ಇದರಿಂದ ಜಿಡ್ಡು ಸರಾಗವಾಗಿ ಸ್ವಚ್ಛವಾಗುತ್ತದೆ.
ವಿಭಾಗ