Infant Care: ಶಿಶುಗಳು ಪದೇ ಪದೇ ನಾಲಿಗೆ ಹೊರಚಾಚಿದರೆ ಗಾಬರಿ ಬೀಳದಿರಿ, ಯಾಕೆ ಹೀಗೆ ಮಾಡುತ್ತವೆ ಎಂಬುದಕ್ಕೆ ಇಲ್ಲಿದೆ ಕಾರಣ
ಶಿಶು ಏನೇ ಮಾಡಿದರೂ ಅದು ಮುದ್ದಾಗಿರುತ್ತದೆ. ಪ್ರತಿಯೊಬ್ಬರೂ ಕೂಡ ಪುಟ್ಟ ಕಂದಮ್ಮಗಳ ಅಭ್ಯಾಸಗಳನ್ನು ಇಷ್ಟಪಡುತ್ತಾರೆ. ಆದರೆ, ಮಗುವಿನ ಕೆಲವು ವಿಚಿತ್ರ ಅಭ್ಯಾಸಗಳು ಪೋಷಕರನ್ನು ಹೆದರಿಸಬಹುದು.6ತಿಂಗಳೊಳಗಿನ ಮಗು ಏಕೆ ಪದೇ ಪದೇ ನಾಲಿಗೆಯನ್ನು ಹೊರಹಾಕುತ್ತದೆ ಎಂದು ಗಾಬರಿ ಬೀಳಬಹುದು. ಯಾಕೆ ಹೀಗೆ ಮಾಡುತ್ತವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಆ ಖುಷಿಯೇ ಬೇರೆ. ಪೋಷಕರಿಗಂತೂ ತಮ್ಮ ಮಕ್ಕಳೇ ಪ್ರಪಂಚ. ಶಿಶುಗಳ ನಗು ಮಾತ್ರವಲ್ಲ, ಪುಟ್ಟ ಕಂದಮ್ಮ ಏನು ಮಾಡಿದರೂ ಅದು ಮುದ್ದಾಗಿಯೇ ಇರುತ್ತದೆ. ಮಗುವಿನ ಎಲ್ಲಾ ಅಭ್ಯಾಸಗಳು ಎಲ್ಲರಿಗೂ ಇಷ್ಟವಾಗುತ್ತವೆ. ಆದರೆ, ಕೆಲವೊಮ್ಮೆ ಮಗು ಮಾಡುವ ಕೆಲವು ಕೆಲಸಗಳು ವಿಚಿತ್ರವಾಗಿ ಮತ್ತು ಸ್ವಲ್ಪ ಗೊಂದಲಮಯವಾಗಿ ತೋರುತ್ತದೆ. ಇವುಗಳಲ್ಲಿ ನಾಲಿಗೆಯನ್ನು ಪದೇ ಪದೇ ಹೊರಹಾಕುವುದು ಸಹ ಒಂದು. ಹೆಚ್ಚಿನ ಶಿಶುಗಳು, ವಿಶೇಷವಾಗಿ ಆರು ತಿಂಗಳಿಗಿಂತ ಕಡಿಮೆ ಇರುವ ಕಂದಮ್ಮಗಳು ತಮ್ಮ ನಾಲಿಗೆಯನ್ನು ಪದೇ ಪದೇ ಚಾಚುತ್ತಾರೆ. ಈ ಅಭ್ಯಾಸ ನಿಮಗೆ ಗೊಂದಲವುಂಟು ಮಾಡಿರಬಹುದು. ಮಕ್ಕಳು ಇದನ್ನು ಏಕೆ ಮಾಡುತ್ತಾರೆ, ಇದರ ಅರ್ಥವೇನು ಎಂಬುದು ಇಲ್ಲಿದೆ.
ಶಿಶುಗಳು ನಾಲಿಗೆಯನ್ನು ಪದೇ ಪದೇ ಮುಂದಕ್ಕೆ ಚಾಚಲು ಕಾರಣ
ಮಗುವಿನ ತುಟಿಗಳನ್ನು ಸ್ಪರ್ಶಿಸತ್ತಾ ನಾಲಿಗೆಯನ್ನು ಮುಂದಕ್ಕೆ ಚಾಚುವುದು. ಇದು ಮಗುವಿನ ನೈಸರ್ಗಿಕ ಪ್ರತಿಫಲಿತವಾಗಿ (ಪ್ರತ್ಯುತ್ತರ) ಕಾರ್ಯನಿರ್ವಹಿಸುತ್ತದೆ. ಇದರಿಂದ, ಮಗು ಹಾಲು ಅಥವಾ ಆಹಾರವನ್ನು ಕುಡಿಯಲು ಪ್ರಾರಂಭಿಸುತ್ತದೆ. ಮಗು ನಾಲಿಗೆಯನ್ನು ಮುಂದಕ್ಕೆ ತಳ್ಳುತ್ತಾ, ಎದೆ ಅಥವಾ ಬಾಟಲಿಗಳಿಂದ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಮಗುವಿಗೆ ಹಾಲು ನೀಡಿದಾಗ ಇದು ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ಮಗುವಿಗೆ 4 ರಿಂದ 6 ತಿಂಗಳವರೆಗೆ ಇರುತ್ತದೆ. ಅದರ ನಂತರ, ಮಗುವಿನ ಆಹಾರ ಪದ್ಧತಿ ಬದಲಾಗುತ್ತದೆ ಮತ್ತು ಅದು ಕ್ರಮೇಣ ಕಡಿಮೆಯಾಗುತ್ತದೆ.
ಮಗುವಿಗೆ ಹಸಿವು ಉಂಟಾಗಿರಬಹುದು: ಮಗು ಪದೇ ಪದೇ ನಾಲಿಗೆಯನ್ನು ಹೊರ ಹಾಕಿದರೆ ಮಗುವಿಗೆ ಹಸಿವಾಗಿದೆ ಎಂದೂ ಅರ್ಥ. ಚಿಕ್ಕ ಮಕ್ಕಳು ಹೆಚ್ಚಾಗಿ ಹಸಿದಿರುವಾಗ ತಮ್ಮ ನಾಲಿಗೆಯನ್ನು ಹೊರಹಾಕುತ್ತಾರೆ. ಶಿಶುಗಳು ಹಾಲು ಅಥವಾ ಇತರ ಆಹಾರವನ್ನು ತಿನ್ನಲು ಪ್ರಾರಂಭಿಸಿದಾಗ, ಅವರ ಬಾಯಿ ತುಂಬಾ ಸೂಕ್ಷ್ಮವಾಗಿರುತ್ತದೆ. ಇದರಿಂದ ಅವರು ತಮ್ಮ ನಾಲಿಗೆಯನ್ನು ಹೆಚ್ಚಾಗಿ ಚಾಚುತ್ತಾರೆ.
ಸ್ನಾಯುಗಳ ಅಭಿವೃದ್ಧಿ
ಮಗು ಬೆಳೆದಂತೆ ಶಿಶುವಿನ ಬಾಯಿಯ ಸ್ನಾಯುಗಳ ನಿಯಂತ್ರಣವೂ ಆಗುತ್ತದೆ. ನಾಲಿಗೆ ಹೊರಚಾಚುವುದು ಈ ಪ್ರಕ್ರಿಯೆಯ ಭಾಗವಾಗಿದೆ. ಈ ಚಟುವಟಿಕೆಯೊಂದಿಗೆ, ಮಕ್ಕಳು ತಮ್ಮ ಬಾಯಿಯ ಸ್ನಾಯುಗಳನ್ನು ಬಲಪಡಿಸುತ್ತಾರೆ. ಹೀಗಾಗಿ ತಿನ್ನಲು ಘನ ಆಹಾರವನ್ನು ತಯಾರಿಸುವುದು ಉತ್ತಮ.
ಉಸಿರಾಟ ಪ್ರಕ್ರಿಯೆ: ಉಸಿರಾಟದ ತೊಂದರೆಗಳನ್ನು ಹೊಂದಿದ್ದರೆ, ಇದು ಮೂಗಿನ ಮೂಲಕ ಉಸಿರಾಟವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಮಕ್ಕಳು ನಾಲಿಗೆಯನ್ನು ಹೊರತೆಗೆಯುತ್ತಾ ಬಾಯಿಯ ಮೂಲಕ ಉಸಿರಾಡುತ್ತಾರೆ. ಕೆಮ್ಮು, ಶೀತ ಅಥವಾ ಮೂಗು ಕಟ್ಟಿಕೊಳ್ಳುವಿಕೆ ಸಮಸ್ಯೆ ಹೊಂದಿದ್ದಾಗ ಈ ರೀತಿ ಮಾಡಬಹುದು.
ನಾಲಿಗೆ ಪರೀಕ್ಷಿಸುವುದು: ಮಗು ಬೆಳೆದಂತೆ, ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸಲು ಪ್ರಾರಂಭಿಸುತ್ತಾರೆ. ನಾಲಿಗೆಯನ್ನು ಹೊರಹಾಕುವುದು ಶಿಶುಗಳಿಗೆ ಹೊಸ ಅನುಭವವಾಗಿರಬಹುದು. ಇದು ಶಿಶುಗಳ ಬೆಳವಣಿಗೆಯ ಭಾಗವಾಗಿದೆ. ಅಲ್ಲದೆ, ಮಕ್ಕಳು ತಮ್ಮ ನಾಲಿಗೆಯನ್ನು ಪರೀಕ್ಷಿಸಲು ಪ್ರಾರಂಭಿಸುತ್ತಾರೆ ಅಥವಾ ಅದನ್ನು ಹೇಗೆ ಚಲಿಸಬೇಕೆಂಬುದನ್ನು ಕಲಿಯುತ್ತಾರೆ.
ಆಲಸ್ಯ ಅಥವಾ ಬೇಸರ: ಮಕ್ಕಳು ದಣಿದಿರುವಾಗ ಅಥವಾ ಬೇಸರಗೊಂಡಾಗ ತಮ್ಮ ನಾಲಿಗೆಯನ್ನು ಹೊರಹಾಕಬಹುದು. ಇದು ಅವರ ಕಡೆಗೆ ತೋರುವ ಸಹಜ ನಡವಳಿಕೆ.
ಶಿಶುಗಳಿಗೆ ಏನನ್ನಾದರೂ ಕಲಿಸುವುದು ಸ್ವಲ್ಪ ಕಷ್ಟವೇ ಹೌದು. ಹೀಗಾಗಿ ಮಕ್ಕಳು ತಮ್ಮ ಅಭ್ಯಾಸವನ್ನು ಪುನರಾವರ್ತಿಸಬಹುದು. ಆದ್ದರಿಂದ, ಮಗು ಇದನ್ನು ಪದೇ ಪದೇ ಮಾಡುತ್ತಿದ್ದರೆ ಗಾಬರಿ ಬೀಳದಿರಿ.