2025ರ ಶುಭಾಶಯಗಳು: ಇಂಥ ನೂರಾರು ಹೊಸ ವರ್ಷ ನಿನ್ನ ಬಾಳಲ್ಲಿ ಬರಲಿ, ಹೊಸ ವರ್ಷಕ್ಕೆ ನಿಮ್ಮ ಪ್ರೀತಿಯ ಸಹೋದರಿಗೆ ಈ ರೀತಿ ಶುಭ ಕೋರಿ
New Year 2025 Wishes: ಯಾವುದೇ ಶುಭ ಸಮಾರಂಭ ಇರಲಿ, ಖುಷಿಯ ವಿಚಾರವಾಗಲಿ ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವುದು, ಶುಭಾಶಯ ಕೋರುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದೆ. ನೀವು ನಿಮ್ಮ ಅಕ್ಕ-ತಂಗಿಯರಿಗೆ ಶುಭಾಶಯ ಕೋರಲು ಇಲ್ಲಿ ಕೆಲವು ಸುಂದರ ಸಾಲುಗಳಿವೆ.
2025ರ ಶುಭಾಶಯಗಳು: ದಿನಗಳು ಕಳೆಯುತ್ತಿವೆ, ವರ್ಷಗಳು ಉರುಳುತ್ತಿವೆ. ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದೇವೆ ಎನಿಸುತ್ತಿದೆ. ಅಷ್ಟರಲ್ಲಿ ಒಂದು ವರ್ಷ ಮುಗಿದು ಹೊಸ ವರ್ಷ ಬರುತ್ತಿದೆ. 2025 ನ್ನು ಸ್ವಾಗತಿಸಲು ಇನ್ನು ವಾರವಷ್ಟೇ ಬಾಕಿ ಉಳಿದಿದೆ. ಹಿಂದೂಗಳಿಗೆ ಹೊಸ ವರ್ಷ ಎಂದರೆ ಅದು ಯುಗಾದಿ, ಆದರೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ 1ನ್ನು ಕೂಡಾ ಹೊಸ ವರ್ಷವನ್ನಾಗಿ ಆಚರಿಸುತ್ತಾ ಬರಲಾಗಿದೆ.
ಹೊಸ ವರ್ಷ ಬರುತ್ತಿದ್ದಂತೆ ಪಾರ್ಟಿ, ಪ್ರವಾಸ, ರೆಸ್ಯುಲೂಷನ್ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಪ್ಲ್ಯಾನ್ ಮಾಡಲಾಗುತ್ತದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಆಚರಿಸಲು ಈಗಲೇ ತಯಾರಿ ನಡೆದಿದೆ. ಡಿಸೆಂಬರ್ 31 ಮಧ್ಯರಾತ್ರಿ 12 ದಾಟುತ್ತಿದ್ದಂತೆ ಜನರು ಪಟಾಕಿ ಸಿಡಿಸಿ ಹರ್ಷೋದ್ಗಾರದಿಂದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹೊಸ ಹೊಸ ಕನಸುಗಳು, ಗುರಿಗಳನ್ನು ಇಟ್ಟುಕೊಂಡು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ನಿಮ್ಮ ಬದುಕಲ್ಲಿ ಸಂತೋಷವೇ ತುಂಬಿರಲಿ ಎಂದು ಆತ್ಮೀಯರಿಗೆ ಹಾರೈಸುತ್ತಾರೆ. ಹಾಗಾದರೆ ಈ ಹೊಸ ವರ್ಷಕ್ಕೆ ಮೊದಲು ಯಾರಿಗೆ ಶುಭ ಕೋರಬೇಕು ಎಂದುಕೊಂಡಿದ್ದೀರ?
ಹೊಸ ವರ್ಷಕ್ಕೆ ನಿಮ್ಮ ಪ್ರೀತಿಯ ಅಕ್ಕ-ತಂಗಿಯರಿಗೆ ಈ ರೀತಿ ಶುಭ ಕೋರಿ
- ಹೊಸ ವರ್ಷದ ಶುಭಾಶಯಗಳು ಪ್ರೀತಿಯ ಅಕ್ಕ/ತಂಗಿ, ನಿನ್ನ ಬಾಳಲ್ಲಿ ಸಿಹಿಯೇ ತುಂಬಿರಲಿ, ಹೊಸ ವರ್ಷ ನಿನ್ನ ಬದುಕಲ್ಲಿ ಸಂತೋಷವನ್ನೇ ತರಲಿ
- ವಿಶ್ವದ ಬೆಸ್ಟ್ ಸಹೋದರಿಗೆ ಹೊಸ ವರ್ಷದ ಶುಭ ಹಾರೈಕೆಗಳು, ನಿನ್ನ ಪ್ರೀತಿ ಮತ್ತು ಬೆಂಬಲ ಎಂದೆಂದಿಗೂ ಹೀಗೆ ಇರಲಿ
- ಪ್ರೀತಿಯ ಸಹೋದರಿ ಈ ಹೊಸ ವರ್ಷ ನಿನ್ನ ಬಾಳಲ್ಲಿ ಅತ್ಯುತ್ತಮವಾದದ್ದನ್ನೇ ತರಲಿ, ಜೀವನದುದ್ದಕ್ಕೂ ಹೀಗೇ ನಗುತ್ತಾ, ಸುಖ ಸಂತೋಷದಿಂದ ಬಾಳು ಎಂದು ಹಾರೈಸುತ್ತೇನೆ
- ನಿನ್ನನ್ನು ಅಕ್ಕ/ತಂಗಿಯಾಗಿ ಪಡೆದಿರುವ ನಾನು ಅದೃಷ್ಟವಂತ(ತೆ) ಪ್ರತಿ ಕ್ಷಣವೂ ನಿನ್ನ ಪ್ರೀತಿ, ವಿಶ್ವಾಸ, ಕಾಳಜಿ ನನಗೆ ದೊರೆಯಲಿದೆ, ನೀನು ನಗು ನಗುತ್ತಾ ಇರಲೆಂದು ಆಶಿಸುತ್ತೇನೆ.
- ಹೊಸ ವರ್ಷದ ಶುಭಾಶಯಗಳು, ನನ್ನ ಪ್ರೀತಿಯ ಸಹೋದರಿ, ನಿನ್ನ ಗುರಿಗಳನ್ನು ಸಾಧಿಸಲು, ಕನಸುಗಳನ್ನು ಸಾಕಾರಗೊಳಿಸಲು ಈ ವರ್ಷ ಸ್ಫೂರ್ತಿ ಮತ್ತು ಸಂಕಲ್ಪದಿಂದ ತುಂಬಿರಲಿ.
ಇದನ್ನೂ ಓದಿ: 2025ರ ಶುಭಾಶಯಗಳು: ಕ್ಯಾಲೆಂಡರ್ ಬದಲಾದರೂ ಪ್ರೀತಿ ಶಾಶ್ವತವಾಗಿರಲಿ; ಹೊಸ ವರ್ಷಕ್ಕೆ ನಿಮ್ಮ ಪ್ರಿಯಕರನಿಗೆ ಈ ರೀತಿ ಶುಭ ಕೋರಿ
- ನಿನ್ನೊಂದಿಗೆ ಕಳೆದ ಬಾಲ್ಯದ ಸಿಹಿ ನೆನಪುಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇಂತಹ ನೂರಾರು ಹೊಸ ವರ್ಷ ನಿನ್ನ ಬಾಳಲ್ಲಿ ಬರಲಿ , ಹೊಸ ವರ್ಷದ ಶುಭ ಹಾರೈಕೆಗಳು ಸಹೋದರಿ
- ನಿನ್ನಂಥ ಸಹೋದರಿಯನ್ನು ಪಡೆದ ನಾವೇ ಪುಣ್ಯವಂತರು, ನಿನ್ನ ಕಾಳಜಿ, ನಿನ್ನ ಪ್ರೀತಿಗೆ ಎಂದಿಗೂ ಬೆಲೆ ಕಟ್ಟಲಾಗದು, ತಾಯಿ ಪ್ರೀತಿಯನ್ನು ನೀಡುತ್ತಿರುವ ಸಹೋದರಿಗೆ ಹೊಸ ವರ್ಷ ಸಂತೋಷ ತರಲಿ,
- ನಿನ್ನ ಪ್ರೀತಿ, ಬೆಂಬಲ, ಕಾಳಜಿಗೆ ನಾವೆಂದಿಗೂ ಚಿರರುಣಿ, ಅಪ್ಪ-ಅಮ್ಮನ ಸ್ಥಾನದಲ್ಲಿ ನಿಂತು ನಮ್ಮನ್ನು ಆರೈಕೆ ಮಾಡಿ ಹಾರೈಸುತ್ತಿರುವ ತಾಯಿಯಂಥ ಅಕ್ಕ ನೀನು, ಹೊಸ ವರ್ಷ ನಿನ್ನ ಬಾಳಲ್ಲಿ ಹೊಸ ಸಂಭ್ರಮ ತರಲಿ.
- ಇಂಥದ್ದೇ ಮತ್ತೊಂದು ಹೊಸ ವರ್ಷವನ್ನು ನಿನ್ನೊಂದಿಗೆ ಕಳೆಯಲು ಉತ್ಸುಕನಾಗಿದ್ದೇನೆ, 2025ರ ಶುಭ ಹಾರೈಕೆಗಳು ಸಹೋದರಿ.
ಈ ಸುಂದರ ಸಾಲುಗಳ ಮೂಲಕ ನಿಮ್ಮ ಪ್ರೀತಿಯ ಅಕ್ಕ ಅಥವಾ ತಂಗಿಗೆ ವಿಶ್ ಮಾಡಿ.